ಮಾಘ ಮಾಸದಲ್ಲಿ ಪುಣ್ಯಸ್ನಾನ ಮಾಡುವಾಗ ಆಚರಿಸಬೇಕಾದ ಕ್ರಮಗಳೇನು, ಯಾವ ಶ್ಲೋಕ ಪಠಿಸಬೇಕು; ಇಲ್ಲಿದೆ ಮಾಹಿತಿ
ಮಾಘ ಮಾಸದಲ್ಲಿ ಮಾಡುವ ಪವಿತ್ರ ಸ್ನಾನಕ್ಕೆ ಬಹಳ ಮಹತ್ವವಿದೆ. ಮಾಘ ಮಾಸದಲ್ಲಿ ಪುಣ್ಯ ಸ್ನಾನ ಮಾಡುವಾಗ ಅನುಸರಿಸಬೇಕಾದ ಕ್ರಮಗಳೇನು, ಸ್ನಾನದ ಸಂದರ್ಭದ ಯಾವ ಶ್ಲೋಕ ಹೇಳುವ ಮೂಲಕ ದೇವರನ್ನು ಒಲಿಸಿಕೊಳ್ಳಬಹುದು ಎಂಬ ಕುರಿತು ಚಿಲಕಮರ್ತಿ ಪ್ರಭಾಕರ ಚಕ್ರವರ್ತಿ ಶರ್ಮಾ ಮಾಹಿತಿ ನೀಡಿದ್ದಾರೆ
ಹಿಂದೂ ಧರ್ಮದಲ್ಲಿ ಮಾಘ ಮಾಸವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಈ ಮಾಸದಲ್ಲಿ ಪವಿತ್ರ ಸ್ನಾನ, ಯಥಾಶಕ್ತಿ ದಾನ ಧರ್ಮಾದಿ ಕಾರ್ಯಗಳಿಗೆ ಹೆಚ್ಚಿನ ಪ್ರಾಶಸ್ತ್ಯವಿದೆ. ನಿರ್ಮಲ ಮನಸ್ಸಿನಿಂದ ದಾನ ಧರ್ಮಾದಿ ಕಾರ್ಯಗಳನ್ನು ಮಾಡಿದರೆ ಮಂಗಳಕರ ಫಲಿತಾಂಶ ಲಭಿಸುತ್ತದೆ ಎಂಬುದು ಆಸ್ತಿಕರ ನಂಬಿಕೆ. ಮಾಘ ಮಾಸದಲ್ಲಿ ನದಿಗಳಲ್ಲಿ ಮಾಡುವ ಸ್ನಾನಕ್ಕೆ ಬಹಳ ಮಹತ್ವವಿದೆ. ಅದಕ್ಕಿಂತಲೂ ಹೆಚ್ಚಾಗಿ ಈ ಸ್ನಾನ ಮಾಡುವಾಗ ಆಚರಿಸಬೇಕಾದ ನಿಯಮಗಳು, ಹೇಳಬೇಕಾದ ಶ್ಲೋಕಗಳ ಬಗ್ಗೆ ಹೆಚ್ಚಿನ ಅರಿವು ಹೊಂದಿರುವುದು ಅವಶ್ಯ. ಶ್ಲೋಕ ಹಾಗೂ ಅದರ ಅರ್ಥ ಸಹಿತ ಜ್ಞಾನವನ್ನು ಹೊಂದುವ ಮೂಲಕ ಮಾಘ ಮಾಸ ಸ್ನಾನ ಪರಿಪೂರ್ಣವಾಗಬಲ್ಲದು. ಸ್ನಾನ ಮಾಡಲು ನದಿಗೆ ಇಳಿದ ಕೂಡಲೇ ಮೊದಲಿಗೆ ಹೇಳಬೇಕಾದ ಪ್ರಾರ್ಥನಾ ಶ್ಲೋಕಗಳಿವು:
ಶುಕ್ಲಾಂಬರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಮ್,
ಪ್ರಸನ್ನವದನಂ ಧ್ಯಾಯೇತ್ ಸರ್ವ ವಿಘ್ನೋಪಶಾಂತಯೇ.
ಸರ್ವಪಾಪಹರಂ ಪುಣ್ಯಂ ಸ್ನಾನ ಮಾಘೇತು ಯತ್ರುತ್ವಂ,
ನಿರ್ವಿಘ್ನಂ ಕುರುಮೇದೇವ ! ಗಂಗಾಧರ !
ನಮೋಸ್ತುತೇ ಮಕರ ಸ್ಥಿತರವೌ ಪುಣ್ಯೇ ಮಾಘ ಮಾಸೇ
ಶುಭೇ ಕ್ಷಣೇ ಪ್ರಯಾಗಸ್ನಾನಮಾತ್ರೇಣ
ಪ್ರಯಾಂತಿ ಹರಿಮಂದಿರಮ್ ಪ್ರಾತರ್ಮಾಘೀ ಬಹಿಃ ಸ್ನಾನ
ಕ್ರತುಕೋಟಿ ಫಲಪ್ರದಮ್ ಸರ್ವಪಾಪಹರಂ ನೃಣಾಂ ಸರ್ವ ಪುಣ್ಯಫಲಪ್ರದಮ್
ಪಿಪ್ಪಲಾದಾತ್ಸಮುತ್ಪನ್ನೇ ಕೃತ್ಯೇ ಲೋಕಾಭಯಂಕರಿ ।
ಮೃತ್ತಿಕಾಂ ತೇ ಪ್ರದಾಸ್ಯಾಮಿ ಆಹಾರಾರ್ಥಂ ಪ್ರಸೀದ ಮೇ
ಎಂದು ಈ ಪ್ರಾರ್ಥನೆ ಮಾಡುತ್ತಾ ನದಿಯಲ್ಲಿ ಇಳಿದು ಪ್ರವಾಹಾಭಿಮುಖವಾಗಿ ಸೂರ್ಯನಿಗೆ ಎದುರಾಗಿ ನಿಂತು ಮೂರು ಬಾರಿ ಮುಳುಗಿ ಏಳಬೇಕು. ನಂತರ ಈ ಕೆಳಗಿನ ಶ್ಲೋಕಗಳನ್ನು ಹೇಳಬೇಕು.
ಗಂಗಾಗಂಗೇತಿ ಯೋ ಬ್ರೂಯಾತ್ ಯೋಜನನಾಮ್
ಶತೈರಪಿ ಸರ್ವಪಾಪವಿನಿರ್ಮುಕ್ತೋ ವಿಷ್ಣುಲೋಕಂಸಗಚ್ಛತಿ
ಅಮ್ಬತ್ವದ್ದರ್ಶನಾನ್ಮುಕ್ತಿಃ ನಜಾನೇ ಸ್ನಾನಜಂ ಫಲಮ್
ಸ್ವರ್ಗಾರೋಹಣ ಸೋಪಾನ ಮಹಾಪುಣ್ಯತರಂಗಿಣಿ|
ನಂದಿನೀ ನಲಿನೀ ಸೀತಾ ಮಾಲಿನೀ ಚ ಮಹಾಪಗಾ,
ವಿಷ್ಣು ಪಾದಾಬ್ಜ ಸಂಭೂತಾ ಗಂಗಾ ತ್ರಿಪಧಗಾಮಿನೀ
ಭಾಗೀರಥೀ ಭೋಗವತೀ ಜಾಹ್ನವೀ ತ್ರಿದಶೇಶ್ವರೀ
ದ್ವಾರಶೈತಾನಿ ನಾಮಾನಿ ಯತ್ರ ಯತ್ರ ಜಲಾಶಯೇ
ಸ್ನಾನಕಾಲೇ ಪಠೇನ್ನಿತ್ಯಂ ಮಹಾಪಾತಕನಾಶನಮ್
ಮಾಘೇ ಸರ್ವಗತೋ ವಿಷ್ಣುಃ ಚಿತ್ಸ್ವರೂಪೀ ನಿರಂಜನಃ
ಸ ಏವದ್ರವರೂಪೇಣ ಗಂಗಾಮ್ಭೋ ನಾತ್ರಸಂಶಯಃ
ನಮಸ್ಕಾರ ವಿಶ್ವಗುಪ್ತಾಯ ನಮೋ ವಿಷ್ಣು ಸ್ವರೂಪಿಣೇ
ನಮೋಜಲಧಿರೂಪಾಯ ನದೀನಾಂ ಪತಯೇ ವಸ್ತು
ಎಂದು ಹೇಳಿ ಮತ್ತೆ ಮೂರು ಬಾರಿ ಮುಳುಗಿ ಏಳಬೇಕು. ಆ ನಂತರ ಸಂಕಲ್ಪ ಹೇಳಬೇಕು.
ಯಾವುದೇ ಪೂಜೆ ಪುನಸ್ಕಾರಗಳನ್ನು ಮಾಡುವ ಮುನ್ನ ದೇವರಲ್ಲಿ ಸಂಕಲ್ಪ ಮಾಡಿಕೊಳ್ಳುವುದು ರೂಢಿ. ಅದರಲ್ಲೂ ಮಾಘ ಮಾಸ ಸ್ನಾನಕ್ಕೂ ಮುನ್ನ ಹೀಗೆ ಸಂಕಲ್ಪ ಕೈಗೊಳ್ಳಬೇಕು.
ಆಚಮನ ಮಂತ್ರಗಳು ಹೀಗಿವೆ
ಓಂ ಕೇಶವಾಯನಮಃ, ಓಂ ನಾರಾಯಣಾಯನಮಃ, ಓಂ ಮಾಧಾಯನಮಃ, ಓಂ ಗೋವಿಂದಾಯನಮಃ, ಓಂ ವಿಷ್ಣವೇನಮಃ, ಓಂ ಮಧುಸೂದನಾಯನಮ, ಓಂ ತ್ರಿವಿಕ್ರಮಾಯ ನಮಃ, ಓಂ ವಾಮನಾಯನಮಃ, ಓಂ ಶ್ರೀಧರಾಯನಮಃ, ಓಂ ಹೃಷೀಕೇಶಾಯನಮಃ, ಓಂ ಪದ್ಮನಾಭಾಯನಮಃ, ಓಂ ದಾಮೋದರಾಯ ನಮಃ, ಓಂ ಸಂಕರ್ಷಣಾಯ, ಓಂ ವಾಸುದೇವಾಯನಮಃ, ಓಂ ಪ್ರದ್ಯುಮ್ನಾಯ ನಮಃ, ಓಂ ಅನಿರುದ್ಧಾಯನಮಃ, ಓಂ ಪುರುಷೋತ್ತಮಾಯನಮಃ, ಓಂ ಅಧೋಕ್ಷಜಾಯನಮ, ಓಂ ನರಸಿಂಹಾಯನಮಃ, ಓಂ ಅಚ್ಯುತಾಯ ನಮಃ, ಓಂ ಜನಾರ್ದನಾಯ ನಮಃ, ಓಂ ಉಪೇಂದ್ರಾಯ ನಮಃ, ಓಂ ಹರಯೇ ನಮಃ, ಓಂ ಶ್ರೀ ಕೃಷ್ಣಾಯನಮಃ.
ಅರ್ಘ್ಯ ಕೊಡುವ ಮಂತ್ರ
ಉತ್ತಿಷ್ಠಂತು ಭೂತಪಿಶಾಚಾಃ ಏತೇ ಭೂಮಿಭಾರಕಾಃ
ಏತೇಷಾಮವಿರೋಧೇನ ಬ್ರಹ್ಮಕರ್ಮಸಮಾರಭೇ,
ಓಂ ಭೂಃ, ಓಂ ಭುವಃ, ಓಂ ಸುವಃ ಓಂ ಮಹಃ, ಓಂಜನ, ಓಂ ತಪಃ ಓಂ ಸತ್ಯಂ,
ಓಂ ತತ್ಸವಿತುರ್ವರೇಣ್ಯಂ ಭರ್ಗೋದೇವಸ್ಯಧೀಮಹಿ
ಧಿಯೋ ಯೋನಃ ಪ್ರಚೋದಯಾತ್,
ಓಮಾಪೋಜ್ಯೋತೀರಸೋಮೃತಂ ಬ್ರಹ್ಮಭೂರ್ಭು ವಸ್ಸುರೋಮ್ ಎಂದು ಓದಿಕೊಂಡು ಈ ರೀತಿ ಅರ್ಘ್ಯವನ್ನು ನೀಡಬೇಕು.
ಈ ರೀತಿ ಸ್ನಾನ ಮಾಡಿ ನದೀದೇವತೆಗೂ, ಸೂರ್ಯ ದೇವನಿಗೂ ನೀರಿನ ಅರ್ಘ್ಯ ಕೊಟ್ಟು ಶ್ಲೋಕವನ್ನು ಹೇಳಬೇಕು:
ಯಾನ್ಮಯಾದೂಷಿತಂ ತೋಯಂ ದೇಹಮಲ
ಸಂಯುತಂ ತತ್ಪಾಪಸ್ಯ ವಿಶುದ್ಧ್ಯರ್ಧಮ್
ಯಕ್ಷ್ಮಾಣಂ ತರ್ಪಯಾಮ್ಯಹಮ್ ।
ಹೀಗೆ ಮೂರು ಬಾರಿ ಅರ್ಘ್ಯವನ್ನು ನೀಡಿ, ಮಡಿ ಬಟ್ಟೆ ಉಟ್ಟುಕೊಂಡು, ಸಂಧ್ಯಾವಂದನಾದಿ ನಿತ್ಯಕರ್ಮಗಳನ್ನು ಮಾಡಬೇಕು. ನಂತರ ತಮ್ಮ ಕೈಲಾದಷ್ಟು ದಾನ ಧರ್ಮಗಳನ್ನು ಮಾಡಬೇಕಾಗುತ್ತದೆ. ದಾನ ಕೊಡುವ ಮುನ್ನ ದಾನ ಸಂಕಲ್ಪವನ್ನು ಹೇಳಬೇಕು, ಶ್ಲೋಕವನ್ನೂ ಉಚ್ಛರಿಸಬೇಕು.
ಆಚಮ್ಯ ಪೂರ್ವೋಕ್ತ ಏವಂಗುಣ ವಿಶೇಷಣ ವಿಶಿಷ್ಟಾಯಾಂ ಶುಭತಿಧೌ ಗೋತ್ರಃ, ನಾಮಧೇಯಃ, ದಾತಾಹಂ, ಗೋತ್ರಾ... ನಾಮಧೇಯಾಯ ಬ್ರಾಹ್ಮಣಾಯ, ಮಾಘಮಾಸೇ ಶ್ರೀ ಲಕ್ಷ್ಮೀನಾರಾಯಣ ಪ್ರೀತ್ಯಂ, ದಾನಂ ಕರಿಷ್ಯೇ.
ಲಕ್ಷ್ಮೀನಾರಾಯಣೋದಾತಾ ಗ್ರಹೇತಾಚ ಜನಾರ್ಧನಃ,
ದಾನೇ ನಾನೇನ ಪ್ರೀತು ಲಕ್ಷ್ಮೀನಾರಾಯಣ ಸ್ಸದಾ
ಎಂದು ಹೇಳುತ್ತಾ ದಾನ ನೀಡಬೇಕು. ದಾನವನ್ನು ಪಡೆದುಕೊಳ್ಳುವ ಬ್ರಾಹ್ಮಣರು “ಇಷ್ಟಕಾಮ್ಯಾರ್ಥ ಸಿದ್ಧಿರಸ್ತು ವ್ರತಂ ಸುವ್ರತಮಸ್ತು, ಆಯುರಾರೋಗ್ಯೈಶ್ವರ್ಯಾದಿ ಸಕಲ ಶ್ರೇಯೋಭಿವೃದ್ಧಿರಸ್ತು” ಎಂದು ತುಂಬು ಮನಸ್ಸಿನಿಂದ ಆಶೀರ್ವಾದ ಮಾಡಿ ಅಕ್ಷತೆಕಾಳುಗಳನ್ನು ನೀಡಿದರೆ ನಿಮ್ಮ ಮಾಘ ಮಾಸ ಸ್ನಾನ ಪರಿಪೂರ್ಣವಾದಂತೆ.
(ಮಾಹಿತಿ: ಚಿಲಕಮರ್ತಿ ಪ್ರಭಾಕರ ಚಕ್ರವರ್ತಿ ಶರ್ಮಾ, ಬರಹ: ಭಾಗ್ಯ ದಿವಾಣ)
(This copy first appeared in Hindustan Times Kannada website. To read more like this please logon to kannada.hindustantimes.com)