ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ನಿಮ್ಮ ಉಗುರು ಉದ್ದವಿದ್ದು ತೆಳ್ಳಗಿದ್ಯಾ, ಆಕಾರವಿಲ್ಲದ ಉಗುರು ನಿಮ್ಮದಾ; ಹಾಗಿದ್ರೆ ಜ್ಯೋತಿಷ್ಯದ ಪ್ರಕಾರ ನಿಮ್ಮ ಸ್ವಭಾವ ತಿಳಿಯಿರಿ

ನಿಮ್ಮ ಉಗುರು ಉದ್ದವಿದ್ದು ತೆಳ್ಳಗಿದ್ಯಾ, ಆಕಾರವಿಲ್ಲದ ಉಗುರು ನಿಮ್ಮದಾ; ಹಾಗಿದ್ರೆ ಜ್ಯೋತಿಷ್ಯದ ಪ್ರಕಾರ ನಿಮ್ಮ ಸ್ವಭಾವ ತಿಳಿಯಿರಿ

ಜ್ಯೋತಿಷ್ಯಶಾಸ್ತ್ರದಲ್ಲಿ ಉಗುರಿಗೂ ಬಹಳ ಪ್ರಾಮುಖ್ಯತೆ ಇದೆ. ಶನಿಯನ್ನು ಉಗುರಿನ ಅಧಿಪತಿ ಎಂದು ಪರಿಗಣಿಸಲಾಗಿದೆ. ಹಾಗೇ ಉಗುರುಗಳು ಸೌಂದರ್ಯವನ್ನು ಪ್ರತಿನಿಧಿಸುತ್ತದೆ. ಶುಕ್ರ, ಸೌಂದರ್ಯದ ದೇವತೆಯಾಗಿದ್ದಾನೆ. ಉಗುರಿನ ಆಕಾರ ನೋಡಿ ಆ ವ್ಯಕ್ತಿಗಳ ಸ್ವಭಾವ ಹೇಗೆ ಎಂದು ಗುರುತಿಸಿಬಹುದು. (ಬರಹ: ಎಚ್‌. ಸತೀಶ್‌, ಜ್ಯೋತಿಷಿ)

ನಿಮ್ಮ ಉಗುರು ಉದ್ದವಿದ್ದು ತೆಳ್ಳಗಿದ್ಯಾ, ಜ್ಯೋತಿಷ್ಯದ ಪ್ರಕಾರ ನಿಮ್ಮ ಸ್ವಭಾವ ತಿಳಿಯಿರಿ
ನಿಮ್ಮ ಉಗುರು ಉದ್ದವಿದ್ದು ತೆಳ್ಳಗಿದ್ಯಾ, ಜ್ಯೋತಿಷ್ಯದ ಪ್ರಕಾರ ನಿಮ್ಮ ಸ್ವಭಾವ ತಿಳಿಯಿರಿ (PC: Unsplash/ Canva)

ನಮ್ಮ ದೇಹದ ಅಂಗಾಂಗಗಳು ನಮ್ಮ ವ್ಯಕ್ತಿತ್ವವನ್ನು ಸೂಚಿಸುತ್ತವೆ. ಹಣೆ, ಕಣ್ಣು, ಮೂಗು, ಕಿವಿ ಹೀಗೆ ಪ್ರತಿಯೊಂದು ಭಾಗವು ತಮ್ಮ ಗುಣಸ್ವಭಾವ ಹೇಗೆ ಎಂಬುದನ್ನು ನಮಗೆ ಪರಿಚಯ ಮಾಡಿಕೊಡುತ್ತವೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಉಗುರುಗಳಿಗೂ ಮಹತ್ವವಿದೆ. ನಮ್ಮ ಉಗುರಿನ ಆಕಾರವು ನಮ್ಮ ಸ್ವಭಾವವನ್ನು ತಿಳಿಸುತ್ತವೆ. ಇಂದಿನ ಲೇಖನದಲ್ಲಿ ಉದ್ದ ತೆಳ್ಳನೆಯ ಉಗುರು ಹಾಗೂ ಸರಿಯಾದ ಆಕಾರವಿಲ್ಲದ ಉಗುರನ್ನು ಹೊಂದಿರುವ ವ್ಯಕ್ತಿಗಳ ಗುಣಸ್ವಭಾವ ತಿಳಿದುಕೊಳ್ಳಿ.

ಉಗುರು ಉದ್ದವಿದ್ದು ತೆಳ್ಳಗಿದ್ರೆ

ಉಗುರುಗಳು ಉದ್ದವಾಗಿದ್ದೂ ತೆಳುವಾಗಿದ್ದರೆ ಅಂತಹ ವ್ಯಕ್ತಿಗಳು ಸಣ್ಣ ಪುಟ್ಟ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸುತ್ತಾರೆ. ಸಾಮಾನ್ಯವಾಗಿ ಇವರು ಭಯದ ವಾತಾವರಣದಲ್ಲಿ ಬೆಳೆಯುತ್ತಾರೆ. ಉತ್ತಮ ಪ್ರಯತ್ನಗಳಿದ್ದರೂ ಅದರಿಂದ ಫಲಿತಾಂಶ ಬರುವ ವೇಳೆ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ. ಇವರ ವಿಶೇಷ ಗುಣವೆಂದರೆ ತಾವು ಯೋಚನೆ ಮಾಡುವುದಲ್ಲದೇ ಸುತ್ತಮುತ್ತಲಿದ್ದವರಿಗೂ ಚಿಂತೆಯನ್ನು ಹಂಚುತ್ತಾರೆ. ಮನದಲ್ಲಿರುವ ಆಸೆ ಆಕಾಂಕ್ಷೆಗಳನ್ನು ಯಾರೊಂದಿಗೂ ಹೇಳಿಕೊಳ್ಳುವುದಿಲ್ಲ. ಆದ್ದರಿಂದ ಜೀವನದಲ್ಲಿ ನಿರಾಸೆ ಹೆಚ್ಚಾಗಿರುತ್ತದೆ. ಇವರ ಮನಸ್ಸನ್ನು ಅರಿಯುವ ಜನರಿದ್ದರೆ ಅವರು ಸುಖಜೀವನ ನಡೆಸುತ್ತಾರೆ. ಇವರ ಆತ್ಮವಿಶ್ವಾಸವನ್ನು ಹೆಚ್ಚಿಸುವಂತಹ ಪರಿಸರದಲ್ಲಿ ಕಾಲಕಳೆಯುತ್ತಾರೆ.

ಅತಿ ಸರಳವಾದ ವಿಚಾರಗಳನ್ನು ಸಹ ಸುಲಭವಾಗಿ ಅರ್ಥ ಮಾಡಿಕೊಳ್ಳುವುದಿಲ್ಲ.ಇವರಲ್ಲಿ ಸೋಮಾರಿತನ ಇರುವುದಿಲ್ಲ. ಆದರೆ ಕೆಲಸ ಕಾರ್ಯಗಳನ್ನು ಸುಲಭವಾಗಿ ಆರಂಭಿಸುವುದಿಲ್ಲ. ಎಂದೋ ಉಂಟಾದ ಅಪಜಯ ಸದಾ ನೆನಪಿಗೆ ಬರುತ್ತದೆ. ಆದರೆ ಇವರ ಜೊತೆಗಿರುವ ಜನರು ಕ್ರಿಯಾಶೀಲರಾದಲ್ಲಿ ಅವರೊಂದಿಗೆ ಇವರು ಸಹ ಯಶಸ್ಸಿನತ್ತ ಸಾಗುತ್ತಾರೆ. ಸಾಮಾನ್ಯವಾಗಿ ಇಂತಹ ವ್ಯಕ್ತಿಗಳ ಜಾತಕದಲ್ಲಿ ಚಂದ್ರನು ವೃಶ್ಚಿಕ ರಾಶಿಯಲ್ಲಿ ಇರುತ್ತಾನೆ. ಸತತ ಪ್ರಯತ್ನದಿಂದ ತಮ್ಮ ಕೆಲಸ ಕಾರ್ಯಗಳಲ್ಲಿ ಇವರು ಯಶಸ್ವಿಯಾಗುತ್ತಾರೆ. ಸಂಗಾತಿಯ ಸಹಾಯವಿರುವ ಕಾರಣ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಉದ್ಯೋಗದಲ್ಲಿ ಸಹೋದ್ಯೋಗಿಗಳ ಸಹಕಾರ ಅತಿ ಮುಖ್ಯ. ಮಾನಸಿಕ ಒತ್ತಡ ಮತ್ತು ಹೆದರಿಕೆ ವಿನಹ ಇನ್ನಾವುದೇ ರೀತಿಯ ಅನಾರೋಗ್ಯ ಇವರನ್ನು ಕಾಡುವುದಿಲ್ಲ. ಆರೋಗ್ಯವನ್ನು ಕಾಪಾಡಿಕೊಳ್ಳಲು ದೈಹಿಕ ಕಸರತ್ತನ್ನು ಮಾಡುತ್ತಾರೆ. ಸ್ತ್ರೀಯರು ಸುಲಭವಾಗಿ ಸುತ್ತಮುತ್ತಲಿನ ಜನರ ಅನುಕಂಪವನ್ನು ಗಳಿಸುತ್ತಾರೆ. ಗುಟ್ಟಾಗಿ ಆತ್ಮವಿಶ್ವಾಸದಿಂದ ತಮ್ಮ ಕೆಲಸವನ್ನು ಸಾಧಿಸುತ್ತಾರೆ. ಇಂತಹ ವ್ಯಕ್ತಿಗಳಲ್ಲಿ ಆಸೆ ಮತ್ತು ನಿರೀಕ್ಷೆಗಳು ಹೆಚ್ಚಾಗಿರುತ್ತವೆ. ಹಠದಿಂದಾಗಿ ನಿರೀಕ್ಷಿಸಿದ ಮಟ್ಟವನ್ನು ತಲುಪುತ್ತಾರೆ. ಉದ್ಯೋಗ ಕ್ಷೇತ್ರದಲ್ಲಿ ಹಿರಿಯ ಅಧಿಕಾರಿಗಳ ಅನುಕಂಪ ಗಳಿಸುತ್ತಾರೆ.

ಉಗುರು ಆಕಾರಗೆಟ್ಟಿದ್ದರೆ

ಉಗುರುಗಳು ಉದ್ದವಾಗಿದ್ದರೂ ಸರಿಯಾದ ರೂಪವಿರುವುದಿಲ್ಲ. ಸಾಮಾನ್ಯವಾಗಿ ಅಂತಹ ವ್ಯಕ್ತಿಗಳು ಬೇರೆಯವರ ಕೆಲಸ ಕಾರ್ಯಗಳನ್ನು ಟೀಕಿಸುತ್ತಾರೆ. ಇವರಲ್ಲಿನ ಕುಹಕನಗೆ, ಕುಹಕ ಬುದ್ಧಿ ಮತ್ತು ಕಟು ಮಾತುಗಳು ಬೇರೆಯವರಲ್ಲಿ ಬೇಸರವನ್ನು ಉಂಟುಮಾಡುತ್ತದೆ. ಸಾಮಾನ್ಯವಾಗಿ ಇವರು ಯಾರೊಂದಿಗೂ ಹೊಂದಿಕೊಂಡು ನಡೆಯಲಾರರು. ಆದರೆ ಬೇರೆಯವರು ಇವರನ್ನು ಪ್ರೀತಿ ವಿಶ್ವಾಸದಿಂದ ಕಾಣುತ್ತಾರೆ. ಆದ್ದರಿಂದ ಇವರ ಜೀವನ ಸುಖ ಶಾಂತಿಯಿಂದ ಕೂಡಿರುತ್ತದೆ. ಇವರ ಕೈಕಾಲುಗಳಲ್ಲಿ ಶಕ್ತಿಯ ಕೊರತೆ ಕೊಂಡುಬರುತ್ತದೆ. ಎಲ್ಲಾ ರೀತಿಯ ಅನುಕೂಲತೆಗಳು ಇದ್ದರೂ ಮನಸ್ಸಿಗೆ ನೆಮ್ಮದಿ ಇರುವುದಿಲ್ಲ. ಇದಕ್ಕೆ ಕಾರಣ ಇವರ ಹೆಚ್ಚಿನ ಆಸೆ ಆಕಾಂಕ್ಷೆಗಳು. ತಮ್ಮ ತಪ್ಪನ್ನು ಮುಚ್ಚಿಡಲು ಬೇರೆಯವರು ಮಾಡುವ ಸಣ್ಣ ತಪ್ಪನ್ನು ದೊಡ್ಡದು ಮಾಡುತ್ತಾರೆ. ಇವರಿಗೆ ಅಸಾಧಾರಣವಾದ ಧೈರ್ಯವಿರುತ್ತದೆ. ಯಾವುದೇ ಅಪಾಯದ ಸನ್ನಿವೇಶದಲ್ಲೂ ಸೋಲದೇ ಗೆಲುವಿನತ್ತ ಮುಂದುವರೆಯುತ್ತಾರೆ. ಇವರಿಗೆ ಲಾಭವಿಲ್ಲದ ಯಾವುದೇ ಕೆಲಸವನ್ನು ಮಾಡುವುದಿಲ್ಲ. ಹಣಕಾಸಿನ ಕೊರತೆ ಎಂದಿಗೂ ಬಾರದು. ಸಂಗಾತಿಯೊಂದಿಗೆ ಉತ್ತಮ ಬಾಂಧವ್ಯ ರೂಪಗೊಳ್ಳುತ್ತದೆ. ಮಕ್ಕಳಿಗಾಗಿ ಯಾವುದೇ ತ್ಯಾಗವನ್ನು ಮಾಡಲು ಸಿದ್ಧರಾಗುತ್ತಾರೆ. ತಮ್ಮ ಭವಿಷ್ಯದ ಸುಖ ಜೀವನಕ್ಕಾಗಿ ಹಣವನ್ನು ಉಳಿತಾಯ ಮಾಡುತ್ತಾರೆ. ಹಣಕಾಸಿನ ವಿಚಾರದಲ್ಲಿ ಯಾರಿಗೂ ಮೋಸ ಮಾಡುವುದಿಲ್ಲ. ನಿಮ್ಮ ಮನಸ್ಸನ್ನು ಗೆದ್ದವರಿಗೆ ಹಣದ ಸಹಾಯ ಮಾಡುವಿರಿ.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).