ಭಗವದ್ಗೀತೆ: ಕೋಪ ಬಂದಾಗ ಯಾವುದೇ ನಿರ್ಧಾರ ತೆಗೆದುಕೊಳ್ಳಬಾರದು; ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಈ ಉಪದೇಶ ಇಂದಿಗೂ ಪ್ರಸ್ತುತ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಭಗವದ್ಗೀತೆ: ಕೋಪ ಬಂದಾಗ ಯಾವುದೇ ನಿರ್ಧಾರ ತೆಗೆದುಕೊಳ್ಳಬಾರದು; ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಈ ಉಪದೇಶ ಇಂದಿಗೂ ಪ್ರಸ್ತುತ

ಭಗವದ್ಗೀತೆ: ಕೋಪ ಬಂದಾಗ ಯಾವುದೇ ನಿರ್ಧಾರ ತೆಗೆದುಕೊಳ್ಳಬಾರದು; ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಈ ಉಪದೇಶ ಇಂದಿಗೂ ಪ್ರಸ್ತುತ

ತನ್ನವರ ವಿರುದ್ಧವೇ ಹೋರಾಡಬೇಕಲ್ಲ ಅಂತ ಯುದ್ಧ ಆರಂಭಕ್ಕೂ ಮುನ್ನ ಹತಾಶನಾದ ಅರ್ಜುನನಿಗೆ ಶ್ರೀಕೃಷ್ಣ ನೀಡಿದ ಉಪದೇಶವಿದು. ಶ್ರೀಕೃಷ್ಣ ಅರ್ಜುನನಿಗೆ ನೀಡಿದ ಈ ಉಪದೇಶ ಇಂದಿಗೂ ಮನುಷ್ಯನ ಜೀವನಕ್ಕೆ ಪ್ರಸ್ತುತ ಎನಿಸುತ್ತೆ. ಹಿಂದೂ ಧರ್ಮದಲ್ಲಿ ಭಗವದ್ಗೀತೆಯ ಪ್ರಾಮುಖ್ಯತೆ ಅನನ್ಯವಾಗಿದೆ.

ಮಹಾಭಾರತದ ಯುದ್ಧದಲ್ಲಿ ಅರ್ಜನನಿಗೆ ಶ್ರೀಕೃಷ್ಣ ನೀಡಿದ ಉಪದೇಶಗಳು ಮನುಷ್ಯ ಜೀವನಕ್ಕೂ ಪ್ರಸ್ತುತ ಎನಿಸುವಂತಿವೆ.
ಮಹಾಭಾರತದ ಯುದ್ಧದಲ್ಲಿ ಅರ್ಜನನಿಗೆ ಶ್ರೀಕೃಷ್ಣ ನೀಡಿದ ಉಪದೇಶಗಳು ಮನುಷ್ಯ ಜೀವನಕ್ಕೂ ಪ್ರಸ್ತುತ ಎನಿಸುವಂತಿವೆ.

Bhagavad Gita Updesh: ಮಹಾಭಾರತದ (Mahabharat) ಯುದ್ಧ ಆರಂಭಕ್ಕೂ ಮುನ್ನವೇ ತನ್ನ ಸ್ವಂತ ಸಂಬಂಧಿಕರ ವಿರುದ್ಧವೇ ಹೋರಾಟಬೇಕಲ್ಲ ಎಂದು ಹತಾಶನಾಗಿದ್ದ ಅರ್ಜುನನಿಗೆ ಶ್ರೀಕೃಷ್ಣ (Lord Sri Krishna) ಹಲವು ಉಪದೇಶಗಳನ್ನು ನೀಡುತ್ತಾನೆ. ಅರ್ಜುನನಲ್ಲಿ ಮಾನಸಿಕ ಸ್ಥೈರ್ಯ ತುಂಬಲು ಶ್ರೀಕೃಷ್ಣ ನೀಡಿದ ಉಪದೇಶಗಳು ಇಂದಿಗೂ ಪ್ರಸ್ತುತ ಎನಿಸುವಂತಿವೆ.

ನನ್ನ ಸ್ವಂತ ಬಂಧುಗಳ ವಿರುದ್ಧವೇ ನಾನು ಹೇಗೆ ಯುದ್ಧ ಮಾಡಲಿ ಅಂತ ಅರ್ಜುನ ಯೋಜಿಸುತ್ತಿರುವುದನ್ನು ಗಮನಿಸಿದ ಶ್ರೀಕೃಷ್ಣ ಆಶ್ಚರ್ಯ ಪಡುತ್ತಾನೆ. ಆಗ ಅರ್ಜುನನಿಗೆ ಶ್ರೀಕೃಷ್ಣ ನೀಡುವ ಎಲ್ಲಾ ಉತ್ತರಗಳನ್ನು ಭಗವದ್ಗೀತೆಯಲ್ಲಿ ಬರೆಯಲಾಗಿದೆ. ಗೀತೆಯಲ್ಲಿ 18 ಅಧ್ಯಾಯಗಳು ಮತ್ತು ಸುಮಾರು 720 ಶ್ಲೋಕಗಳನ್ನು ಹೇಳಲಾಗಿದೆ. ಇದರಲ್ಲಿರುವ ಪ್ರಮುಖ ಧರ್ಮೋಪದೇಶ ಇಲ್ಲಿದೆ.

ಅರ್ಜುನನಿಗೆ ಶ್ರೀಕೃಷ್ಣ ಏನು ಹೇಳುತ್ತಾನೆ?

ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಅರ್ಜುನನಿಗೆ ಹೀಗೆ ಹೇಳುತ್ತಾನೆ. ಪ್ರತಿಯೊಬ್ಬ ವ್ಯಕ್ತಿಯು ತನ್ನ ಕೋಪವನ್ನು ನಿಯಂತ್ರಿಸಿಕೊಳ್ಳಬೇಕು. ಕೋಪಗೊಂಡಾಗ ಮನುಷ್ಯ ತನ್ನ ಮೇಲೆ ನಿಯಂತ್ರಣವನ್ನು ಹೊಂದಿರುವುದಿಲ್ಲ. ಆಗ ಕೋಪ ಅವನ ಕೈಗಳಿಂದ ತಪ್ಪು ಕೆಲಸಗಳನ್ನು ಮಾಡಿಸುತ್ತದೆ.

ಇದರ ಪ್ರಕಾರ, ಜೀವನದಲ್ಲಿ ಎಂದಿಗೂ ಯಾವುದೇ ನಿರ್ಧಾರವನ್ನು ಕೋಪದಲ್ಲಿ ಇದ್ದಾಗ ತೆಗೆದುಕೊಳ್ಳಬಾರದು. ಏಕೆಂದರೆ ಕೋಪದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಹೆಚ್ಚಾಗಿ ತಪ್ಪಾಗಿರುತ್ತವೆ. ಈ ನಿರ್ಧಾರಗಳು ನಂತರದ ಸಮಯದಲ್ಲಿ ವ್ಯಕ್ತಿಯು ಬಹಳಷ್ಟು ವಿಷಾದಿಸುವಂತೆ ಮಾಡುತ್ತದೆ. ಆದ್ದರಿಂದ ನೀವು ಕೂಡ ಕೋಪಗೊಂಡಾಗ ಶಾಂತ ರೀತಿಯಿಂದ ವರ್ತಿಸಲು ಪ್ರಯತ್ನಿಸಬೇಕು.

ವಯಸ್ಸಾದಂತೆ ಪ್ರತಿಯೊಬ್ಬ ವ್ಯಕ್ತಿಯೂ ತಾನು ಯಾವ ವಸ್ತುಗಳನ್ನು ಗೌರವಿಸಬೇಕು, ಯಾವುದನ್ನು ಮಾಡಬೇಕು, ಯಾವುದನ್ನು ಮಾಡಬಾರದು ಎಂಬುದನ್ನು ಅರಿತುಕೊಳ್ಳುತ್ತಾನೆ. ಅವಶ್ಯಕತೆ ಇಲ್ಲದ, ಬೇಡವಾದ ವಿಚಾರಗಳಿಗೂ ಅನಗತ್ಯ ಪ್ರಾಮುಖ್ಯತೆಯನ್ನು ನೀಡಿರುತ್ತಾನೆ. ಇದೆಲ್ಲಾವನ್ನು ನಿಧಾನವಾಗಿ ಅರಿತುಕೊಳ್ಳುತ್ತಾನೆ.

ಮನಸ್ಸು ಕಸಿವಿಸಿಗೊಂಡಾಗ, ಉದ್ವಿಗ್ನವಾದಾಗ ಆಳವಾಗಿ ಉಸಿರನ್ನು ತೆಗೆದುಕೊಳ್ಳಿ, ನಿಮ್ಮ ಎಲ್ಲಾ ಹತಾಶೆ, ದುಃಖ ಹಾಗೂ ತೊಂದರೆಗಳನ್ನು ಭಗವಂತನ ಪಾದಗಳಿಗೆ ಅರ್ಪಿಸಿ. ಯಾಕೆಂದರೆ ಭಗವಂತನ ಸ್ಮರಣೆಯು ಮನಸ್ಸಿಗೆ ಬಂದರೆ ನೆಮ್ಮದಿ ಮೂಡುತ್ತದೆ. ಸಮಸ್ಯೆಗಳಿಗೆ ಪರಿಹಾರ ಹೊಳೆಯುತ್ತದೆ.

ಬರಹ: ರಾಘವೇಂದ್ರ

(ಮುಂದುವರಿಯುವುದು)

Whats_app_banner

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.