ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Shani Retrograde: ಶನಿಯ ಹಿಮ್ಮುಖ ಚಲನೆ; ಮುಂದಿನ ನಾಲ್ಕು ತಿಂಗಳು ಈ 5 ರಾಶಿಯವರು ಎಷ್ಟು ಜಾಗ್ರತೆ ವಹಿಸುತ್ತಾರೋ ಅಷ್ಟು ಉತ್ತಮ

Shani Retrograde: ಶನಿಯ ಹಿಮ್ಮುಖ ಚಲನೆ; ಮುಂದಿನ ನಾಲ್ಕು ತಿಂಗಳು ಈ 5 ರಾಶಿಯವರು ಎಷ್ಟು ಜಾಗ್ರತೆ ವಹಿಸುತ್ತಾರೋ ಅಷ್ಟು ಉತ್ತಮ

Shani Retrograde 2024: ಜೂನ್ ತಿಂಗಳ ಕೊನೆಯಲ್ಲಿ ಶನಿಯು ತನ್ನ ಚಲನೆಯನ್ನು ಬದಲಿಸಿದ್ದಾನೆ. ಹಿಮ್ಮುಖವಾಗಿ ಚಲಿಸಲಿರುವ ಶನಿಯು ರಾಶಿಯವರಿಗೆ ಶುಭಫಲ ನೀಡಿದರೆ, ಇನ್ನೂ ಕೆಲವರಿಗೆ ಅಶುಭ ಫಲವನ್ನು ನೀಡಲಿದ್ದಾನೆ. ಹಾಗಾಗಿ ಈ ರಾಶಿಯವರು ಎಚ್ಚರದಿಂದಿರುವುದು ಅವಶ್ಯ.

ಶನಿಯ ಹಿಮ್ಮುಖ ಚಲನೆ; ಮುಂದಿನ ನಾಲ್ಕು ತಿಂಗಳು ಈ 5 ರಾಶಿಯವರು ಎಷ್ಟು ಜಾಗ್ರತೆ ವಹಿಸುತ್ತಾರೋ ಅಷ್ಟು ಉತ್ತಮ
ಶನಿಯ ಹಿಮ್ಮುಖ ಚಲನೆ; ಮುಂದಿನ ನಾಲ್ಕು ತಿಂಗಳು ಈ 5 ರಾಶಿಯವರು ಎಷ್ಟು ಜಾಗ್ರತೆ ವಹಿಸುತ್ತಾರೋ ಅಷ್ಟು ಉತ್ತಮ

ಜ್ಯೋತಿಷ್ಯಶಾಸ್ತ್ರದ ಪ್ರಕಾರ ಶನಿಯು ಕರ್ಮ ಮತ್ತು ನ್ಯಾಯದ ದೇವರಾಗಿದ್ದಾನೆ. ಶನಿಯು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಚಲಿಸಲು ಸುಮಾರು 18 ತಿಂಗಳುಗಳ ಕಾಲ ತೆಗೆದುಕೊಳ್ಳುತ್ತಾನೆ. ಈ ವರ್ಷ ಪೂರ್ತಿ ಅಂದರೆ 2024ರಲ್ಲಿ ಶನಿದೇವನು ಕುಂಭ ರಾಶಿಯಲ್ಲಿಯೇ ವಿಹರಿಸುತ್ತಾನೆ, ರಾಶಿ ಬದಲಾವಣೆ ಮಾಡುವುದಿಲ್ಲ. ಧೃಕ್‌ ಪಂಚಾಗದ ಅನುಸಾರ ಜೂನ್‌ 30 ಬೆಳಿಗ್ಗೆ 12 ಗಂಟೆ 35 ನಿಮಿಷದಿಂದ ಶನಿಯು ಈಗಿರುವ ಕುಂಭ ರಾಶಿಯಲ್ಲಿಯೇ ಹಿಮ್ಮುಖವಾಗಿ ಚಲಿಸುತ್ತಾನೆ. ಒಟ್ಟು 139 ದಿನಗಳವರೆಗೆ ಹಿಮ್ಮುಖ ಚಲನೆಯಿರುತ್ತದೆ. ನವೆಂಬರ್‌ 15ರ ನಂತರ ಕುಂಭ ರಾಶಿಯಲ್ಲಿ ಮೊದಲಿನಂತೆಯೇ ನೇರವಾಗಿ ಚಲಿಸುತ್ತಾನೆ. ಜೂನ್ ತಿಂಗಳ ಕೊನೆಯಲ್ಲಿ ಶನಿಯು ತನ್ನ ಚಲನೆಯನ್ನು ಬದಲಿಸುವುದರಿಂದ ಕೆಲವು ರಾಶಿಯವರಿಗೆ ಶುಭ ಫಲವನ್ನು ನೀಡಲಿದ್ದಾನೆ. ಅದರಂತೆಯೇ ಕೆಲವು ರಾಶಿಯವರಿಗೆ ಅಶುಭ ಫಲವನ್ನು ನೀಡಲಿದ್ದಾನೆ. ಶನಿಯ ಹಿಮ್ಮುಖ ಚಲನೆಯಿಂದ ಯಾವ ರಾಶಿಯವರು ಜಾಗರೂಕರಾಗಿರಬೇಕು ಇಲ್ಲಿದೆ ಓದಿ.

ಮೇಷ ರಾಶಿ

ಶನಿಯ ಹಿಮ್ಮುಖ ಚಲನೆಯಿಂದ ಕೆಲಸದಲ್ಲಿ ತೊಂದರೆಗಳು ಬರುತ್ತವೆ. ಎಲ್ಲಾ ಕಾರ್ಯಗಳು ಕುಂಠಿತ ಗತಿಯಲ್ಲಿ ಸಾಗುತ್ತವೆ. ವ್ಯಾಪಾರದಲ್ಲಿ ಏಳು–ಬೀಳು ಕಾಣುತ್ತೀರಿ. ಮನಸ್ಸು ಅಶಾಂತಿಯಿಂದ ಕೂಡಿರುತ್ತದೆ. ಈ ಸಮಯದಲ್ಲಿ ಹಣಕಾಸಿನ ವಿಷಯದಲ್ಲಿ ಎಲ್ಲರನ್ನೂ ಸುಲಭವಾಗಿ ನಂಬಬೇಡಿ. ಧನ ಹಾನಿಯಾಗಬಹುದು. ಹಿಂದಿನ ದಿನಗಳನ್ನು ಮರೆತು ಜೀವನದಲ್ಲಿ ಮುಂದುವರಿಯಿರಿ. ಯಾವುದೇ ತೀರ್ಮಾನಗಳನ್ನು ಭಾವುಕರಾಗಿ ತೆಗೆದುಕೊಳ್ಳಬೇಡಿ. ಯೋಚಿಸಿ ನಿರ್ಧರಿಸಿ. ಇಲ್ಲವಾದರೆ ಕಠಿಣ ದಿನಗಳನ್ನು ನೋಡಬೇಕಾಗಬಹುದು.

ಮಿಥುನ ರಾಶಿ

ಕುಂಭ ರಾಶಿಯಲ್ಲಿ ಶನಿಯ ಹಿಮ್ಮುಖ ಚಲನೆಯು ಕಷ್ಟಗಳನ್ನು ಹೆಚ್ಚಿಸುತ್ತಾನೆ. ಹೆಚ್ಚು ಹಣ ಖರ್ಚಾಗಬಹುದು. ಹಣಕಾಸಿನ ವ್ಯವಹಾರದಲ್ಲಿ ಸಮಸ್ಯೆಗಳು ಮುಂದುವರಿಯುತ್ತದೆ. ಕೆಲಸದ ವಿಷಯದಲ್ಲಿ ಸವಾಲು ಎದುರಿಸಬೇಕಾಗುತ್ತದೆ. ನಿಮ್ಮ ಶತ್ರುಗಳು ನಿಮಗೆ ತೊಂದರೆ ಕೊಡಬಹುದು. ಹಣ ವ್ಯಯ ಮಾಡುವ ನಿಮ್ಮ ಗುಣದ ಮೇಲೆ ಹೆಚ್ಚು ಗಮನವಹಿಸಿ. ಆರ್ಥಿಕ ವಿಷಯದಲ್ಲಿ ಹೆಚ್ಚು ಜಾಗರೂಕರಾಗಿರಿ. ಯೋಚಿಸದೇ ಯಾವುದೇ ರೀತಿಯ ದೊಡ್ಡ ಮೊತ್ತದ ಹಣ ವ್ಯವಹಾರ ಮಾಡಬೇಡಿ.

ಕನ್ಯಾ ರಾಶಿ

ಶನಿಯ ಹಿಮ್ಮುಖ ಚಲನೆಯಿಂದ ಕನ್ಯಾ ರಾಶಿಯವರ ಜೀವನದಲ್ಲಿ ಏಳು–ಬೀಳುಗಳು ಸಂಭವಿಸಲಿವೆ. ನೌಕರಿ ವಿಷಯದಲ್ಲಿ ತೊಂದರೆಗಳು ಬರುತ್ತವೆ. ಸಂಬಂಧಗಳಲ್ಲಿ ಜಗಳ, ಮುನಿಸು ಹೆಚ್ಚಾಗಲಿದೆ. ಖರ್ಚಿನ ವಿಷಯದಲ್ಲಿ ನಿಯಂತ್ರಣ ಸಾಧಿಸುವುದು ಕಷ್ಟಸಾಧ್ಯವಾಗಲಿದೆ. ಮಾನಸಿಕ ತೊಂದರೆಗಳು ಹೆಚ್ಚಾಗಲಿದೆ. ಆದರೂ ಧೈರ್ಯದಿಂದ ಜೀವನ ಮುನ್ನಡೆಸಿ. ಯೋಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ. ನಿಮ್ಮ ಸಂಗಾತಿಯ ಜೊತೆಗೆ ಉತ್ತಮ ರೀತಿಯ ಸಂಬಂಧ ಕಾಯ್ದುಕೊಳ್ಳಿ.

ಧನು ರಾಶಿ

ಶನಿಯ ಹಿಮ್ಮುಖ ಚಲನೆಯಿಂದ ಧನು ರಾಶಿಯವರ ಜೀವನದಲ್ಲಿ ಬಹಳ ಪ್ರಯತ್ನದ ನಂತರವೂ ಫಲಿತಾಂಶವು ನಿರಾಶದಾಯಕವಾಗಿರುತ್ತದೆ. ಕೆಲಸದಲ್ಲಿ ಮನಸ್ಸು ಇರುವುದಿಲ್ಲ. ಮನಸ್ಸು ಅಶಾಂತಿಯಿಂದ ಕೂಡಿರುತ್ತದೆ. ಈ ಸಮಯದಲ್ಲಿ ಆರ್ಥಿಕ ವಿಷಯದಲ್ಲಿ ಯಾವುದೇ ರೀತಿಯ ರಿಸ್ಕ್‌ ತೆಗೆದುಕೊಳ್ಳಬೇಡಿ. ಹಣವನ್ನು ಬಹಳ ಜಾಣತನದಿಂದ ಖರ್ಚು ಮಾಡಿ. ಸಾಲ ತೆಗೆದುಕೊಳ್ಳುವ ವಿಚಾರದಲ್ಲಿ ಎಚ್ಚರದಿಂದಿರಿ. ಆಫೀಸಿನಲ್ಲಿ ನಿಮ್ಮ ಸಹೋದ್ಯೋಗಿಗಳ ಜೊತೆ ವ್ಯರ್ಥ ವಾದ ವಿವಾದದಲ್ಲಿ ತೊಡಗಬೇಡಿ. ಆತುರದ ನಿರ್ಧಾರ ತೆಗೆದುಕೊಳ್ಳಬೇಡಿ. ಎಲ್ಲಾ ರೀತಿಯಲ್ಲೂ ಯೋಚಿಸಿ ಕೆಲಸ ಮಾಡಿ.

ಕುಂಭ ರಾಶಿ

ಕುಂಭ ರಾಶಿಯವರು ಶನಿಯ ಹಿಮ್ಮುಖ ಚಲನೆಯಿಂದ ದೊಡ್ಡ ಬದಲಾವಣೆಗಳನ್ನು ಕಾಣುತ್ತಾರೆ. ಉದ್ಯೋಗದಲ್ಲಿ ಭಡ್ತಿ ದೊರೆಯಲಿದೆ. ಆದರೆ ಅದರಲ್ಲೂ ಕೆಲವು ತೊಂದರೆಗಳು ಎದರಾಗಬಹುದು. ಕೆಲಸ ನಿಧಾನಗತಿಯಲ್ಲಿ ಸಾಗಬಹುದು. ಹೊಸ ಸವಾಲುಗಳನ್ನು ಎದುರಿಸಲು ಸಿದ್ಧರಾಗಿ. ಖರ್ಚು ವೆಚ್ಚ ಹೆಚ್ಚಾಗಲಿದೆ. ನಿಮ್ಮ ಬಜೆಟ್‌ನ ಅನುಗಣವಾಗಿ ಖರ್ಚು ಮಾಡಿ. ಹಣಕಾಸಿನ ವಿಚಾರದಲ್ಲಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ. ಸಾಧ್ಯವಾದಷ್ಟು ಪರಿಸ್ಥಿತಿಯನ್ನು ಮುಂದೂಡಲು ಪ್ರಯತ್ನಿಸಿ. ಅವಸರದಲ್ಲಿ ಯಾವುದೇ ರೀತಿಯ ನಿರ್ಧಾರ ತೆಗೆದುಕೊಳ್ಳಬೇಡಿ. ಇಲ್ಲವಾದರೆ ನಷ್ಟ ಅನುಭವಿಸಬಹುದು.