ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Ravi Pradosh Vrat: ರವಿ ಪ್ರದೋಷ ಯಾವಾಗ? ಈ ವ್ರತದ ಮಹತ್ವ, ಆಚರಣೆಯ ಕ್ರಮ, ಪೂಜಾವಿಧಾನದ ಕುರಿತ ವಿವರ ಇಲ್ಲಿದೆ

Ravi Pradosh Vrat: ರವಿ ಪ್ರದೋಷ ಯಾವಾಗ? ಈ ವ್ರತದ ಮಹತ್ವ, ಆಚರಣೆಯ ಕ್ರಮ, ಪೂಜಾವಿಧಾನದ ಕುರಿತ ವಿವರ ಇಲ್ಲಿದೆ

ಹಿಂದೂಗಳು ಆಚರಿಸುವ ಪ್ರಮುಖ ಆಚರಣೆಗಳಲ್ಲಿ ರವಿ ಪ್ರದೋಷವೂ ಒಂದು. ಮಹಾಶಿವ ಹಾಗೂ ಪಾರ್ವತಿ ದೇವಿಗೆ ಸಮರ್ಪಿತವಾಗಿರುವ ಈ ದಿನದಂದು ಭಕ್ತರು ಉಪವಾಸ ಮಾಡುವ ಮೂಲಕ ದೇವರ ಕೃಪೆಗೆ ಪಾತ್ರರಾಗುತ್ತಾರೆ. ಈ ವರ್ಷ ಮೇ 5 ರಂದು ರವಿ ಪ್ರದೋಷ ವ್ರತವಿದ್ದು, ಈ ದಿನದ ಪೂಜಾ ಮಹೂರ್ತ ಸಮಯ, ಈ ಆಚರಣೆಯ ಮಹತ್ವದ ಕುರಿತ ವಿವರ ಇಲ್ಲಿದೆ.

ರವಿ ಪ್ರದೋಷ ವ್ರತ
ರವಿ ಪ್ರದೋಷ ವ್ರತ

ಹಿಂದೂಗಳು ಆಚರಿಸುವ ಪ್ರಮುಖ ಆಚರಣೆಗಳಲ್ಲಿ ಪ್ರದೋಷವು ಒಂದು. ಪ್ರದೋಷಗಳಲ್ಲಿ ರವಿ ಪ್ರದೋಷ ವಿಶೇಷ. ಪ್ರದೋಷ ಎನ್ನುವುದು ಶಿವನಿಗೆ ಸಮರ್ಪಿತವಾಗಿದ್ದು. ಈ ಪ್ರಮುಖ ದಿನದಂದು ಜನರು ಉಪಾವಾಸ ವ್ರತ ಆಚರಿಸುವ ಮೂಲಕ ದೇವರ ಕೃಪೆಗೆ ಪಾತ್ರರಾಗಲು ಬಯಸುತ್ತಾರೆ. ಪ್ರತಿ ತಿಂಗಳು 2 ಬಾರಿ ಅಂದರೆ ಶುಕ್ಲ ಪಕ್ಷ ಹಾಗೂ ಕೃಷ್ಣಪಕ್ಷಗಳಂದು ಪ್ರದೋಷ ವ್ರತಗಳನ್ನು ಆಚರಿಸಲಾಗುತ್ತದೆ. ಈ ವರ್ಷ ಪ್ರದೋಷ ವ್ರತವು ಭಾನುವಾರ ಬಂದಿರುವ ಕಾರಣ ಇದನ್ನು ರವಿ ಪ್ರದೋಚ ವ್ರತ ಎಂದು ಕರೆಯಲಾಗುತ್ತದೆ. ರವಿ ಪ್ರದೋಷ ವ್ರತವು ವೈಶಾಖ ಮಾಸ ಕೃಷ್ಣ ಪಕ್ಷ ತ್ರಯೋದಶಿ ತಿಥಿಯಂದು ಬರುತ್ತದೆ. ಈ ವರ್ಷ ಮೇ 5 ರಂದು ರವಿ ಪ್ರದೋಷ ತಿಥಿ ಇದೆ.

2024ರ ರವಿ ಪ್ರದೋಷ ತಿಥಿಯ ದಿನಾಂಕ, ಸಮಯ

* ಮೇ 5 2024ರ ಸಂಜೆ 5.41ಕ್ಕೆ ತ್ರಯೋದಶಿ ತಿಥಿ ಆರಂಭವಾಗುತ್ತದೆ.

* ಮೇ 6 2024 ಮಧ್ಯಾಹ್ನ 2.40ಕ್ಕೆ ತ್ರಯೋದಶಿ ತಿಥಿ ಮುಕ್ತಾಯವಾಗುತ್ತದೆ.

* ಪೂಜಾ ಸಮಯ: ಮೇ 5 ರ ಸಂಜೆ 6.12 ರಿಂದ ರಾತ್ರಿ 8.24ರವರೆಗೆ.

ರವಿ ಪ್ರದೋಷ ವ್ರತದ ಮಹತ್ವ

ಪ್ರದೋಷ ವ್ರತವನ್ನು ಶಿವ ಹಾಗೂ ಪಾರ್ವತಿ ದೇವಿಯನ್ನು ಪೂಜಿಸಲು ಸಮರ್ಪಿಸಲಾಗಿದೆ. ಭಗವಾನ್‌ ಶಿವನು ದಾನವರಲ್ಲೇ ಶ್ರೇಷ್ಠನಾದವನು, ಅವನು ಭಕ್ತರ ಇಷ್ಟಾರ್ಥಗಳನ್ನು ಪೂರೈಸುವವನು ಎಂದು ಕರೆಯಲ್ಪಡುತ್ತಾನೆ. ಪ್ರದೋಷವನ್ನು ಮಂಗಳಕರ ದಿನ ಎಂದು ಪರಿಗಣಿಸುವ ಹಿಂದೂಗಳು ಈ ದಿನ ಶಿವ ಹಾಗೂ ಪಾರ್ವತಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ಈ ದಿನದಂದು ಶಿವ ಹಾಗೂ ಮಹಾದೇವಿ ಬ್ರಹ್ಮಾಂಡದ ಸುತ್ತಲೂ ಸಂಚರಿಸುತ್ತಾರೆ ಮತ್ತು ಭಕ್ತರಿಗೆ ಸಂತೋಷ, ಸಮೃದ್ಧಿ, ಸಂಪತ್ತು, ಆರೋಗ್ಯ ಮತ್ತು ಬಯಸಿದ ಎಲ್ಲಾ ಇಷ್ಟಾರ್ಥಗಳನ್ನು ಪೂರೈಸುತ್ತಾರೆ ಎಂದು ನಂಬಲಾಗಿದೆ. ಉಪವಾಸ ಆಚರಿಸುವವರು ಧೂಮಪಾನ, ಮದ್ಯಪಾನ, ಜೂಜು, ಮಾಂಸ, ಮೊಟ್ಟೆ ಮತ್ತು ಈರುಳ್ಳಿ ಮತ್ತು ಬೆಳ್ಳುಳ್ಳಿಯಂತಹ ಎಲ್ಲಾ ತಾಮಸಿಕ ಚಟುವಟಿಕೆಗಳಿಂದ ದೂರವಿರಲು ಸಲಹೆ ನೀಡಲಾಗುತ್ತದೆ. ಓಂ ಪಠಣ ಮಾಡುತ್ತಾ ಈ ಮಂಗಳಕರ ದಿನದಂದು ಧ್ಯಾನ ಮತ್ತು ಯೋಗವನ್ನು ಮಾಡಲು ಅವರಿಗೆ ಸಲಹೆ ನೀಡಲಾಗುತ್ತದೆ. ಎಲ್ಲಾ ಪೂಜಾ ವಿಧಿಗಳನ್ನು ಪೂರೈಸಿದ ನಂತರ ಸಂಜೆ ವೇಳೆ ಉಪವಾಸ ಮುರಿಯಲಾಗುತ್ತದೆ.

ರವಿ ಪ್ರದೋಷ ವ್ರತದ ಪೂಜಾ ವಿಧಾನ

* ಬೆಳಿಗ್ಗೆ ಬೇಗನೆ ಎದ್ದು ಸ್ನಾನ ಮಾಡಿ ನಂತರ ಪೂಜೆ ಆರಂಭಿಸಬೇಕು.

* ಭಗವಾಸ್‌ ಶಿವ ಹಾಗೂ ಪಾರ್ವತಿ ದೇವಿಯ ವಿಗ್ರಹವನ್ನು ಇರಿಸಿ ಪೂಜಿಸಿ.

* ದೇಸಿ ತುಪ್ಪದಿಂದ ದೀಪವನ್ನು ಬೆಳಗಿಸಿ, ವಿಗ್ರಹವನ್ನು ಹೂ ಹಾಗೂ ಹಾರಗಳಿಂದ ಅಲಂಕರಿಸಿ.

* ಪಾಯಸ, ಹಲ್ವಾ ಹಣ್ಣುಗಳಿಂದ ದೇವರಿಗೆ ನೈವೇದ್ಯ ಮಾಡಿ.

* ಪ್ರದೋಷ ವ್ರತ ಕಥಾ ಪಠಿಸಿ. ಪಂಚಾಕ್ಷರಿ ಮಂತ್ರ ಮತ್ತು ಮಹಾ ಮೃತ್ಯುಂಜಯ ಮಂತ್ರ ಪಠಿಸಿ.

* ಸಂಜೆ ಗೋದೋಳಿ ಸಮಯದಲ್ಲಿ ಪ್ರದೋಷ ಪೂಜೆ ನಡೆಯುತ್ತದೆ.

* ಉಪವಾಸ ಮುರಿದ ನಂತರ ಸ್ವಾತಿಕ ಆಹಾರ ಸೇವಿಸಿ.

ಈ ದಿನ ಪಠಿಸುವ ಮಂತ್ರ

* ಓಂ ನಮಃ ಶಿವಾಯ

* ಓಂ ತ್ರಯಂಭಕಂ ಯಜಾಮಹೇ ಉರ್ವ ರುಕ್ಮಿವ್‌ ಬಂಧನಾನ್‌ ಮೃತ್ಯೋರ್‌ ಮುಕ್ಷೀಯ ಮಾ ಮೃತಾತ್‌!!