ಕನ್ನಡ ಸುದ್ದಿ  /  Astrology  /  Spiritual News Hindu Religion Astro Tips For Bangles Benefits Of Wearing Seep Bangles As Per Astrology Rst

ಗಾಜಿನ ಬಳೆಗಳನ್ನು ಧರಿಸುವ ಮಹತ್ವ, ಪ್ರಯೋಜನಗಳೇನು? ಈ ಬಗ್ಗೆ ಜ್ಯೋತಿಷ್ಯ ಏನು ಹೇಳುತ್ತದೆ ನೋಡಿ

ಹಿಂದೂ ಧರ್ಮದಲ್ಲಿ ಮದುವೆಯಾಗಿರುವ ಹೆಣ್ಣುಮಗಳು ತಾಳಿ, ಕುಂಕುಮ, ಕಾಲುಂಗುರ, ಬಳೆ ಧರಿಸುವುದು ಬಹಳ ಮುಖ್ಯ. ಈ ಎಲ್ಲವೂ ಮುತೈದೆಯ ಸಂಕೇತ. ಸನಾತನ ಧರ್ಮದಲ್ಲಿ ಗಾಜಿನ ಬಳೆ ಧರಿಸುವುದಕ್ಕೆ ತನ್ನದೇ ಆದ ಮಹತ್ವವಿದೆ. ಇದನ್ನು ಧರಿಸುವುದರಿಂದಾಗುವ ಪ್ರಯೋಜನವೇನು, ಈ ಬಗ್ಗೆ ಜ್ಯೋತಿಷ್ಯ ಏನು ಹೇಳುತ್ತದೆ ನೋಡಿ.

ಗಾಜಿನ ಬಳೆಗಳನ್ನು ಧರಿಸುವ ಮಹತ್ವ, ಪ್ರಯೋಜನಗಳೇನು
ಗಾಜಿನ ಬಳೆಗಳನ್ನು ಧರಿಸುವ ಮಹತ್ವ, ಪ್ರಯೋಜನಗಳೇನು

ಹಿಂದೂ ಧರ್ಮದಲ್ಲಿ ಮುತೈದೆಗೆ ವಿಶೇಷ ಮಹತ್ವವಿದೆ. ಸನಾತನ ಧರ್ಮದ ಪ್ರಕಾರ ಮದುವೆಯಾದ ಹೆಣ್ಣುಮಗಳು ಕೆಲವು ವಸ್ತುಗಳನ್ನು ಧರಿಸುವುದು ಬಹಳ ಮುಖ್ಯ. ಮದುವೆಯ ನಂತರ ಕರಿಮಣಿ ಸರ, ಕಾಲುಂಗರ, ಹಣೆ ಮೇಲೆ ಸಿಂಧೂರ, ಕೈಯಲ್ಲಿ ಗಾಜಿನ ಬಳೆ, ಕೆನ್ನೆ ಮೇಲೆ ಕುಂಕುಮ, ಮೂಗಿನ ಮೇಲೆ ನತ್ತು ಈ ಎಲ್ಲವೂ ಇರಬೇಕು ಎಂಬ ನಿಯಮವಿದೆ. ಈ ಎಲ್ಲವೂ ಮುತೈದೆಯನ್ನು ಶೃಂಗಾರ ಮಾಡುವ ಅಂಶಗಳು. ಮುತೈದೆಯು ಕೈ ತುಂಬಾ ಗಾಜಿನ ಬಳೆ ಧರಿಸಿರುತ್ತಾಳೆ. ಹಸಿರು, ಕೆಂಪು ಗಾಜಿನ ಬಳೆಗಳು ಮುತೈದೆಯ ಕೈ ತುಂಬ ಹರಡಿದ್ದರೆ ನೋಡುವುದೂ ಚೆಂದ. ಇದಲ್ಲದೇ ಗಾಜಿನ ಬಳೆ ಧರಿಸುವುದಕ್ಕೆ ವಿಶೇಷ ಮಹತ್ವವಿದೆ. ಗಾಜಿನ ಬಳೆಯ ಬಗ್ಗೆ ಧರ್ಮದಲ್ಲಿ ಮಾತ್ರವಲ್ಲ, ಜ್ಯೋತಿಷ್ಯದಲ್ಲೂ ಮಹತ್ವ ನೀಡಲಾಗಿದೆ. ಗಾಜಿನ ಬಳೆ ಧರಿಸುವ ಮಹತ್ವ ಹಾಗೂ ಇದನ್ನು ಧರಿಸುವುದರಿಂದ ಸಿಗುವ ಪ್ರಯೋಜನಗಳ ಬಗ್ಗೆ ಜ್ಯೋತಿಷ್ಯ ಏನು ಹೇಳುತ್ತದೆ ನೋಡಿ.

ಗಾಜಿನ ಬಳೆ ಧರಿಸುವ ಮಹತ್ವ ಹೀಗಿದೆ

ಸನಾತನ ಧರ್ಮದ ಪ್ರಕಾರ ಮದುವೆಯಾದ ಹೆಣ್ಣುಮಗಳು 16 ಶೃಂಗಾರಗಳನ್ನು ಧರಿಸಬೇಕು. ಇದು ಬಹಳ ಮುಖ್ಯ ಹಾಗೂ ಮಂಗಳಕರ ಎಂದು ನಂಬಲಾಗಿದೆ. ಇವನ್ನು ಧರಿಸುವುದರಿಂದ ದಾಂಪತ್ಯ ಜೀವನ ದೀರ್ಘಕಾಲ ಹಸನಾಗಿರುತ್ತದೆ, ಅಲ್ಲದೆ ಪತಿಗೆ ದೀರ್ಘಾಯಸ್ಸು ಲಭಿಸುತ್ತದೆ ಎಂದು ನಂಬಲಾಗಿದೆ. ಮದುವೆಯ ಬಳಿಕ ಕೈ ತುಂಬಾ ಗಾಜಿನ ಬಳೆಗಳನ್ನು ಧರಿಸುವುದು ವಾಸ್ತು ಪ್ರಕಾರವೂ ಪ್ರಯೋಜನವಿದೆ. ಬಳೆಗಳ ಸದ್ದು ಮನೆಯಲ್ಲಿ ಹರಡುವ ಕಾರಣ ಯಾವುದೇ ಋಣಾತ್ಮಕ ಶಕ್ತಿ ಮನೆಯೊಳಗೆ ಪ್ರವೇಶ ಮಾಡುವುದಿಲ್ಲ. ಇದರಿಂದ ಶಾಂತಿ ನೆಮ್ಮದಿ ನೆಲೆಸಿರುತ್ತದೆ ಎನ್ನಲಾಗುತ್ತದೆ. ದುಷ್ಟಶಕ್ತಿಗಳ ಮನೆಯೊಳಗೆ ಪ್ರವೇಶಿಸದಂತೆ ಈ ಗಾಜಿನ ಬಳೆಗಳ ಸದ್ದು ತಡೆಯುತ್ತದೆ ಎಂಬ ನಂಬಿಕೆಯೂ ಇದೆ.

ಗಾಜಿನ ಬಳೆ ಧರಿಸುವುರಿಂದಾಗುವ ಜ್ಯೋತಿಷ್ಯ ಪ್ರಯೋಜನಗಳಿವು

ಜ್ಯೋತಿಷ್ಯದ ಪ್ರಕಾರ ಗಾಜಿನ ಬಳೆಗಳು ಲಕ್ಷ್ಮೀದೇವಿಗೆ ಸಂಬಂಧಿಸಿದ್ದಾಗಿದೆ. ಇದನ್ನು ಸಂಪತ್ತಿನ ಸಂಕೇತವೆಂದು ನಂಬಲಾಗಿದೆ. ಮದುವೆಯಾದ ಮಹಿಳೆಯು ಗಾಜಿನ ಬಳೆಗಳನ್ನು ಧರಿಸುವುದರಿಂದ ಆಕೆಯ ಪತಿಗೆ ಯಾವುದೇ ರೀತಿಯ ಆರ್ಥಿಕ ಬಿಕ್ಕಟ್ಟು ಎದುರಾಗುವುದಿಲ್ಲ. ವೃತ್ತಿ ಹಾಗೂ ವ್ಯವಹಾರ ಎಲ್ಲದರಲ್ಲೂ ಪತಿ ಯಶಸ್ಸು ಗಳಿಸುತ್ತಾನೆ. ಪತಿಯ ಆಯುಷ್ಯವೂ ಕೂಡ ಬಳೆಗಳ ಮೇಲೆ ಅವಲಂಬಿತವಾಗಿದೆ ಎಂದೂ ಹೇಳಲಾಗುತ್ತದೆ. ಬಳೆಗಳನ್ನು ಧರಿಸುವುದರಿಂದ ಜಾತಕದಲ್ಲಿ ಚಂದ್ರನ ಸ್ಥಾನವು ಬಲಗೊಳುತ್ತದೆ. ಇದರಿಂದ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ಹೆಚ್ಚುತ್ತದೆ. ಒಟ್ಟಾರೆ ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ವೃದ್ಧಿಸಲು ಗಾಜಿನ ಬಳೆ ಧರಿಸಬೇಕು.

ಗಾಜಿನ ಬಳೆ ಧರಿಸುವುದರಿಂದ ಮಹಿಳೆಯರ ಮನಸ್ಸು ಶಾಂತವಾಗಿರುತ್ತದೆ ಹಾಗೂ ಏಕಾಗ್ರತೆ ಹೆಚ್ಚುತ್ತದೆ. ಈ ಮೊದಲೇ ಹೇಳಿದಂತೆ ಬಳೆಗಳ ಸದ್ದು ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ವರ್ಧಿಸುತ್ತದೆ. ಬಳೆಗಳನ್ನು ಧರಿಸುವುದರಿಂದ ಹೃದಯ ಸಂಬಂಧಿ ಸಮಸ್ಯೆಗಳು ದೂರಾಗುತ್ತವೆ. ಉತ್ತಮ ಆರೋಗ್ಯ ಹಾಗೂ ವಿಶ್ರಾಂತಿಗಾಗಿ ಬಳೆಗಳನ್ನು ಧರಿಸುವುದು ಮುಖ್ಯವಾಗುತ್ತದೆ.

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.)

(This copy first appeared in Hindustan Times Kannada website. To read more like this please logon to kannada.hindustantimes.com)