ಕನಸಿನಲ್ಲಿ ಮಾಂಸವನ್ನು ನೋಡುವುದು ಒಳ್ಳೆಯದೋ ಕೆಟ್ಟದ್ದೋ? ಮಾಂಸದ ಕನಸು ಬಿದ್ದರೆ ಏನರ್ಥ? ಇಲ್ಲಿದೆ ಉತ್ತರ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಕನಸಿನಲ್ಲಿ ಮಾಂಸವನ್ನು ನೋಡುವುದು ಒಳ್ಳೆಯದೋ ಕೆಟ್ಟದ್ದೋ? ಮಾಂಸದ ಕನಸು ಬಿದ್ದರೆ ಏನರ್ಥ? ಇಲ್ಲಿದೆ ಉತ್ತರ

ಕನಸಿನಲ್ಲಿ ಮಾಂಸವನ್ನು ನೋಡುವುದು ಒಳ್ಳೆಯದೋ ಕೆಟ್ಟದ್ದೋ? ಮಾಂಸದ ಕನಸು ಬಿದ್ದರೆ ಏನರ್ಥ? ಇಲ್ಲಿದೆ ಉತ್ತರ

ಕೆಲವೊಮ್ಮೆ ನಮಗೆ ಅದ್ಭುತವಾದ ಕನಸುಗಳು ಬೀಳುತ್ತವೆ, ಇನ್ನೂ ಕೆಲವೊಮ್ಮೆ ಕನಸುಗಳು ಭಯ ಹುಟ್ಟಿಸುತ್ತವೆ. ಅಂತಹ ಕನಸುಗಳು ಬಿದ್ದಾಗ ಮುಂದೆ ಏನಾಗಬಹುದು ಎನ್ನುವ ಚಿಂತೆ ಕಾಡುವುದು ಸಹಜ. ಇಂದು ಕನಸಿನಲ್ಲಿ ಮಾಂಸ ಕಂಡರೆ ಏನರ್ಥ ಎಂಬುದನ್ನು ತಿಳಿಯೋಣ.

ಕನಸಿನಲ್ಲಿ ಮಾಂಸವನ್ನು ನೋಡುವುದು ಒಳ್ಳೆಯದೋ ಕೆಟ್ಟದ್ದೋ? ಮಾಂಸದ ಕನಸು ಬಿದ್ದರೆ ಏನರ್ಥ?
ಕನಸಿನಲ್ಲಿ ಮಾಂಸವನ್ನು ನೋಡುವುದು ಒಳ್ಳೆಯದೋ ಕೆಟ್ಟದ್ದೋ? ಮಾಂಸದ ಕನಸು ಬಿದ್ದರೆ ಏನರ್ಥ?

ನಿದ್ದೆ ಮಾಡುವಾಗ ಕನಸು ಬೀಳುವುದು ಸಹಜ. ಕೆಲವೊಮ್ಮೆ ನಮಗೆ ಅದ್ಭುತವಾದ, ಸುಂದರ ಕನಸು ಬೀಳುತ್ತದೆ. ಆದರೆ ಇನ್ನೂ ಕೆಲವೊಮ್ಮೆ ಭಯಾನಕ ಕನಸು ಬೀಳುತ್ತದೆ. ಆದರೆ ನಾವು ಕಂಡ ಕನಸಿಗೆ ಅರ್ಥವೇನು ಎನ್ನುವುದು ಮಾತ್ರವಲ್ಲ ತಿಳಿಯುವುದಿಲ್ಲ.

ಕನಸಿನ ಸಿದ್ಧಾಂತದ ಪ್ರಕಾರ, ಪ್ರತಿಯೊಂದು ಕನಸಿಗೂ ಒಂದೊಂದು ಅರ್ಥವಿದೆ. ನಮ್ಮ ಕನಸುಗಳು ಭವಿಷ್ಯದಲ್ಲಿ ಒಳ್ಳೆಯ ಮತ್ತು ಕೆಟ್ಟ ಫಲಿತಾಂಶಗಳನ್ನು ಸೂಚಿಸುತ್ತವೆ. ಕನಸುಗಳು ಕೆಲವೊಮ್ಮೆ ಜಾಗರೂಕರಾಗಿರಬೇಕಾದ ಅಗತ್ಯವನ್ನು ಸೂಚಿಸುತ್ತವೆ.

ಕನಸಿನಲ್ಲಿ ಮಾಂಸ ಕಂಡರೆ ಏನರ್ಥ ಎಂಬುದು ನಿಮ್ಮ ತಲೆಯಲ್ಲೂ ಇರಬಹುದು, ನೀವು ಮಾಂಸ ತಿನ್ನುವ ಅಥವಾ ಮಾಂಸದ ಕನಸು ಕಂಡಿರಬಹುದು. ಹಾಗಾದರೆ ಮಾಂಸದ ಕನಸಿನ ಅರ್ಥವೇನು ಎಂಬುದನ್ನು ನೋಡೋಣ.

ಕನಸಿನಲ್ಲಿ ಮಾಂಸ ನೋಡುವುದರ ಅರ್ಥ

1. ಮಾಂಸ ಕತ್ತರಿಸುವಂತೆ ಕನಸು: ಮಾಂಸ ಕತ್ತರಿಸುವ ಕನಸು ಬಿದ್ದರೆ ಅದನ್ನು ಒಳ್ಳೆಯ ಸಂಕೇತವೆಂದು ಪರಿಗಣಿಸಬೇಕು ಎಂದು ಹೇಳಲಾಗುತ್ತದೆ. ಈ ಕನಸು ಅನುವಂಶಿಕವಾಗಿ ಆರ್ಥಿಕ ಲಾಭದ ಸಾಧ್ಯತೆಗಳಿವೆ ಎಂದು ಸೂಚಿಸುತ್ತದೆ.

2. ಮಾಂಸ ತಿನ್ನುವಂತೆ ಕನಸು: ಮಾಂಸ ತಿನ್ನುವ ಕನಸು ಬಿದ್ದರೆ ನಕಾರಾತ್ಮಕ ಅರ್ಥ ಎಂದು ತಜ್ಞರು ಹೇಳುತ್ತಾರೆ. ಅಂತಹ ಕನಸು ಕಂಡರೆ, ಆಪ್ತ ಸ್ನೇಹಿತರೊಂದಿಗೆ ಭಿನ್ನಾಭಿಪ್ರಾಯಗಳಾಗುವ ಸಾಧ್ಯತೆ ಇದೆ ಎಂದು ಸ್ವಪ್ನಶಾಸ್ತ್ರ ಹೇಳುತ್ತದೆ.

3. ಕೊಳೆತ ಮಾಂಸದ ಕನಸು: ನೀವು ಕನಸಿನಲ್ಲಿ ಕೊಳೆತ ಮಾಂಸವನ್ನು ನೋಡಿದರೆ, ಅದು ನಿಮ್ಮ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಮಹಿಳೆಯರು ಕೋಳಿ ಮಾಂಸ ತಿನ್ನುವ ಕನಸು ಕಂಡರೆ ಅದನ್ನು ಶುಭ ಶಕುನವೆಂದು ಪರಿಗಣಿಸಬೇಕು ಎಂದು ಹೇಳಲಾಗುತ್ತದೆ.

4. ಅಡುಗೆ ಮಾಡಿ ಮಾಂಸ ತಿನ್ನುವ ಕನಸು: ನೀವು ಮಾಂಸವನ್ನು ಬೇಯಿಸಿ ತಕ್ಷಣ ತಿನ್ನುವ ಕನಸು ಕಂಡರೆ, ಅದನ್ನು ಒಳ್ಳೆಯ ಸಂಕೇತವೆಂದು ಪರಿಗಣಿಸಬೇಕು. ಸ್ನೇಹಿತರೊಂದಿಗೆ ಮಾಂಸ ತಿನ್ನುವ ಕನಸು ಕಾಣುವುದನ್ನು ಶುಭ ಸಂಕೇತವೆಂದು ಪರಿಗಣಿಸಬೇಕು ಎಂದು ಸ್ವಪ್ನಶಾಸ್ತ್ರದಲ್ಲಿ ಹೇಳಲಾಗಿದೆ.

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.