Magha Ekadashi: ಮಾಘ ಮಾಸದಲ್ಲಿ ಏಕಾದಶಿ ವತ್ರ ಆಚರಿಸುವುದರಿಂದ ಸಿಗುವ ಫಲಾಫಲಗಳೇನು; ಜಯ ಏಕಾದಶಿಯ ಹಿನ್ನೆಲೆ, ಮಹತ್ವ ಹೀಗಿದೆ
ಮಾಘ ಮಾಸದ ಶುಕ್ಲ ಪಕ್ಷದಲ್ಲಿ ಬರುವ ಏಕಾದಶಿಯನ್ನು ಜಯ ಏಕಾದಶಿ ಎಂದೂ ಕರೆಯುತ್ತಾರೆ. ನಾಳೆ (ಫೆ.20) ಜಯ ಏಕಾದಶಿ ವ್ರತವಿದೆ. ಈ ದಿನ ಉಪವಾಸ ವ್ರತ ಆಚರಿಸುವ ಮಹತ್ವ ಹಾಗೂ ಮಾಘ ಏಕಾದಶಿ ವತ್ರದ ಹಿನ್ನೆಲೆಯನ್ನು ನೀವೂ ತಿಳಿಯಿರಿ.

ಹಿಂದೂ ಧರ್ಮದಲ್ಲಿ ಪ್ರತಿ ಮಾಸಕ್ಕೂ ಅದರದ್ದೇ ಮಹತ್ವವಿದೆ. ಆದರೆ ದಕ್ಷಿಣಾಯನದಲ್ಲಿ ಕಾರ್ತಿಕ ಮಾಸ ಮತ್ತು ಉತ್ತರಾಯಣದಲ್ಲಿ ಮಾಘ ಮಾಸ ಅತ್ಯಂತ ಶ್ರೇಯಸ್ಕರ ಎಂದು ಜ್ಯೋತಿಷಿಗಳಾದ ಚಿಲಕಮರ್ತಿ ಪ್ರಭಾಕರ ಶರ್ಮಾ ಹೇಳುತ್ತಾರೆ. ಸದ್ಯ ಮಾಘ ಮಾಸ ನಡೆಯುತ್ತಿದ್ದು, ಈ ಮಾಸದಲ್ಲಿ ಬರುವ ತಿಥಿಗಳು, ಪಂಚಮಿ, ಸಪ್ತಮಿ, ಅಷ್ಟಮಿ, ಏಕಾದಶಿ, ದ್ವಾದಶಿ, ಹುಣ್ಣಿಮೆಗಳು ಎಲ್ಲವಕ್ಕೂ ವಿಶೇಷ ಮಹತ್ವವಿದೆ. ಆದರೆ ಇವುಗಳಲ್ಲಿ ಮಾಘ ಮಾಸದ ಏಕಾದಶಿ ಅತ್ಯಂತ ಪ್ರಾಮುಖ್ಯವನ್ನು ಹೊಂದಿದೆ. ಜಯ ಏಕಾದಶಿಯ ಹಿನ್ನೆಲೆ ಹಾಗೂ ಮಹತ್ವದ ಬಗ್ಗೆ ತಿಳಿಸುವ ಚಿಲಕಮರ್ತಿಗಳು ಮಾಘ ಪುರಾಣದ ಅಧ್ಯಾಯ 11ರ ಪ್ರಕಾರ ಮಹಾಭಾರತದಲ್ಲಿ ಭೀಮನು ಈ ವಿಶೇಷ ಏಕಾದಶಿ ವ್ರತವನ್ನು ಆಚರಿಸುತ್ತಾನೆ.
ಮಾಘ ಮಾಸದ ಏಕಾದಶಿಯ ವಿಶೇಷ
ಮಾಘ ಮಾಸದ ಏಕಾದಶಿಯಂದು ಮಾಘ ಪುರಾಣವನ್ನು ಓದುವುದು ಅಥವಾ ಈ ಏಕಾದಶಿ ವ್ರತದ ಕಥೆಯನ್ನು ಕೇಳುವುದರಿಂದ ನಮ್ಮ ಪಾಪಗಳೆಲ್ಲವೂ ದೂರಾಗಿ, ಪುಣ್ಯ ದೊರಕುತ್ತದೆ. ಈ ದಿನ ಉಪವಾಸ ವತ್ರ ಆಚರಿಸುವುದರಿಂದ ಬದುಕಿನಲ್ಲಿ ಶಾಂತಿ, ನೆಮ್ಮದಿ ನೆಲೆಸುವ ಜೊತೆಗೆ ವಿಷ್ಣು ದೇವನ ಆಶೀರ್ವಾದವೂ ಲಭಿಸುತ್ತದೆ.
ಮಾಘ ಏಕಾದಶಿಯ ಹಿನ್ನೆಲೆ
ಮಹಾಭಾರತ ಯುದ್ಧ ಮುಗಿದ ನಂತರ ಧರ್ಮರಾಜನು ಹಸ್ತಿನಾಪುರವನ್ನು ರಾಜಧಾನಿಯಾಗಿಟ್ಟುಕೊಂಡು ಇಡೀ ಭಾರತವನ್ನು ಆಳುತ್ತಾನೆ. ಅವನ ಆಳ್ವಿಕೆಯ ಕಾಲದಲ್ಲಿ ದೇಶದಲ್ಲಿ ಶೇ 100ರಷ್ಟು ಜನರು ಕಾನೂನನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದರು. ಒಮ್ಮೆ ಪುರೋಹಿತರಾದ ಧೌಮ್ಯರು ಪಾಂಡವರಲ್ಲಿ ಹೇಳುತ್ತಾರೆ ʼನೀವು ಧರ್ಮ ನಿಷ್ಠೆಯನ್ನು ಪಾಲಿಸಿ ರಾಜ್ಯ ಆಳಿದರೆ, ರಾಜ್ಯದಲ್ಲಿರುವ ಜನರು ಕೂಡ ನೀತಿವಂತರಾಗಿರುತ್ತಾರೆ. ಹಾಗಾಗಿ ಅದರ ಪಾಲನೆ ಬಹಳ ಮುಖ್ಯʼ ಎಂದು ಬೋಧಿಸುತ್ತಾರೆ.
ಸ್ತೋತ್ರ
ರಜನೀ ದರ್ಭಿಣಿ ಧರ್ಮಿಷ್ಯಃ
ಪಾಪೀಚೇತ್ ಪಾಪಿನಃ ಪ್ರಜಾಃ
ರಾಜನ ಮಸುವರ್ಥಂತೆ
ಯಧರಾಜ ತಥಾ ಪ್ರಜಾಃ
ಎಂದು ಶಾಸ್ತ್ರಗಳು ಹೇಳುತ್ತವೆ. ರಾಜನು ಧರ್ಮನಿಷ್ಠನಾಗಿದ್ದರೆ, ಜನರೂ ಧರ್ಮವಂತರಾಗುತ್ತಾರೆ. ರಾಜ ಪಾಪಿಯಾದರೆ ಜನರೂ ಪಾಪಿಗಳೇ ಆಗುತ್ತಾರೆ. ಇದರರ್ಥ ಜನರು ಯಾವಾಗಲೂ ರಾಜನನ್ನು ಅನುಕರಿಸುತ್ತಾರೆ. ಇದನ್ನು ಅರಿತುಕೋ ಧರ್ಮರಾಜ! ದೇವತೆಗಳೂ ಸಹ ನಿನ್ನ ನೀತಿವಂತ ಆಡಳಿತವನ್ನು ಮೆಚ್ಚುತ್ತಿದ್ದಾರೆ. ನಾಳೆಯಿಂದ ಮಾಘ ಮಾಸ ಪ್ರವೇಶಿಸುವುದರಿಂದ ಈಗಲೇ ಯಾಕೆ ಹೇಳುತ್ತಿದ್ದೇನೆ. ನೀವೆಲ್ಲರೂ ಮುಂಜಾನೆ ಬೇಗ ಎದ್ದು ಸಮೀಪದ ಯಮುನಾ ನದಿಯಲ್ಲಿ ಸ್ನಾನ ಮಾಡಿ ಸೂರ್ಯಾರಾಧನೆ ಮತ್ತು ವಿಷ್ಣುಪೂಜೆಯನ್ನು ಮಾಡಿ ದಾನ-ಧರ್ಮ ಮಾಡಬೇಕು. ಇದನ್ನು ನಿನಗೆ ನೆನಪಿಸಲು ಬಂದಿದ್ದೇನೆ. ಧರ್ಮರಾಜನ ಸಹೋದರರು, ದ್ರೌಪದಿ ಮತ್ತು ಅರಮನೆಯ ಸ್ತ್ರೀಯರು ಗುರುಗಳ ಸಲಹೆಯನ್ನು ಅನುಸರಿಸಲು ಸಿದ್ಧರಾದರು.
ಮಾಘ ಶುದ್ಧ ಏಕಾದಶಿಯಂದು ಎಲ್ಲರೂ ಉಪವಾಸವಿದ್ದು ಶ್ರೀಮನ್ನಾರಾಯಣನನ್ನು ಪೂಜಿಸಲು ಏರ್ಪಾಡು ಮಾಡುತ್ತಾರೆ. ಆದರೆ ಇದರಿಂದ ಭೀಮನಿಗೆ ತುಂಬಾ ದುಃಖವಾಗುತ್ತದೆ. ಯಾಕೆಂದರೆ ಭೀಮ ಎಂದಿಗೂ ಒಂದು ಹೊತ್ತಿನ ಊಟವನ್ನು ತಪ್ಪಿಸುತ್ತಿರಲಿಲ್ಲ, ಹಾಗಾಗಿ ಇಡೀ ದಿನ ಉಪವಾಸ ಇರುವುದು ಹೇಗೆ ಎಂಬ ಚಿಂತೆ ಕಾಡುತ್ತದೆ. ಎಷ್ಟು ತಿಂದರೂ ಸಾಲದ ಭೀಮ ಎರಡೂ ಹೊತ್ತು ಊಟವಿಲ್ಲದೇ ಇರುವುದು ಹೇಗೆ ಎಂದು ಚಿಂತಿಸುತ್ತಾನೆ. ಒಂದು ವೇಳೆ ಮಧ್ಯದಲ್ಲಿ ಏನಾದರೂ ತಿಂದರೆ ಉಪವಾಸ ವತ್ರ ಸಂಪೂರ್ಣವಾಗುವುದಿಲ್ಲ. ಏನು ಮಾಡುವುದು ಎಂದು ಯೋಚಿಸಿ ಭೀಮ ಧೌಮ್ಯರ ಬಳಿ ಹೋಗುತ್ತಾನೆ. ಅವರ ಬಳಿ ತನ್ನ ಸಂಕಟ ಹೇಳಿಕೊಳ್ಳುತ್ತಾನೆ.
ಭೀಮನ ಮಾತುಗಳನ್ನೆಲ್ಲಾ ಕೇಳಿದ ಧೌಮ್ಯರು ಮಾಘ ಮಾಸದಲ್ಲಿ ಬರುವ ಏಕಾದಶಿಯು ಬಹಳ ಮಹತ್ವದ್ದು, ಇದು ಭಗವಾನ್ ವಿಷ್ಣುವಿಗೆ ಅತ್ಯಂತ ಮಂಗಳಕರ ದಿನ. ಈ ದಿನ ದೇವರ ಮೇಲೆ ನಂಬಿಕೆ ಇಟ್ಟು, ದೃಢಸಂಕಲ್ಪದಿಂದ ಉಪವಾಸ ಮಾಡಿದರೆ ಎಂದಿಗೂ ಹಸಿವಿನ ಸಂಕಟ ತಿಳಿಯುವುದಿಲ್ಲ. ನಿನಗೆ ಶ್ರೀಕೃಷ್ಣನ ಮೇಲೆ ನಂಬಿಕೆ ಇಲ್ಲವೇ? ಕೃಷ್ಣವನ್ನು ಧ್ಯಾನಿಸಿ ಪೂಜಿಸಿ ಉಪವಾಸ ವತ್ರ ಮಾಡುವುದರಿಂದ ಯಾವುದೇ ಸಮಸ್ಯೆಗಳು ಎದುರಾಗುವುದಿಲ್ಲ. ವಿಷ್ಣುವು ತನ್ನನ್ನು ಆರಾಧಿಸುವ ಎಲ್ಲಾ ಭಕ್ತರಿಗೂ ಶಕ್ತಿ ನೀಡುತ್ತಾನೆ, ಹಾಗಾಗಿ ನೀನು ಚಿಂತಿಸಬೇಡ. ಭಗವಂತ ನಿನಗೆ ಎಲ್ಲಾ ರೀತಿಯ ಶಕ್ತಿಯನ್ನು ಧಾರೆ ಎರೆಯುತ್ತಾನೆ. ನೀನು ಧೈರ್ಯದಿಂದ ಉಪವಾಸ ಮಾಡುʼ ಎಂದು ಹೇಳುತ್ತಾರೆ.
ಗುರುಗಳ ಮಾತಿನಿಂದ ಸಂತುಷ್ಟನಾದ ಭೀಮ ಮರುದಿನ ಏಕಾದಶಿಯ ದಿನ ಯಮುನಾ ನದಿಯಲ್ಲಿ ಸ್ನಾನ ಮಾಡಿ ಶ್ರೀ ಲಕ್ಷ್ಮೀನಾರಾಯಣ ಸ್ವಾಮಿಯನ್ನು ಪೂಜಿಸಿ, ಏಕಾದಶಿ ಉಪವಾಸ ಆಚರಿಸುತ್ತಾನೆ. ಆದರೆ ಭೀಮನಂತಹ ಭೀಮನಿಗೆ ಯಾವುದೇ ಹಸಿವು ಸಂಕಟ ಕಾಡುವುದಿಲ್ಲ. ಅಂದಿನಿಂದ ಜಯ ಏಕಾದಶಿ ಅಥವಾ ಮಾಘ ಏಕಾದಶಿಗೆ ಮಹತ್ವ ಬಂದಿತು ಎನ್ನುತ್ತಾರೆ ಚಿಲಕಮರ್ತಿಗಳು.
(This copy first appeared in Hindustan Times Kannada website. To read more like this please logon to kannada.hindustantimes.com)
