ರಾತ್ರಿ ಹೊತ್ತು ನಿದ್ರೆ ಬರದೆ ಹಿಂಸೆ ಆಗ್ತಿದ್ಯಾ, ಮಗುವಿನಂತೆ ನಿದ್ರೆ ಮಾಡಲು ಮಲಗುವ ಮುನ್ನ ಈ ಮಂತ್ರಗಳನ್ನು ಜಪಿಸಿ
ವೈಯಕ್ತಿಕ ಕಾರಣ ಅಥವಾ ಬೇರ್ಯಾವ ಕಾರಣಗಳಿಂದಲೋ ಬಹಳಷ್ಟು ಜನರಿಗೆ ರಾತ್ರಿ ನಿದ್ರೆ ಬರುವುದಿಲ್ಲ. ಎಷ್ಟೇ ಆಯಾಸವಾಗಿದ್ದರೂ ನಿದ್ರೆ ಬಾರದೆ ಒದ್ದಾಡುತ್ತಾರೆ. ಇದಕ್ಕೆ ನಾನಾ ಕಾರಣಗಳಿರಬಹುದು. ಆದರೆ ಕೆಲವೊಂದು ಮಂತ್ರಗಳನ್ನು ಪಠಿಸುವುದರಿಂದ ನೀವು ನೆಮ್ಮದಿಯಾಗಿ ನಿದ್ರೆ ಮಾಡಬಹುದು.
ಒತ್ತಡ, ಚಿಂತೆ ಮತ್ತು ಆಲೋಚನೆಗಳಿಂದ ತುಂಬಿರುವ ಇಂದಿನ ದಿನಗಳಲ್ಲಿ ಬಹಳ ಜನರು ರಾತ್ರಿ ನಿದ್ರೆ ಇಲ್ಲದೆ ಕಳೆಯುತ್ತಾರೆ. ಇದರಿಂದ ಹೊರ ಬರಲು ಇರುವ ಏಕೈಕ ಮಾರ್ಗವೆಂದರೆ ಧ್ಯಾನ ಮತ್ತು ಯೋಗ. ಅವುಗಳ ಜೊತೆ ಕೆಲವು ಮಂತ್ರಗಳು ಮತ್ತು ಶ್ಲೋಕಗಳನ್ನು ಪಠಿಸುವುದರಿಂದ ಮಾನಸಿಕ ನೆಮ್ಮದಿ ದೊರೆಯುತ್ತದೆ. ಮನಸ್ಸನ್ನು ಕೇಂದ್ರೀಕರಿಸಿ ಮತ್ತು ಏಕಾಗ್ರತೆಯಿಂದ ಕೆಲವು ಮಂತ್ರಗಳನ್ನು ಪಠಿಸುವುದರಿಂದ, ನೀವು ಆರಾಮವಾಗಿ ಮಲಗಲು ಸಾಧ್ಯವಾಗುತ್ತದೆ. ಪಠಣವು ನಿಮ್ಮ ಸುತ್ತಲೂ ಸಕಾರಾತ್ಮಕ ಶಕ್ತಿಯನ್ನು ಸೃಷ್ಟಿಸುತ್ತದೆ.
ಸಂದರ್ಭಕ್ಕೆ ತಕ್ಕಂತೆ ಹಲವು ಮಂತ್ರಗಳಿವೆ. ಆದ್ದರಿಂದ ಉತ್ತಮ ನಿದ್ರೆಗಾಗಿ ಉತ್ತಮ ಪ್ರಯೋಜನಗಳನ್ನು ನೀಡುವ 5 ಮಂತ್ರಗಳು ಇಲ್ಲಿವೆ. ಮಲಗುವ ಮುನ್ನ ಈ ಮಂತ್ರಗಳನ್ನು ಪಠಿಸುವುದರಿಂದ ಮನಸ್ಸು ಶಾಂತವಾಗಿರುತ್ತದೆ. ಆತಂಕ ಕಡಿಮೆಯಾಗಲಿದೆ. ಧನಾತ್ಮಕ ಶಕ್ತಿಯನ್ನು ಆಹ್ವಾನಿಸಲು ಸಹಾಯ ಮಾಡುತ್ತದೆ.
ಓಂ ಮಂತ್ರ
ಪುರಾಣಗಳ ಪ್ರಕಾರ, ಓಂ ಎಂಬುದು ಬ್ರಹ್ಮಾಂಡದಿಂದ ಬರುವ ಮೊದಲ ಶಬ್ದವಾಗಿದೆ. ಇದು ಬಹಳ ಶಕ್ತಿಶಾಲಿ ಮಂತ್ರವಾಗಿದೆ. ಮಲಗುವ ಮುನ್ನ ಓಂ ಮಂತ್ರವನ್ನು ಪಠಿಸುವುದರಿಂದ ನಿಮ್ಮನ್ನು ಕಾಸ್ಮಿಕ್ ಶಕ್ತಿಯೊಂದಿಗೆ ಸಂಪರ್ಕಿಸುತ್ತದೆ. ಓಂ ಪಠಣವು ಆತ್ಮವನ್ನು ಶುದ್ಧೀಕರಿಸುವುದು ಮಾತ್ರವಲ್ಲದೆ ಎಲ್ಲಾ ದಿನದ ಮಾನಸಿಕ ಆತಂಕವನ್ನು ದೂರ ಮಾಡುತ್ತದೆ. ಮನಸ್ಸಿನ ಚಿಂತೆಗಳನ್ನು ದೂರ ಮಾಡುತ್ತದೆ. ಮನಸ್ಸನ್ನು ಶಾಂತಗೊಳಿಸುತ್ತದೆ. ಮೆದುಳನ್ನು ರಿಲ್ಯಾಕ್ಸ್ ಮೋಡ್‌ನಲ್ಲಿ ಇರಿಸುವ ಮೂಲಕ ನಿದ್ರೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.
ಹನುಮಾನ್ ಚಾಲೀಸಾ
ಹನುಮಾನ್ ಚಾಲೀಸಾವು ಹನುಮಾನ್ ದೇವರಿಗೆ ಸಮರ್ಪಿತವಾದ ಮಂತ್ರವಾಗಿದೆ. ಹನುಮಾನ್ ಚಾಲೀಸಾ ಓದುವುದು ತುಂಬಾ ಒಳ್ಳೆಯದು. ಅಗತ್ಯ ಸಮಯದಲ್ಲಿ ಹನುಮಾನ್ ಚಾಲೀಸಾ ಪಠಣ ಶಕ್ತಿ ಮತ್ತು ರಕ್ಷಣೆ ನೀಡುತ್ತದೆ. ಬಹಳ ಭಕ್ತಿಯಿಂದ ಹನುಮಂತನನ್ನು ಕರೆದರೆ, ಅವನು ಬೇಗನೆ ಉತ್ತರಿಸುತ್ತಾನೆ ಎಂದು ಹೇಳಲಾಗುತ್ತದೆ. ಕೆಟ್ಟ ಕನಸುಗಳು ಮತ್ತು ನಕಾರಾತ್ಮಕ ಶಕ್ತಿಗಳಿಂದ ತೊಂದರೆಗೊಳಗಾದವರಿಗೆ ಹನುಮಾನ್ ಚಾಲೀಸಾ ಪಠಣವು ತುಂಬಾ ಸಹಾಯಕವಾಗಿದೆ. ‘ಭೂತ್ ಪಿಸಾಚ್ ನಿಕಟ್ ನಹೀ ಅವೆ, ಮಹಾವೀರ್ ಜಬ್ ನಾಮ್ ಸುನವೇ’ ಎಂಬ ಸಾಲುಗಳನ್ನು ಪಠಿಸುವುದರಿಂದ ನಮ್ಮನ್ನು ರಕ್ಷಿಸುತ್ತದೆ. ಇದು ದುಷ್ಟಶಕ್ತಿಗಳ ವಿರುದ್ಧ ಹೋರಾಡುವ ಶಕ್ತಿಯಾಗಿ ಕಾರ್ಯ ಅಡೆ ತಡೆಯಿಲ್ಲದ ಶಾಂತ ನಿದ್ರೆಯನ್ನು ನಿಮಗೆ ನೀಡುತ್ತದೆ.
ದುರ್ಗಾ ಮಂತ್ರ
'ಯಾ ದೇವಿ ಸರ್ವ ಭೂತೇಷು ನಿದ್ರಾ ರೂಪೇಣ ಸಂಸ್ಥಿತಾ, ನಮಸ್ತಸ್ಯೇ ನಮಸ್ತಸ್ಯೇ ನಮೋ ನಮಃ' ಈ ದುರ್ಗಾ ಮಂತ್ರವು ದೈವಿಕ ಸ್ತ್ರೀ ಶಕ್ತಿಯ ವ್ಯಾಖ್ಯಾನವಾಗಿದೆ. ರಕ್ಷಣೆ ಮತ್ತು ಚಿಕಿತ್ಸೆಗೆ ಮೀಸಲಾದ ಮಂತ್ರ, ದುರ್ಗಾ ದೇವಿಯು ಅನೇಕ ರೂಪಗಳಲ್ಲಿ ಭಕ್ತರನ್ನು ರಕ್ಷಿಸುತ್ತಾಳೆ ಎಂದು ನಂಬಲಾಗಿದೆ. ತನ್ನ ಮಗುವನ್ನು ಕೆಟ್ಟದ್ದರಿಂದ ರಕ್ಷಿಸಲು ತಾಯಿ ಯಾವಾಗಲೂ ಮುಂದೆ ಇರುತ್ತಾಳೆ. ಮಲಗುವ ಸಮಯದಲ್ಲೂ ಈ ಮಂತ್ರವನ್ನು ಪಠಿಸುವುದರಿಂದ ನಮ್ಮನ್ನು ದುಸ್ವಪ್ನಗಳಿಂದ ರಕ್ಷಿಸುತ್ತದೆ. ದುರ್ಗಾ ದೇವಿ ನಮ್ಮ ರಕ್ಷಕಳಾಗಿರುವುದು ನಮಗೆ ಧೈರ್ಯ ನೀಡುತ್ತದೆ .
ಮಹಾ ಮೃತ್ಯುಂಜಯ ಮಂತ್ರ
ಭಯವನ್ನು ಹೋಗಲಾಡಿಸಲು ಮಹಾ ಮೃತ್ಯುಂಜಯ ಮಂತ್ರವು ಉಪಯುಕ್ತವಾಗಿದೆ. ಇದು ಸಾವಿನ ಭಯವನ್ನು ಹೋಗಲಾಡಿಸಲು ಬಳಸಬಹುದಾದ ಅತ್ಯಂತ ಶಕ್ತಿಶಾಲಿ ಮಂತ್ರವಾಗಿದೆ. ಓಂ ಎಂದು ಪ್ರಾರಂಭವಾಗುವ ಈ ಮಂತ್ರದ ಪುನರಾವರ್ತಿತ ಪಠಣದಿಂದ ಶಿವನ ಆಶೀರ್ವಾದ ದೊರೆಯುತ್ತದೆ. ಮಲಗುವ ಮುನ್ನ ಮಹಾ ಮೃತ್ಯುಂಜಯ ಮಂತ್ರವನ್ನು ಪಠಿಸುವುದರಿಂದ ಅಕಾಲಿಕ ಮರಣ ಭಯ ದೂರವಾಗುತ್ತದೆ. ಭಗವಂತ ಶಿವನನ್ನು ರಕ್ಷಿಸುತ್ತಾನೆ ಎಂದು ನಂಬಲಾಗಿದೆ. ವ್ಯಕ್ತಿಯ ಸುತ್ತಲಿನ ಹಾನಿಕಾರಕ ಅಶುದ್ಧ ಶಕ್ತಿಗಳಿಂದ ಭಕ್ತರು ಪರಿಹಾರ ಪಡೆಯುತ್ತಾರೆ. ಹಾಗೇ ಈ ಮಂತ್ರವನ್ನು ಪಠಿಸುವುದರಿಂದ ಯಾವುದೇ ಒತ್ತಡ ಇಲ್ಲದೆ ಒತ್ತಡ ನಿವಾರಣೆಯಾಗಿ ಉತ್ತಮ ನಿದ್ರೆ ಬರುತ್ತದೆ.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.