ಸಮಾನತೆಯ ಸಂತ; ವಿಶಿಷ್ಟಾದ್ವೈತ ಸಿದ್ಧಾಂತವನ್ನು ಜಗತ್ತಿಗೆ ಸಾರಿದ ಶ್ರೀ ರಾಮಾನುಜಾಚಾರ್ಯರ ಜೀವನ ಚರಿತ್ರೆ
ಆಧ್ಯಾತ್ಮ, ಮಾನವೀಯ ಮೌಲ್ಯಗಳು, ಸಾಮಾಜಿಕ ಸಮಾನತೆ, ಶ್ರೀ ವೆಂಕಟೇಶ್ವರನ ಪ್ರಭಾವ, ವಿಶಿಷ್ಟಾದ್ವೈತದ ಅನನ್ಯತೆಯನ್ನು ಜನತೆಗೆ ಸಾರಿದ ಮಹಾನ್ ವ್ಯಕ್ತಿ ಶ್ರೀ ರಾಮಾನುಜಾಚಾರ್ಯರು. ಸಮಾಜದಲ್ಲಿ ಸಮಾನತೆಗಾಗಿ ದುಡಿದ ರಾಮಾನುಜರ ಜೀವನ ಚರಿತ್ರೆಯ ಕುರಿತು ಖ್ಯಾತ ಜ್ಯೋತಿಷಿ ಚಿಲಕಮರ್ತಿ ಪ್ರಭಾಕರ ಚಕ್ರವರ್ತಿ ಶರ್ಮಾರವರು ಹೀಗೆ ಹೇಳುತ್ತಾರೆ.

ಸಮಾನತೆಯ ಸಂತ ಶ್ರೀ ರಾಮಾನುಜಾಚಾರ್ಯ; ಭಾರತವು ಸುಮಾರು 8 ನೇ ಶತಮಾನದಿಂದ 11 ಶತಮಾನಗಳ ಅವಧಿಯಲ್ಲಿ ಬಹಳಷ್ಟು ಬದಲಾವಣೆಗಳನ್ನು ಕಂಡಿದೆ. ಆಧ್ಯಾತ್ಮದ ನಿಜವಾದ ಅರ್ಥವನ್ನು ತಿಳಿಸಿದ, ಸಾಮಾಜಿಕ ಸಮಾನತೆಯನ್ನು ಸಾರಿದ ಗುರುವರ್ಯರನ್ನು ಆ ಸಮಯದಲ್ಲಿ ಕಾಣಬಹುದಾಗಿದೆ. ಅವರೆಲ್ಲರೂ ತಮ್ಮದೇ ಆದ ಸಿದ್ಧಾಂತದ ಮೂಲಕ ಸಮಾಜವನ್ನು ಸುಧಾರಿಸಲು ಕಾರಣೀಕರ್ತರಾದರು.
ಭಾರತದ ಇತಿಹಾಸದಲ್ಲಿ ಮೂರು ಸಿದ್ಧಾಂತಗಳನ್ನು ಪ್ರಮುಖವಾಗಿ ಕಾಣಬಹುದು. ಅದ್ವೈತ ಸಿದ್ಧಾಂತ, ದ್ವೈತ ಸಿದ್ದಾಂತ ಮತ್ತು ವಿಶಿಷ್ಟಾದ್ವೈತ ಸಿದ್ಧಾಂತ. ಎಲ್ಲಾ ಸಿದ್ಧಾಂತಗಳು ಮನುಷ್ಯ ಮತ್ತು ದೇವರ ನಡುವಿನ ಸಂಬಂಧವನ್ನೇ ಹೇಳಿವೆ. ಅದು ಸಮಾಜದಲ್ಲಿ ತುಂಬಿದ್ದ ಅಸಮಾನತೆಯನ್ನು ಹೊಡೆದೋಡಿಸಲು ಬಹಳಷ್ಟು ನೆರವಾದವು. ವಿಶಿಷ್ಟಾದ್ವೈತ ತತ್ವದ ಮೂಲಕ ಮೋಕ್ಷದ ಮಾರ್ಗ ತಿಳಿಸಿದ ಶ್ರೀ ರಾಮಾನುಜಾಚಾರ್ಯರನ್ನು ಸಮಾನತೆಯ ಸಂತ ಎಂದು ಕರೆಯಲಾಗುತ್ತದೆ.
ಶ್ರೀರಾಮಾನುಜಾಚಾರ್ಯರ ಹುಟ್ಟು ಇತಿಹಾಸ
ಶ್ರೀ ರಾಮಾನುಜಾಚಾರ್ಯರು ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ಕ್ರಿ ಶ 1016 ರಲ್ಲಿ ಜನಿಸಿದರು. ಅದ್ವೈತ ಸಿದ್ಧಾಂತಕ್ಕೆ ಸುಳ್ಳು ವ್ಯಾಖ್ಯಾನ ನೀಡುತ್ತಿರುವ ಗುರುಗಳ ವಿರುದ್ಧ ರಾಮಾನುಜರು ಚಿಕ್ಕವಯಸ್ಸಿನಲ್ಲಿ ಮಾಡಿದ ವಾದಗಳು ಇತಿಹಾಸದಲ್ಲಿ ಪ್ರಸಿದ್ಧಿ ಪಡೆದಿವೆ ಎಂದು ಖ್ಯಾತ ಜ್ಯೋತಿಷಿ ಚಿಲಕಮರ್ತಿಯವರು ಹೇಳುತ್ತಾರೆ.
ಯಾಮುನಾಚಾರ್ಯರ ನಂತರ ಶ್ರೀರಂಗರನ್ನು ಪೀಠಾಧಿಪತಿಯಾಗಿ ನೇಮಿಸಲಾಯಿತು. ತಿರುವಾಯ್ ಮೊಳಿಯಂತಹ ದ್ರಾವಿಡ ದಂತಕಥೆಗಳನ್ನು ಸಂಸ್ಕೃತಕ್ಕೆ ಅನುವಾದಿಸಿ ವೈಷ್ಣವ ಧರ್ಮವನ್ನು ಹರಡಲಾಯಿತು. ತಿರುಮಂತ್ರಾರ್ಥದ ರಹಸ್ಯವನ್ನು ಕೇಳಿದವರೆಲ್ಲರೂ ನಿರ್ಮಲರಾಗಿ ಜನ್ಮರಹಿತರಾಗುತ್ತಾರೆ ಎಂದು ಗುರುಗಳು ಹೇಳಿದರು. ರಾಮಾನುಜಾಚಾರ್ಯರು ಒಮ್ಮೆ ಗುಡಿಯ ಗೋಪುರವನ್ನು ಹತ್ತಿ ಎಲ್ಲರಿಗೂ ಕೇಳುವಂತೆ ತಿರುಮಂತ್ರಾರ್ಥವನ್ನು ವಿವರಿಸಿದರು. ಎಲ್ಲರಿಗೂ ಮೋಕ್ಷ ಪ್ರಾಪ್ತಿಯಾಗಬೇಕೆಂಬ ಸದುದ್ದೇಶದಿಂದ ಶ್ರೀ ರಾಮಾನುಜಾಚಾರ್ಯರು ಹೇಳಿದರು.
ವಿಶಿಷ್ಟಾದ್ವೈತ ಸಿದ್ಧಾಂತದ ಪ್ರತಿಪಾದಕ ಈ ಸಮಾನತೆಯ ಸಂತ
ವಿಶಿಷ್ಟಾದ್ವೈತ ಸಿದ್ಧಾಂತವು ತ್ರಿಮೂರ್ತಿಗಳ ವೈವಿಧ್ಯತೆಯನ್ನು ಏಕತೆಯಲ್ಲಿ ಸಂಯೋಜಿಸಿ ರೂಪುಗೊಂಡಿತು. ಪ್ರಸ್ಥಾನ ತ್ರಯಕ್ಕೆ ಶ್ರೀ ಭಾಷ್ಯವನ್ನು ಅವರು ಬರೆದರು. ರಾಮಾನುಜರು ಕುರತ್ತಾಳ್ವಾರ್ ಮೊದಲಾದ ಶಿಷ್ಯ ಸಮೂಹದೊಂದಿಗೆ ದೇಶಾದ್ಯಂತ ಸಂಚರಿಸಿದರು. ಪಂಚರಾತ್ರಾಗಮ ಶಾಸ್ತ್ರಾಭ್ಯಾಸಗಳನ್ನು ಅನುಸರಿಸಿ ಅರ್ಚನೆ ಪದ್ಧತಿ ಮತ್ತು ರಾಜಭೋಗಾದಿ ಸಂಪ್ರದಾಯಗಳು ಬಲಗೊಳ್ಳುವಂತೆ ಮಾಡಿದರು. ಜನರಲ್ಲಿ ವೈಷ್ಣವ ಭಕ್ತಿಯ ಬೀಜವನ್ನು ಬಿತ್ತಿದರು.
ರಾಮಾನುಜರು, ದೇವರ ದೃಷ್ಟಿಯಲ್ಲಿ ಎಲ್ಲರೂ ಸಮಾನರು, ಎಲ್ಲರೂ ಮೋಕ್ಷಕ್ಕೆ ಅರ್ಹರು ಎಂದು ಹೇಳುವ ಮೂಲಕ ಸರ್ವ ಮಾನವರಲ್ಲಿ ಸಮಾನತೆ, ಸಹೋದರತ್ವ ಭಾವವನ್ನು ಕಲಿಸಿದ ಮೊದಲ ಗುರುವಾದರು. ಮೇಲುಕೋಟೆ ಕ್ಷೇತ್ರದಲ್ಲಿ ಕೆಳವರ್ಗದವರಿಗೆ ‘ತಿರುಕುಲತ್ತರ್’ ಎಂಬ ಹೆಸರಿನಲ್ಲಿ ನೇರವಾಗಿ ದೇವಸ್ಥಾನಕ್ಕೆ ಪ್ರವೇಶ ಕಲ್ಪಿಸಲಾಗಿತ್ತು. ಸಮತಾಮೂರ್ತಿಯಾಗಿ ಅವರು ತಮ್ಮ ಅವತಾರದ ಸಾರವನ್ನು ಜಗತ್ತಿಗೆ ತಿಳಿಸಿದರು. ತಾಯಿಯು ತನ್ನ ಮಗುವಿನ ಆರೋಗ್ಯಕ್ಕಾಗಿ ಹಾಲುಣಿಸಿದಂತೆಯೇ ಈ ಲೋಕಗಳೆಲ್ಲ ದೀನದಲಿತರ ಉನ್ನತಿಗಾಗಿ ಭಗವಂತನನ್ನು ಆಶ್ರಯಿಸಿವೆ ಎಂದು ಶ್ರೀರಂಗನಾಥನನ್ನು ಪ್ರಾರ್ಥಿಸಿದರು. ನೂರಾ ಇಪ್ಪತ್ತು ವರ್ಷಗಳ ಕಾಲ ವಿಶಿಷ್ಟಾದ್ವೈತವನ್ನು ಸಾರಿದ ಶ್ರೀ ರಾಮಾನುಜಾಚಾರ್ಯರು 1137 ರಲ್ಲಿ ಪರಮಾಪ್ತರಾದರು.
ಮೂಲ ಲೇಖನ - ಜ್ಯೋತಿಷಿ ಚಿಲಕಮರ್ತಿ ಪ್ರಭಾಕರ ಚಕ್ರವರ್ತಿ ಶರ್ಮಾ
ಅನುವಾದ - ಅರ್ಚನಾ ಹೆಗಡೆ, ಕಲಬುರಗಿ
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.
