ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಮೋಹಿನಿ ಏಕಾದಶಿ 2024 ಯಾವಾಗ: ದಿನಾಂಕ, ಸಮಯ ಮತ್ತು ಉಪವಾಸ ವ್ರತದ ಮಹತ್ವ

ಮೋಹಿನಿ ಏಕಾದಶಿ 2024 ಯಾವಾಗ: ದಿನಾಂಕ, ಸಮಯ ಮತ್ತು ಉಪವಾಸ ವ್ರತದ ಮಹತ್ವ

Mohini Ekadashi 2024: ಈ ಬಾರಿಯ ಮೋಹಿನಿ ಏಕಾದಶಿಯಂದು ಅಮೃತ ಯೋಗ, ಸಿದ್ಧಿ ಯೋಗ ಮತ್ತು ಸಾಧ್ಯ ಯೋಗ ಏಕಾಕಲದಲ್ಲಿ ಬರುತ್ತಿವೆ. ಈ ಎಲ್ಲಾ ಯೋಗಗಳು ಮಂಗಳಕರವಾಗಿದೆ. ಹಾಗಿದ್ದರೆ ಈ ದಿನದ ವಿಶೇಷವೇನು ಎಂಬುದನ್ನು ನೋಡೋಣ.

ಮೋಹಿನಿ ಏಕಾದಶಿ 2024 ಯಾವಾಗ: ದಿನಾಂಕ, ಸಮಯ ಮತ್ತು ಉಪವಾಸ ವ್ರತದ ಮಹತ್ವ
ಮೋಹಿನಿ ಏಕಾದಶಿ 2024 ಯಾವಾಗ: ದಿನಾಂಕ, ಸಮಯ ಮತ್ತು ಉಪವಾಸ ವ್ರತದ ಮಹತ್ವ

ವರ್ಷವೊಂದರಲ್ಲಿ 24 ಏಕಾದಶಿ ಉಪವಾಸಗಳು ಬರುತ್ತವೆ. ಅಂದರೆ ಒಂದು ತಿಂಗಳಲ್ಲಿ ಎರಡು ಉಪವಾಸ ದಿನಗಳು ಇರುತ್ತವೆ. ಇದರಲ್ಲಿ ಒಂದು ಕೃಷ್ಣ ಪಕ್ಷದಲ್ಲಿ ಬಂದರೆ, ಇನ್ನೊಂದು ಶುಕ್ಲ ಪಕ್ಷ. ಗ್ರೆಗೋರಿಯನ್‌ ಕ್ಯಾಲೆಂಡರ್‌ ಪ್ರಕಾರ ಮೇ ತಿಂಗಳಲ್ಲಿ ಬರುವ ವೈಶಾಖ ಮಾಸದ ಶುಕ್ಲ ಪಕ್ಷದ ಏಕಾದಶಿಯನ್ನು ಮೋಹಿನಿ ಏಕಾದಶಿ (Mohini Ekadashi 2024) ಎಂದು ಕರೆಯಲಾಗುತ್ತದೆ. ಹಿಂದೂ ಧರ್ಮದಲ್ಲಿ, ಈ ಏಕಾದಶಿಗೆ ಭಾರಿ ಪ್ರಾಮುಖ್ಯತೆ ಇದೆ. ಜನರ ಧಾರ್ಮಿಕ ನಂಬಿಕೆಗಳ ಪ್ರಕಾರ, ಈ ದಿನವನ್ನು ಅತ್ಯಂತ ಮಂಗಳಕರವೆಂದು ಹೇಳಲಾಗುತ್ತದೆ. ಇದೇ ಕಾರಣಕ್ಕೆ ಏಕಾದಶಿಯಂದು ಉಪವಾಸ ವ್ರತ ಕೈಗೊಳ್ಳುವುದರಿಂದ ಎಲ್ಲಾ ಪಾಪಗಳು ದೂರವಾಗುತ್ತವೆ ಎಂಬ ನಂಬಿಕೆ ಇದೆ. ಸರಿಯಾದ ವ್ರತಾಚರಣೆ ಕೈಗೊಂಡರೆ ಸಂತೋಷ ಮನೆಯಲ್ಲಿ ಹರಡುತ್ತದೆ ಎನ್ನಲಾಗಿದೆ. ಜೊತೆಗೆ ಜೀವನದಲ್ಲಿ ಅದೃಷ್ಟವಂತರಾಗುತ್ತಾರೆ ಎಂಬುದು ಅನಾದಿಕಾಲದಿಂದಲೂ ಜನರು ಹೊಂದಿರುವ ಆಳವಾದ ನಂಬಿಕೆ.

ಸಾಮಾನ್ಯವಾಗಿ, ಏಕಾದಶಿಯು ವಿಷ್ಣುವಿಗೆ ಸಮರ್ಪಿತವಾಗಿದೆ. ಈ ದಿನದಂದು ವಿಷ್ಣುವಿನ ಆರಾಧನೆ ಮಾಡಲಾಗುತ್ತದೆ. ಹಿಂದೂ ಕ್ಯಾಲೆಂಡರ್‌ ಪ್ರಕಾರ, ಈ ಬಾರಿಯ ಮೋಹಿನಿ ಏಕಾದಶಿಯನ್ನು ಮೇ 19ರಂದು ಆಚರಿಸಲಾಗುತ್ತದೆ. ಏಕಾದಶಿ ತಿಥಿಯು ಮೇ 18ರ ಬೆಳಗ್ಗೆ 11:23ಕ್ಕೆ ಆರಂಭವಾಗುತ್ತದೆ. ಆ ಬಳಿಕ ಮೇ 19ರಂದು ಮಧ್ಯಾಹ್ನ 1:50ಕ್ಕೆ ಕೊನೆಗೊಳ್ಳುತ್ತದೆ. ಮೇ 19ರಂದು ಉಪವಾಸ ವ್ರತ ಆಚರಿಸಲಾಗುತ್ತದೆ.

ಮೂರು ಯೋಗಗಳು

ಈ ಬಾರಿಯ ಮೋಹಿನಿ ಏಕಾದಶಿ ಇನ್ನಷ್ಟು ವಿಶೇಷವಾಗಿದೆ. ಇದೇ ದಿನದಂದು ಅಮೃತ ಯೋಗ, ಸಿದ್ಧಿ ಯೋಗ ಮತ್ತು ಸಾಧ್ಯ ಯೋಗ ಏಕಾಕಲದಲ್ಲಿ ಬರುತ್ತಿವೆ. ವಿಶೇಷ ದಿನದ ಈ ಎಲ್ಲಾ ಯೋಗಗಳನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಹೀಗಾಗಿ ಈ ಬಾರಿಯ ಮೋಹಿನಿ ಏಕಾದಶಿಯಂದು ಜನರು ಉಪವಾಸ ವ್ರತವನ್ನು ಶಿಸ್ತಿನಿಂದ ಆಚರಿಸುತ್ತಾರೆ.

ಇದನ್ನೂ ಓದಿ | ಶ್ರೀರಾಮನನ್ನು ಮರ್ಯಾದಾ ಪುರುಷೋತ್ತಮ ಎಂದು ಕರೆಯಲು ಕಾರಣಗಳೇನು; ರಾಮನಿಗೆ ಈ ಗೌರವ ಯಾಕೆ? ಇಲ್ಲಿದೆ ಮಾಹಿತಿ

ಅಮೃತ ಯೋಗವು ಮೇ 18ರಂದು ಸಂಜೆ 07:21ರಿಂದ 08:25ರವರೆಗೆ ಜಾರಿಯಲ್ಲಿರುತ್ತದೆ. ಆ ಬಳಿಕ ಸಿದ್ಧಿ ಯೋಗವು ಮಧ್ಯರಾತ್ರಿ12:25ರಿಂದ ಸಂಜೆ 06:16ರವರೆಗೆ ರೂಪುಗೊಳ್ಳುತ್ತದೆ. ಅಂತಿಮವಾಗಿ, ಸಾಧ್ಯ ಯೋಗವು ಬೆಳಗ್ಗೆ 06:16ಕ್ಕೆ ಆರಂಭಗೊಂಡು 07:08ರವರೆಗೆ ಇರುತ್ತದೆ. ಈ ಯೋಗಗಳ ಸಮಯದಲ್ಲಿ, ಮೋಹಿನಿ ಏಕಾದಶಿ ಉಪವಾಸ ಕೈಗೊಳ್ಳುವುದು ಮಂಗಳಕರ ಎಂದು ಪರಿಗಣಿಸಲಾಗುತ್ತದೆ.

ಈ ಸಮಯದಲ್ಲಿ ವಿಷ್ಣುವಿನ ಆರಾಧನೆಗೂ ಮಹತ್ವವಿದೆ. ಮೋಹಿನಿ ಏಕಾದಶಿಯಂದು ಸಂಪೂರ್ಣ ವಿಧಿ ವಿಧಾನಗಳೊಂದಿಗೆ ವಿಷ್ಣುವನ್ನು ಪೂಜಿಸಲಾಗುತ್ತದೆ. ನಸುಕಿನ ಜಾವ ಬೇಗನೆ ಎದ್ದು ಬ್ರಾಹ್ಮೀ ಮುಹೂರ್ತದಲ್ಲಿ ಸ್ನಾನ ಮಾಡಿ ವಿಷ್ಣುವಿನ ಪೂಜಾ ಕೈಂಕರ್ಯದಲ್ಲಿ ತೊಡಗುತ್ತರೆ. ಇಷ್ಟಾರ್ಥಗಳನ್ನು ಪ್ರಾರ್ಥಿಸಿ ಉಪವಾಸ ಆರಂಭಿಸಲಾಗುತ್ತದೆ.