ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Somavathi Amavasya: ಈ 4 ರಾಶಿಯವರಿಗೆ ಅದೃಷ್ಟ ಹೊತ್ತು ತರಲಿದೆ ಸೋಮಾವತಿ ಅಮಾವಾಸ್ಯೆ, ಆದರೆ ಈ ಕ್ರಮ ಪಾಲಿಸೋಕೆ ಮರಿಬೇಡಿ

Somavathi Amavasya: ಈ 4 ರಾಶಿಯವರಿಗೆ ಅದೃಷ್ಟ ಹೊತ್ತು ತರಲಿದೆ ಸೋಮಾವತಿ ಅಮಾವಾಸ್ಯೆ, ಆದರೆ ಈ ಕ್ರಮ ಪಾಲಿಸೋಕೆ ಮರಿಬೇಡಿ

ಜ್ಯೋತಿಷ್ಯಶಾಸ್ತ್ರದಲ್ಲಿ ಅಮಾವಾಸ್ಯೆ, ಹುಣ್ಣಿಮೆಗಳಿಗೂ ಬಹಳ ಮಹತ್ವವಿದೆ. ಇಂದು (ಏಪ್ರಿಲ್‌ 8) ಸೋಮಾವತಿ ಅಮಾವಾಸ್ಯೆ ಇದೆ. ಈ ಅಮಾವಾಸ್ಯೆಯು 4 ರಾಶಿಯವರಿಗೆ ಅದೃಷ್ಟ ಹೊತ್ತು ತರಲಿದೆ. ಈ ರಾಶಿಯವರು ಅಂದುಕೊಂಡ ಕೆಲಸಗಳೆಲ್ಲವೂ ನೆರವೇರಲಿದೆ. ಹಾಗಾದರೆ ಆ 4 ರಾಶಿಯವರು ಯಾರು ನೋಡಿ.

ಸೋಮಾವತಿ ಅಮಾವಾಸ್ಯೆ
ಸೋಮಾವತಿ ಅಮಾವಾಸ್ಯೆ

ಹಿಂದೂ ಧರ್ಮದಲ್ಲಿ ಅಮಾವಾಸ್ಯೆಗೆ ಬಹಳ ಮಹತ್ವವಿದೆ. ಇಂದು (ಏಪ್ರಿಲ್‌ 8) ಅಮಾವಾಸ್ಯೆಯಿದ್ದು, ಇದನ್ನು ಸೋಮಾವತಿ ಅಮಾವಾಸ್ಯೆ ಎನ್ನುತ್ತಾರೆ. ಸೋಮಾವತಿ ಅಮಾವಾಸ್ಯೆಯ ದಿನ ಶಿವನನ್ನು ಪೂಜಿಸಲು, ಗಂಗಾಸ್ನಾನ ಮಾಡಲು ಮತ್ತು ವಂಶಪಾರಂಪರ್ಯ ದೋಷಗಳನ್ನು ನಿವಾರಿಸಲು ವಿಶೇಷವೆಂದು ಪರಿಗಣಿಸಲಾಗಿದೆ.

ಸೋಮಾವತಿ ಅಮಾವಾಸ್ಯೆಯಂದು ಪವಿತ್ರ ನದಿಯಲ್ಲಿ ಸ್ನಾನ ಮಾಡುವುದರಿಂದ ಪೂರ್ವಜರ ಆತ್ಮಕ್ಕೆ ಶಾಂತಿ ಸಿಗುತ್ತದೆ. ಅವರ ಆಶೀರ್ವಾದವು ಸಂತೋಷ ಮತ್ತು ಅದೃಷ್ಟವನ್ನು ಹೆಚ್ಚಿಸುತ್ತದೆ. ಸೋಮಾವತಿ ಅಮಾವಾಸ್ಯೆ ತಿಥಿ ಏಪ್ರಿಲ್ 8 ರಂದು ಬೆಳಿಗ್ಗೆ 3.11 ಕ್ಕೆ ಪ್ರಾರಂಭವಾಗಿ ರಾತ್ರಿ 11:50 ಕ್ಕೆ ಕೊನೆಗೊಳ್ಳುತ್ತದೆ.

ಸೋಮಾವತಿ ಅಮವಾಸ್ಯೆಯ ದಿನವೂ ಸೂರ್ಯಗ್ರಹಣ ಸಂಭವಿಸುತ್ತದೆ. ಹಲವು ವರ್ಷಗಳ ನಂತರ ಸಂಭವಿಸುತ್ತಿರುವ ಮೊದಲ ಸಂಪೂರ್ಣ ಸೂರ್ಯಗ್ರಹಣ ಇದಾಗಿದೆ. ಈ ಸೂರ್ಯಗ್ರಹಣವು ಮೀನ ರಾಶಿಯಲ್ಲಿ ಸಂಭವಿಸುತ್ತದೆ. ಸೋಮಾವತಿ ಅಮಾವಾಸ್ಯೆ ಮತ್ತು ಸೂರ್ಯಗ್ರಹಣ ಇವೆರಡೂ ಕೆಲವರನ್ನು ಸಂಕಷ್ಟಕ್ಕೆ ದೂಡಲಿವೆ ಮತ್ತು ಕೆಲವರು ಅದೃಷ್ಟ ಮತ್ತು ಸಂತೋಷವನ್ನು ಪಡೆಯುತ್ತಾರೆ. ಆದರೆ ಸೂರ್ಯಗ್ರಹಣದ ಪರಿಣಾಮ ಭಾರತದ ಮೇಲಿಲ್ಲ.

ಸೋಮಾವತಿ ಅಮವಾಸ್ಯೆಯ ದಿನ ಮಾಡಬೇಕಾದ ಕೆಲಸಗಳು

ಬೆಳಿಗ್ಗೆ ಸ್ನಾನ ಮಾಡಿದ ನಂತರ ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸಬೇಕು. ಅನ್ನದಾನ, ಪಾದರಕ್ಷೆ, ಚಪ್ಪಲಿ, ಛತ್ರಿ, ವಸ್ತ್ರಗಳನ್ನು ದಾನ ಮಾಡುವುದು ಮುಖ್ಯ. ಹಸುವಿಗೆ ಆಹಾರ ನೀಡಬೇಕು.

ಸೋಮಾವತಿಯ ಅಮಾವಾಸ್ಯೆಯಂದು ಪೂರ್ವಜರಿಗೆ ಎಡೆ ಇಡುವ ಸಂಪ್ರದಾಯವೂ ಇದೆ. ಉಪವಾಸವು ಅದೃಷ್ಟ ಮತ್ತು ಸಂತೋಷವನ್ನು ತರುತ್ತದೆ. ಇಂದು ಪಿತೃಪಿತೃಗಳ ಆರಾಧನೆ ಹೆಚ್ಚು ಮಹತ್ವ ಪಡೆದಿದೆ. ಅಮಾವಾಸ್ಯೆಯ ದಿನ ಕೆಲವು ಪರಿಹಾರ ಕ್ರಮಗಳನ್ನು ಅನುಸರಿಸಿದರೆ, ಸಂಪತ್ತು ದ್ವಿಗುಣಗೊಳ್ಳುತ್ತದೆ.

ಅಮಾವಾಸ್ಯೆಯ ದಿನ ಮಹಾ ಮೃತ್ಯುಂಜಯ ಮಂತ್ರವನ್ನು ಜಪಿಸಬೇಕು. ಅಲ್ಲದೆ ಶಿವನಿಗೆ ಅಭಿಷೇಕ ಮಾಡುವುದರಿಂದ ಒಳ್ಳೆಯ ಫಲಿತಾಂಶ ಸಿಗುತ್ತದೆ. ಹಣಕಾಸಿನ ತೊಂದರೆಗಳು ದೂರವಾಗುತ್ತವೆ ಮತ್ತು ಹಣ ಪಡೆಯುವ ಮಾರ್ಗಗಳು ತೆರೆದುಕೊಳ್ಳುತ್ತವೆ. ಅಶ್ವತ್ಥ ಮರದ ಸುತ್ತ 108 ಪ್ರದಕ್ಷಿಣೆ ಮಾಡಬೇಕು. ಅಶ್ವತ್ಥ ಮರವನ್ನು ಪೂಜಿಸುವುದರಿಂದ ಅನಂತ ಫಲ ದೊರೆಯುತ್ತದೆ.

ಈ ಸೋಮಾವತಿ ಅಮಾವಾಸ್ಯೆಯು ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಅದೃಷ್ಟವನ್ನು ತರಲಿದೆ. ಇದರಿಂದ ಯಾವ ರಾಶಿಯವರಿಗೆ ಅದೃಷ್ಟ ಒಲಿಯುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.

ವೃಷಭ ರಾಶಿ

ಸೋಮಾವತಿ ಅಮಾವಾಸ್ಯೆಯು ವೃಷಭ ರಾಶಿಯವರಿಗೆ ಸಂತೋಷ ಮತ್ತು ಅದೃಷ್ಟವನ್ನು ಹೆಚ್ಚಿಸುತ್ತದೆ. ವೃತ್ತಿಯಲ್ಲಿ ಹೊಸ ಯಶಸ್ಸು ಸಿಗಲಿದೆ. ಹಣಕಾಸಿನ ಪರಿಸ್ಥಿತಿ ಸುಧಾರಿಸಲಿದೆ. ನೀವು ಭೌತಿಕ ಸೌಕರ್ಯಗಳೊಂದಿಗೆ ನಿಮ್ಮ ಜೀವನವನ್ನು ನಡೆಸುತ್ತೀರಿ. ಆದಾಯ ಹೆಚ್ಚಲಿದೆ. ಕೆಲಸದಲ್ಲಿನ ಅಡೆತಡೆಗಳು ನಿವಾರಣೆಯಾಗುತ್ತವೆ. ನೀವು ಮಾಡುವ ಎಲ್ಲಾ ಕೆಲಸ-ಕಾರ್ಯಗಳನ್ನೂ ಯಶಸ್ಸನ್ನು ಪಡೆಯುತ್ತೀರಿ.

ಕನ್ಯಾರಾಶಿ

ಸೋಮಾವತಿ ಅಮಾವಾಸ್ಯೆಯಂದು ಕನ್ಯಾ ರಾಶಿಯವರಿಗೆ ಉತ್ತಮ ಫಲಿತಾಂಶ ಸಿಗಲಿದೆ. ಮದುವೆಯ ಸಾಧ್ಯತೆಗಳಿವೆ. ಹಣದ ಹರಿವು ಹೆಚ್ಚಾಗುತ್ತದೆ. ಉದ್ಯೋಗಿಗಳಿಗೆ ಬಡ್ತಿ ಅಥವಾ ಇನ್ಕ್ರಿಮೆಂಟ್ ಸಿಗುತ್ತದೆ.

ತುಲಾ ರಾಶಿ

ವ್ಯವಹಾರವನ್ನು ವಿಸ್ತರಿಸಿ. ಹಣದ ಹರಿವು ಹೆಚ್ಚಾಗುತ್ತದೆ. ಬಹಳ ದಿನಗಳಿಂದ ಸ್ಥಗಿತಗೊಂಡಿದ್ದ ಕೆಲಸಗಳು ಮುಂದುವರಿಯಲಿವೆ. ಹಣಕಾಸಿನ ಪರಿಸ್ಥಿತಿಯು ಬಲವಾಗಿರುತ್ತದೆ. ನೀವು ಆಸ್ತಿಯನ್ನು ಆನುವಂಶಿಕವಾಗಿ ಪಡೆಯುತ್ತೀರಿ. ರಾಜಕೀಯದಲ್ಲಿ ಮೇಲುಗೈ ಸಾಧಿಸುವಿರಿ. ಸಂತಾನದ ಕಡೆಯಿಂದ ಒಳ್ಳೆಯ ಸುದ್ದಿ ಸಿಗಲಿದೆ.

ಕುಂಭ ರಾಶಿ

ಸೋಮಾವತಿ ಅಮಾವಾಸ್ಯೆಯ ಪ್ರಭಾವದಿಂದ ಕುಂಭ ರಾಶಿಯವರಿಗೆ ಹಣದ ಹೊಸ ಮಾರ್ಗಗಳು ತೆರೆದುಕೊಳ್ಳುತ್ತವೆ. ಆಧ್ಯಾತ್ಮಿಕ ಅನ್ವೇಷಣೆಯಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಆರೋಗ್ಯ ಸಂಬಂಧಿ ಸಮಸ್ಯೆಗಳಿಂದ ಮುಕ್ತಿ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸುತ್ತಾರೆ. ನಿಮ್ಮ ವೃತ್ತಿಜೀವನದಲ್ಲಿ ನೀವು ಉತ್ತಮ ಯಶಸ್ಸನ್ನು ಪಡೆಯುತ್ತೀರಿ. ಜೀವನದ ಪ್ರತಿಯೊಂದು ಅಂಶದಲ್ಲೂ ಸಕಾರಾತ್ಮಕ ಬದಲಾವಣೆಗಳಿವೆ.