ನಿಮ್ಮ ಮಗುವಿಗೆ ಹ ಅಕ್ಷರದಿಂದ ಹೆಸರಿಡಬೇಕು ಅಂತಾ ಯೋಚಿಸ್ತಾ ಇದೀರಾ, ಹಿಂದೂ ದೇವರುಗಳ ಈ ಹೆಸರುಗಳು ನಿಮಗೆ ಇಷ್ಟವಾಗಬಹುದು ನೋಡಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ನಿಮ್ಮ ಮಗುವಿಗೆ ಹ ಅಕ್ಷರದಿಂದ ಹೆಸರಿಡಬೇಕು ಅಂತಾ ಯೋಚಿಸ್ತಾ ಇದೀರಾ, ಹಿಂದೂ ದೇವರುಗಳ ಈ ಹೆಸರುಗಳು ನಿಮಗೆ ಇಷ್ಟವಾಗಬಹುದು ನೋಡಿ

ನಿಮ್ಮ ಮಗುವಿಗೆ ಹ ಅಕ್ಷರದಿಂದ ಹೆಸರಿಡಬೇಕು ಅಂತಾ ಯೋಚಿಸ್ತಾ ಇದೀರಾ, ಹಿಂದೂ ದೇವರುಗಳ ಈ ಹೆಸರುಗಳು ನಿಮಗೆ ಇಷ್ಟವಾಗಬಹುದು ನೋಡಿ

ಮಕ್ಕಳಿಗೆ ಹೆಸರಿಡುವುದು ನಿಜಕ್ಕೂ ಸವಾಲು. ಹಿಂದೂ ಧರ್ಮದಲ್ಲಿ ಶಾಸ್ತ್ರ ನೋಡಿ, ಜಾತಕಕ್ಕೆ ಹೊಂದುವ ಅಕ್ಷರದಲ್ಲಿ ಹೆಸರಿಡುವುದು ಸಾಮಾನ್ಯ. ನಿಮ್ಮ ಕಂದಮ್ಮನಿಗೆ ಹ (H) ಅಕ್ಷರದಿಂದ ಹೆಸರಿಡಬೇಕು ಅಂತಿದ್ರೆ ದೇವರ ಹೆಸರುಗಳಿಂದ ಪ್ರೇರಿತವಾದ ಒಂದಿಷ್ಟು ಹೆಸರಿನ ಐಡಿಯಾಗಳು ಇಲ್ಲಿವೆ.

ನಿಮ್ಮ ಮಗುವಿಗೆ ಹ ಅಕ್ಷರದಿಂದ ಹೆಸರಿಡಬೇಕು ಅಂತಾ ಯೋಚಿಸ್ತಾ ಇದೀರಾ, ಹಿಂದೂ ದೇವರುಗಳ ಈ ಹೆಸರುಗಳು ನಿಮಗೆ ಇಷ್ಟವಾಗಬಹುದು ನೋಡಿ
ನಿಮ್ಮ ಮಗುವಿಗೆ ಹ ಅಕ್ಷರದಿಂದ ಹೆಸರಿಡಬೇಕು ಅಂತಾ ಯೋಚಿಸ್ತಾ ಇದೀರಾ, ಹಿಂದೂ ದೇವರುಗಳ ಈ ಹೆಸರುಗಳು ನಿಮಗೆ ಇಷ್ಟವಾಗಬಹುದು ನೋಡಿ

ಮಕ್ಕಳು ಹುಟ್ಟಿದಾಗ ಹೆಸರು ಏನಿಡಬಹುದು ಎಂದು ಪೋಷಕರು ಯೋಚಿಸುವುದು ಸಹಜ. ಹಿಂದೂ ಧರ್ಮದಲ್ಲಿ ದೇವರಿಗೆ ಹೊಂದುವಂತಹ ಹೆಸರಿಡುವುದರಿಂದ ಒಳಿತಾಗುತ್ತದೆ ಎಂಬ ನಂಬಿಕೆ ಇದೆ. ನಿಮ್ಮ ಮಗುವಿನ ಜಾತಕದ ಪ್ರಕಾರ ಹ ಅಕ್ಷರದಿಂದ ಹೆಸರಿಡಬೇಕು ಎಂದು ಬಂದಿದ್ದರೆ, ಮಗುವಿಗೆ ಏನು ಹೆಸರಿಡಬಹುದು ಎಂದು ನೀವು ಹುಡುಕಾಟ ನಡೆಸಿರಬಹುದು. ಹಾಗಾದರೆ ನಿಮಗಾಗಿ ಇಲ್ಲಿದೆ ಒಂದಿಷ್ಟು ಹೆಸರುಗಳು ಪಟ್ಟಿ. ಇದು ಹಿಂದೂ ದೇವರುಗಳ ಹೆಸರಾಗಿದ್ದು, ಈ ಹೆಸರಿನ ಅರ್ಥ ಸಹಿತ ವಿವರ ಇಲ್ಲಿದೆ.

ಹಿತೇಶ್‌: ಗುಜರಾತಿ ಕುಟುಂಬಗಳಲ್ಲಿ ಈ ಹೆಸರು ಜನಪ್ರಿಯವಾಗಿದೆ. ಸಂತೋಷ ಮತ್ತು ಯೋಗಕ್ಷೇಮವನ್ನು ಪ್ರತಿನಿಧಿಸುವ ಹೆಸರು ಇದಾಗಿದೆ. ಇದು ದೇವರ ಒಳ್ಳೆಯತನದ ಸಂಕೇತವಾಗಿರುವ ಹೆಸರಾಗಿದೆ.

ಹರ್ಷ್‌: ಸರಳವಾದ ಹಾಗೂ ಇಂದಿನ ಟ್ರೆಂಡ್‌ಗೆ ಸರಿಯಾಗಿ ನಿಮ್ಮ ಮಗುವಿಗೆ ಹೆಸರಿಡಲು ಬಯಸಿದರೆ ಈ ಹೆಸರು ಆಯ್ಕೆ ಮಾಡಬಹುದು. ಇದರ ಅರ್ಥ ಸಂತೋಷ, ಸಂತಸ ಎಂಬುದಾಗುತ್ತದೆ. ಇದು ಟ್ರೆಂಡಿ ಆಗಿಯೂ ಇದೆ. 

ಹಾರ್ದಿಕ್‌: ಹಾರ್ದಿಕ್‌ ನಿಮಗೆ ಕ್ರಿಕೆಟಿಗ ಹಾರ್ದಿಕ್‌ ಪಾಂಡ್ಯ ಅವರನ್ನು ನೆನಪು ಮಾಡಿಸಬಹುದು. ಈ ಹೆಸರಿನ ಅರ್ಥ ಹೃದಯಪೂರ್ವಕ ಎಂದು. ಅಲ್ಲದೇ ಇದಕ್ಕೆ ಸಂತೋಷ, ತೃಪ್ತಿ ಎಂಬ ಅರ್ಥವೂ ಬರುತ್ತದೆ.

ಹೃದಯ್‌: ನಿಮ್ಮ ಮಗುವಿಗೆ ಮುದ್ದಾದ, ಸುಂದರ ಹೆಸರು ಇಡಬೇಕು ಅಂದುಕೊಂಡಿದ್ದರೆ ಹೃದಯ್‌ ಎಂದು ಇಡಬಹುದು. ಇದು ಸಂಸ್ಕೃತ ಮೂಲವನ್ನು ಹೊಂದಿರುವ ಹೆಸರಾಗಿದೆ. ಇದು ಕಾಳಜಿ, ಸಹಾನುಭೂತಿ ಹೊಂದಿರುವವರು ಎಂಬ ಅರ್ಥವನ್ನು ಸೂಚಿಸುತ್ತದೆ. ಹೃದಯ್‌ ಕೂಡ ಟ್ರೆಂಡಿ ಹೆಸರಲ್ಲಿ ಒಂದಾಗಿದೆ. 

ಹಿಮಾಂಶು: ಇದು ಚಂದ್ರನನ್ನು ಪ್ರತಿನಿಧಿಸುವ ಹೆಸರು. ಹಿಮದಿಂದ ಆವೃತ್ತವಾದ ಪರ್ವತಗಳ ಶಾಂತ ವಾತಾವರಣವನ್ನು ಇದು ಸೂಚಿಸುತ್ತದೆ. ಇದರೊಂದಿಗೆ ಈ ಹೆಸರಿಗೆ ತಾಳ್ಮೆ ಹಾಗೂ ನಮ್ರತೆ ಎಂಬ ಅರ್ಥವೂ ಇದೆ.

ಹೃಷಿಕೇಶ: ಶ್ರೀಕೃಷ್ಣನನ್ನು ಅವನ ಭಕ್ತರು ಹೃಷಿಕೇಶ ಎಂದು ಕರೆಯುತ್ತಾರೆ. ಹೃಷಿ (ಇಂದ್ರಿಯಗಳು ಅಥವಾ ಮನಸ್ಸು) ಕೇಶ್ (ದೇವರು). ಇದು ಕೃಷ್ಣ ಭಗವಾನ್ ಅನ್ನು ʼಇಂದ್ರಿಯಗಳ ಅಧಿಪತಿʼ ಅಥವಾ ʼಮನಸ್ಸಿನ ಅಧಿಪತಿʼ ಎಂದು ವಿವರಿಸುತ್ತದೆ. ಈ ಹೆಸರನ್ನು ನೀವು ನಿಮ್ಮ ಮಗುವಿಗೆ ಇಡಬಹುದು. 

ಹೃತಿಕ್: ಹಿಂದೂ ಗಂಡು ಮಗುವಿಗೆ ಆರಾಧ್ಯವಾದ ಹೆಸರುಗಳಲ್ಲಿ ಒಂದಾಗಿದೆ. ಇದು "ಹೃತ್" ಎಂಬ ಪದದಿಂದ ಬಂದಿದೆ, ಅಂದರೆ ʼಹೃದಯದಿಂದʼ. ಇದು ಆಳ, ಜಿಜ್ಞಾಸೆ ಮತ್ತು ಬುದ್ಧಿವಂತಿಕೆಯನ್ನು ಸಂಕೇತಿಸುತ್ತದೆ.

ಹೇಮಂತ್: ಇದು ಶೀತ ಋತುವನ್ನು ಸೂಚಿಸುತ್ತದೆ. ಸ್ಥೂಲವಾಗಿ ಚಳಿಗಾಲಕ್ಕೆ ಅನುವಾದಿಸುತ್ತದೆ. ಸಾಮಾನ್ಯವಾಗಿ, ಚಳಿಗಾಲದಲ್ಲಿ ಜನಿಸಿದ ಯಾರಿಗಾದರೂ ಈ ಹೆಸರನ್ನು ನೀಡಲಾಗುತ್ತದೆ. ಅಲ್ಲದೆ, ಈ ಹೆಸರು ಭಗವಾನ್ ಬುದ್ಧನ ಪವಿತ್ರ ಹೆಸರುಗಳಲ್ಲಿ ಒಂದಾಗಿದೆ ಎಂದು ನಂಬಲಾಗಿದೆ, ಚಿನ್ನಕ್ಕೂ ಹೇಮಂತ ಎಂಬ ಹೆಸರಿದೆ. 

ಹಿಮಶಿಖರ್:  ನಿಮ್ಮ ಗಂಡು ಮಗುವಿಗೆ 5 ಅಕ್ಷರದ ಹೆಸರು ಇಡಬೇಕು ಅಂತಿದ್ರೆ ಈ ಹೆಸರು ಸೂಕ್ತವಾಗುತ್ತದೆ. ಇದು ಹಿಮಭರಿತ ಪರ್ವತದ ಶಿಖರ ಎಂಬ ಅರ್ಥ ನೀಡುತ್ತದೆ. ವಿಶೇಷವಾಗಿ ಸೂರ್ಯನ ಕಿರಣಗಳಿಂದ ಹೊಳೆಯುತ್ತದೆ. ಇದು ಬೆಚ್ಚಗಿನ ಮತ್ತು ಉತ್ತಮ ಆರೋಗ್ಯದೊಂದಿಗೆ ಸಂಬಂಧಿಸಿದೆ.

ಹಿಮಶೇಖರ್: ಭಗವಾನ್ ಶಿವನ ಹೆಸರುಗಳಲ್ಲಿ ಒಂದಾದ ಇದು ಅವನನ್ನು ಹಿಮಾಲಯದ ಭಗವಂತ ಅಥವಾ ಅಲ್ಲಿ ವಾಸಿಸುವವನು ಎಂದು ವಿವರಿಸುತ್ತದೆ. ಈ ಹೆಸರು ಇಟ್ಟವರಿಗೆ ಶಿವನ ಶಾಶ್ವತ ಆಶೀರ್ವಾದ ಸದಾ ಸಿಗುತ್ತದೆ ಎಂದು ನಂಬಲಾಗಿದೆ. 

ಹರಿತ್: ಈ ಹೆಸರಿನ ಅರ್ಥವು ಹಸಿರು ಬಣ್ಣವನ್ನು ಸೂಚಿಸುತ್ತದೆ ಮತ್ತು ಹಸಿರು ಬಣ್ಣದೊಂದಿಗೆ ಸಂಯೋಜಿಸುತ್ತದೆ. ಈ ಹೆಸರನ್ನು ಹೊಂದಿರುವ ವ್ಯಕ್ತಿಯು ಪ್ರಕೃತಿಯತ್ತ ಆಕರ್ಷಿತರಾಗುತ್ತಾರೆ ಮತ್ತು ಸಂಬಂಧಿತ ಕೆಲಸಗಳಲ್ಲಿ ಉತ್ಕೃಷ್ಟರಾಗುತ್ತಾರೆ ಎಂದು ಹೇಳಲಾಗುತ್ತದೆ.

ಹನುಮಾನ್:  ಹನುಮಾನ್‌ ಎಂಬುದು ಆಂಜನೇಯನ ಇನ್ನೊಂದು ಹೆಸರು. ಪ್ರಭು ಶ್ರೀರಾಮನ ಕಟ್ಟಾ ಭಕ್ತನಾದ ಹನುಮಂತ ಹೆಸರನ್ನು ನಿಮ್ಮ ಮಗುವಿಗೆ ಇಡುವ ಮೂಲಕ ರಾಮನ ಕೃಪೆಗೆ ಪಾತ್ರರಾಗಬಹುದು.  

 

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.