ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಅಡೆತಡೆಗಳ ನಿವಾರಣೆಯಿಂದ ಆರ್ಥಿಕ ವೃದ್ಧಿಯವರೆಗೆ; ಕೈಯಲ್ಲಿ ಚಿನ್ನ, ಬೆಳ್ಳಿ ಕಡಗ ಧರಿಸುವುದರಿಂದ ಏನೆಲ್ಲಾ ಲಾಭಗಳಿವೆ?

ಅಡೆತಡೆಗಳ ನಿವಾರಣೆಯಿಂದ ಆರ್ಥಿಕ ವೃದ್ಧಿಯವರೆಗೆ; ಕೈಯಲ್ಲಿ ಚಿನ್ನ, ಬೆಳ್ಳಿ ಕಡಗ ಧರಿಸುವುದರಿಂದ ಏನೆಲ್ಲಾ ಲಾಭಗಳಿವೆ?

ಚಿನ್ನ ಮತ್ತು ಬೆಳ್ಳಿ ಅತ್ಯಂತ ಜನಪ್ರಿಯ ಲೋಹವಾಗಿದ್ದು, ಪ್ರತಿಯೊಬ್ಬರು ಇವುಗಳ ಆಭರಣಗಳನ್ನು ಇಷ್ಟಪಡುತ್ತಾರೆ. ಚಿನ್ನ ಮತ್ತು ಬೆಳ್ಳಿ ಕಡಗವನ್ನು ಕೈಯಲ್ಲಿ ಧರಿಸುವುದರಿಂದ ಏನೆಲ್ಲಾ ಪ್ರಯೋಜನಗಳಿವೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಇದರ ಬಗ್ಗೆ ಏನು ಹೇಳಲಾಗುತ್ತದೆ ಎಂಬುದನ್ನು ತಿಳಿಯೋಣ.

ಅಡೆತಡೆಗಳ ನಿವಾರಣೆಯಿಂದ ಆರ್ಥಿಕ ವೃದ್ಧಿಯವರೆಗೆ; ಕೈಯಲ್ಲಿ ಚಿನ್ನ, ಬೆಳ್ಳಿ ಕಡಗ ಧರಿಸುವುದರಿಂದ ಏನೆಲ್ಲಾ ಲಾಭಗಳಿವೆ?
ಅಡೆತಡೆಗಳ ನಿವಾರಣೆಯಿಂದ ಆರ್ಥಿಕ ವೃದ್ಧಿಯವರೆಗೆ; ಕೈಯಲ್ಲಿ ಚಿನ್ನ, ಬೆಳ್ಳಿ ಕಡಗ ಧರಿಸುವುದರಿಂದ ಏನೆಲ್ಲಾ ಲಾಭಗಳಿವೆ?

ಚಿನ್ನಾಭರಣ ಇಷ್ಟಪಡದವರೇ ಇಲ್ಲ. ಚಿನ್ನ ಮತ್ತು ಬೆಳ್ಳಿಯ ಬೆಲೆ ಗಗನಕ್ಕೇರುತ್ತಿದ್ದರೂ ಈ ಲೋಹದ ಮೇಲೆ ಜನರಿಗೆ ಇರುವ ಕ್ರೇಜ್ ಮಾತ್ರ ಕಡಿಮೆಯಾಗುತ್ತಿಲ್ಲ. ಮದುವೆಯಂತಹ ಶುಭ ಸಮಾರಂಭಗಳಿಗೆ ಚಿನ್ನಾಭರಣಗಳು ಬೇಕೇ ಬೇಕು. ಪುರುಷರಿಗಿಂತ ಮಹಿಳೆಯರು ಹೆಚ್ಚಾಗಿ ಚಿನ್ನಾಭರಣಗಳನ್ನು ಧರಿಸುತ್ತಾರೆ. ಇತ್ತೀಚೆಗೆ ಕೆಲ ಪುರುಷರು ಚಿನ್ನದ ಬಗ್ಗೆ ಆಸಕ್ತಿಯನ್ನು ಹೆಚ್ಚಿಸಿಕೊಂಡಿದ್ದಾರೆ. ಕತ್ತಿನಲ್ಲಿ ದೊಡ್ಡ ಗಾತ್ರದ ಚಿನ್ನದ ಚೈನ್, ಕೈಯಲ್ಲಿ ಬ್ರಾಸ್‌ಲೈಟ್‌ಗಳನ್ನು ಧರಿಸುವುದನ್ನು ಫ್ಯಾಷನ್ ಆಗಿಸಿಕೊಂಡಿದ್ದಾರೆ. ಚಿನ್ನ ಅಥವಾ ಬೆಳ್ಳಿಯ ಕಡಗವನ್ನು ಕೈಯಲ್ಲಿ ಧರಿಸುವುದರಿಂದ ಏನೆಲ್ಲಾ ಲಾಭಗಳಿವೆ. ಜ್ಯೋತಿಷ್ಯಶಾಸ್ತ್ರದಲ್ಲಿ ಈ ಬಗ್ಗೆ ಏನು ಹೇಳಲಾಗುತ್ತದೆ ಎಂಬುದನ್ನು ತಿಳಿಯೋಣ.

ಬಳೆಯ ಆಕಾರದಲ್ಲಿರುವ ಇದನ್ನು ಕಡ ಅಂತಲೂ ಕರೆಯಲಾಗುತ್ತದೆ. ಧಾರ್ಮಿಕ ಮತ್ತು ಜ್ಯೋತಿಷ್ಯ ಕಾರಣಗಳಿಗಾಗಿ ಹೆಚ್ಚಿನ ಮಂದಿ ಬೆಳ್ಳಿ ಅಥವಾ ಚಿನ್ನದ ಕಡಗವನ್ನು ಧರಿಸುತ್ತಾರೆ. ಇದರಿಂದ ಜೀವನದಲ್ಲಿ ಗಮನಾರ್ಹವಾದ ಬದಲಾವಣೆಗಳನ್ನು ಕಾಣಬಹುದು.

ಬೆಳ್ಳಿ ಕಡಗ ಧರಿಸುವುದರಿಂದ ಏನೆಲ್ಲಾ ಲಾಭಗಳಿವೆ?

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೈಗೆ ಬೆಳ್ಳಿ ಕಡಗ ಧರಿಸುವುರಿಂದ ಸಕಾರಾತ್ಮಕ ಶಕ್ತಿ, ಹೃದಯ ಬಡಿತ ಸಮತೋಲನ ಸೇರಿದಂತೆ ಹಲವಾರು ಆರೋಗ್ಯ ಪ್ರಯೋಜನಗಳಿವೆ. ಬೆಳ್ಳಿಯನ್ನು ಧರಿಸುವುದರಿಂದ ಯೋಗಕ್ಷೇಮ ಮತ್ತು ಸಂಪತ್ತು ಹೆಚ್ಚಾಗುತ್ತದೆ. ಮಾನವ ದೇಹದಿಂದ ಬಿಡುಗಡೆಯಾಗುವ ವಿಷವನ್ನು ಹೀರಿಕೊಳ್ಳುತ್ತದೆ. ಚಿನ್ನಕ್ಕಿಂತ ಬೆಳ್ಳಿ ಅತ್ಯಂತ ಜನಪ್ರಿಯ ಆಭರಣ ವಸ್ತುವಾಗಿದೆ. ಪುರುಷರಿಗಿಂತ ಮಹಿಳೆಯರು ಇದನ್ನು ಹೆಚ್ಚು ಬಳಸುತ್ತಾರೆ. ಈ ಬೆಳ್ಳಿಯನ್ನು ದಿನನಿತ್ಯದ ಕಾಲು ಚೈನು, ಗೊಲುಸು ಹಾಗೂ ಕಾಲುಂಗುರವಾಗಿ ಬಳಸುತ್ತಾರೆ. ಸಾಮಾನ್ಯವಾಗಿ ಬೆಳ್ಳಿಯ ಆಭರಣಗಳಿಗೆ ಹೆಚ್ಚಿನ ಶಕ್ತಿ ಇರುತ್ತದೆ. ಅದನ್ನು ಸಾಧಿಸಲು ಕೆಲವು ಮಾರ್ಗಗಳಿವೆ.

ಮಹಿಳೆಯರು ಬೆಳ್ಳಿಯ ಆಭರಣ ಧರಿಸಿದರೆ ಅದೃಷ್ಟವಂತರು. ಬೆಳ್ಳಿ ಸಾಮಾನ್ಯವಾಗಿ ತಂಪಾಗಿರುತ್ತದೆ. ಇದನ್ನು ಧರಿಸಿದರೆ ದೇಹ ಮತ್ತು ಮನಸ್ಸು ತಂಪಾಗುತ್ತದೆ ಎಂದು ನಂಬಲಾಗಿದೆ. ನೀವು ಬೆಳ್ಳಿಯನ್ನು ಧರಿಸಿದರೆ ಯಾವುದೇ ಬಾಹ್ಯ ಅಥವಾ ಜ್ಯೋತಿಷ್ಯ ಸಮಸ್ಯೆಗಳು ನಿಮಗೆ ಹಿಂತಿರುಗುವುದಿಲ್ಲ. ಮಹಿಳೆಯರೂ ಕೂಡ ಬಳೆಗಳ ಜೊತೆಗೆ ಬೆಳ್ಳಿ ಕಡಗವನ್ನು ಧರಿಸುತ್ತಾರೆ. ಹೀಗೆ ಬೆಳ್ಳಿ ಧರಿಸುವುದರಿಂದ ದೇಹದ ಉಷ್ಣತೆ ಕಡಿಮೆಯಾಗುವುದನ್ನು ಕಾಣಬಹುದು.

ಬೆಳ್ಳಿಯು ಕಪ್ಪು ಬಣ್ಣಕ್ಕೆ ತಿರುಗಲು ಹಲವು ಕಾರಣಗಳಿವೆ, ಉದಾಹರಣೆಗೆ ನಿಮ್ಮ ದೇಹದಲ್ಲಿ ಹೆಚ್ಚು ಪಿತ್ತರಸ, ಅತಿಯಾದ ಶಾಖ ಅಥವಾ ಹೆಚ್ಚು ಉಪ್ಪು ಗಾಳಿಯನ್ನು ಉಸಿರಾಡುವುದು, ಇಂತಹ ಸಮಸ್ಯೆಗಳು ಕಪ್ಪು ಬಣ್ಣಕ್ಕೆ ತಿರುಗಬಹುದು. ಬೆಳ್ಳಿ ಕಪ್ಪಾಗದೆ ಹಾಗೇ ಉಳಿದಿದ್ದರೆ ನಿಮ್ಮ ಆರೋಗ್ಯ ಚೆನ್ನಾಗಿದೆ ಎಂದರ್ಥ.

ಚಿನ್ನದ ಕಡಗ ಧರಿಸುವುದರಿಂದ ಆಗುವ ಪ್ರಯೋಜನಗಳು

ಚಿನ್ನ ರಕ್ಷಣಾತ್ಮಕ ಗುಣಗಳನ್ನು ಹೊಂದಿದೆ. ನಿಮ್ಮ ದೇಹದಲ್ಲಿನ ಹಾನಿಕಾರಕ ವಸ್ತುಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಬಲಗೈಯಲ್ಲಿ ಚಿನ್ನದ ಕಡಗವನ್ನು ಧರಿಸುವುದರಿಂದ ತುಂಬಾ ಆಕರ್ಷಣೆಯಾಗಿ ಕಾಣುತ್ತದೆ. ಚಿನ್ನವನ್ನು ಧರಿಸುವುದರಿಂದ ದೇಹಕ್ಕೆ ಆಗಾದವಾದ ಶಕ್ತಿ ಸಿಗುತ್ತದೆ. ಕಪ್ಪು ಶಕ್ತಿಯಿಂದ ಅಡೆತಡೆಗಳು ನಿವಾರಣೆಯಾಗುತ್ತವೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಚಿನ್ನದ ಕೈ ಕಡಗ ಧರಿಸುವುದರಿಂದ ಸಮೃದ್ಧಿ ಮತ್ತು ಅದೃಷ್ಟವನ್ನು ತರುತ್ತದೆ. ಚಿನ್ನ ಬೆಳ್ಳಿ ದರ ದಶಕಗಳಿಂದ ಏರುತ್ತಲೇ ಇದೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)