ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Rama Navami 2024: ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸಲು ರಾಮ ನವಮಿಯಂದು ತಪ್ಪದೇ ಈ ಕೆಲಸಗಳನ್ನು ಮಾಡಿ

Rama Navami 2024: ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸಲು ರಾಮ ನವಮಿಯಂದು ತಪ್ಪದೇ ಈ ಕೆಲಸಗಳನ್ನು ಮಾಡಿ

ಯುಗಾದಿ ಹಬ್ಬದ ನಂತರ ಬರುವ ಪ್ರಮುಖ ಹಬ್ಬ ಶ್ರೀರಾಮ ನವಮಿ. ರಾಮನ ಜನ್ಮದಿನವಾದ ಈ ದಿನವನ್ನು ಬಹಳ ವಿಶೇಷವಾಗಿ ಆಚರಿಸಲಾಗುತ್ತದೆ. ಮರ್ಯಾದಾ ಪುರುಷೋತ್ತಮ ಶ್ರೀರಾಮನನ್ನು ಪೂಜಿಸುವುದರಿಂದ ಸಕಲ ತೊಂದರೆಗಳು ದೂರಾಗುತ್ತವೆ ಎಂಬ ನಂಬಿಕೆ ಇದೆ. ಮನೆಯಲ್ಲಿ ಸುಖ, ಶಾಂತಿ ನೆಲೆಸಿರಲು ರಾಮ ನವಮಿಯಂದು ತಪ್ಪದೇ ಪಾಲಿಸಬೇಕಾದ ಕ್ರಮಗಳಿವು.

ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ತುಂಬಿರಲು ರಾಮ ನವಮಿಯಂದು ತಪ್ಪದೇ ಈ ಕೆಲಸಗಳನ್ನು ಮಾಡಿ
ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ತುಂಬಿರಲು ರಾಮ ನವಮಿಯಂದು ತಪ್ಪದೇ ಈ ಕೆಲಸಗಳನ್ನು ಮಾಡಿ

ಭಾರತದಲ್ಲಿ ಆಚರಿಸುವ ಪ್ರಮುಖ ಹಬ್ಬಗಳಲ್ಲಿ ರಾಮನವಮಿ ಕೂಡ ಒಂದು. ಈ ವರ್ಷ ಏಪ್ರಿಲ್‌ 17 ರಂದು ರಾಮನವಮಿ ಇದೆ. ಶ್ರೀರಾಮನು ಪ್ರಪಂಚದಾದ್ಯಂತ ಲಕ್ಷಾಂತರ ಮಂದಿ ಭಕ್ತರನ್ನು ಹೊಂದಿದ್ದು, ಇವನನ್ನು ಪೂಜಿಸುವುದರಿಂದ ಮನೆಯಲ್ಲಿ ಶಾಂತಿ, ನೆಮ್ಮದಿ ನೆಲೆಸಿರುತ್ತದೆ ಎಂಬ ನಂಬಿಕೆ ಇದೆ. ಮನೆ ಆರ್ಥಿಕವಾಗಿ ಎಷ್ಟೇ ಸಮೃದ್ಧವಾಗಿದ್ದರೂ ಮಾನಸಿಕ ಶಾಂತಿ, ಸಂತೋಷ ಹಾಗೂ ನೆಮ್ಮದಿ ಬಹಳ ಮುಖ್ಯ. ಆದರೆ ಕೆಲವರಿಗೆ ಮನೆಯಲ್ಲಿ ಶಾಂತಿ, ನೆಮ್ಮದಿ ಎಂಬುದು ಇರುವುದೇ ಇಲ್ಲ. ಇನ್ನೂ ಕೆಲವರು ಎಷ್ಟೇ ದುಡಿದರೂ ಹಣಕಾಸಿನ ಕೊರತೆ ಕಾಡಬಹುದು. ಅದಕ್ಕೆ ಕಾರಣಗಳು ಹಲವಿರುತ್ತದೆ. ಆದರೆ ರಾಮನವಮಿಯಂದು ಈ ಕೆಲಸಗಳನ್ನು ಮಾಡುವುದರಿಂದ ಮನೆಯಲ್ಲಿ ಶಾಂತಿ, ನೆಮ್ಮದಿ ನೆಲೆಸಿರುತ್ತದೆ. ಜೊತೆಗೆ ನಿಮ್ಮೆಲ್ಲಾ ಸಮಸ್ಯೆಗಳಿಗೂ ಮುಕ್ತಿ ದೊರೆಯುತ್ತದೆ.

ಭಗವಾನ್ ರಾಮನು ಚೈತ್ರ ಮಾಸ ಶುಕ್ಲಪಕ್ಷದ 9ನೇ ದಿನ ರಾಜ ದಶರಥನ ಮಗನಾಗಿ ಅಯೋಧ್ಯೆಯಲ್ಲಿ ಜನಿಸುತ್ತಾನೆ. ಈ ದಿನವನ್ನು ರಾಮನವಮಿ ಎಂದು ಆಚರಿಸಲಾಗುತ್ತದೆ. ರಾಮನ ಜನ್ಮದಿನದಂದು ಶಾಸ್ತ್ರೋಕ್ತವಾಗಿ ಶ್ರೀರಾಮನನ್ನು ಪೂಜಿಸಿದರೆ ಆತನ ಕೃಪೆಗೆ ಪಾತ್ರರಾಗಬಹುದು. ಇದಲ್ಲದೆ, ಕೆಲವು ವಿಶೇಷ ಕ್ರಮಗಳನ್ನು ಅನುಸರಿಸುವುದು ಕೂಡ ಮುಖ್ಯವಾಗುತ್ತದೆ.

ರಾಮ ನವಮಿಯಂದು ಈ ಕ್ರಮಗಳನ್ನು ಪಾಲಿಸಿ

* ಯಾವುದೇ ರಾಮಮಂದಿರಕ್ಕೆ ಕೇಸರಿ ಧ್ವಜವನ್ನು ದಾನ ಮಾಡಿ, ದೇವತೆಗಳಿಗೆ ಅರಿಶಿನ ಆಹಾರವನ್ನು ಅರ್ಪಿಸಿ.

* ಶ್ರೀರಾಮನಿಗೆ ಕೇಸರಿ ಮಿಶ್ರಿತ ಹಾಲಿನಿಂದ ಅಭಿಷೇಕ ಮಾಡಿದರೆ ಸಂಪತ್ತು ಸಿಗುತ್ತದೆ ಎಂಬ ನಂಬಿಕೆ ಇದೆ.

* ರಾಮ ನವಮಿಯಂದು ರಾಮಾಯಣವನ್ನು ಪಠಿಸುವುದು ಮತ್ತು ಹನುಮಂತನನ್ನು ಪೂಜಿಸುವುದು ಸಹ ಮನೆಯಲ್ಲಿ ಸಂತೋಷ ನೆಲೆಸಲು ಕಾರಣವಾಗುತ್ತದೆ. ಇದರಿಂದ ಸುಖ, ಸಮೃದ್ಧಿಯಾಗುತ್ತದೆ.

* ರಾಮ ನವಮಿಯಂದು ನೀವು ಕೆಲವು ಮಂತ್ರಗಳನ್ನು ಪಠಿಸುವ ಮೂಲಕ ಭಗವಾನ್ ರಾಮನನ್ನು ಮೆಚ್ಚಿಸಬಹುದು. ಇದು ಮನೆಯಲ್ಲಿ ಸಂತೋಷ ಮತ್ತು ಸಂಪತ್ತ ತರಲು ಕಾರಣವಾಗುತ್ತದೆ. 'ಶ್ರೀ ರಾಮ ರಾಮ ರಾಮೇತಿ ರಮೇ ರಾಮೇ ಮನೋರಮೇ.. ಸಹಸ್ತಾನಮತತ್ತುಲ್ಯಂ ಶ್ರೀ ರಾಮ ನಾಮ ವರನನೇ' ಯಾವುದೇ ರಾಮಮಂದಿರದಲ್ಲಿ ಈ ಮಂತ್ರವನ್ನು 108 ಬಾರಿ ಪಠಿಸಿ.

* ಹಳದಿ ಬಟ್ಟೆ ರಾಮನಿಗೆ ತುಂಬಾ ಇಷ್ಟ. ರಾಮನವಮಿಯಂದು ಹಳದಿ ಬಣ್ಣದ ಬಟ್ಟೆಗಳನ್ನು ಅರ್ಪಿಸಿ. ಇದರಿಂದ ಶುಭವಾಗುತ್ತದೆ.

* ರಾಮ ನವಮಿಯಂದು ಬಡವರಿಗೆ ಅನ್ನ, ಬಟ್ಟೆ ದಾನ ಮಾಡಿ. ಇದು ತುಂಬಾ ಒಳ್ಳೆಯದು.

* ರಾಮ ನವಮಿಯಂದು ಹನುಮಂತನ ವಿಗ್ರಹದ ಬಳಿ ಶ್ರೀಗಂಧವನ್ನು ತೆಗೆದುಕೊಂಡು ಸೀತೆಯ ಪಾದಗಳಿಗೆ ಹಚ್ಚಿ. ಸೀತಾಮಾತೆಯ ಬಳಿ ನಿಮ್ಮ ಆಸೆಗಳನ್ನು ಹೇಳಿಕೊಂಡರೆ ಆ ತಾಯಿಯನ್ನು ಅದನ್ನು ನೆರವೇರಿಸುತ್ತಾಳೆ ಎಂದು ನಂಬಲಾಗಿದೆ.

ಉಪವಾಸ ಮಾಡುವುದು ವಿಶೇಷ

ರಾಮ ನವಮಿ ಹಿಂದೂಗಳಿಗೆ ಬಹಳ ಪವಿತ್ರವಾಗಿದೆ, ಹಲವು ಜನರು ಈ ದಿನ ಇಡೀ ದಿನ ಉಪವಾಸ ಮಾಡುತ್ತಾರೆ. ಇದು ಬೆಳಿಗ್ಗೆಯಿಂದ ಮರುದಿನ ಬೆಳಿಗ್ಗೆಯವರೆಗೆ ಇರುತ್ತದೆ. ರಾಮ ಜಪ ಮಾಡುವುದರಿಂದ ಪವಿತ್ರವಾಗುತ್ತದೆ. ರಾಮ ನವಮಿಯಂದು ಉಪವಾಸ ಮಾಡುವವರು ಅತ್ಯಂತ ಕಠಿಣವಾದ ಉಪವಾಸವನ್ನು ಆಚರಿಸುತ್ತಾರೆ. ಕೆಲವು ಭಕ್ತರು ನೀರು ಮತ್ತು ಹಣ್ಣುಗಳನ್ನು ತೆಗೆದುಕೊಳ್ಳುತ್ತಾರೆ. ಭಗವಾನ್ ರಾಮನು ಅಯೋಧ್ಯೆಯಲ್ಲಿ ಜನಿಸಿದನೆಂದು ನಂಬಲಾಗಿದೆ ಮತ್ತು ರಾಮ ನವಮಿಯನ್ನು ಅಯೋಧ್ಯೆಯಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ರಾಮ ನವಮಿಯ ಸಂದರ್ಭದಲ್ಲಿ ಸರಯೂ ನದಿಯಲ್ಲಿ ಸ್ನಾನ ಮಾಡಲು ಭಕ್ತರು ಅಯೋಧ್ಯೆಗೆ ಬರುತ್ತಾರೆ. ರಾಮಮಂದಿರಕ್ಕೆ ಭೇಟಿ ನೀಡಿ.

ಶ್ರೀರಾಮನನ್ನು ಪೂಜಿಸುವವರಿಗೆ ತೊಂದರೆಗಳು ದೂರವಾಗುತ್ತವೆ ಎಂಬ ನಂಬಿಕೆ. ರಾಮನನ್ನು ಅತ್ಯಂತ ಭಕ್ತಿಯಿಂದ ಪೂಜಿಸಬೇಕು. ಎಂತಹ ದೋಷಗಳಿದ್ದರೂ.. ಎಂತಹ ತೊಂದರೆಗಳಿದ್ದರೂ.. ಅವು ನಿವಾರಣೆಯಾಗುತ್ತವೆ. ಹಾಗಾದರೆ ಶ್ರೀರಾಮ ನವಮಿಯ ದಿನದಂದು ಮೇಲಿನಂತೆ ಮಾಡಿ. ಬಡ ಬಗ್ಗರಿಗೆ ಅನ್ನದಾನ ಮಾಡುವುದನ್ನು ಮರೆಯಬೇಡಿ.