Magha Masam: ಮಾಘ ಮಾಸದಲ್ಲಿ ಬರುವ 6 ಪ್ರಮುಖ ಹಬ್ಬಗಳಿವು; ಈ ಹಬ್ಬಗಳ ಮಹತ್ವ, ಆಚರಣೆಯ ಕ್ರಮ ತಿಳಿಯಿರಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Magha Masam: ಮಾಘ ಮಾಸದಲ್ಲಿ ಬರುವ 6 ಪ್ರಮುಖ ಹಬ್ಬಗಳಿವು; ಈ ಹಬ್ಬಗಳ ಮಹತ್ವ, ಆಚರಣೆಯ ಕ್ರಮ ತಿಳಿಯಿರಿ

Magha Masam: ಮಾಘ ಮಾಸದಲ್ಲಿ ಬರುವ 6 ಪ್ರಮುಖ ಹಬ್ಬಗಳಿವು; ಈ ಹಬ್ಬಗಳ ಮಹತ್ವ, ಆಚರಣೆಯ ಕ್ರಮ ತಿಳಿಯಿರಿ

ಹಿಂದೂ ಧರ್ಮದಲ್ಲಿ ಮಾಘ ಮಾಸಕ್ಕೆ ಬಹಳ ಪ್ರಾಮುಖ್ಯವಿದೆ. ಮಾಘಮಾಸವು ಆಧ್ಯಾತ್ಮಿಕ ಮಾಸವಾಗಿದೆ. ಈ ತಿಂಗಳಲ್ಲಿ 6 ಪ್ರಮುಖ ಹಬ್ಬಗಳು ಬರಲಿವೆ. ಈ ಎಲ್ಲಾ ಹಬ್ಬಗಳು ತಮ್ಮದೇ ಆದ ಪ್ರಾಮುಖ್ಯವನ್ನು ಹೊಂದಿವೆ. ಮಾಘ ಮಾಸದಲ್ಲಿ ಬರುವ ಹಬ್ಬಗಳು ಹಾಗೂ ಅವುಗಳ ಮಹತ್ವ ತಿಳಿಯಿರಿ.

ಮಾಘ ಮಾಸದಲ್ಲಿ ಬರುವ 6 ಪ್ರಮುಖ ಹಬ್ಬಗಳಿವು; ಈ ಹಬ್ಬಗಳ ಮಹತ್ವ, ಆಚರಣೆಯ ಕ್ರಮ ತಿಳಿಯಿರಿ
ಮಾಘ ಮಾಸದಲ್ಲಿ ಬರುವ 6 ಪ್ರಮುಖ ಹಬ್ಬಗಳಿವು; ಈ ಹಬ್ಬಗಳ ಮಹತ್ವ, ಆಚರಣೆಯ ಕ್ರಮ ತಿಳಿಯಿರಿ

ಆಧ್ಯಾತ್ಮದಲ್ಲಿ ಮಾಘ ಮಾಸವು ಬಹಳ ವಿಶೇಷ. ಹಿಂದೂ ಧರ್ಮದಲ್ಲಿ ಮಾಘಸ್ನಾನಕ್ಕೂ ಬಹಳ ಪ್ರಾಮಖ್ಯವಿದೆ. ಈ ತಿಂಗಳಲ್ಲಿ ಬರುವ ಹಬ್ಬಗಳು ತಮ್ಮದೇ ಆದ ಪ್ರಾಮುಖ್ಯವನ್ನು ಹೊಂದಿವೆ. ಮಹಾಶಿವರಾತ್ರಿ ಈ ಹಬ್ಬಗಳಲ್ಲಿ ದೊಡ್ಡ ಹಬ್ಬ. ಜ್ಯೋತಿಷಿಗಳಾದ ಚಿಲಕಮರ್ತಿ ಪ್ರಭಾಕರ ಶರ್ಮಾ ಅವರು ಮಾಘಮಾಸದಲ್ಲಿ ಬರುವ ಪ್ರಮುಖ ಆರು ಹಬ್ಬಗಳು ಹಾಗೂ ಅವುಗಳ ಆಚರಣೆಯ ಬಗ್ಗೆ ಇಲ್ಲಿ ವಿವರಿಸಿದ್ದಾರೆ.

1. ಶ್ರೀಪಂಚಮಿ

ಮಾಘ ಶುದ್ಧ ಪಂಚಮಿಯನ್ನು ಶ್ರೀ ಪಂಚಮಿ ಎನ್ನುತ್ತಾರೆ. ಇದನ್ನು ವಸಂತ ಪಂಚಮಿ ಅಂತಲೂ ಕರೆಯುತ್ತಾರೆ. ಈ ದಿನ ಸರಸ್ವತಿ ದೇವಿಯನ್ನು ಪೂಜಿಸುವುದರಿಂದ ವಿಶೇಷವಾದ ಫಲ ದೊರೆಯುತ್ತದೆ. ನಾವು ಯಾವುದೇ ಕೆಲಸ ಮಾಡಬೇಕು ಅಂದುಕೊಂಡರು ಮನಸ್ಸು ಬಹಳ ಮುಖ್ಯ. ನಮ್ಮ ಮನಸ್ಸು ಸರಿಯಾಗಿ ಕೆಲಸ ಮಾಡಲು ಸರಸ್ವತಿ ದೇವಿಯ ಆಶೀರ್ವಾದವು ಬಹಳ ಮುಖ್ಯವಾಗುತ್ತದೆ ಎಂದು ಚಿಲಕಮರ್ತಿಗಳು ಹೇಳುತ್ತಾರೆ. ಈ ವರ್ಷ ಫೆ. 14 ರಂದು ವಸಂತ ಪಂಚಮಿ ಆಚರಣೆ ಇದೆ.

2. ರಥಸಪ್ತಮಿ

ಮಾಘ ಮಾಸದ ಶುದ್ಧ ಸಪ್ತಮಿಯಂದು ರಥಸಪ್ತಮಿ ಆಚರಿಸಲಾಗುತ್ತದೆ. 2024ರ ಫೆಬ್ರವರಿ 16 ರಂದು ರಥ ಸಪ್ತಮಿ ಹಬ್ಬ ಬಂದಿದೆ. ಈ ದಿನದಿಂದ ಸೂರ್ಯನ ರಥ ದಕ್ಷಿಣಾಯಣದಿಂದ ಉತ್ತರಾಯಣದ ಕಡೆಗೆ ಪ್ರಮಾಣಿಸುತ್ತಾನೆ. ಸೂರ್ಯನು ಎಲ್ಲಾ 12 ರಾಶಿಗಳನ್ನು ಸುತ್ತಲು ಒಂದು ವರ್ಷ ತೆಗೆದುಕೊಳ್ಳುತ್ತಾನೆ. ಒಂದು ತಿಂಗಳು ಒಂದು ರಾಶಿಯಲ್ಲಿ ಸಂಚರಿಸುತ್ತಾನೆ. ಅದಿತಿ ಮತ್ತು ಕಶ್ಯಪ ದಂಪತಿಗೆ ಸೂರ್ಯ ಜನಿಸಿದ ದಿನವಾದ ಕಾರಣವಾಗಿ ಈ ದಿನ ರಥ ಸಪ್ತಮಿಯನ್ನು ಆಚರಿಸಲಾಗುತ್ತದೆ. ಇದನ್ನು ಸೂರ್ಯ ಜಯಂತಿ ಅಂತಲೂ ಕರೆಯುತ್ತಾರೆ.

ಪುರಾಣಗಳ ಪ್ರಕಾರ ಸೂರ್ಯನನ್ನು ದೈಹಿಕ ಆರೋಗ್ಯದ ಪ್ರತಿನಿಧಿ ಎಂದು ಕರೆಯಲಾಗುತ್ತದೆ. ಸೂರ್ಯ ನಮಸ್ಕಾರ ಮಾಡುವುದರಿಂದ ಎಂತಹ ಕಾಯಿಲೆಗಳು ಗುಣವಾಗುತ್ತವೆ ಎಂಬ ನಂಬಿಕೆ ಇದೆ. ನಮ್ಮ ತಂದೆತಾಯಿಗಳು ನಮಗೆ ಭೌತಿಕ ಅಭಿವ್ಯಕ್ತಿಗಳಾಗಿರುವಂತೆ, ಸೂರ್ಯ ದೇವರು ಕೂಡ ದೈವಿಕ ರೂಪದಲ್ಲಿ ಅಭಿವ್ಯಕ್ತಿಯಾಗಿದ್ದಾನೆ ಎಂದು ಹೇಳುತ್ತಾರೆ ಚಿಲಕಮರ್ತಿ ಪ್ರಭಾಕರ ಶರ್ಮಾ.

ಸಪ್ತೇ ಸಪ್ತೇ ತ್ರಿಮೂರ್ತಿಯಾತ್ಮನ್ ಸಪ್ತಾಶ್ವರತವಾಹನ!

ಸಪ್ತಜನ್ಮಕೃತಂ ಪಂ ಸ್ನಾನೇನೈವ ವಿನಯಃ.!! ಈ ಸ್ತೋತ್ರ ಪಠಿಸುವುದರಿಂದ ಒಳಿತಾಗುತ್ತದೆ.

3. ಭೀಷ್ಮಾಷ್ಟಮಿ

ಮಾಘಶುದ್ಧ ಅಷ್ಟಮಿಯಂದು ಭೀಷ್ಮನು ತನ್ನ ಸ್ವಂತ ಇಚ್ಛೆಯಿಂದ ಮರಣ ಹೊಂದಿದನು ಎಂದು ಪುರಾಣಗಳು ಹೇಳುತ್ತವೆ. ಅದಕ್ಕಾಗಿಯೇ ಮಾಘಸ್ನಾನದ ನಂತರ ಭೀಷ್ಮನಿಗೆ ತರ್ಪಣವನ್ನು ಅರ್ಪಿಸಬೇಕು. ಎಳ್ಳಿನಿಂದ ತರ್ಪಣವನ್ನು ಮಾಡಬೇಕು.

ಸ್ತೋತ್ರ:

ವಯಾಘ್ರಪದಗೋತ್ರಾಯ ಸಂಕೃತಿ ಪ್ರವರಾಯ ಚ,

ಗಂಗಾಪುತ್ರಾಯ ಭೀಷ್ಮಾಯ, ಪ್ರದಾಸ್ಯೇಹಂ ತಿಲೋದಕಮ್,

ಅಪುತ್ರಾಯ ದದಾಮ್ಯೇತ ಜಂ ಭೀಷ್ಮಾಯ ವರ್ಮನೇ ॥

ಈ ಸ್ತೋತ್ರವನ್ನು ಮೂರು ಬಾರಿ ಪಠಿಸಿ ನಂತರ ತಿಲತರ್ಪಣವನ್ನು ಬಿಡಬೇಕು ಎಂದು ಚಿಲಕಮರ್ತಿಗಳು ಹೇಳುತ್ತಾರೆ.

4. ಭೀಷ್ಮ ಏಕಾದಶಿ

ಅಂದರೆ ಭೀಷ್ಮನ ಮರಣದ ತಕ್ಷಣ ಬರುವ ಏಕಾದಶಿ. ಈ ಏಕಾದಶಿಯನ್ನು ಭೀಷ್ಮನ ಗೌರವಾರ್ಥವಾಗಿ ಕರೆಯುತ್ತಾರೆ. ಇಂದು ನದಿ ಸ್ನಾನ, ಮಾಧವನ ಪೂಜೆ, ಉಪವಾಸ, ವೇದ, ಪುರಾಣ ಕೇಳುವುದು ಜನಜನಿತ. ಭಗವದ್ಗೀತೆ ಓದುವುದು ಕೂಡ ಒಳ್ಳೆಯದು.

5. ಮಾಘ ಪೂರ್ಣಿಮಾ

ಇದನ್ನು ಮಹಾಮಘಿ ಎನ್ನುತ್ತಾರೆ. ಇದು ದೇವಿಗೆ ಮಂಗಳಕರ ದಿನ. ದೇವಿಯ ಸಲುವಾಗಿ ಪೂಜೆಯನ್ನು ಮಾಡಬೇಕು. ಈ ದಿನದಂದು ಸಮುದ್ರ ಸ್ನಾನ ಮಾಡುವುದು ಕೂಡ ಉತ್ತಮ.

6. ಮಹಾ ಶಿವರಾತ್ರಿ

ಪ್ರತಿ ತಿಂಗಳು ಅಮವಾಸ್ಯೆಯ ಮೊದಲು ಬರುವ ಚತುರ್ದಶಿಯನ್ನು ಮಾಸಶಿವರಾತ್ರಿ ಎಂದು ಕರೆಯಲಾಗುತ್ತದೆ. ಈ ಮಾಘಮಾಸದಲ್ಲಿ ಅಮವಾಸ್ಯೆಯ ಮೊದಲು ಬರುವ ಚತುರ್ದಶಿಯನ್ನು ಮಹಾಶಿವರಾತ್ರಿ ಎಂದು ಕರೆಯಲಾಗುತ್ತದೆ. ಚತುರ್ದಶಿಯು ಮಧ್ಯರಾತ್ರಿ ಹನ್ನೆರಡು ಗಂಟೆಗೆ ಬರುವ ದಿನವನ್ನು ಮಹಾಶಿರಾತ್ರಿ ಎಂದು ಕರೆಯಲಾಗುತ್ತದೆ. ಇದು ಶಿವನಿಗೆ ಮಂಗಳಕರವಾದ ದಿನ.

ಈ ದಿನ ನಸುಕಿನ ವೇಳೆಯಲ್ಲೇ ಎದ್ದು ಸ್ನಾನ ಮಾಡಿ, ಶಿವನ ದೇವಾಲಯಕ್ಕೆ ಹೋಗಿ ಪೂಜೆ ಸಲ್ಲಿಸಬೇಕು. ಬಿಲ್ವಪತ್ರೆಯಿಂದ ಪೂಜೆ ಮಾಡಿದರೆ ಯಶಸ್ಸು ಸಿಗುವುದು ಖಂಡಿತ. ಕೆಲವರು ಸಹಸ್ರಲಿಂಗಾರ್ಚನೆ- ಮಹಾಲಿಂಗಾರ್ಚನೆ ಮಾಡುತ್ತಾರೆ.

ದಿನವಿಡೀ ಉಪವಾಸ ಮತ್ತು ರಾತ್ರಿ ಜಾಗರಣೆ ಮಾಡಿ ಶಿವಪುರಾಣಗಳ ಕಥೆಗಳನ್ನು ಓದುತ್ತಾರೆ. ಕೆಲವರು ಮಧ್ಯರಾತ್ರಿ ಲಿಂಗೋದ್ಭವ ಕಾಲಕ್ಕೆ ಹಾಲು, ಮೊಸರು, ಜೇನು, ಹಸುವಿನ ತುಪ್ಪ ಸಕ್ಕರೆ, ಕಬ್ಬಿನ ರಸ, ಶ್ರೀಗಂಧ, ಹೂವು ಇತ್ಯಾದಿಗಳಿಂದ ಏಕಾದಶ ರುದ್ರಾಭಿಷೇಕ ಮಾಡುತ್ತಾರೆ. ಈ ಎಲ್ಲವೂ ಶಿವರಾತ್ರಿಯಲ್ಲಿ ಶುಭ ಉಂಟು ಮಾಡಲಿದೆ ಎಂದು ಚಿಲಕಮರ್ತಿಗಳು ಹೇಳುತ್ತಾರೆ.

(This copy first appeared in Hindustan Times Kannada website. To read more like this please logon to kannada.hindustantimes.com )

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.