ಕನ್ನಡ ಸುದ್ದಿ  /  Astrology  /  Spiritual News Maha Shivaratri 2024 When Is Maha Shivaratri Its On March 8 Or 9th Significance And Celebration Rst

Maha Shivaratri: ಈ ವರ್ಷ ಮಹಾಶಿವರಾತ್ರಿ ಆಚರಣೆ ಯಾವಾಗ; ಈ ದಿನ ಸಂಭವಿಸುವ ಶುಭಯೋಗಗಳ ಬಗ್ಗೆ ತಿಳಿಯಿರಿ

ಮಹಾಶಿವನನ್ನು ಆರಾಧಿಸುವ ಶಿವರಾತ್ರಿ ಸಮೀಪದಲ್ಲಿದೆ. ಈ ವರ್ಷ ಶಿವರಾತ್ರಿ ಮಾರ್ಚ್‌ 8 ಅಥವಾ 9 ಯಾವ ದಿನ ಎನ್ನುವ ಗೊಂದಲ ಹಲವರಲ್ಲಿದೆ. ಹಾಗಾದ್ರೆ ಈ ವರ್ಷ ಶಿವರಾತ್ರಿ ಯಾವಾಗ, ಈ ದಿನ ಸಂಭವಿಸುವ ಶುಭಯೋಗಗಳ ಬಗ್ಗೆ ತಿಳಿಯಿರಿ.

 ಈ ವರ್ಷ ಮಹಾಶಿವರಾತ್ರಿ ಆಚರಣೆ ಯಾವಾಗ; ಈ ದಿನ ಸಂಭವಿಸುವ ಶುಭಯೋಗಗಳ ಬಗ್ಗೆ ತಿಳಿಯಿರಿ
ಈ ವರ್ಷ ಮಹಾಶಿವರಾತ್ರಿ ಆಚರಣೆ ಯಾವಾಗ; ಈ ದಿನ ಸಂಭವಿಸುವ ಶುಭಯೋಗಗಳ ಬಗ್ಗೆ ತಿಳಿಯಿರಿ

ಹಿಂದೂ ಧರ್ಮದಲ್ಲಿ ಶಿವರಾತ್ರಿ ಹಬ್ಬಕ್ಕೆ ವಿಶೇಷ ಮಹತ್ವವಿದೆ. ನಾಡಿನಾದ್ಯಂತ ಈ ಹಬ್ಬವನ್ನು ಭಕ್ತಿ ಭಾವದಿಂದ ಆಚರಿಸಲಾಗುತ್ತದೆ. ಫಾಲ್ಗುಣ ಮಾಸ ಕೃಷ್ಣ ಪಕ್ಷದ ಚತುರ್ದಶಿಯಂದು ಮಹಾಶಿವರಾತ್ರಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ದಿನವನ್ನು ಪರಮೇಶ್ವರ ಹಾಗೂ ಪಾರ್ವತಿದೇವಿ ಮದುವೆಯಾದ ದಿನ ಎಂದು ಪರಿಗಣಿಸಲಾಗುತ್ತದೆ. ಈ ವರ್ಷ ಮಾರ್ಚ್‌ 8 ರಂದು ಮಹಾಶಿವರಾತ್ರಿ ಇದೆ.

ಈ ದಿನ ಶಿವ ದೇಗುಲಗಳಲ್ಲಿ ವಿಶೇಷ ಪೂಜೆಗಳು ನೆರವೇರುತ್ತವೆ. ಶಿವಭಕ್ತರು ಮೆರವಣಿಗೆ, ಉಪವಾಸ ವತ್ರ, ಜಾಗರಣೆ ಮಾಡುವ ಮೂಲಕ ಪರಮೇಶ್ವರನ ಅನುಗ್ರಹಕ್ಕೆ ಪಾತ್ರರಾಗುತ್ತಾರೆ.

ಮಹಾಶಿವರಾತ್ರಿಯನ್ನು ತ್ರಯೋದಶಿ ಮತ್ತು ಚತುರ್ದಶಿಯ ಸಂಯೋಜಿತ ದಿನಾಂಕದಂದು ಆಚರಿಸಲಾಗುತ್ತದೆ. ವಾಸ್ತವವಾಗಿ, ಪ್ರತಿ ತಿಂಗಳು ಎರಡು ಶಿವರಾತ್ರಿ ಮತ್ತು ಚತುರ್ದಶಿ ಇರುತ್ತದೆ. ಆದರೆ ಫಾಲ್ಗುಣ ಮಾಸದಲ್ಲಿ ಹೋಳಿ ಹಬ್ಬಕ್ಕೂ ಮೊದಲು ಮಹಾಶಿವರಾತ್ರಿಯನ್ನು ಆಚರಿಸಲಾಗುತ್ತದೆ. ಈ ದಿನ ಶಿವನಿಗೆ ರುದ್ರಾಭಿಷೇಕ ಮಾಡುವುದರಿಂದ ವಿಶೇಷ ಫಲ ಲಭಿಸುತ್ತದೆ ಎಂದು ನಂಬಲಾಗಿದೆ. ಶಿವರಾತ್ರಿಯಂದು ಚಂದ್ರನ ಸ್ಥಾನವೂ ವಿಶೇಷವಾಗಿದೆ. ಈ ಬಾರಿ ಮಹಾಶಿವರಾತ್ರಿಯಂದು ಮಕರ ರಾಶಿಯಲ್ಲಿ ಚಂದ್ರ ಇರುತ್ತಾನೆ.

ಮಹಾಶಿವರಾತ್ರಿಯ ದಿನಾಂಕ ಯಾವಾಗ?

ಫಲ್ಗುಣ ಮಾಸ ಕೃಷ್ಣ ಚತುರ್ದಶಿ ತಿಥಿ ಮಾರ್ಚ್ 8 ರ ಶುಕ್ರವಾರ, ರಾತ್ರಿ 9:57 ರಿಂದ ಪ್ರಾರಂಭವಾಗಲಿದೆ ಮತ್ತು ಫಾಲ್ಗುಣ ಕೃಷ್ಣ ಚತುರ್ದಶಿ ತಿಥಿ ಮಾರ್ಚ್ 9 ರಂದು ಸಂಜೆ 06:17 ಕ್ಕೆ ಕೊನೆಗೊಳ್ಳುತ್ತದೆ. ಮಹಾಶಿವರಾತ್ರಿಯ ಆರಾಧನೆಯ ಶುಭ ಸಮಯವು ಬೆಳಿಗ್ಗೆ 05:01 ರಿಂದ ಪ್ರಾರಂಭವಾಗುತ್ತದೆ. ಹಲವರು ಪ್ರದೋಷ ಕಾಲದಲ್ಲಿ ಸಾಯಂಕಾಲದ ಹೊತ್ತಿನಲ್ಲಿ ಶಿವನನ್ನು ಪೂಜಿಸುತ್ತಾರೆ. ಮಹಾಶಿವರಾತ್ರಿಯ ಆರಾಧನೆಯಲ್ಲಿ ಭದ್ರ ಕಾಲವನ್ನು ಸಹ ಆಚರಿಸಲಾಗುತ್ತದೆ. ಭದ್ರಾ ಈ ದಿನ ರಾತ್ರಿ 9:58 ರಿಂದ ಮರುದಿನ ಬೆಳಿಗ್ಗೆ 8:09 ರವರೆಗೆ ಇರುತ್ತದೆ. ಆದ್ದರಿಂದ ಇದಕ್ಕೂ ಮುನ್ನ ಶಿವರಾತ್ರಿ ಪೂಜೆಯನ್ನು ಮಾಡಬೇಕು.

ಶುಭ ಯೋಗಗಳ ಸಂಗಮ

ಈ ಬಾರಿಯ ಶಿವರಾತ್ರಿಯಂದು ಸರ್ವಾರ್ಥ ಸಿದ್ಧಿ ಯೋಗವಿದೆ. ಈ ವರ್ಷದ ಮಹಾಶಿವರಾತ್ರಿಯಂದು 4 ಶುಭಯೋಗಗಳು ಸಂಭವಿಸಲಿವೆ. ಮಹಾಶಿವರಾತ್ರಿಯ ದಿನ ಮಕರ ರಾಶಿಯಲ್ಲಿ ಶ್ರವಣ ನಕ್ಷತ್ರ ಮತ್ತು ಶಿವಯೋಗವಿರುವ ಚಂದ್ರನಿದ್ದಾನೆ. ಇದರೊಂದಿಗೆ ಸರ್ವಾರ್ಥ ಸಿದ್ಧಿ ಯೋಗ, ಸಿದ್ಧ ಯೋಗ ಕೂಡ ರೂಪುಗೊಳ್ಳಲಿದೆ. ಇದರಿಂದ ಕೆಲವು ರಾಶಿಯವರಿಗೂ ಅನುಕೂಲವಾಗಲಿದೆ.

ಇದನ್ನೂ ಓದಿ

Maha Shivaratri 2024: ಈ ಮಹಾ ಶಿವರಾತ್ರಿಗೆ ಪಂಚಭೂತ ಲಿಂಗ ಕ್ಷೇತ್ರಗಳಿಗೆ ಭೇಟಿ ಮಾಡಬೇಕು ಎಂದುಕೊಂಡಿದ್ರೆ ಇಲ್ಲಿದೆ ನೋಡಿ ವಿವರ

Maha Shivaratri 2024: ಪ್ರತಿ ಬಾರಿ ಮಹಾಶಿವರಾತ್ರಿ ಸಮಯದಲ್ಲಿ ಭಕ್ತರು ಜ್ಯೋತಿರ್ಲಿಂಗ ದರ್ಶನ ಮಾಡಲು ಬಯಸುತ್ತಾರೆ. ಅದೇ ರೀತಿ ತಮಿಳುನಾಡು ಹಾಗೂ ಆಂಧ್ರಪ್ರದೇಶದ ಪಂಚಭೂತ ಲಿಂಗ ಕ್ಷೇತ್ರಗಳಿಗೆ ಭೇಟಿ ನೀಡುತ್ತಾರೆ. ಈ ಕ್ಷೇತ್ರಗಳ ಬಗ್ಗೆ ಇಲ್ಲಿದೆ ಮಾಹಿತಿ.

(This copy first appeared in Hindustan Times Kannada website. To read more like this please logon to kannada.hindustantimes.com)