Numerology: ಸೋತಾಗ ಆತ್ಮವಿಶ್ವಾಸ ಕಳೆದುಕೊಳ್ಳುವುದಿಲ್ಲ, ಭಯವೆಂಬುದೇ ಇರುವುದಿಲ್ಲ; 28ನೇ ತಾರೀಕು ಜನಿಸಿದವರ ಗುಣಸ್ವಭಾವ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Numerology: ಸೋತಾಗ ಆತ್ಮವಿಶ್ವಾಸ ಕಳೆದುಕೊಳ್ಳುವುದಿಲ್ಲ, ಭಯವೆಂಬುದೇ ಇರುವುದಿಲ್ಲ; 28ನೇ ತಾರೀಕು ಜನಿಸಿದವರ ಗುಣಸ್ವಭಾವ

Numerology: ಸೋತಾಗ ಆತ್ಮವಿಶ್ವಾಸ ಕಳೆದುಕೊಳ್ಳುವುದಿಲ್ಲ, ಭಯವೆಂಬುದೇ ಇರುವುದಿಲ್ಲ; 28ನೇ ತಾರೀಕು ಜನಿಸಿದವರ ಗುಣಸ್ವಭಾವ

Birth Date Astrology: ಯಾವುದೇ ವ್ಯಕ್ತಿಯ ಗ್ರಹಗತಿಗಳನ್ನು ನೋಡುವಾಗ ಜನ್ಮ ದಿನಾಂಕವನ್ನು ಪರಿಗಣಿಸಲಾಗುತ್ತದೆ. ಅದರ ಆಧಾರದ ಮೇಲೆ ವ್ಯಕ್ತಿಯ ಭವಿಷ್ಯ ಹೇಗಿರಬಹುದು ಎಂದು ಅಂದಾಜಿಸಲಾಗುತ್ತದೆ. ಅದೇ ರೀತಿ ಒಬ್ಬ ವ್ಯಕ್ತಿಯ ಜನ್ಮ ದಿನಾಂಕದ ಆಧಾರದ ಮೇಲೆಯೂ ಅವರ ಗುಣಧರ್ಮ ಹೇಗಿದೆ ಎಂಬುದನ್ನು ಹೇಳಬಹುದು. 28ನೇ ತಾರೀಖಿನಂದು ಜನಿಸಿದವರ ಗುಣಲಕ್ಷಣ ತಿಳಿಯಿರಿ.

28ನೇ ತಾರೀಖಿನಂದು ಜನಿಸಿದವರ ಗುಣ ಸ್ವಭಾವ
28ನೇ ತಾರೀಖಿನಂದು ಜನಿಸಿದವರ ಗುಣ ಸ್ವಭಾವ

ಈ ದಿನಾಂಕದಲ್ಲಿ ಜನಿಸಿರುವವರು ಸಮಯಕ್ಕೆ ಹೆಚ್ಚಿನ ಗೌರವವನ್ನು ನೀಡುವರು. ಯಾವುದಾದರೂಂದು ಹೊಸ ವಿಚಾರಗಳನ್ನು ಕಲಿಯುವಲ್ಲಿ ಮೊದಲಿಗರಾಗುತ್ತಾರೆ. ಆದರೆ ಸುಲಭವಾಗಿ ಯಾವುದೇ ಕೆಲಸವನ್ನು ಆರಂಭಿಸುವುದಿಲ್ಲ. ಕೈಗೊಂಡ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಗಳಿಸುತ್ತಾರೆ. ಸೋಲುವ ಸಂದರ್ಭದಲ್ಲಿಯೂ ಭಯಪಡದೆ ಗೆಲುವಿಗಾಗಿ ಶ್ರಮಿಸುತ್ತಾರೆ. ಕೇವಲ ತಾವು ಸುಖವಾಗಿರುವುದಲ್ಲದೆ ಬೇರೆಯವರ ಸುಖ-ಶಾಂತಿಗೂ ಕಾರಣರಾಗುವರು. ಆಪತ್ಕಾಲಕ್ಕಾಗಿ ಗೆಲುವಿಗಾಗಿ ಗುರುಗಳ ಸಹಾಯವನ್ನು ಪಡೆಯುವರು. ಚಿಕ್ಕ ವಯಸ್ಸಿನಲ್ಲಿ ಸಾಮಾನ್ಯದಂತೆ ಕಂಡರು ಕಾಲಕ್ರಮೇಣ ಉನ್ನತ ಸ್ಥಾನವನ್ನು ಗಳಿಸುತ್ತಾರೆ. ವಯಸ್ಸಿನ ಅಂತರವಿಲ್ಲದೆ ಆಧುನಿಕ ತಂತ್ರಜ್ಞಾನವನ್ನು ಆಳವಾಗಿ ಅಧ್ಯಯನ ಮಾಡುವರು. ಮರೆತು ಹೋದ ವಿಚಾರಗಳನ್ನು ನೆನಪಿಸಿಕೊಳ್ಳುವ ತಂತ್ರ ಇವರಿಗೆ ತಿಳಿದಿರುತ್ತದೆ.

ಕೇವಲ ಸ್ವಂತ ಕೆಲಸವನ್ನಷ್ಟೇ ಅಲ್ಲದೆ ಆತ್ಮೀಯರ ಕೆಲಸವನ್ನು ಯಶಸ್ವಿಯಾಗಿ ಪೂರ್ಣಗೊಳಿಸುತ್ತಾರೆ. ಇವರು ಕೇವಲ ಪುಸ್ತಕ ಹುಳುಗಳಂತೆ ವರ್ತಿಸುವುದಿಲ್ಲ. ಒಮ್ಮೆ ನೋಡಿದ ವಿಚಾರವನ್ನು ಆಳವಾಗಿ ಅಭ್ಯಾಸ ಮಾಡುವರು. ಇವರು ನಿದ್ದೆ ಮಾಡುವುದು ಕಡಿಮೆ. ಬಿಡುವಿನ ವೇಳೆಯಲ್ಲಿ ಯಾವುದಾದರೂ ಒಂದು ಹೊಸ ವಿಷಯವನ್ನು ಅರಿತುಕೊಳ್ಳುವ ಸಾಹಸ ಮಾಡುವರು. ಸಾಮಾನ್ಯವಾಗಿ ಇವರಿಗೆ ಅಸಾಧ್ಯ ಎನಿಸುವಂತಹ ಯಾವುದೇ ಕೆಲಸಗಳು ಇರುವುದಿಲ್ಲ. ಬಡವರಿಗೆ ಉಚಿತವಾಗಿ ತಮ್ಮಲ್ಲಿರುವ ಜ್ಞಾನವನ್ನು ಹಂಚುವ ಕೆಲಸ ಮಾಡುತ್ತಾರೆ.

28ನೇ ತಾರೀಖಿನಂದು ಜನಿಸಿದವರು ವ್ಯಾಯಾಮದ ಮೇಲೆ ಆಸಕ್ತಿ ಹೆಚ್ಚುತ್ತೆ

ಮಧ್ಯ ವಯಸ್ಸಿನ ನಂತರ ಕಲಿಕೆಯಲ್ಲಿ ಆಸಕ್ತಿಯು ಹೆಚ್ಚಾಗುತ್ತದೆ. ಆದರೆ ಹೊಸ ವಿಚಾರವನ್ನು ಕಲಿಯಲು ಆರಂಭಿಸಿದ ತಕ್ಷಣ ನಿದ್ದೆ ಆವರಿಸುತ್ತದೆ. ಆದ್ದರಿಂದ ಅವಶ್ಯಕವಾಗಿ ಇವರು ಯೋಗ ಪ್ರಾಣಾಯಾಮದಂತಹ ದೈಹಿಕ ವ್ಯಾಯಾಮವನ್ನು ಆರಂಭಿಸುತ್ತಾರೆ. ಮಂತ್ರತಂತ್ರಗಳಲ್ಲಿ ವಿಶೇಷವಾದಂತಹ ಆಸಕ್ತಿ ಬೆಳೆಯುತ್ತದೆ. ಸಮಾಜ ವಿರೋಧಿ ಚಟುವಟಿಕೆಗಳನ್ನು ಮಾಡುವವರನ್ನು ವಿರೋಧಿಸುತ್ತಾರೆ. ಇವರಿಗೆ ಭಯವೆಂಬುದೇ ಇರುವುದಿಲ್ಲ. ಒಮ್ಮೆ ತೆಗೆದುಕೊಂಡ ನಿರ್ಧಾರವನ್ನು ಯಾರ ಒತ್ತಡಕ್ಕೂ ಮಣಿದು ಬದಲಾಯಿಸುವುದಿಲ್ಲ.

ಸೋಲು ಗೆಲುವೆಂಬುದು ಇವರ ಜೀವನದಲ್ಲಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಆದ್ದರಿಂದ ಗೆದ್ದಾಗ ಮೆರೆದಾಡುವುದಿಲ್ಲ ಹಾಗೆಯೇ ಸೋತಾಗ ಆತ್ಮವಿಶ್ವಾಸವನ್ನು ಕಳೆದುಕೊಳ್ಳುವುದಿಲ್ಲ. ಸೋತ ವಿಚಾರವನ್ನು ಬದಿಗಿಟ್ಟು ಮತ್ತೊಮ್ಮೆ ಗೆಲುವಿನತ್ತ ಸರಿಯುತ್ತಾರೆ. ತಂದೆ ತಾಯಿ ಅಥವಾ ವಂಶದ ಹಿರಿಯ ವ್ಯಕ್ತಿಗಳ ಬಗ್ಗೆ ವಿಶೇಷ ಅಭಿಮಾನ ಮತ್ತು ಅನುಕಂಪ ಇರುತ್ತದೆ. ದೊಡ್ಡವರ ಮಾತನ್ನು ಮನಸ್ಸಿಟ್ಟು ಕೇಳುತ್ತಾರೆ. ಮನಸ್ಸಿಗೆ ಒಪ್ಪುವ ಸಲಹೆಯನ್ನು ಮಾತ್ರ ಸ್ವೀಕರಿಸುತ್ತಾರೆ. ಸಾಮಾನ್ಯವಾಗಿ ಒಮ್ಮೆ ಇವರು ತೆಗೆದುಕೊಳ್ಳುವ ನಿರ್ಧಾರಗಳನ್ನು ಬದಲಿಸಲು ಯಾರಿಂದಲೂ ಸಾಧ್ಯವಾಗುವುದಿಲ್ಲ. ಒಂದು ವೇಳೆ ಯಾರೇ ಆಗಲಿ ಬಲವಂತವಾಗಿ ತಮ್ಮ ಪ್ರಭಾವವನ್ನು ಬೀರಲು ಪ್ರಯತ್ನಿಸಿದರೆ ಕ್ಷಣ ಮಾತ್ರದಲ್ಲಿ ಅವರಿಂದ ದೂರವಾಗುತ್ತಾರೆ.

ತಾವಾಗಿಯೇ ತಮ್ಮಲ್ಲಿರುವ ವಿಚಾರಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳುತ್ತಾರೆ. ಪಾಠ ಕಲಿಸಿದ ಗುರುಗಳಿಗೆ ಬುದ್ಧಿ ಹೇಳುವ ಜನ. ಇವರ ಬಳಿ ಅಗಾದವಾದ ಪದಗಳ ಖಜಾನೆ ಇರುತ್ತದೆ. ಉತ್ತಮ ಬರಹಗಾರರು ಮತ್ತು ಕವಿಗಳು ಈ ದಿನಾಂಕದಲ್ಲಿ ಜನಿಸುತ್ತಾರೆ. ಸಂದರ್ಭಕ್ಕೆ ಸರಿಯಾಗಿ ಮಾತನಾಡಿ ನಗಿಸುವ ಹಾಸ್ಯಪ್ರಜ್ಞೆ ಇವರಲ್ಲಿ ಇರುತ್ತದೆ. ಬೇರೆಯವರ ಮನಸ್ಸನ್ನು ಅರಿಯುವಲ್ಲಿ ಯಶಸ್ಸು ಕಾಣುವಿರಿ. ಇವರಲ್ಲಿ ಅಂಜಿಕೆಗೆ ಸ್ಥಾನವೇ ಇರುವುದಿಲ್ಲ. ತಮಗೆ ಗೊತ್ತಿಲ್ಲದ ವಿಚಾರವನ್ನು ಊಹಿಸಿ ಹೇಳಿದರು ಅದು ನಿಜವಾಗುತ್ತದೆ. ಹಲವಾರು ಜನ ಆರಂಭದಲ್ಲಿಯೇ ಸೋಲೊಪ್ಪಿಕೊಂಡು ವಾದ ನಿಲ್ಲಿಸುತ್ತಾರೆ.

ಇವರಿಗೆ ಅರ್ಥವಾಗದಂತೆ ರಹಸ್ಯವಾಗಿ ಮಾತನಾಡುವ ಕಲೆ ಇವರಿಗೆ ಒಲಿದಿರುತ್ತದೆ. ಇವರ ವೈವಾಹಿಕ ಜೀವನ ಅರ್ಥಪೂರ್ಣವಾಗಿರುತ್ತದೆ. ಇವರ ಆಸೆ ಆಕಾಂಕ್ಷಿಗಳನ್ನು ಪೂರ್ಣಗೊಳಿಸುವಂತಹ ಸಂಗಾತಿ ಇವರಿಗೆ ದೊರೆಯುತ್ತಾರೆ. ಮೊದಲೇ ಪರಿಚಯ ಇರುವವರ ಜೊತೆಯಲ್ಲಿ ಅಥವಾ ಬಂಧು ಬಳಗದವರ ಜೊತೆಯಲ್ಲಿ ವಿವಾಹವಾಗುತ್ತದೆ. ಇಳಿವಯ್ಯಸ್ಸಿನಲ್ಲಿ ಇವರು ಸ್ವತಂತ್ರವಾಗಿ ಜೀವನ ನಡೆಸುತ್ತಾರೆ. ಮಕ್ಕಳನ್ನು ಸಹ ಇವರು ಆಶ್ರಯಿಸುವುದಿಲ್ಲ. ಜೀವನದುದ್ದಕ್ಕೂ ತಮ್ಮ ವಯಸ್ಸಿನ ಜನರೊಂದಿಗೆ ನಾಯಕರಂತೆ ಬಾಳುತ್ತಾರೆ. ಆರೋಗ್ಯದಲ್ಲಿ ತೊಂದರೆ ಉಂಟಾದರೂ ಆತ್ಮವಿಶ್ವಾಸದಿಂದ ಉತ್ತಮ ಆರೋಗ್ಯವನ್ನು ಮರಳಿ ಗಳಿಸುತ್ತಾರೆ. ಇವರೊಂದಿಗೆ ಸ್ನೇಹ ಸಂಬಂಧ ಬೆಳೆಸಿದವರೇ ಅದೃಷ್ಟವಂತರು.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್: 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.