Holi 2024: ಹೋಳಿ ಹುಣ್ಣಿಮೆಯಂದೇ ಚಂದ್ರಗ್ರಹಣ ಬಂದಿರುವುದು ಶುಭವೋ ಅಶುಭವೋ; ಜ್ಯೋತಿಷಿಗಳು ಹೇಳೋದಿಷ್ಟು
ಹಲವು ವರ್ಷಗಳ ನಂತರ ಹೋಳಿ ಹುಣ್ಣಿಮೆಯಂದೇ ಚಂದ್ರಗ್ರಹಣ ಸಂಭವಿಸುತ್ತಿದೆ. ಹೋಳಿಯಂದು ಗ್ರಹಣ ಉಂಟಾಗುವುದು ಶುಭವೋ, ಅಶುಭವೋ ಎಂಬ ಪ್ರಶ್ನೆ ನಿಮ್ಮಲ್ಲೂ ಮೂಡಿರಬಹುದು. ಈ ಪ್ರಶ್ನೆಗೆ ಖ್ಯಾತ ಜ್ಯೋತಿಷಿ ಚಿಲಕಮರ್ತಿ ಪ್ರಭಾಕರ ಶರ್ಮಾ ನೀಡಿರುವ ಉತ್ತರ ಇಲ್ಲಿದೆ.
ದೃಕ್ ಪಂಚಾಂಗದ ಪ್ರಕಾರ ಫಾಲ್ಗುಣ ಮಾಸ ಶುಕ್ಲಪಕ್ಷ ಹುಣ್ಣಿಮೆ ಹಸ್ತಾ ನಕ್ಷತ್ರ ಹಾಗೂ ಕೇತುಗ್ರಸ್ತ ಉಪಚಯ ಚಂದ್ರಗ್ರಹಣ ಕನ್ಯಾರಾಶಿಯಲ್ಲಿ ಸಂಭವಿಸಲಿದೆ ಎಂದು ಚಿಲಕಮರ್ತಿ ಪ್ರಭಾಕರ ಚಕ್ರವರ್ತಿ ಶರ್ಮಾ ಹೇಳುತ್ತಾರೆ. ಈ ಗ್ರಹಣವು ಭಾರತದಲ್ಲಿ ಸಂಭವಿಸುವುದಿಲ್ಲ. ಆ ಕಾರಣಕ್ಕೆ ಭಾರತೀಯರು ಯಾವುದೇ ನಿಯಮಗಳನ್ನು ಪಾಲಿಸುವ ಅಗತ್ಯವಿಲ್ಲ ಎಂದು ಅವರು ಹೇಳುತ್ತಾರೆ.
2024ರ ಮೊದಲ ಚಂದ್ರಗ್ರಹಣವು ಮಾರ್ಚ್ 25 ಭಾರತೀಯ ಕಾಲಮಾನ ಬೆಳಿಗ್ಗೆ 10.24 ರಿಂದ ಮಧ್ಯಾಹ್ನ 3.02 ರ ನಡುವೆ ಸಂಭವಿಸುತ್ತದೆ. ಮಧ್ಯಾಹ್ನ 12.44ರ ಸುಮಾರಿಗೆ ಗ್ರಹಣದ ಮಧ್ಯಂತರ ಅವಧಿಯಾಗಿರುತ್ತದೆ. ಯುರೋಪ್, ಉತ್ತರ, ಪೂರ್ವ ಏಷ್ಯಾ, ಉತ್ತರ ಅಮೆರಿಕ, ದಕ್ಷಿಣ ಅಮೆರಿಕ ಮತ್ತು ಪೂರ್ವ ರಷ್ಯಾದಲ್ಲಿ ಗೋಚರಿಸಲಿದ್ದು, ವಿದೇಶದಲ್ಲಿರುವ ಭಾರತೀಯರು ಗ್ರಹಣದ ನಿಯಮಗಳನ್ನು ಪಾಲಿಸಬೇಕು ಎಂದು ಚಿಲಕಮರ್ತಿಗಳು ಹೇಳುತ್ತಾರೆ.
ಕನ್ಯಾ ರಾಶಿಯಲ್ಲಿ ಉಂಟಾಗುವ ಈ ಗ್ರಹಣದ ಪ್ರಭಾವದಿಂದ ರಾಜಕೀಯದಲ್ಲಿ ಅನಿಶ್ಚಿತತೆ ಉಂಟಾಗಲಿದೆ. ಪ್ರಕರಣಗಳಲ್ಲಿ ಸಿಲುಕಿರುವ ಜನರು ಜೈಲು ಪಾಲಾಗುತ್ತಾರೆ. ಯುದ್ಧದ ವಾತಾವರಣ, ಭಯ, ಭಯೋತ್ಪಾದಕ ದಾಳಿ, ಹವಾಮಾನ ಬದಲಾವಣೆ ಉಂಟಾಗಲಿದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಸಮಸ್ಯೆಗಳು ಉಂಟಾಗಲಿವೆ.
ಅಕಾಲಿಕ ಮಳೆ, ಸುನಾಮಿ, ಭೂಕಂಪ ಸಂಭವಿಸಲಿದೆ ಎಂದು ಚಿಲಕಮರ್ತಿಗಳು ಹೇಳುತ್ತಾರೆ.
ವಿದೇಶದಲ್ಲಿ ನೆಲೆಸಿರುವ ಕನ್ಯಾ ಹಾಗೂ ಮೀನ ರಾಶಿಯವರು ಯಾವುದೇ ಕಾರಣಕ್ಕೂ ಗ್ರಹಣ ವೀಕ್ಷಣೆಯನ್ನು ತಪ್ಪಿಸಬೇಕು ಎಂದು ಅವರು ಸಲಹೆ ನೀಡುತ್ತಾರೆ.
ಇದನ್ನೂ ಓದಿ
Phalguna Pournami: ಹೋಳಿ ಹುಣ್ಣಿಮೆಯು ಯಾವ ರಾಶಿಗೆ ಶುಭ, ಯಾರಿಗೆ ಅಶುಭ; ಇಲ್ಲಿದೆ ದ್ವಾದಶ ರಾಶಿಗಳ ಫಲಾಫಲ
ಈ ವರ್ಷ ಫಾಲ್ಗುಣ ಮಾಸದ ಹುಣ್ಣಿಮೆಯು ಕನ್ಯಾರಾಶಿಯಲ್ಲಿ ರೂಪುಗೊಳ್ಳಲಿದೆ. ಇದು ದ್ವಾದಶ ರಾಶಿಗಳ ಮೇಲೆ ಪರಿಣಾಮ ಉಂಟು ಮಾಡುತ್ತದೆ. ಮೇಷದಿಂದ ಮೀನದವರೆಗೆ ಈ ವರ್ಷದ ಹೋಳಿ ಹುಣ್ಣಿಮೆಯು ಯಾರಿಗೆ ಶುಭ, ಯಾರಿಗೆ ಅಶುಭ ನೋಡಿ.
ಹೋಳಿ ಹಬ್ಬದ ನಂತರ ಬುಧನ ಹಿಮ್ಮುಖ ಚಲನೆ; ಈ 7 ರಾಶಿಯವರಿಗೆ ಕಾಡಲಿದೆ ಆರ್ಥಿಕ ಸಮಸ್ಯೆ
Mercury Retrograde: ಬುಧ ಗ್ರಹವು ಶೀಘ್ರದಲ್ಲೇ ತನ್ನ ಪಥವನ್ನು ಬದಲಾಯಿಸಲಿದ್ದಾನೆ. ಪ್ರಸ್ತುತ ಮೀನ ರಾಶಿಯಲ್ಲಿ ಸಂಚರಿಸುತ್ತಿರುವ ಬುಧನು ಹೋಳಿ ನಂತರ ಮೇಷ ರಾಶಿಯಲ್ಲಿ ಹಿಮ್ಮುಖವಾಗಿ ಚಲಿಸಲಿದ್ದಾನೆ. ಇದರಿಂದ ಕೆಲ ರಾಶಿಯವರಿಗೆ ಆರ್ಥಿಕ ಸಮಸ್ಯೆ ಕಾಡುವ ಸಾಧ್ಯತೆಯಿದೆ.