ಅಮಾವಾಸ್ಯೆ ದಿನ ಇಲ್ಲಿ ಓಡಾಡಲು ಭಯ ಪಡುವುದು ಏಕೆ?; ಮೂರು ದಾರಿ ಸೇರಿದ ಸ್ಥಳ ಅಪಾಯಕಾರಿಯೇ, ಶುಭಫಲ ತಿಳಿಯಿರಿ
ಮೂರು ದಾರಿಗಳು ಕೂಡಿರುವ ಸ್ಥಳದಲ್ಲಿ ಓಡಾಡುವುದು ಒಳ್ಳೆಯದಲ್ವಾ? ಅಮಾವಾಸೆ ದಿನ ಆ ಕಡೆ ಹೋಗಲು ಕೆಲವರು ಭಯ ಪಡೋದು ಯಾಕೆ? ಮೂರು ದಾರಿಯ ಕೆಡಕು ಒಳಿತುಗಳ ಬಗ್ಗೆ ಜ್ಯೋತಿಷಿ ಎಚ್ ಸತೀಶ್ ಅವರು ವಿವರಿಸಿದ್ದಾರೆ.
ಸಾಮಾನ್ಯವಾಗಿ ಮೂರು ದಾರಿ ಸೇರುವ ಜಾಗವನ್ನು ಅಪಾಯಕಾರಿ ಎಂದು ಹೇಳುತ್ತಾರೆ. ಅದರಲ್ಲೂ ಹುಣ್ಣಿಮೆ ಅಮಾವಾಸ್ಯೆ ದಿನದಂದು ಆಕೆ ಮುಖ ಕೂಡ ಹಾಕೋದಿಲ್ಲ. ಅಮಾವಾಸ್ಯೆ ದಿನ ಮೂರು ದಾರಿಯಲ್ಲಿ ಓಡಾಡಲು ಕೆಲವರು ತುಂಬಾ ಭಯಪಡುತ್ತಾರೆ. ಸಾಕಷ್ಟು ಮಂದಿಗೆ ಇದರ ಅನುಭವವಾಗಿರುತ್ತದೆ. ಮೂರು ದಾರಿಗಳು ಕೂಡಿದ ಜಾಗ ಒಳ್ಳೆಯದಾ, ಕೆಟ್ಟದ್ದಾ? ಮನುಷ್ಯರ ಮೇಲೆ ಅದರ ಪರಿಣಾಮ ಬೀರುತ್ತದೆಯಾ ಎಂಬುದನ್ನು ತಿಳಿಯೋಣ. ಮನೆಯ ಬಾಗಿಲು ಉತ್ತರ ದಿಕ್ಕಿನಲ್ಲಿದ್ದು, ಅಲ್ಲಿ ಮೂರು ದಾರಿ ಸೇರುವಂತೆ ಇದ್ದರೆ ಯಾವುದೇ ತೊಂದರೆ ಇರುವುದಿಲ್ಲ. ಆದರೆ ಈ ಮೂರು ರಸ್ತೆ ಸೇರುವ ಜಾಗವು ಈಶಾನ್ಯ ದಿಕ್ಕಿಗೆ ಹತ್ತಿರ ಇರಬೇಕು. ಕಾರಣವೇನೆಂದರೆ ಉತ್ತರ ದಿಕ್ಕಿಗೆ ಇರುವ ರಸ್ತೆಯು ವೃದ್ಧಿಸಿರುತ್ತದೆ, ಪೂರ್ವದ ರಸ್ತೆಯು ವೃದ್ದಿಸಿರುತ್ತದೆ. ಉತ್ತರ ಮತ್ತು ಪೂರ್ವ ದಿಕ್ಕಿಗೆ ಎರಡು ರಸ್ತೆಗಳು ಶುಭ ದಿಕ್ಕಿನಲ್ಲಿ ಇರುವ ಕಾರಣ ಪಶ್ಚಿಮಕ್ಕಿರುವ ರಸ್ತೆಯು ಗೌಣವಾಗುತ್ತದೆ. ಇಂತಹ ಮನೆಯ ಮುಂಭಾಗದ ಮೇಲೆ ಸ್ವಸ್ತಿಕ್ ಆಕಾರದ ಇರಿಸಿದಲ್ಲಿ ಶುಭ ಉಂಟಾಗುತ್ತದೆ.
ಪೂರ್ವ ದಿಕ್ಕಿಗೆ ಸೇರಿದಂತೆ ಜಾಗವಿದ್ದರೆ ಅಲ್ಲಿ ತೂಗುಘಂಟೆಯನ್ನು ಕಟ್ಟುವುದು ಹೆಚ್ಚಿನ ಶುಭ ಫಲವನ್ನು ನೀಡುತ್ತದೆ. ಹಣಕಾಸಿನ ತೊಂದರೆ ಕಂಡುಬರುವುದಿಲ್ಲ. ಯಾವುದೇ ಕೆಲಸವನ್ನು ಆರಂಭಿಸಿದರು ಉತ್ತಮ ಯಶಸ್ಸು ದೊರೆಯುತ್ತದೆ. ಆದರೆ ಹೆಚ್ಚಿನ ಆತ್ಮವಿಶ್ವಾಸ ತೊಂದರೆಯನ್ನು ನೀಡಬಹುದು. ಆದ್ದರಿಂದ ಆತ್ಮೀಯರ ಸಲಹೆ ಸೂಚನೆಯನ್ನು ಪಾಲಿಸಿದರೆ ಎದುರಾಗುವ ಸಮಸ್ಯೆಗಳು ಸುಲಭವಾಗಿ ಬಗೆಹರಿಯುತ್ತವೆ. ಇಂತಹ ಮನೆಯಲ್ಲಿ ಇರುವವರಿಗೆ ಅಧಿಕಾರದ ವ್ಯಾಮೋಹ ಹೆಚ್ಚಾಗಿರುತ್ತದೆ.
ಸಾಮಾಜಸೇವೆ ಮಾಡುವ ಸಲುವಾಗಿ ಸಂಘ ಸಂಸ್ಥೆಗಳನ್ನು ಸ್ಥಾಪಿಸುವಲ್ಲಿ ಯಶಸ್ಸನ್ನು ಕಾಣುತ್ತಾರೆ. ಮಕ್ಕಳ ಭವಿಷ್ಯಕ್ಕಾಗಿ ಹಣ ಉಳಿತಾಯ ಮಾಡಲು ವಿವಿಧ ಯೋಜನೆಗಳನ್ನು ರೂಪಿಸುವಲ್ಲಿ ಯಶಸ್ಸು ಗಳಿಸುತ್ತಾರೆ. ಬೇರೆಯವರ ಕಾರಣಕ್ಕಾಗಿ ಕುಟುಂಬದಲ್ಲಿ ಬೇಸರ ಉಂಟಾದರೂ ಬಹುಕಾಲ ಉಳಿಯುವುದಿಲ್ಲ. ಒಮ್ಮತದ ಬಲ ಮನೆಯ ಮುಖ್ಯಸ್ಥನನ್ನು ಕಾಪಾಡುತ್ತದೆ.
ಪೂರ್ವದ ನಿವೇಶನ ಅಥವಾ ಮನೆಗೆ ಹೊಂದಿಕೊಂಡಂತೆ ಮೂರು ರಸ್ತೆಗಳು ಸೇರುವ ಜಾಗವಿದ್ದಲ್ಲಿ ಅದರಿಂದ ಯಾವುದೇ ತೊಂದರೆ ಉಂಟಾಗುವುದಿಲ್ಲ. ಆದರೆ ಈ ಮೂರು ರಸ್ತೆ ಸೇರುವ ಜಾಗವು ಈಶಾನ್ಯ ದಿಕ್ಕಿಗೆ ಹತ್ತಿರ ಇರಬೇಕು. ಇದಕ್ಕೆ ಕಾರಣವೆಂದರೆ ಮುಖ್ಯವಾಗಿ ಪೂರ್ವ ಮತ್ತು ಉತ್ತರ ದಿಕ್ಕಿನ ರಸ್ತೆಗಳು ವೃದ್ಧಿಸಿರುತ್ತವೆ. ಇದರಿಂದಾಗಿ ದಕ್ಷಿಣ ದಿಕ್ಕು ಗೌಣವಾಗುತ್ತದೆ. ಆದ್ದರಿಂದ ಭಯಪಡುವ ಅವಶ್ಯಕತೆ ಇಲ್ಲ. ಮನೆಯ ಮುಂದೆ ಮುಂಭಾಗದ ಬಲಭಾಗದಲ್ಲಿ ಗಣಪತಿಯ ವಿಗ್ರಹವನ್ನು ಇಡುವುದರಿಂದ ಎದುರಾಗುವ ವಿಘ್ನಗಳು ದೂರವಾಗುತ್ತವೆ.
ಈ ವಿಗ್ರಹಕ್ಕೆ ಪ್ರತಿ ಬುಧವಾರ ಅಥವಾ ಸಂಕಷ್ಟದ ಚತುರ್ಥಿಯ ದಿನದಂದು ಪೂಜೆಯನ್ನು ಮಾಡುವುದು ಒಳ್ಳೆಯದು. ಪೂರ್ವ ದಿಕ್ಕಿನಲ್ಲಿ ತೂಗು ಘಂಟೆಯನ್ನು ಅಳವಡಿಸಿದರೆ ಉತ್ತಮ ಶುಭಫಲಗಳು ದೊರೆಯುತ್ತವೆ. ಈ ಮನೆಯಲ್ಲಿ ವಾಸ ಮಾಡುವವರಿಗೆ ಅವರ ಮನದಾಳದ ಫಲಗಳು ದೊರೆಯುತ್ತವೆ. ಸಮಾಜದಲ್ಲಿ ಗೌರವಯುತ ಸ್ಥಾನಮಾನವೂ ಲಭಿಸುತ್ತದೆ. ಸಾಮಾಜಿಕ ಜೀವನದಲ್ಲಿ ನಾಯಕನ ಸ್ಥಾನ ನಿಮಗೆ ದೊರೆಯುತ್ತದೆ. ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದಲ್ಲಿ ವಿಶೇಷ ಸಾಧನೆಗೆ ಪಾತ್ರರಾಗುತ್ತಾರೆ. ಒಂದಕ್ಕಿಂತಲೂ ಹೆಚ್ಚಿನ ಪದವಿ ದೊರೆಯುವ ಸಾಧ್ಯತೆಗಳು ಇರುತ್ತವೆ. ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಉದ್ಯೋಗವನ್ನು ಗಳಿಸುತ್ತಾರೆ.
ಹಣಕಾಸಿನ ತೊಂದರೆ ಇರುವುದಿಲ್ಲ. ಆದರೆ ಅನಾವಶ್ಯಕ ಖರ್ಚು ವೆಚ್ಚಗಳನ್ನು ಕಡಿಮೆ ಮಾಡುವುದು ಒಳ್ಳೆಯದು. ದುಬಾರಿಯಾದ ವಸ್ತುಗಳನ್ನು ತೆಗೆದುಕೊಳ್ಳುವುದು ನಿಮ್ಮ ಹವ್ಯಾಸವಾಗುತ್ತದೆ. ಆತ್ಮೀಯರ ಸಹಾಯ ಸಹಕಾರದಿಂದ ಆರಂಭಿಸಿದ ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರೆಯುತ್ತದೆ. ಹಣ ಕಾಸಿನ ತೊಂದರೆ ಇರುವುದಿಲ್ಲ. ಆರೋಗ್ಯವನ್ನು ಸ್ಥಿರವಾಗಿ ಇರಿಸಿಕೊಳ್ಳಲು ಪ್ರಯತ್ನಿಸುವಿರಿ. ಒಳ್ಳೆಯ ಹವ್ಯಾಸಗಳು ನಿಮ್ಮನ್ನು ಉನ್ನತ ಮಟ್ಟಕ್ಕೆ ಕರೆದೊಯ್ಯುತ್ತದೆ. ಕುಟುಂಬದ ಒಳಿತಿಗಾಗಿ ಯಾವುದೆ ತ್ಯಾಗಕ್ಕೂ ಸಿದ್ದರಾಗುವಿರಿ.
ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.