ಕ್ರೀಡೆಯಲ್ಲಿ ಅತೀವ ಆಸಕ್ತಿ ಹೊಂದಿರುವ 4 ರಾಶಿಯವರಿವರು; ಇವರ ಕ್ರೀಡಾಸಕ್ತಿಯ ಬಗ್ಗೆ ನೀವು ತಿಳಿಯಲೇಬೇಕು
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಕ್ರೀಡೆಯಲ್ಲಿ ಅತೀವ ಆಸಕ್ತಿ ಹೊಂದಿರುವ 4 ರಾಶಿಯವರಿವರು; ಇವರ ಕ್ರೀಡಾಸಕ್ತಿಯ ಬಗ್ಗೆ ನೀವು ತಿಳಿಯಲೇಬೇಕು

ಕ್ರೀಡೆಯಲ್ಲಿ ಅತೀವ ಆಸಕ್ತಿ ಹೊಂದಿರುವ 4 ರಾಶಿಯವರಿವರು; ಇವರ ಕ್ರೀಡಾಸಕ್ತಿಯ ಬಗ್ಗೆ ನೀವು ತಿಳಿಯಲೇಬೇಕು

ಯಾವ ರಾಶಿಯವರಿಗೆ ಕ್ರೀಡಾರಂಗದಲ್ಲಿ ಅತಿಯಾದ ಆಸಕ್ತಿಯಿರುತ್ತದೆ, ಯಾವ ನಕ್ಷತ್ರದವರ ಭವಿಷ್ಯ ಕ್ರೀಡಾಕ್ಷೇತ್ರದಲ್ಲಿದೆ? ಕ್ರೀಡೆಯಲ್ಲಿ ಯಾವ ರಾಶಿಯವರು ಸಾಧನೆ ಮಾಡಬಹುದು ಎಂಬಿತ್ಯಾದಿ ವಿವರ ಇಲ್ಲಿದೆ. ಈ 4 ರಾಶಿಯವರು ಕ್ರೀಡಾರಂಗದಲ್ಲಿ ವಿಶಿಷ್ಟ ಸಾಧನೆ ಮಾಡ್ತಾರಂತೆ.

ಕ್ರೀಡೆಯಲ್ಲಿ ಅತೀವ ಆಸಕ್ತಿ ಹೊಂದಿರುವ 4 ರಾಶಿಯವರಿವರು; ಇವರ ಕ್ರೀಡಾಸಕ್ತಿಯ ಬಗ್ಗೆ ನೀವು ತಿಳಿಯಲೇಬೇಕು
ಕ್ರೀಡೆಯಲ್ಲಿ ಅತೀವ ಆಸಕ್ತಿ ಹೊಂದಿರುವ 4 ರಾಶಿಯವರಿವರು; ಇವರ ಕ್ರೀಡಾಸಕ್ತಿಯ ಬಗ್ಗೆ ನೀವು ತಿಳಿಯಲೇಬೇಕು

ಕ್ರೀಡೆ ಎನ್ನುವುದು ಎಲ್ಲರಿಗೂ ಒಲಿಯುವ ವಿದ್ಯೆಯಲ್ಲ. ಕೆಲವರು ಕ್ರೀಡೆಗಳ ಬಗ್ಗೆ ಸಹಜವಾಗಿಯೇ ಅತಿಯಾದ ಆಸಕ್ತಿ, ಪ್ರೀತಿ ಹೊಂದಿರುತ್ತಾರೆ. ಇನ್ನೂ ಕೆಲವರು ಅದರ ಬಗ್ಗೆ ಅಷ್ಟಾಗಿ ಉತ್ಸಾಹ ಹೊಂದಿರುವುದಿಲ್ಲ. ಅದು ಯಾಕಿರಬಹುದು ಎಂದು ನೀವು ಯೋಚಿಸಿದ್ದೀರಾ? ಹೌದು, ರಾಶಿ, ನಕ್ಷತ್ರಗಳ ಆಧಾರದ ಮೇಲೆಯೇ ಪ್ರತಿಯೊಬ್ಬ ವ್ಯಕ್ತಿಯ ಆಸಕ್ತಿ ಅವಲಂಬಿಸಿದೆ.

ಅನೇಕ ವರ್ಷಗಳಿಂದಲೂ ವ್ಯಕ್ತಿಯ ವ್ಯಕ್ತಿತ್ವ, ಗುಣಲಕ್ಷಣಗಳು ಮತ್ತು ಆದ್ಯತೆಗಳನ್ನು ತಿಳಿಯುವುದರ ಜೊತೆಗೆ ಅಥ್ಲೆಟಿಕ್ಸ್ ಕಡೆಗೆ ಹೆಚ್ಚು ಒಲವು ತೋರುವ ರಾಶಿಗಳ ಕುರಿತು ತಿಳಿಯಲು ಜ್ಯೋತಿಷ್ಯ ಶಾಸ್ತ್ರವನ್ನು ಬಳಸಲಾಗುತ್ತಿದೆ. ಹಾಗಾದರೆ ಯಾವ ರಾಶಿ, ನಕ್ಷತ್ರದ ವ್ಯಕ್ತಿಗಳು ಕ್ರೀಡೆಯಲ್ಲಿ ಹೆಚ್ಚಿಗೆ ಆಸಕ್ತಿ ಹೊಂದಿದ್ದಾರೆ ಎಂದು ತಿಳಿಯುವ ಕುತೂಹಲ ನಿಮಗಿದೆಯಾ..? ಇಲ್ಲಿದೆ ಮಾಹಿತಿ

ಮೇಷ: ಸ್ಪರ್ಧಾತ್ಮಕ ಮನೋಭಾವದವರು

ಮೇಷ ರಾಶಿಯವರು ಛಲವಾದಿಗಳು. ಸ್ಪರ್ಧಾತ್ಮಕ ಮನೋಭಾವದವರಾಗಿದ್ದು ತಮ್ಮ ಶಕ್ತಿ ಸಾಮರ್ಥ್ಯವನ್ನು ಹೆಚ್ಚಿಗೆ ನಂಬುವವರು. ಇವರು ಬಹು ಬೇಗನೆ ಕ್ರೀಡಾ ಜಗತ್ತಿನಲ್ಲಿ ಅಭಿವೃದ್ಧಿ ಹೊಂದುತ್ತಾರೆ, ಹೆಸರು ಮಾಡುತ್ತಾರೆ. ನಾಯಕತ್ವ ಗುಣವುಳ್ಳ ಮೇಷ ರಾಶಿಯವರು, ಮೈದಾನದಲ್ಲಿ ತಮ್ಮ ತಂಡವನ್ನು ಗೆಲುವಿನತ್ತ ಮುನ್ನಡೆಸುವಲ್ಲಿ ಸಾಕಷ್ಟು ಪರಿಶ್ರಮಿಸುತ್ತಾರೆ. ಅವರ ನಿರ್ಭೀತ ಸ್ವಭಾವ ಮತ್ತು ಶೀಘ್ರವಾಗಿ ನಿರ್ಣಯವನ್ನು ಕೈಗೊಳ್ಳುವ ಗುಣ ಕ್ರೀಡಾರಂಗದಲ್ಲಿ ಅವರನ್ನು ಮೇಲುಗೈ ಸಾಧಿಸುವಂತೆ ಮಾಡುತ್ತದೆ.

ಸಿಂಹ: ಅಚ್ಚರಿ ಮೂಡಿಸುವ ಕ್ರೀಡಾಪಟುಗಳು

ಸಿಂಹ ರಾಶಿಯವರು ತಮ್ಮ ಆತ್ಮವಿಶ್ವಾಸ ಮತ್ತು ವರ್ಚಸ್ಸಿನಿಂದ ಹೆಸರು ಮಾಡುತ್ತಾರೆ. ಜಿಮ್ನಾಸ್ಟಿಕ್ಸ್‌ನ ಬೆರಗುಗೊಳಿಸುವ ಪ್ರದರ್ಶನಗಳಿಂದ ತೊಡಗಿ, ಬ್ಯಾಸ್ಕೆಟ್‌ಬಾಲ್ ಅಂಕಣದಲ್ಲಿ ಎಲ್ಲರ ಗಮನ ಸೆಳೆಯುವವರೆಗೆ, ಸಿಂಹ ರಾಶಿಯವರ ಕ್ರೀಡಾ ಪ್ರೀತಿ ಅಚ್ಚರಿ ಮೂಡಿಸುತ್ತದೆ. ಅಥ್ಲೆಟಿಕ್ಸ್‌ ಬಗ್ಗೆ ಅವರ ಆಸಕ್ತಿ ಹಾಗೂ ಕೇಂದ್ರಬಿಂದುವಾಗಬೇಕೆಂಬ ಅವರ ಹಂಬಲ ಇವೆರಡರಿಂದಾಗಿ ಯಾವುದೇ ಆಟದಲ್ಲಿಯೂ ಅಸಾಧಾರಣ ಪ್ರದರ್ಶನ ತೋರಲು ಅವರಿಗೆ ಸಾಧ್ಯವಾಗುತ್ತದೆ.

ಧನು ರಾಶಿ: ಸಾಹಸ ಗುಣದ ಛಲವಾದಿಗಳು

ಧನು ರಾಶಿಯವರು ಯಾವಾಗಲೂ ಕ್ರೀಡಾರಂಗದಲ್ಲಿ ಹೊಸ ಅನುಭವಗಳನ್ನು ಪಡೆಯಲು ಬಯಸುವ ವ್ಯಕ್ತಿಗಳಾಗಿರುತ್ತಾರೆ. ಇದು ಉತ್ತಮ ಕ್ರೀಡಾಪಟುಗಳ ಗುಣಲಕ್ಷಣವೂ ಹೌದು. ಸ್ನೋಬೋರ್ಡ್‌ನಲ್ಲಿ ಇಳಿಜಾರುಗಳನ್ನು ದಾಟುವುದಿರಲಿ ಅಥವಾ ಸರ್ಫ್‌ಬೋರ್ಡ್‌ನಲ್ಲಿ ಅಲೆಗಳಲ್ಲಿ ಏರಿಳಿತವನ್ನು ಕಾಣುವುದಿರಲಿ, ಧನು ರಾಶಿಗಳು ತಮ್ಮ ಮಿತಿಗಳನ್ನು ದಾಟಿ ಪ್ರಯತ್ನಗಳನ್ನು ಮಾಡುವವರಾಗಿರುತ್ತಾರೆ. ಅವರ ಸಾಹಸ ವ್ಯಕ್ತಿತ್ವವೇ ಅವರನ್ನು ಕ್ರೀಡಾರಂಗದಲ್ಲಿ ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತದೆ.

ಕುಂಭ: ಹೊಸತನಕ್ಕೆ ಪ್ರಾಶಸ್ತ್ಯ ನೀಡುವವರು

ಕುಂಭ ರಾಶಿಯವರು ಯಾರನ್ನೂ ಅವಲಂಬಿಸದೆ ಜೀವನ ಕಟ್ಟಿಕೊಳ್ಳುವ ವ್ಯಕ್ತಿತ್ವದವರು. ಸ್ವಂತಿಕೆ ಹಾಗೂ ಚುರುಕಾದ ಬುದ್ಧಿಶಕ್ತಿ ಇವರ ಬಂಡವಾಳ. ಜೀವನದ ಬಗೆಗೆ ಮುಂದಾಲೋಚನೆಯನ್ನು ಹೊಂದಿರುವ ಈ ವ್ಯಕ್ತಿಗಳು ಯಾವಾಗಲೂ ತಮ್ಮನ್ನು ಅನೇಕ ಸವಾಲುಗಳಿಗೆ ಒಡ್ಡಿಕೊಳ್ಳುವ ಮೂಲಕ ಹೊಸ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಹೊಸ ತರಬೇತಿ ತಂತ್ರಗಳನ್ನು ಆವಿಷ್ಕರಿಸುವಲ್ಲಿ ಅಥವಾ ಕ್ರೀಡಾರಂಗದಲ್ಲಿ ಹೊಸತನವನ್ನು ತರುವಲ್ಲಿ ಇವರಿಗೆ ಹೆಚ್ಚಿನ ಆಸಕ್ತಿಯಿರುತ್ತದೆ. ಇದು ಕ್ರೀಡಾ ಜಗತ್ತಿನಲ್ಲಿ ಅಭಿವೃದ್ಧಿ ಹೊಂದಲು ಅವಕಾಶಗಳನ್ನು ಸೃಷ್ಟಿಸಿಕೊಡುತ್ತದೆ.

ನೀವು ಈ ನಾಲ್ಕರಲ್ಲಿ ಯಾವುದಾದರೊಂದು ರಾಶಿಯವರಾಗಿದ್ದಲ್ಲಿ ಕ್ರೀಡಾಕ್ಷೇತ್ರ ನಿಮ್ಮನ್ನು ಗುರುತಿಸಲಿದೆ. ಕ್ರೀಡಾರಂಗದಲ್ಲಿ ನೀವು ಸಾಕಷ್ಟು ಸಾಧನೆ ಮಾಡುವವರಾಗಿರುತ್ತೀರಿ. ಆಸಕ್ತಿಯ ವಿಚಾರಗಳಿಗೆ ಒತ್ತು ನೀಡಿ, ಮುನ್ನಡೆಯುವ ಮೂಲಕ ಕ್ರೀಡಾಕ್ಷೇತ್ರದಲ್ಲಿ ಉಜ್ವಲ ಭವಿಷ್ಯವನ್ನು ನೀವು ಕಟ್ಟಿಕೊಳ್ಳಲು ಸಾಧ್ಯ.

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.)

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.