Bhagavad Gita: ಭಗವಂತನ ಶಕ್ತಿಯಿಲ್ಲದೆ ಈ ಜಗತ್ತಿನಲ್ಲಿ ಏನೂ ಇರಲು ಸಾಧ್ಯವಿಲ್ಲ; ಗೀತೆಯ ಅರ್ಥ ತಿಳಿಯಿರಿ
Bhagavad Gita: ಭಗವಂತನ ಶಕ್ತಿಯಿಲ್ಲದೆ ಈ ಜಗತ್ತಿನಲ್ಲಿ ಏನೂ ಇರಲು ಸಾಧ್ಯವಿಲ್ಲ ಎಂಬುರ ಅರ್ಥವನ್ನು ಭಗವದ್ಗೀತೆಯ 10ನೇ ಅಧ್ಯಾಯದ 39 ರಿಂದ 41ನೇ ಶ್ಲೋಕದಲ್ಲಿನ ಓದಿ.
ಅಧ್ಯಾಯ 10 - ವಿಭೂತಿ ಯೋಗ -ಶ್ಲೋಕ - 39
ಯಚ್ಛಾಪಿ ಸರ್ವಭೂತಾನಾಂ ಬೀಜಂ ತದಹಮರ್ಜುನ |
ನ ತದಸ್ತಿ ವಿನಾ ಯತ್ಸ್ಯಾನ್ಮಯಾ ಭೂತಂ ಚರಾಚರಮ್ ||39||
ಅನುವಾದ: ಅರ್ಜುನ, ಇದಲ್ಲದೆ ನಾನು ಎಲ್ಲ ಅಸ್ತಿತ್ವಗಳನ್ನು ಉತ್ಪಾದಿಸುವ ಬೀಜ. ನಾನಿಲ್ಲದೆ ಚರಾಚರವಾದದ್ದು ಯಾವುದೂ ಇರಲು ಸಾಧ್ಯವಿಲ್ಲ.
ಭಾವಾರ್ಥ: ಪ್ರತಿಯೊಂದಕ್ಕೂ ಒಂದು ಕಾರಣವಿದೆ. ಆ ಅಭಿವ್ಯಕ್ತಿಯ ಕಾರಣ ಅಥವಾ ಬೀಜವು ಕೃಷ್ಣ. ಕೃಷ್ಣನ ಶಕ್ತಿಯಿಲ್ಲದೆ ಏನೂ ಇರಲು ಸಾಧ್ಯವಿಲ್ಲ. ಆದುದರಿಂದ ಅವನನ್ನು ಸರ್ವಶಕ್ತ ಎಂದು ಕರೆಯುತ್ತಾರೆ. ಅವನ ಶಕ್ತಿಯಿಲ್ಲದೆ ಚಲಿಸುವುದಾಗಲೀ, ಚಲಿಸದೆ ಇರುವುದಾಗಲೀ ಇರಲು ಸಾಧ್ಯವಿಲ್ಲ. ಕೃಷ್ಣನ ಶಕ್ತಿಯ ಆಧಾರವಿಲ್ಲದ ಯಾವುದೇ ಅಸ್ತಿತ್ವವನ್ನು ಮಾಯೆ ಎಂದು ಕರೆಯುತ್ತಾರೆ.
ಅಧ್ಯಾಯ 10 - ವಿಭೂತಿ ಯೋಗ -ಶ್ಲೋಕ - 40
ನಾನ್ತೋಸ್ತಿ ಮಮ ದಿವ್ಯಾನಾಂ ವಿಭೂತೀನಾಂ ಪರನ್ತಪ |
ಏಷ ತೂದ್ದೇಶತಃ ಪ್ರೆೋಕ್ತೋ ವಿಭೂತೇರ್ವಿಸ್ತರೋ ಮಯಾ ||40||
ಅನುವಾದ: ಶತ್ರುವಿಜೇತನಾದ ಅರ್ಜನನೆ, ನನ್ನ ದೈವೀ ಅಭಿವ್ಯಕ್ತಿಗಳಿಗೆ ಕೊನೆಯೇ ಇಲ್ಲ. ನಾನು ನಿನಗೆ ಹೇಳಿರುವುದು ನನ್ನ ಅನಂತ ಸಿರಿಗಳ ಒಂದು ಸೂಚನೆಯಷ್ಟೆ.
ಭಾವಾರ್ಥ: ವೇದ ಸಾಹಿತ್ಯದಲ್ಲಿ ಹೇಳಿರುವಂತೆ ಪರಮನ ಸಿರಿಗಳನ್ನು ಮತ್ತು ಶಕ್ತಿಗಳನ್ನು ಬೇರೆ ಬೇರೆ ರೀತಿಗಳಲ್ಲಿ ಅರ್ಥಮಾಡಿಕೊಳ್ಳುತ್ತಾರೆ. ಆದರೆ ಇಂತಹ ಸಿರಿಗಳಿಗೆ ಮಿತಿಯಿಲ್ಲ. ಆದುದರಿಂದ ಎಲ್ಲ ಸಿರಿಗಳನ್ನೂ ಶಕ್ತಿಗಳನ್ನೂ ವಿವರಿಸಲು ಸಾಧ್ಯವಿಲ್ಲ. ಅರ್ಜುನನ ಕುತೂಹಲವನ್ನು ತಣಿಸಲು ಕೆಲವೇ ನಿದರ್ಶನಗಳನ್ನು ವರ್ಣಿಸಿದೆ.
ಅಧ್ಯಾಯ 10 - ವಿಭೂತಿ ಯೋಗ -ಶ್ಲೋಕ - 41
ಯದ್ಯದ್ವಿಭೂತಿಮತ್ ಸತ್ತ್ವಂ ಶ್ರೀಮದೂರ್ಜಿತಮೇವ ವಾ |
ತತ್ತದೇವಾವಗಚ್ಛ ತ್ವಂ ಮಮ ತೇಜೋಂಶ ಸಮ್ಭಮಮ್ ||41||
ಅನುವಾದ: ಎಲ್ಲ ಶ್ರೀಮಂತವಾದ, ಸುಂದರವಾದ ಮತ್ತು ಉಜ್ವಲವಾದ ಸೃಷ್ಟಿಗಳು ನನ್ನ ವೈಭವದ ಒಂದು ಕಿಡಿಯಿಂದ ಮೂಡಿಬಂದಿದೆ ಎಂದು ತಿಳಿ.
ಭಾವಾರ್ಥ: ಒಂದು ತೇಜಸ್ವೀ ಅಥವಾ ಸುಂದರ ಅಸ್ತಿತ್ವವು ಅಧ್ಯಾತ್ಮಿಕ ಜಗತ್ತಿನಲ್ಲಿರಬಹುದು ಅಥವಾ ಭೌತಿಕ ಜಗತ್ತಿನಲ್ಲಿರಬಹುದು. ಅದು ಕೃಷ್ಣನ ಸಂಪತ್ತಿನ ಒಂದು ಸಣ್ಣ ಅಭಿವ್ಯಕ್ತಿ ಎಂದು ತಿಳಿಯಬೇಕು. ಅಸಾಧಾರಣ ಶ್ರೀಮಂತಿಕೆಯ ಯಾವ ವಸ್ತುವನ್ನಾದರೂ ಕೃಷ್ಣನ ಸಿರಿಯ ಪ್ರತಿನಿಧಿ ಎಂದು ತಿಳಿಯಬೇಕು.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)