Sita Name for Baby Girl: ನಿಮ್ಮ ಮಗುವಿಗೆ ಸೀತೆಯ ಹೆಸರಿಡುವ ಆಸೆಯಿದೆಯೇ? ಈ 21 ಹೆಸರುಗಳನ್ನೊಮ್ಮೆ ಗಮನಿಸಿ
ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯ ಸಂಭ್ರಮ ದೇಶದೆಲ್ಲೆಡೆ ಮನೆ ಮಾಡಿದೆ. ಈ ಸುಸಂದರ್ಭದಲ್ಲಿ ತಮ್ಮ ಮಗುವಿಗೆ ಸೀತಾ-ರಾಮ ಹೆಸರು ಇಡಬೇಕು ಎಂದು ಪೋಷಕರು ಯೋಚಿಸುತ್ತಿದ್ದಾರೆ. ನಿಮಗೆ ಹೆಣ್ಣು ಮಗು ಜನಿಸಿದ್ದು ಆ ಮಗುವಿಗೆ ಸೀತೆಯ ಹೆಸರು ಇಡಬೇಕು ಎಂದು ಯೋಚಿಸುತ್ತಿದ್ದರೆ, ನಿಮಗಾಗಿ ಇಲ್ಲಿದೆ 21 ಹೆಸರು.
ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯ ಹೊತ್ತಿನಲ್ಲಿ ಸೀತಾಮಾತೆಯನ್ನು ನಾವು ನೆನೆಯಲೇಬೇಕಿದೆ. ಶ್ರೀರಾಮನ ಬದುಕಿನ ಭಾಗವೇ ಆಗಿದ್ದ ಸೀತಾಮಾತೆಯನ್ನು ಹಿಂದೂಗಳು ದೇವತೆಯಂತೆ ಪೂಜಿಸುತ್ತಾರೆ. ಆಕೆಯು ತನ್ನ ತ್ಯಾಗ, ಭಕ್ತಿ, ನಿಷ್ಠೆ ಹೀಗೆ ಹಲವು ಕಾರಣಗಳಿಂದ ಪ್ರಸಿದ್ಧ ಪಡೆದಿದ್ದಾಳೆ. ತಾಯಿ ಮಗಳು, ಹೆಂಡತಿ ಹೀಗೆ ಎಲ್ಲಾ ಪಾತ್ರಗಳಲ್ಲೂ ಆಕೆಯ ಹಿರಿಮೆ ದೊಡ್ಡದು. ಆಕೆಯನ್ನು ಸಹನಾಮೂರ್ತಿ ಅಂತಲೂ ಕರೆಯಬಹುದು.
ಸೀತಾಮಾತೆಯನ್ನು ಲಕ್ಷ್ಮೀದೇವಿಯ ಸ್ವರೂಪ ಎಂದು ಹೇಳಲಾಗುತ್ತದೆ. ಹೆಣ್ಣುಮಕ್ಕಳು ಹುಟ್ಟಿದರೆ ಸೀತೆಯಂತೆ ಗುಣಗಳಿರಬೇಕು ಎಂದು ಪೋಷಕರು ಬಯಸುವುದು ಸಹಜ. ಇದರೊಂದಿಗೆ ಸೀತಾದೇವಿಯ ಹೆಸರನ್ನು ತಮ್ಮ ಮಗುವಿಗೆ ಇರಿಸಲು ಬಯಸುತ್ತಾರೆ. ಸೀತೆಯಿಂದ ಪ್ರೇರಿತವಾದ ಸುಂದರ ಹೆಣ್ಣುಮಕ್ಕಳು ಹೆಸರು ಹಾಗೂ ಅದರ ಅರ್ಥ ಇಲ್ಲಿದೆ ಗಮನಿಸಿ.
ಸೀತೆಯ 21 ಹೆಸರುಗಳು ಹೀಗಿವೆ
- ಸಿಯಾ- ಸಿಯಾ ಎನ್ನುವುದು ಸೀತೆಯ ಹೆಸರು. ಇದರ ಅರ್ಥ ಹಾಲ ಬೆಳದಿಂಗಳಿನಂತೆ ಸುಂದರವಾಗಿರುವುದು ಎಂದು.
2. ಪಾರ್ಥವಿ- ಭೂತಾಯಿಯ ಮಗಳು
3. ಜಾನಕಿ- ಜನಕ ಮಹಾರಾಜನ ಮಗಳು
4. ಶಿವಸತಿ- ಸೀತಾದೇವಿಗೆ ಸಮಾನಾರ್ಥಕವಾದ ಹೆಸರು
5. ವಾಚ್ಯ - ಎಲ್ಲವನ್ನೂ ಸುಂದರವಾಗಿ ವ್ಯಕ್ತಪಡಿಸುವವರು
6. ಸಿತಾಶಿ- ಸೀತೆಗೆ ಸಮಾನಾರ್ಥಕ ಹೆಸರು
7. ಲಕ್ಷಕಿ- ಇದು ಸೀತಾದೇವಿಯ ಹೆಸರು
8. ಭೌಮಿ - ಭೂಮಿಯಿಂದ ಹುಟ್ಟಿದವಳು
9. ಜನಕನಂದಿನಿ - ಜನಕ ಮಹಾರಾಜನ ಮಗಳು
10. ಮೈಥಿಲಿ - ಮಿಥಿಲೆಯ ರಾಜಕುಮಾರಿ
11. ಮರುನ್ಮಯೀ - ಭೂಮಿ ಅಥವಾ ಜೇಡಿಮಣ್ಣಿನಿಂದ ಸೃಷ್ಟಿಯಾದವಳು
12. ವೈಧೆ -ಸೀತಾದೇವಿಯ ಇನ್ನೊಂದು ಹೆಸರು
13. ಸಿಹಾ- ಸಂತೋಷವನ್ನು ತರುವವಳು
14. ರಾಮೇತಿ - ಸದಾ ರಾಮನನ್ನು ಸ್ಮರಿಸುವವಳು
15. ಅವನಿಜ - ಭೂಮಿತಾಯಿಗೆ ಸಂಬಂಧಿಸಿರುವವಳು
16. ವನಿಕಾ- ಕಾಡಿನಲ್ಲಿ ವಾಸಿಸುವವಳು
17. ಅಂಕ್ಷಿತಾ -ಶಕ್ತಿಶಾಲಿ ಹಾಗೂ ಧೈರ್ಯಶಾಲಿ
18. ಭೂಮಿಜ - ಸಹಿಷ್ಣು ಗುಣವುಳ್ಳವವಳು
19. ಸಿಯಾನ್ಶಿ - ಸೀತಾದೇವಿಯ ಸ್ವಭಾವದ ಒಂದು ಭಾಗ
20. ಶಿತಿಜಾ - ಇದು ಸೀತೆಗೆ ಸಂಬಂಧಿಸಿದ ಹೆಸರು. ಇದರ ಅರ್ಥ ದಿಗಂತ.
21. ವೈದೇಹಿ - ಭಗವಾನ್ ಶ್ರೀರಾಮನ ಮಡದಿ
'ಮನೆ-ಮನದಲ್ಲಿ ಶ್ರೀರಾಮ' ಸರಣಿಗೆ ನೀವೂ ಬರೆಯಿರಿ. ಇಮೇಲ್: ht.kannada@htdigital.in