Shani Pradosha 2023: ಶನಿವಾರವೇ ಶನಿ ಪ್ರದೋಷ; ವ್ರತ ವಿಧಾನ, ಪೂಜಾ ಸಂಕಲ್ಪದ ಮಂತ್ರ ಪಠಣ ಹೀಗಿರಲಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Shani Pradosha 2023: ಶನಿವಾರವೇ ಶನಿ ಪ್ರದೋಷ; ವ್ರತ ವಿಧಾನ, ಪೂಜಾ ಸಂಕಲ್ಪದ ಮಂತ್ರ ಪಠಣ ಹೀಗಿರಲಿ

Shani Pradosha 2023: ಶನಿವಾರವೇ ಶನಿ ಪ್ರದೋಷ; ವ್ರತ ವಿಧಾನ, ಪೂಜಾ ಸಂಕಲ್ಪದ ಮಂತ್ರ ಪಠಣ ಹೀಗಿರಲಿ

ಈ ಬಾರಿಯ ಪ್ರದೋಷ ಶನಿವಾರ (ಜು. 15) ಬಂದ ಹಿನ್ನೆಲೆಯಲ್ಲಿ ಶನಿ ಪ್ರದೋಷವೆಂದು ಆಚರಿಸಲಾಗುತ್ತದೆ. ಈ ಪ್ರದೋಷದ ಪೂಜಾ ವಿಧಾನ ಮತ್ತು ಮಂತ್ರ ಪಠಣದ ಕುರಿತು ಜ್ಯೋತಿಷಿ ಎಚ್‌. ಸತೀಶ್‌ ಅವರು ವಿವರಿಸಿದ್ದಾರೆ.

ಶನಿವಾರವೇ ಶನಿ ಪ್ರದೋಷ; ವ್ರತ ವಿಧಾನ, ಪೂಜಾ ಸಂಕಲ್ಪದ ಮಂತ್ರ ಪಠಣ ಹೀಗಿರಲಿ
ಶನಿವಾರವೇ ಶನಿ ಪ್ರದೋಷ; ವ್ರತ ವಿಧಾನ, ಪೂಜಾ ಸಂಕಲ್ಪದ ಮಂತ್ರ ಪಠಣ ಹೀಗಿರಲಿ

Shani Pradosha 2023: ಇಂದಿನ ಪ್ರದೋಷವು ಶನಿವಾರದಂದು ಬಂದಿರುವ ಕಾರಣ ಇದನ್ನು ಶನಿಪ್ರದೋಷ ಎಂದು ಕರೆಯುತ್ತೇವೆ. ಅದಲ್ಲದೆ ಕುಜನ ನಕ್ಷತ್ರವಾದ ಮೃಗಶಿರ ದಿನ ನಕ್ಷತ್ರವಾಗುತ್ತದೆ. ಶ್ರೀಶಿವನಿಗೆ ಇಂದು ಪೂಜೆಸಲ್ಲಿಸಿದಲ್ಲಿ ಸೋದರ ಮತ್ತು ಸೋದರಿಯರ ನಡುವೆ ಇರುವ ಮನಸ್ತಾಪವು ಕಡಿಮೆ ಆಗುತ್ತದೆ. ಕುಟುಂಬದಲ್ಲಿ ಭೂವಿವಾದ ಇದ್ದಲ್ಲಿ ಸೂಕ್ತ ಪರಿಹಾರ ದೊರೆಯುತ್ತದೆ. ವಂಶದ ಆಸ್ತಿಯ ವಿಚಾರದಲ್ಲಿಯೂ ನಿರೀಕ್ಷಿತ ಫಲಿತಾಂಶ ಲಭಿಸುತ್ತದೆ. ಇಂದಿನ ಪೂಜೆಯಿಂದ ಶನೇಶ್ವರನ ಕಾಟದಿಂದಲೂ ಪಾರಾಗಬಹುದು. ವಿಷ್ಣುಭಗವಾನರ ಅನುಗ್ರಹವೂ ದೊರೆಯುತ್ತದೆ.

ಪೂಜಾ ವಿಧಾನದಲ್ಲಿ ಯಾವುದೇ ಬದಲಾವಣೆಗಳು ಕಂಡಿಬರುವುದಿಲ್ಲ. ಪ್ರಾರ್ಥನೆ ಆದನಂತರ ಗಣೇಶನ ಪೂಜೆ ಮಾಡುವುದು ರೂಢಿಯಲ್ಲಿದೆ. ಆನಂತರ ಪಂಚಾಮೃತ ಸ್ನಾನಾನಂತರ ಶುದ್ದೋದಕ ಸ್ನಾನಾನಂತರ ರುದ್ರಾಭಿಷೇಕವನ್ನು ಮಾಡಬೇಕು. ಶನಿವಾರವಾದ ಕಾರಣ ಅನುಕೂಲವನ್ನಾಧರಿಸಿ ನವಗ್ರಹ ಪೂಜೆಯನ್ನು ಮಾಡಬಹುದು. ಆನಂತರ ಧೂಪ, ದೀಪ, ನೈವೇಧ್ಯ ಉತ್ತರನೀರಾಜನ ಮುಂದುವರೆಯುತ್ತದೆ. ಮುಖ್ಯವಾಗಿ ಪ್ರಸಾದಕ್ಕಾಗಿ ಕಡಲೆಬೇಳೆ, ಹೆಸರುಬೇಳೆ, ಹೆಸರುಕಾಳಿನ ಖಾದ್ಯಮಾಡಬೇಕು. ಖಾರ ಹಾಕಬಾರದೆಂಬ ನಿಯಮವೇನೂ ಇರುವುದಿಲ್ಲ. ಆದರೆ ಅತಿ ಆಗಬಾರದು. ಪ್ರಸಾದವನ್ನು ಕೆಲವರಿಗಾದರೂ ಹಂಚಿದ ನಂತರ ಸೇವಿಸಬೇಕು.

ಮಂತ್ರ ಪಠಣ, ಸಂಕಲ್ಪ ಹೇಗಿರಬೇಕು?

ಸಹಕುಟುಂಬಾನಾಂ ಕ್ಷೇಮಸ್ಠೈರ್ಯ ವಿಜಯ ವೀರ್ಯ ಆಯುರಾರೋಗ್ಯ ಐಶ್ವರ್ಯಾಭಿವೃದ್ಧ್ಯರ್ಥಂ

ಧರ್ಮಾರ್ಥ ಕಾಮಮೋಕ್ಷ ಸತುರ್ವಿದ ಫಲಪುರುಷಾರ್ಥ ಸಿಧ್ಯರ್ಥಂ ಸಕಲ ಕಾರ್ಯೇಷು ನಿರ್ವಿಘ್ನಥಾ ಸಿಧ್ಯರ್ಥಂ ಸಮಸ್ತ ಸನ್ಮಂಗಳಾ ವ್ಯಾಪ್ಯಾರ್ಥಂ ಯಾವಜ್ಜೀವ ದೀರ್ಘಸೌಮಂಗಲ್ಯಾಭಿವೃದ್ಧ್ಯರ್ಥಂ ಪುತ್ರ ಪೌತ್ರ ಸಂಪತ್ ಸೌಭಾಗ್ಯ ಸಿದ್ದ್ಯರ್ಥಂ ಧನ ಕನಕ ವಸ್ತು ವಾಹನ ಧಾನ್ಯ ಪಶುಸುತ ಕ್ಷೇತ್ರಾಯುರಾರೋಗ್ಯ ಐಶ್ವರ್ಯಾದಿ ಸಕಲ ಮನೋರಧಾವಾಪ್ರ್ಯರ್ಥಂ ಸತ್ಸಂತಾನ ಸೌಭಾಗ್ಯ ಶುಭಫಲಾ ವ್ಯಾಪ್ತ್ಯರ್ಥಂ ಅಪಮೃತ್ಯು ಪೀಡಾ ಪರಿಹಾ ದ್ವಾರಾ ದೀರ್ಘಾಯುಷ್ಯ ಅಭಿವೃದ್ಧ್ಯರ್ಥಂ ಅಚಂಚಲ ಭಕ್ತಿಸಿದ್ಧ್ಯರ್ಥಂ ಇಷ್ಟಕಾಮ್ಯಾರ್ಥ ಸಿದ್ಧ್ಯರ್ಥಂ ಸಮಸ್ತಕಾರ್ಯೇಷು ನಿರ್ವಿಘ್ನಪೂರ್ವಕ ಜಯಪ್ರಾಪ್ತ್ಯರ್ಥಂ ಭೂತ ಬಾದಾ ನಿವೃತ್ಯರ್ಥಂ ಸರ್ಪದೋಷ ನಿವಾರರಾರ್ಥಂ ಋಣಭಾದಾ ನಿವೃತ್ಯರ್ಥಂ ಸಕಲವಿಧ್ಯಾ ಪಾರಂಗತಾ ಸಿದ್ದ್ಯರ್ಥಂ ಸಕಲದೇವತಾ ಪ್ರಸಾದೇನ ಧನ ಪಶು ಪುತ್ರಲಾಭಾದಿ ಫಲಸಿದ್ಧ್ಯರ್ಥಂ

ಪೂರ್ವೋಕ್ತ ಏವಂಗುಣ ವಿಶೇಷಣ ವಿಶಿಷ್ಠಾಯಾಂ ಶುಭತಿಥೌ ಮಮೋಪಾತ್ತ ದುರಿತ ಕ್ಷಯದ್ವಾರಾ ಶ್ರೀ ಪರಮೇಶ್ವರ ಮುದ್ದಿಸ್ಯ ಶ್ರೀ ಪರಮೇಶ್ವರ ಪ್ರೀತ್ಯರ್ಥಂ ಸಂಧ್ಯಾಂಗ ಯಥಾಶಕ್ತಿ ಶ್ರೀ ಶಿವ ಮಹಾಮಂತ್ರ ಜಪಂ ಕರಿಷ್ಯೇ ॥

ಜಯ ದೇವ ಜಗನ್ನಾಥ ಜಯ ಶಙ್ಕರ ಶಾಶ್ವತ

ಜಯ ಸರ್ವಸುರಾಧ್ಯಕ್ಷ ಜಯ ಸರ್ವಸುರಾರ್ಚಿತ

ಜಯ ಸರ್ವಗುಣಾತೀತ ಜಯ ಸರ್ವವರಪ್ರದ

ಜಯ ನಿತ್ಯ ನಿರಾಧಾರ ಜಯ ವಿಶ್ವಮ್ಭರಾವ್ಯಯ

ಜಯ ವಿಶ್ವೈಕವನ್ದ್ಯೇಶ ಜಯ ನಾಗೇನ್ದ್ರಭೂಷಣ

ಜಯ ಗೌರೀಪತೇ ಶಮ್ಭೋ ಜಯ ಚನ್ದ್ರಾರ್ಧಶೇಖರ

ಜಯ ಕೋಠ್ಯರ್ಕಸಙ್ಕಾಶ ಜಯಾನನ್ತಗುಣಾಶ್ರಯ

ಜಯ ಭದ್ರ ವಿರೂಪಾಕ್ಷ ಜಯಾಚಿನ್ತ್ಯ ನಿರಞ್ಜನ

ಜಯ ನಾಥ ಕೃಪಾಸಿನ್ಧೋ ಜಯ ಭಕ್ತಾರ್ತಿಭಞ್ಜನ

ಜಯ ದುಸ್ತರಸಂಸಾರಸಾಗರೋತ್ತಾರಣ ಪ್ರಭೋ

ಪ್ರಸೀದ ಮೇ ಮಹಾದೇವ ಸಂಸಾರಾರ್ತಸ್ಯ ಖಿದ್ಯತಃ

ಸರ್ವಪಾಪಕ್ಷಯಂ ಕೃತ್ವಾ ರಕ್ಷ ಮಾಂ ಪರಮೇಶ್ವರ

ಮಹಾದಾರಿದ್ರ್ಯಮಗ್ನಸ್ಯ ಮಹಾಪಾಪಹತಸ್ಯ ಚ

ಮಹಾಶೋಕನಿವಿಷ್ಟಸ್ಯ ಮಹಾರೋಗಾತುರಸ್ಯ ಚ

ಋಣಭಾರಪರೀತಸ್ಯ ದಹ್ಯಮಾನಸ್ಯ ಕರ್ಮಭಿಃ

ಗ್ರಹೈಃಪ್ರಪೀಡ್ಯಮಾನಸ್ಯ ಪ್ರಸೀದ ಮಮ ಶಙ್ಕರ

ದರಿದ್ರಃ ಪ್ರಾರ್ಥಯೇದ್ದೇವಂ ಪ್ರದೋಷೇ ಗಿರಿಜಾಪತಿಮ್

ಅರ್ಥಾಢ್ಯೋ ವಾಽಥ ರಾಜಾ ವಾ ಪ್ರಾರ್ಥಯೇದ್ದೇವಮೀಶ್ವರಮ್

ದೀರ್ಘಮಾಯುಃ ಸದಾರೋಗ್ಯಂ ಕೋಶವೃದ್ಧಿರ್ಬಲೋನ್ನತಿ

ಮಮಾಸ್ತು ನಿತ್ಯಮಾನನ್ದಃ ಪ್ರಸಾದಾತ್ತವ ಶಙ್ಕರ

ಶತ್ರವಃ ಸಂಕ್ಷಯಂ ಯಾನ್ತು ಪ್ರಸೀದನ್ತು ಮಮ ಪ್ರಜಾ

ನಶ್ಯನ್ತು ದಸ್ಯವೋ ರಾಷ್ಟ್ರೇ ಜನಾಃ ಸನ್ತು ನಿರಾಪದಃ

ದುರ್ಭಿಕ್ಷಮಾರಿಸನ್ತಾಪಾಃ ಶಮಂ ಯಾನ್ತು ಮಹೀತಲೇ

ಸರ್ವಸಸ್ಯಸಮೃದ್ಧಿಶ್ಚ ಭೂಯಾತ್ಸುಖಮಯಾ ದಿಶಃ

ಏವಮಾರಾಧಯೇದ್ದೇವಂ ಪೂಜಾನ್ತೇ ಗಿರಿಜಾಪತಿಮ್

ಬ್ರಾಹ್ಮಣಾನ್ಭೋಜಯೇತ್ ಪಶ್ಚಾದ್ದಕ್ಷಿಣಾಭಿಶ್ಚ ಪೂಜಯೇತ್

ಸರ್ವಪಾಪಕ್ಷಯಕರೀ ಸರ್ವರೋಗನಿವಾರಣೀ

ಶಿವಪೂಜಾ ಮಯಾಽಽಖ್ಯಾತಾ ಸರ್ವಾಭೀಷ್ಟಫಲಪ್ರದಾ

ಪ್ರದೋಷ ಕಾಲದಲ್ಲಿ ಮೇಲಿನ ಮಂತ್ರ ಜಪವನ್ನು ಮಾಡಿದ ಪರಿಣಾಮವಾಗಿ ದಶರಥನು ನಿರೀಕ್ಷಿತ ಫಲಗಳನ್ನು ಪಡೆದನೆಂದು ಕೆಲವು ಧಾರ್ಮಿಕ ಗ್ರಂಥಗಳಲ್ಲಿ ತಿಳಿಸಲಾಗಿದೆ. ಪ್ರದೋಷ ಪೂಜೆಯನ್ನು ಸಂಜೆ 6ರಿಂದ 10ರ ಒಳಗೆ ಮಾಡಬೇಕು. ಆದರೆ ಇಂದಿನ ದಿನ ಬೆಳಗಿನ ವೇಳೆ ಕುಲದೇವರ ಪೂಜೆಯನ್ನು ಮಾಡಿದ ನಂತರ ದಶರಥ ಮಹಾಜನು ರಚಿಸಿದ ಶನಿಪೀಡಾಪರಿಹಾರ ಸ್ತೋತ್ರವನ್ನು ಪಠಿಸಿದರೆ ವಿಶೇಷವಾದ ಫಲಗಳು ದೊರೆಯುತ್ತದೆ.

Whats_app_banner

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.