ಭಾರತದ ಈ ದೇವಾಲಯಗಳಲ್ಲಿ ನಡೆಯುವ ನಿಗೂಢ ಪವಾಡಗಳು ವಿಜ್ಞಾನಕ್ಕೂ ನಿಲುಕದ್ದು; ಈ ಪಟ್ಟಿಯಲ್ಲಿ ಕರ್ನಾಟಕದ ದೇಗುಲಗಳೂ ಇವೆ
ಭಾರತವು ಹಿಂದೂಗಳ ರಾಷ್ಟ್ರ. ಇಲ್ಲಿ ಲಕ್ಷಾಂತರ ದೇವಾಲಯಗಳಿವೆ. ಪ್ರತಿ ದೇವಸ್ಥಾನವು ತನ್ನದೇ ಆದ ವೈಶಿಷ್ಟ್ಯಗಳನ್ನು ಹೊಂದಿದೆ. ಆದರೆ ಭಾರತದ ಕೆಲವು ದೇವಾಲಯಗಳು ನಿಗೂಢ ರಸಹ್ಯಗಳನ್ನು ತನ್ನೊಳಗೆ ಬಚ್ಚಿಟ್ಟುಗೊಂಡಿದೆ. ಇದರಲ್ಲಿ ಕರ್ನಾಟಕದ ದೇವಾಲಯಗಳೂ ಇವೆ. ಅಂತಹ ದೇವಾಲಯಗಳ ಮಾಹಿತಿ ನೀಡಿದ್ದಾರೆ ಜ್ಯೋತಿಷಿಗಳಾದ ಚಿಲಕಮರ್ತಿ ಪ್ರಭಾಕರ ಶರ್ಮಾ.
ಭಾರತವು ದೈವಿಕ ಶಕ್ತಿ ಹಾಗೂ ಆಧಾತ್ಮಿಕ ಪರಂಪರೆಯ ರಾಷ್ಟ್ರ. ಇಲ್ಲಿ ಲಕ್ಷಾಂತರ ದೇವಾಲಯಗಳಿವೆ. ಭಾರತದಲ್ಲಿನ ಹಲವು ದೇಗುಲಗಳು ಜಗತ್ಪ್ರಸಿದ್ಧವಾಗಿವೆ. ಭಾರತದಲ್ಲಿನ ಕೆಲವು ದೇವಾಲಯಗಳಲ್ಲಿ ನಿಗೂಢ ಅಂಶಗಳು ಅಡಗಿದೆ. ಇದರ ಬಗ್ಗೆ ಬಹುಶಃ ತಿಳಿದವರು ಕಡಿಮೆ. ವಿಜ್ಞಾನಕ್ಕೂ ನಿಲುಕದ ಪವಾಡಗಳು ಭಾರತದ ದೇಗುಲಗಳಲ್ಲಿ ನಡೆಯುತ್ತವೆ.
ʼಭಾರತದಲ್ಲಿ ಹಲವು ದಿವ್ಯ ಕ್ಷೇತ್ರಗಳು, ಶಕ್ತಿ ಪೀಠಗಳು, ಜ್ಯೋತಿರ್ಲಿಂಗಗಳು, ವೈಷ್ಣವ ಕ್ಷೇತ್ರಗಳು ವಿಜೃಂಭಿಸುತ್ತಿವೆ. ನಮ್ಮ ದೇಶದಲ್ಲಿ ವಿಜ್ಞಾನಿಗಳಿಗೂ ನಿಲುಕದ ವಿಶಿಷ್ಟ ಶಕ್ತಿ ಇರುವ ಹಲವು ವಿಶೇಷ ಕ್ಷೇತ್ರಗಳಿವೆʼ ಎನ್ನುತ್ತಾರೆ ಚಿಲಕಮರ್ತಿ ಪ್ರಭಾಕರ ಶರ್ಮಾ.
ನಿರಂತರವಾಗಿ ದೊಡ್ಡದಾಗುತ್ತಲೇ ಇದೆ ಇಲ್ಲಿನ ವಿಗ್ರಹಗಳು
ಭಾರತದಲ್ಲಿನ ಈ ಪ್ರಸಿದ್ಧ ದೇಗುಲಗಳಲ್ಲಿ ವಿವಿಧ ದೇವರುಗಳು ನೆಲೆಯಾಗಿದ್ದಾರೆ. ಅಲ್ಲದೇ ಇಲ್ಲಿರುವ ಮೂರ್ತಿಗಳು ದಿನೇ ದಿನೇ ಬೆಳೆಯುತ್ತಲೇ ಇದೆ. ಇದಕ್ಕೆ ಕಾರಣ ತಿಳಿದಿಲ್ಲವಾದರೂ ಇವು ಪವಾಡ ಎನ್ನಿಸುವುದು ಸುಳ್ಳಲ್ಲ. ಅಂತಹ ದೇವಾಲಯಗಳಿವು.
1. ಕಾನಿಪಾಕಂ
2. ಯಾಗಂಟಿ ಬಸವಣ್ಣ
3. ಕಾಶಿ ವಿಶ್ವನಾಥ
4. ಬೆಂಗಳೂರಿನ ಪಂಚಮುಖಿ ಗಣಪತಿ
ಬಣ್ಣ ಬದಲಾಯಿಸುವ ದೇವಾಲಯಗಳು
1. ತಮಿಳುನಾಡಿನ ಅತಿಶಯ ವಿನಾಯಕ ದೇವಾಲಯಲ್ಲಿರುವ ದೇವರ ಮೂರ್ತಿಯು ಉತ್ತರಾಯಣ ಮತ್ತು ದಕ್ಷಿಣಾಯನದಲ್ಲಿ ಬಣ್ಣ ಬದಲಿಸುತ್ತದೆ.
2. ಹುಣ್ಣಿಮೆಯಂದು ಬಿಳಿ ಮತ್ತು ಅಮಾವಾಸ್ಯೆಯಂದು ಕಪ್ಪು ಬಣ್ಣಕ್ಕೆ ತಿರುಗುವ ಪೂರ್ವ ಗೋದಾವರಿಯಲ್ಲಿನ ಪಂಚರಾಮ ಸೋಮೇಶ್ವರ ದೇವಾಲಯ.
ವರ್ಷಕ್ಕೊಮ್ಮೆ ಸೂರ್ಯನ ಕಿರಣಗಳು ಸ್ಪರ್ಶಿಸುವ ದೇವಾಲಯಗಳು
1. ನಾಗುಲಾಪುರಂ ವೆಂಡರಾಯನ ಸ್ವಾಮಿ ದೇವಸ್ಥಾನ
2. ಕೊಲ್ಲಾಪುರ ಲಕ್ಷ್ಮೀ ದೇವಸ್ಥಾನ
3. ಬೆಂಗಳೂರು ಗವಿಗಂಗಾಧರ ದೇವಸ್ಥಾನ
4. ಅರಸವೆಲ್ಲಿ ಸೂರ್ಯ ನಾರಾಯಣ ದೇವಸ್ಥಾನ
5. ಮೊಗಿಲೇಶ್ವರ
6. ಕೋದಂಡರಾಮ ದೇವಸ್ಥಾನ, ಕಡಪ ಜಿಲ್ಲೆ
ನಿರಂತರ ನೀರು ಹರಿಯುವ ದೇವಾಲಯಗಳು
1. ಮಹಾನಂದಿ
2. ಜಂಬುಕೇಶ್ವರ
3. ಬುಗ್ಗರಾಮಲಿಂಗೇಶ್ವರ
4. ಕರ್ನಾಟಕ ಮಂಡಲದ ಗಣಪತಿ
5. ಹೈದರಾಬಾದ್ ಕಾಶಿ ಬುಗ್ಗ ಶಿವ ದೇವಾಲಯ
6. ಬೆಂಗಳೂರು ಮಲ್ಲೇಶ್ವರದ ಕಾಡು ಮಲ್ಲೇಶ್ವರ
7. ರಾಜರಾಜೇಶ್ವರ ಬೆಳ್ಳಂಪಲ್ಲಿ ಶಿವ ದೇವಾಲಯ
8. ಸಿದ್ಧಗಂಗಾ
ನಿರಂತರ ಜ್ಯೋತಿಯ ರೂಪದಲ್ಲಿ ದರ್ಶನ ನೀಡುವ ದೇವಾಲಯಗಳು
1. ಅಮ್ಮಾವರ ಜ್ವಲಿಸುವ ಜ್ಯೋತಿ
2. ನಿರಂತರವಾಗಿ ಉರಿಯುವ ಅರುಣಾಚಲೇಶ್ವರ
3. ಮಂಜುನಾಥ
ಸಮುದ್ರದ ನೀರು ಸೋಕುವ ದೇವಾಲಯಗಳು
1. ಗುಜರಾತಿನ ನಿಷ್ಕಲಕಂಕ ಮಹಾದೇವ
2. 40 ವರ್ಷಕ್ಕೊಮ್ಮೆ ಸಮುದ್ರ ಜಲ ಪೂಜೆ ನಡೆಯುವ ಪುಂಗನೂರು ಶಿವ ದೇವಾಲಯ.
ಮುಟ್ಟಿನ ದೇವಾಲಯಗಳು
1. ಅಸ್ಸಾಂ ಕಾಮಾಖ್ಯ ಅಮ್ಮಾವರು
2. ಕೇರಳದ ತಾಯಿ ದುರ್ಗಾ
ಸ್ವಯಂ ಬೆಳಗಿದ ದೇವಾಲಯಗಳು
ಅಮರನಾಥ ದೇವಾಲಯವು ವರ್ಷಕ್ಕೊಮ್ಮೆ ಪ್ರಕಾಶಿಸಲ್ಪಡುತ್ತದೆ
ಆರು ತಿಂಗಳಿಗೊಮ್ಮೆ ತೆರೆಯುವ ದೇವಾಲಯಗಳು
1. ಬದರಿನಾಥ
2. ಕೇದಾರನಾಥ (ಆರು ತಿಂಗಳ ನಂತರ ದೀಪ ಉರಿಯುತ್ತಲೇ ಇರುತ್ತದೆ)
3. ಗುಹ್ಯಕಾಳಿ ಮಂದಿರ
ವರ್ಷಕ್ಕೊಮ್ಮೆ ತೆರೆಯುವ ದೇವಾಲಯಗಳು
ಹಾಸನಾಂಬ ದೇವಸ್ಥಾನ, ಹಾಸನ ಕರ್ನಾಟಕ
12 ವರ್ಷಗಳಿಗೊಮ್ಮೆ ತೆರೆಯುವ ದೇವಾಲಯಗಳು: ಬಿಜಿಲಿ ಮಹಾದೇವ್, ಹಿಮಾಚಲ ಪ್ರದೇಶ
ಒಂದೇ ಕಂಬವನ್ನು ಹೊಂದಿರುವ ದೇವಾಲಯಗಳು
ಪುಣೆ ಕೇಧಾರೇಶ್ವರ ಒಂದು ಯುಗದ ಅಂತ್ಯದ ಸಂಕೇತವಾಗಿದೆ. ಬೇಸಿಗೆಯ ಬಿಸಿಲಲ್ಲೂ ಇಲ್ಲಿನ ನೀರು ತಂಪಾಗಿರುತ್ತದೆ.
ರೂಪ ಬದಲಿಸುವ ದೇವಾಲಯಗಳು: ದಿನಕ್ಕೆ ಮೂರು ಬಾರಿ ರೂಪ ಬದಲಿಸುವ ದರ್ದೇವಿ ದೇವಸ್ಥಾನ ಉತ್ತರಾಖಂಡದಲ್ಲಿದೆ.
ನೀರಿನಲ್ಲಿ ದೀಪ ಉರಿಯುವ ಗುಡಿ
ಘಡಿಯಾ ಘಾಟ್ ಮಾತಾಜಿ ಮಂದಿರ ಮಧ್ಯಪ್ರದೇಶ. ಇಲ್ಲಿ ನೀರಿನಿಂದ ದೀಪವನ್ನು ಬೆಳಗಿಸಲಾಗುತ್ತದೆ. ಅರ್ಚಕನಿಗೆ ಕನಸಿನಲ್ಲಿ ತಾಯಿ ಕಾಣಿಸಿಕೊಂಡು ಇನ್ನು ಮುಂದೆ ನೀರಿನಿಂದ ದೀಪವನ್ನು ಬೆಳಗಿಸುವಂತೆ ಹೇಳಿದಳು ಎಂದು ಸ್ಥಳ ಪುರಾಣ ಹೇಳುತ್ತದೆ. ಇಲ್ಲಿಯವರೆಗೆ ನೀರಿನಿಂದ ದೀಪವನ್ನು ಬೆಳಗಿಸಲಾಗುತ್ತದೆ.
ಮಾನವ ದೇಹದಂತೆ ಕಾಣುವ ವಿಗ್ರಹಗಳಿರುವ ದೇವಾಲಯಗಳು
1. ಹೇಮಾಚಲ ನರಸಿಂಹ ಸ್ವಾಮಿ
2. ಶ್ರೀಶೈಲದಲ್ಲಿ ಇಷ್ಟಕಾಮೇಶ್ವರಿ ದೇವಿ
ನೆರಳು ವೈಶಿಷ್ಟ್ಯ ಹೊಂದಿರುವ ದೇವರುಗಳು
1. ಛಾಯಾಸೋಮೇಶ್ವರಂ, ಕಂಬಕ್ಕೆ ನೆರಳು ಇದೆ
2. ಹಂಪಿ ವಿರೂಪಾಕ್ಷೇಶ್ವರ, ಗೋಪುರದ ನೆರಳು ಒಂದೇ ಸ್ಥಳದಲ್ಲಿ ಬೀಳುತ್ತದೆ.
3. ಬೃಹದೀಶ್ವರಾಲಯ
4. ತೇಲುವ ಭಗವಾನ್ ವಿಷ್ಣು (ಸಾವಿರಾರು ಟನ್ ತೂಕ), ನೇಪಾಳ
ಹಾಗೆಯೇ... ತಿರುಮಲ ವೆಂಕಟೇಶ್ವರ ಸ್ವಾಮಿ, ಅನಂತ ಪದ್ಮನಾಭ ಸ್ವಾಮಿ, ರಾಮೇಶ್ವರ, ಕಂಚಿ, ಚಿಲುಕುರಿ ಬಾಲಾಜಿ, ಪಂಡರಿನಾಥ, ಭದ್ರಾಚಲಂ, ಅಣ್ಣಾವರಂ ಹೀಗೆ ಹಲವು ದೇಗುಲಗಳು ನಿಗೂಢ ಪವಾಡಗಳನ್ನು ಹೊಂದಿದೆ.
(This copy first appeared in Hindustan Times Kannada website. To read more like this please logon to kannada.hindustantimes.com )