Hanuman Name for Boy: ನಿಮ್ಮ ಮಗುವಿಗೆ ಆಂಜನೇಯನ ಹೆಸರಿಡುವ ಆಸೆಯಿದೆಯೇ? ಈ 21 ಹೆಸರುಗಳನ್ನೊಮ್ಮೆ ಗಮನಿಸಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Hanuman Name For Boy: ನಿಮ್ಮ ಮಗುವಿಗೆ ಆಂಜನೇಯನ ಹೆಸರಿಡುವ ಆಸೆಯಿದೆಯೇ? ಈ 21 ಹೆಸರುಗಳನ್ನೊಮ್ಮೆ ಗಮನಿಸಿ

Hanuman Name for Boy: ನಿಮ್ಮ ಮಗುವಿಗೆ ಆಂಜನೇಯನ ಹೆಸರಿಡುವ ಆಸೆಯಿದೆಯೇ? ಈ 21 ಹೆಸರುಗಳನ್ನೊಮ್ಮೆ ಗಮನಿಸಿ

ಅಯೋಧ್ಯೆ ರಾಮಮಂದಿರ ಉದ್ಘಾಟನೆಯ ಈ ಹೊತ್ತಿನಲ್ಲಿ ರಾಮನೊಂದಿಗೆ ಹನುಮನನ್ನೂ ನೆನೆಯಬೇಕು. ಆಂಜನೇಯನು ಶ್ರೀರಾಮನ ಬದುಕಿನಲ್ಲಿ ಮಹತ್ವದ ಪಾತ್ರ ಹೊಂದಿದ್ದ. ತನ್ನ ಶಕ್ತಿ, ಸಾಮರ್ಥ್ಯದ ಮೂಲಕ ಹೆಸರು ಗಳಿಸಿರುವ ಆಂಜನೇಯನ ಹೆಸರನ್ನು ನಿಮ್ಮ ಮಗುವಿಗೂ ಇಡಬೇಕು ಅಂತಿದ್ರೆ ಇಲ್ಲಿದೆ ನಿಮಗಾಗಿ ಒಂದಿಷ್ಟು ಐಡಿಯಾ.

ನಿಮ್ಮ ಮಗುವಿಗೆ ಆಂಜನೇಯನ ಹೆಸರಿಡುವ ಆಸೆಯಿದೆಯೇ? ಈ 21 ಹೆಸರುಗಳನ್ನೊಮ್ಮೆ ಗಮನಿಸಿ
ನಿಮ್ಮ ಮಗುವಿಗೆ ಆಂಜನೇಯನ ಹೆಸರಿಡುವ ಆಸೆಯಿದೆಯೇ? ಈ 21 ಹೆಸರುಗಳನ್ನೊಮ್ಮೆ ಗಮನಿಸಿ

ನಾಡಿನೆಲ್ಲೆಡೆ ಶ್ರೀರಾಮಚಂದ್ರನದ್ದೇ ಕಲರವ. 550 ವರ್ಷಗಳ ಹಿಂದೂ ಕನಸು ನನಸಾಗುವ ಕಾಲ ಈಗ ಕೂಡಿ ಬಂದಿದೆ. ಅದುವೇ ಶ್ರೀರಾಮನ ಜನ್ಮಸ್ಥಳ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ. ನಾಳೆ ರಾಮಮಂದಿರ ಲೋಕಾರ್ಪಣೆಗೊಳ್ಳಲಿದೆ. ಈ ಹೊತ್ತಿನಲ್ಲಿ ದೇಶದಾದ್ಯಂತ ಸಂಭ್ರಮ ಮುಗಿಲು ಮುಟ್ಟಿದೆ. ಜನರು ರಾಮನ ಜೊತೆಗೆ ಸೀತೆ ಹಾಗೂ ಹನುಮಂತನನ್ನು ನೆನೆಯುತ್ತಿದ್ದಾರೆ.

ಆಂಜನೇಯ ತನ್ನ ಶಕ್ತಿ, ಭಕ್ತಿ, ನಿಷ್ಠೆಯ ಕಾರಣದಿಂದ ಜಗತ್ಪ್ರಸಿದ್ಧ. ಮಾತ್ರವಲ್ಲ ಹಿಂದೂಗಳನ್ನು ಆಂಜನೇಯನನ್ನು ದೇವರೆಂದು ಪೂಜಿಸುತ್ತಾರೆ. ಕೇಸರಿ ಹಾಗೂ ಅಂಜನಾದೇವಿಯ ಪುತ್ರನಾಗಿರುವ ಕಾರಣ ಹನುಮನಿಗೆ ಅಂಜನೇಯ ಎಂದೂ ಕರೆಯುತ್ತಾರೆ. ಹನುಮಂತ ಹೆಸರನ್ನು ಮಗುವಿಗೆ ಇರಿಸುವುದರಿಂದ ಅವನು ಅಷ್ಟೇ ಬಲಶಾಲಿಯಾಗುತ್ತಾನೆ ಎಂಬುದು ಜನರ ನಂಬಿಕೆ.

ನಿಮಗೆ ಇತ್ತೀಚೆಗೆ ಮಗು ಜನಿಸಿದ್ದು, ಆ ಮಗುವಿಗೆ ಶ್ರೀರಾಮ ಹೆಸರು ಇರಿಸಬೇಕು ಅಂದುಕೊಳ್ಳುತ್ತಿದ್ದರೆ, ನಿಮಗಾಗಿ ಇಲ್ಲಿದೆ 21 ಹೆಸರು.

1. ಅಮಿತ್‌ ವಿಕ್ರಮ್‌: ಮಿತಿಯಿಲ್ಲದ ಎಂದು ಅರ್ಥ. ಅಳತೆಗೆ ಸಿಗದ ಎಂಬ ಅರ್ಥವೂ ಈ ಹೆಸರಿಗಿದೆ.

2. ಅನಿಲ್‌- ತಂಗಾಳಿ, ಗಾಳಿ ಎಂಬೆಲ್ಲಾ ಅರ್ಥವಿದೆ.

3. ಭಜರಂಗಿ - ಹೋರಾಟಗಾರ, ದೇವರ ಸಲುವಾಗಿ ಹೋರಾಡುವವನು ಎಂದು ಹೇಳಲಾಗುತ್ತದೆ.

4. ಭಕ್ತವತ್ಸಲ- ತನ್ನ ಭಕ್ತರನ್ನು ಕಾಯುವವನು

5. ಚಿರಂಜೀವಿ - ಸಾವಿಲ್ಲದವನು

6. ಧ್ಯಾನಾಂಜನೇಯ- ಧ್ಯಾನ ಚಿತ್ತನಾಗಿರುವವನು

7. ಜ್ಞಾನಸಾಗರ್‌ - ಸಾಕಷ್ಟು ಜ್ಞಾನ ಹೊಂದಿರುವವನು

8. ಹನುಮಾನ್‌ - ಆಂಜನೇಯ ಇನ್ನೊಂದು ಹೆಸರು

9. ಇರಾಜ್‌ - ಗಾಳಿಯಿಂದ ಜನಿಸಿದವನು

10. ಜಿತ್ರೇಂದಿಯ- ಇಂದ್ರಿಯಗಳನ್ನು ಗೆದ್ದವನು ಎಂದರ್ಥ.

11. ಕಲಾನಾಭ: ಸಮಯವನ್ನು ನಿಯಂತ್ರಿಸುವವನು ಅಥವಾ ಸಂಘಟಿಸುವವನು ಎಂದರ್ಥ

12. ಮಹಾತೇಜಸ್‌ - ತೇಜಸ್ಸುವುಳ್ಳವನು

13. ಮಹಾವೀರ್‌ - ಕೆಚ್ಚೆದೆಯ ಧೈರ್ಯಶಾಲಿ

14. ಪ್ರತಾಪವತ್‌: ವೈಭವ, ಹುರುಪು ಹೊಂದಿರುವವನು

15. ರುದ್ರಾಂಶ - ಶಿವನ ಸ್ವಭಾವವನ್ನು ಹೊಂದಿರುವವನು

16. ಸಂಜು - ವಿಜಯವನ್ನು ಸಾರುವವನು

17. ಶೌರ್ಯ - ನಿರ್ಭೀತ, ಪರಾಕ್ರಮಿ, ಧೈರ್ಯಶಾಲಿ

18. ತೇಜಸ್‌ - ಸದಾ ಹೊಳೆಯವವನು, ತೇಜಸ್ಸಿನಿಂದ ಕೂಡಿರುವವನು

19. ಉರ್ಜಿತ್‌ - ಶಕ್ತಿವಂತ

20. ವಿಶ್ವೇಶ- ಪರಮಾತ್ಮನ ಸ್ವರೂಪ ಎಂದರ್ಥ.

21. ವಾಯನಂದನ- ವಾಯುವಿನ ಮಗ

'ಮನೆ-ಮನದಲ್ಲಿ ಶ್ರೀರಾಮ' ಸರಣಿಗೆ ನೀವೂ ಬರೆಯಿರಿ. ಇಮೇಲ್: ht.kannada@htdigital.in

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.