Mokshada Ekadashi: ಬದುಕಿನ ಸಂಕಷ್ಟಗಳೆಲ್ಲಾ ದೂರಾಗಿ, ವಿಷ್ಣುವಿನ ಅನುಗ್ರಹ ಸಿಗಬೇಕು ಅಂದ್ರೆ ಮೋಕ್ಷದ ಏಕಾದಶಿ ದಿನ ಈ ಕ್ರಮ ಪಾಲಿಸಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Mokshada Ekadashi: ಬದುಕಿನ ಸಂಕಷ್ಟಗಳೆಲ್ಲಾ ದೂರಾಗಿ, ವಿಷ್ಣುವಿನ ಅನುಗ್ರಹ ಸಿಗಬೇಕು ಅಂದ್ರೆ ಮೋಕ್ಷದ ಏಕಾದಶಿ ದಿನ ಈ ಕ್ರಮ ಪಾಲಿಸಿ

Mokshada Ekadashi: ಬದುಕಿನ ಸಂಕಷ್ಟಗಳೆಲ್ಲಾ ದೂರಾಗಿ, ವಿಷ್ಣುವಿನ ಅನುಗ್ರಹ ಸಿಗಬೇಕು ಅಂದ್ರೆ ಮೋಕ್ಷದ ಏಕಾದಶಿ ದಿನ ಈ ಕ್ರಮ ಪಾಲಿಸಿ

ಪ್ರತಿವರ್ಷ ಮಾರ್ಗಶಿರ ಮಾಸ ಶುಕ್ಲಪಕ್ಷದ ಏಕಾದಶಿ ತಿಥಿಯನ್ನು ಮೋಕ್ಷದ ಏಕಾದಶಿ ಎಂದು ಕರೆಯಲಾಗುತ್ತದೆ. ನಾಳೆ ಅಂದರೆ ಡಿಸೆಂಬರ್ 11ಕ್ಕೆ ಮೋಕ್ಷದ ಏಕಾದಶಿ ಇದೆ. ಈ ದಿನ ಕೆಲವು ಕ್ರಮಗಳನ್ನು ಪಾಲಿಸುವುದರಿಂದ ಬದುಕಿನ ಸಂಕಷ್ಟಗಳೆಲ್ಲಾ ದೂರಾಗುತ್ತವೆ. ವಿಷ್ಣುವಿನ ಅನುಗ್ರಹ ಪಡೆಯಲು ಏನೆಲ್ಲಾ ಕ್ರಮಗಳನ್ನು ಅನುಸರಿಸಬೇಕು ಎಂಬ ವಿವರ ಇಲ್ಲಿದೆ.

ಮೋಕ್ಷದ ಏಕಾದಶಿ
ಮೋಕ್ಷದ ಏಕಾದಶಿ

ಮೋಕ್ಷದ ಏಕಾದಶಿಯನ್ನು ಮೋಕ್ಷವನ್ನು ನೀಡುವ ಏಕಾದಶಿ ಎಂದೂ ಕರೆಯಲಾಗುತ್ತದೆ. ಹಿಂದೂಗಳು ಈ ದಿನದಂದು ವಿಷ್ಣು ಹಾಗೂ ಲಕ್ಷ್ಮೀದೇವಿಯ ಪೂಜೆ ಮಾಡುತ್ತಾರೆ. ಈ ಏಕಾದಶಿಯಂದು ತುಳಸಿ ಗಿಡವನ್ನು ಪೂಜಿಸುವುದರಿಂದ ಉದ್ದೇಶಿತ ಬಯಕೆಗಳು ಈಡೇರುವುದರ ಜೊತೆಗೆ ಕೆಲವು ಪ್ರಯೋಜನಗಳನ್ನು ಪಡೆಯಬಹುದು ಎಂಬ ನಂಬಿಕೆ ಇದೆ.

ಪ್ರತಿ ವರ್ಷ ಮಾರ್ಗಶಿರ ಮಾಸದಲ್ಲಿ ಬರುವ ಶುಕ್ಲಪಕ್ಷ ಏಕಾದಶಿ ತಿಥಿಯನ್ನು ಮೋಕ್ಷದ ಏಕಾದಶಿ ಎಂದು ಕರೆಯಲಾಗುತ್ತದೆ. ಈ ದಿನ ಉಪವಾಸದ ಜೊತೆಗೆ ಭಗವಾನ್ ವಿಷ್ಣು ಮತ್ತು ವಿಶೇಷವಾಗಿ ತುಳಸಿ ಗಿಡವನ್ನು ಪೂಜಿಸಬೇಕು. ತುಳಸಿ ಗಿಡವನ್ನು ಪೂಜಿಸುವುದರಿಂದ ಭಗವಾನ್ ವಿಷ್ಣು ಪ್ರಸನ್ನನಾಗುತ್ತಾನೆ. ಅವನು ಆಶೀರ್ವದಿಸುತ್ತಾನೆ ಎಂದು ಹಿಂದೂಗಳು ನಂಬುತ್ತಾರೆ.

ವಿಷ್ಣು ಮತ್ತು ತುಳಸಿ ಪೂಜೆ ಏಕೆ?

ಏಕಾದಶಿಯಂದು ತುಳಸಿ ಗಿಡವನ್ನು ಪೂಜಿಸುವುದರಿಂದ ವಿಷ್ಣು ಮತ್ತು ಲಕ್ಷ್ಮೀದೇವಿ ನಮ್ಮ ಇಷ್ಟಾರ್ಥಗಳನ್ನು ಪೂರೈಸುತ್ತಾರೆ. ಆದ್ದರಿಂದ ಈ ಏಕಾದಶಿಯಂದು ಹಲವು ಹಿಂದೂಗಳು ತುಳಸಿ ಗಿಡವನ್ನು ವಿಶೇಷವಾಗಿ ಪೂಜಿಸುತ್ತಾರೆ. ಸಂತೋಷ ಮತ್ತು ಸಮೃದ್ಧಿಗಾಗಿ ತುಳಸಿ ಗಿಡವನ್ನು ಪೂಜಿಸಬೇಕು. ತುಳಸಿ ಗಿಡಕ್ಕೆ ಸಂಬಂಧಿಸಿದ ಕೆಲವು ಪರಿಹಾರಗಳನ್ನು ಸಹ ಇಂದು ಮಾಡಲಾಗುತ್ತದೆ. ಮೋಕ್ಷದ ಏಕಾದಶಿಯಂದು ತುಳಸಿ ಗಿಡವನ್ನು ಪೂಜಿಸುವುದರಿಂದ ಸಮಸ್ಯೆಗಳು ನಿವಾರಣೆಯಾಗುತ್ತವೆ. ಹಣಕಾಸಿನ ಸಮಸ್ಯೆ ನಿವಾರಣೆಗೂ ಇದು ಪರಿಹಾರ.

ಈ ಪರಿಹಾರಗಳನ್ನು ಅನುಸರಿಸಿ

ವಿಷ್ಣುವಿನ ಆಶೀರ್ವಾದ ಪಡೆಯಲು ಮೋಕ್ಷದ ಏಕಾದಶಿಯಂದು ಕೆಲವು ಪರಿಹಾರಗಳನ್ನು ಮಾಡುವುದು ಸೂಕ್ತ. ಆಗ ನಿಮ್ಮ ಎಲ್ಲಾ ಸಮಸ್ಯೆಗಳು ಪರಿಹಾರವಾಗುತ್ತವೆ.

ವಿಷ್ಣುವನ್ನು ಮೆಚ್ಚಿಸಲು: ವಿಷ್ಣುವನ್ನು ಮೆಚ್ಚಿಸಲು ಅಕ್ಕಿ ಪಾಯಸವನ್ನು ನೈವೇದ್ಯ ಮಾಡಿ. ಪಾಯಸವನ್ನು ನೀಡುವಾಗ ತುಳಸಿಯ ಸೊಪ್ಪನ್ನು ಸಹ ಅರ್ಪಿಸಿ. ವಿಷ್ಣುವಿನ ಕೃಪೆ ದೊರೆತು ಯೋಜಿತ ಕೆಲಸಗಳು ನಡೆಯುತ್ತವೆ. ಆಸೆಗಳು ಈಡೇರುತ್ತವೆ.

ಆರ್ಥಿಕ ಸಮಸ್ಯೆಗಳಿಂದ ಮುಕ್ತಿ ಹೊಂದಲು: ತುಳಸಿ ಗಿಡಕ್ಕೆ ಇಂದೇ ನೀರು ಹಾಕಿ. ತುಳಸಿ ಗಿಡಕ್ಕೆ ಹಸಿ ಹಸುವಿನ ಹಾಲಿನೊಂದಿಗೆ ಅರ್ಘ್ಯವನ್ನು ಅರ್ಪಿಸಿದ ನಂತರ ತುಳಸಿ ಗಿಡದ ಸುತ್ತಲೂ ಏಳು ಪ್ರದಕ್ಷಿಣೆಗಳನ್ನು ಮಾಡಿ. ಆಗ ಎಲ್ಲಾ ಹಣಕಾಸಿನ ಸಮಸ್ಯೆಗಳೂ ದೂರವಾಗುತ್ತವೆ.

ಅಡೆತಡೆಗಳು ಮತ್ತು ದುಃಖಗಳನ್ನು ತೊಡೆದುಹಾಕಲು: ಅಡೆತಡೆಗಳು ಮತ್ತು ದುಃಖಗಳನ್ನು ತೊಡೆದುಹಾಕಲು ಭಗವಾನ್ ವಿಷ್ಣುವನ್ನು ಪ್ರಸನ್ನಗೊಳಿಸಬೇಕು. ಅದಕ್ಕಾಗಿ ಮೋಕ್ಷದ ಏಕಾದಶಿಯಂದು ತುಳಸಿ ಜಪಗಳೊಂದಿಗೆ ವಿಷ್ಣುವಿನ ನಾಮಗಳನ್ನು ಪಠಿಸಿ. ಹೀಗೆ ಮಾಡುವುದರಿಂದ ಅದೃಷ್ಟವೂ ಬರುತ್ತದೆ.

ಹಣಕಾಸಿನ ತೊಂದರೆ ನಿವಾರಣೆ: ಆರ್ಥಿಕ ಸಮಸ್ಯೆಗಳು ದೂರವಾಗಿ ಸಂಪತ್ತು ಪಡೆಯಲು ಮೋಕ್ಷದ ಏಕಾದಶಿಯಂದು ತುಳಸಿ ಎಲೆಗಳನ್ನು ಕಬ್ಬಿನ ರಸದಲ್ಲಿ ಹಾಕಿ ವಿಷ್ಣುವಿಗೆ ಅಭಿಷೇಕ ಮಾಡಿ.

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.