Bhagavad Gita: ಭಗವಂತನನ್ನು ನಂಬುವ ಪ್ರತಿಯೊಬ್ಬ ಮನುಷ್ಯನಿಗೆ ಆತನ ಕೃಪೆ ಇದ್ದೇ ಇರುತ್ತೆ; ಗೀತೆಯ ಸಾರಾಂಶ ಹೀಗಿದೆ-spiritual news bhagavad gita updesh who believes in lord krishna will have his grace bhagavad gita quotes in kannada rmy ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಭಗವಂತನನ್ನು ನಂಬುವ ಪ್ರತಿಯೊಬ್ಬ ಮನುಷ್ಯನಿಗೆ ಆತನ ಕೃಪೆ ಇದ್ದೇ ಇರುತ್ತೆ; ಗೀತೆಯ ಸಾರಾಂಶ ಹೀಗಿದೆ

Bhagavad Gita: ಭಗವಂತನನ್ನು ನಂಬುವ ಪ್ರತಿಯೊಬ್ಬ ಮನುಷ್ಯನಿಗೆ ಆತನ ಕೃಪೆ ಇದ್ದೇ ಇರುತ್ತೆ; ಗೀತೆಯ ಸಾರಾಂಶ ಹೀಗಿದೆ

Bhagavad Gita Updesh: ಭಗವಂತನನ್ನು ನಂಬುವ ಪ್ರತಿಯೊಬ್ಬ ಮನುಷ್ಯನಿಗೆ ಆತನ ಕೃಪೆ ಇದ್ದೇ ಇರುತ್ತೆ ಎಂಬುದರ ಅರ್ಥವನ್ನು ಭಗವದ್ಗೀತೆಯ 7ನೇ ಅಧ್ಯಾಯದ ಶ್ಲೋಕ 7 ರಲ್ಲಿ ಓದಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

7ನೇ ಅಧ್ಯಾಯದ ಪರತ್ಪರ ಜ್ಞಾನ - ಶ್ಲೋಕ - 7

ಮತ್ತಃ ಪರತರಂ ನಾನ್ಯತ್ ಕಿಞ್ಚಿದಸ್ತಿ ಧನಞ್ಜಯ |

ಮಯಿ ಸರ್ವಮಿದಂ ಪ್ರೋತಂ ಸೂತ್ರೇ ಮಣಿಗಣಾ ಇವ ||7||

ಅನುವಾದ: ಧನಂಜಯ, ನನಗಿಂತ ಶ್ರೇಷ್ಠವಾದ ಸತ್ಯವಿಲ್ಲ. ಮಣಿಗಳನ್ನು ದಾರದಲ್ಲಿ ಪೋಣಿಸಿದ ಹಾಗೆ ಎಲ್ಲವೂ ನನ್ನನ್ನೇ ಅವಲಂಬಿಸಿದೆ.

ಭಾವಾರ್ಥ: ಪರಮ ಪರಾತ್ಪರ ಸತ್ಯವು ಸಾಕಾರ ರೂಪವೇ ಅಥವಾ ನಿರಾಕಾರ ರೂಪವೇ ಎನ್ನುವ ವಿಷಯದಲ್ಲಿ ಸಾಮಾನ್ಯವಾಗಿ ವಿವಾದವಿದೆ. ಭಗವದ್ಗೀತೆಯ (Bhagavad Gita Updesh in Kannada) ಮಟ್ಟಿಗೆ ಪರಾತ್ಪರ ಸತ್ಯವು ದೇವೋತ್ತಮ ಪುರುಷನಾದ ಶ್ರೀಕೃಷ್ಣನು. ಈ ಅಂಶವನ್ನು ಅದು ಹೆಜ್ಜೆ ಹೆಜ್ಜೆಗೂ ದೃಢಪಡಿಸಿದೆ. ದೇವೋತ್ತಮ ಪರಮ ಪುರುಷನೇ ಪರಮ ಪರಾತ್ಪರ ಸತ್ಯ ಎಂದೇ ಬ್ರಹ್ಮಸಂಹಿತೆಯು ಸಾರಿದೆ - ಈಶ್ವರಃ ಪರಮಃ ಕೃಷ್ಣಃ ಸಚ್ಚಿದಾನನ್ದವಿಗ್ರಹಃ, ಎಂದರೆ ಪರಮ ಪರಾತ್ಪರ ಸತ್ಯನಾದ ದೇವೋತ್ತಮ ಪುರುಷನು ಶ್ರೀಕೃಷ್ಣ, ಅವನೇ ಆದಿಪುರುಷ. ಅವನೇ ಎಲ್ಲ ಆನಂದದ ಭಂಡಾರವಾದ ಗೋವಿಂದ ಮತ್ತು ಪೂರ್ಣಜ್ಞಾನನಂದದ ನಿತ್ಯ ಸ್ವರೂಪ.

ಪರಮ ಪುರುಷನೇ ಪರಾತ್ಪರ ಸತ್ಯವು, ಎಲ್ಲ ಕಾರಣಗಳ ಕಾರಣನು ಎನ್ನುವ ವಿಷಯದಲ್ಲಿ ಆ ಆಚಾರ್ಯರು ಸಂಶಯಕ್ಕೆ ಎಡೆಯನ್ನೇ ಕೊಡುವುದಿಲ್ಲ. ಆದರೆ ನಿರಾಕಾರವಾದಿಗಳು ಶ್ವೇತಾಶ್ವತರ ಉಪನಿಷತ್ತಿನಲ್ಲಿ (3.10) ಹೇಳಿರುವ ವೇದದ ಪಾಠದ ಆಧಾರದ ಮೇಲೆ ಹೀಗೆ ವಾದಿಸುತ್ತಾರೆ - ತತೋ ಯದ್ ಉತ್ತರತರಂ ತದ್ ಅರೂಪರಮ್ ಅನಾಮಯಮ್ / ಯ ಏತದ್ ವಿದುರ್ ಅಮೃತಾಸ್ ತೇ ಭವಂತಿ ಅಥೇತರೇ ದುಃಖಮ್ ಏವಾಪಿಯನ್ತಿ. ಐಹಿಕ ಜಗತ್ತಿನಲ್ಲಿ, ವಿಶ್ವದಲ್ಲಿರುವ ಆದಿ ಜೀವಿಯಾದ ಬ್ರಹ್ಮನನ್ನು ದೇವತೆಗಳು, ಮನುಷ್ಯರು ಮತ್ತು ಕೆಳವರ್ಗದ ಪ್ರಾಣಿಗಳಲ್ಲಿ ಅತಿ ಶ್ರೇಷ್ಠ ಎಂದು ತಿಳಿಯುತ್ತಾರೆ. ಆದರೆ ಬ್ರಹ್ಮನ್ ಆಚೆ ದಿವ್ಯನಿದ್ದಾನೆ. ಅವನಿಗೆ ಭೌತಿಕ ರೂಪವಿಲ್ಲ.

ಅವನು ಎಲ್ಲ ಐಹಿಕ ಕಲ್ಮಷದ ಅಂಟಿನಿಂದ ಮುಕ್ತನು. ಯಾರು ಅವನನ್ನು ಅರಿಯುತ್ತಾರೋ ಅವರು ಅಲೌಕಿಕರಾಗುತ್ತಾರೆ. ಆದರೆ ಅವನನ್ನು ಅರಿಯದವರು ಐಹಿಕ ಜಗತ್ತಿನ ಕ್ಲೇಶಗಳನ್ನು ಅನುಭವಿಸುತ್ತಾರೆ. ನಿರಾಕಾವಾದಿಯು ಅರೂಪಮ್ ಎನ್ನುವ ಶಬ್ದಕ್ಕೆ ಹೆಚ್ಚು ಒತ್ತು ಕೊಡುತ್ತಾರೆ. ಆದರೆ ಈ ಅಪರೂಪಮ್ ನಿರಾಕಾರವಲ್ಲ. ಅದು ಬ್ರಹ್ಮಸಂಹಿತೆಯನ್ನು ಉದ್ಧರಿಸಿ ಮೇಲೆ ಹೇಳಿದ ಮಾತುಗಳಲ್ಲಿ ವರ್ಣಿಸಿದಂತೆ, ನಿತ್ಯಾನಂದ ಸ್ವರೂಪದ ದಿವ್ಯರೂಪವನ್ನು ವರ್ಣಿಸುತ್ತದೆ. ಶ್ವೇತಾಶ್ವತರ ಉಪನಿಷತ್ತಿನ (3.8.9) ಇತರ ಶ್ಲೋಕಗಳು ಇದನ್ನು ಹೀಗೆ ಸಮರ್ಥಿಸುತ್ತವೆ -

ವೇದಾಹಮ್ ಏತಂ ಪುರುಷಂ ಮಹಾನ್‌ತಮ್

ಆದಿತ್ಯವರ್ಣಂ ತಮಸಃ ಪರಸ್ತಾತ್ |

ತಮ್ ಏವ ವಿದ್ವಾನ್ ಅತಿ ಮೃತ್ಯಮ್ ಏತಿ

ನಾನ್ಯಃ ಪನ್ಥಾ ವಿದ್ಯತೇಯನಾಯ ||

ಯಸ್ಮಾತ್ ಪರಂ ನಾಪರಮ್ ಅಸ್ತಿ ಕಿಂಚಿದ್

ಯಸ್ಮಾನ್ ನಾಣೀಯೋ ನೋ ಜ್ಯಾಯೋಸ್ತಿ ಕಿಂಚಿತ್ |

ವೃಕ್ಷಕ್ಷ ಇವ ಸ್ತ ಬ್ಧೋ ದಿವಿ ತಿಷ್ಠತಿ ಏಕಸ್

ತೇನೇದಂ ಪೂರ್ಣಂ ಪುರುಷೇಣ ಸರ್ವಮ್ ||

ತಮಸ್ಸಿನ ಎಲ್ಲ ಐಹಿಕ ಪರಿಕಲ್ಪನೆಗಳನ್ನು ಮೀರಿದ ಆ ದೇವೋತ್ತಮ ಪರಮ ಪುರುಷನನ್ನು ನಾನು ಬಲ್ಲೆ. ಅವನನ್ನು ಅರಿತವನು ಮಾತ್ರ ಹುಟ್ಟುಸಾವುಗಳ ಬಂಧನದಿಂದ ಬಿಡಿಸಿಕೊಳ್ಳಬಲ್ಲ. ಮೋಕ್ಷಕ್ಕೆ ಪರಮ ಪುರುಷನ ಈ ಅರಿವನ್ನು ಬಿಟ್ಟು ಬೇರೆ ದಾರಿಯೇ ಇಲ್ಲ.

ಆ ಪರಮ ಪುರುಷನೇ ಅತ್ಯಂತ ಪರಮೋತನ್ನತನು. ಆದ್ದರಿಂದ ಅವನಿಗಿಂತ ಶ್ರೇಷ್ಠವಾದ ಸತ್ಯವಿಲ್ಲ. ಅವನು ಅತ್ಯಂತ ಸಣ್ಣದಾದುದಕ್ಕಿಂತ ಸಣ್ಣವನು, ಬೃಹತ್ತಮವಾದುದಕ್ಕಿಂತ ಬೃಹತ್ತಾದವನು. ಆತನು ಮೌನವೃಕ್ಷದಂತೆ ನೆಲೆಯಾಗಿರುತ್ತಾನೆ, ದಿವ್ಯಾಕಾಶವನ್ನು ಬೆಳಗುತ್ತಾನೆ ಮತ್ತು ಮರವು ತನ್ನ ಬೇರುಗಳನ್ನು ಹರಡುವಂತೆ ಆತನು ವಿಶಾಲವಾದ ತನ್ನ ಶಕ್ತಿಗಳನ್ನು ಹರಡುತ್ತಾನೆ. ಈ ಶ್ಲೋಕಗಳಿಂದ ದೇವೋತ್ತಮ ಪರಮ ಪುರುಷನು ಪರಮ ಪರಾತ್ಪರ ಸತ್ಯ, ಐಹಿಕವೂ ಅಧ್ಯಾತ್ಮಿಕವೂ ಆದ ಅವನ ವಿವಿಧ ಶಕ್ತಿಗಳನ್ನು ಆತನು ಸರ್ವವ್ಯಾಪಕನು ಎಂದು ನಿರ್ಣಯಿಸಬಹುದು.

mysore-dasara_Entry_Point
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.