ತಿರುಪತಿ ಕಲಬೆರಕೆ ಪ್ರಸಾದ ತಿಂದಿದ್ದೀರಾ, ಪ್ರಾಯಶ್ಚಿತ್ತ ತುಂಬ ಸರಳ, ಹೀಗೆ ಮಾಡಿ- ಕೂಡಲಿ ಅಭಿನವ ಶಂಕರ ಭಾರತಿ ಸ್ವಾಮೀಜಿ ವಿವರಣೆ-spiritual news tirupati laddu abhinava shankara bharati swamiji provided simple method to perform prayaschitta uks ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ತಿರುಪತಿ ಕಲಬೆರಕೆ ಪ್ರಸಾದ ತಿಂದಿದ್ದೀರಾ, ಪ್ರಾಯಶ್ಚಿತ್ತ ತುಂಬ ಸರಳ, ಹೀಗೆ ಮಾಡಿ- ಕೂಡಲಿ ಅಭಿನವ ಶಂಕರ ಭಾರತಿ ಸ್ವಾಮೀಜಿ ವಿವರಣೆ

ತಿರುಪತಿ ಕಲಬೆರಕೆ ಪ್ರಸಾದ ತಿಂದಿದ್ದೀರಾ, ಪ್ರಾಯಶ್ಚಿತ್ತ ತುಂಬ ಸರಳ, ಹೀಗೆ ಮಾಡಿ- ಕೂಡಲಿ ಅಭಿನವ ಶಂಕರ ಭಾರತಿ ಸ್ವಾಮೀಜಿ ವಿವರಣೆ

ತಿರುಮಲ ತಿರುಪತಿಯಲ್ಲಿ ಇಂದಿನಿಂದ ಮೂರು ದಿನ ಮಹಾಶಾಂತಿ ಯಾಗ ಮತ್ತು ಪ್ರಾಯಶ್ಚಿತ್ತ ವಿಧಿ ವಿಧಾನಗಳು ನಡೆಯುತ್ತಿವೆ. ಇದೇ ಸಂದರ್ಭದಲ್ಲಿ ಹಲವರು ತಾವೂ ಪ್ರಾಯಶ್ಚಿತ್ತ ಮಾಡಿಕೊಳ್ಳುತ್ತಿದ್ದಾರೆ. ನೀವು ತಿರುಪತಿ ಕಲಬೆರಕೆ ಪ್ರಸಾದ ತಿಂದಿದ್ದೀರಾ, ಪ್ರಾಯಶ್ಚಿತ್ತ ತುಂಬ ಸರಳ, ಹೀಗೆ ಮಾಡಿ- ಕೂಡಲಿ ಅಭಿನವ ಶಂಕರ ಭಾರತೀ ಸ್ವಾಮೀಜಿ ವಿವರಣೆ ನೀಡಿದ್ದಾರೆ. ಆ ವಿವರ ಇಲ್ಲಿದೆ.

ತಿರುಪತಿ ಕಲಬೆರಕೆ ಪ್ರಸಾದ ತಿಂದಿದ್ದೀರಾ, ಪ್ರಾಯಶ್ಚಿತ್ತ ತುಂಬ ಸರಳ, ಹೀಗೆ ಮಾಡಿ- ಕೂಡಲಿ ಅಭಿನವ ಶಂಕರ ಭಾರತಿ ಸ್ವಾಮೀಜಿ ವಿವರಣೆ ನೀಡಿದ್ದಾರೆ.
ತಿರುಪತಿ ಕಲಬೆರಕೆ ಪ್ರಸಾದ ತಿಂದಿದ್ದೀರಾ, ಪ್ರಾಯಶ್ಚಿತ್ತ ತುಂಬ ಸರಳ, ಹೀಗೆ ಮಾಡಿ- ಕೂಡಲಿ ಅಭಿನವ ಶಂಕರ ಭಾರತಿ ಸ್ವಾಮೀಜಿ ವಿವರಣೆ ನೀಡಿದ್ದಾರೆ.

ಬೆಂಗಳೂರು: ತಿರುಪತಿ ಪ್ರಸಾದಕ್ಕೆ ಕಲಬೆರಕೆ ತುಪ್ಪ ಬಳಕೆಯಾಗಿದ್ದು, ಅದರಲ್ಲಿ ಪ್ರಾಣಿ ಕೊಬ್ಬು ಸೇರಿದ್ದು ಹಿಂದು ಸಮುದಾಯದವರ ಕಳವಳಕ್ಕೆ ಕಾರಣವಾಗಿದೆ. ಈ ನಡುವೆ, ತಿರುಪತಿ ದೇವಸ್ಥಾನದಲ್ಲಿ ಕೂಡ ಇಂದಿನಿಂದ ಮೂರು ದಿನ ಮಹಾ ಶಾಂತಿ ಯಾಗ ನಡೆಯುತ್ತಿದ್ದು, ಶುದ್ಧೀಕರಣ ಪ್ರಕ್ರಿಯೆ ಶುರುವಾಗಿದೆ.

ಈ ನಡುವೆ, ಇದು ಪ್ರಾಯಶ್ಚಿತ್ತ ಕರ್ಮವಾಗಿದ್ದು, ಅರಿವಿಲ್ಲದೇ ಪ್ರಸಾದ ಸೇವಿಸಿದವರು ಕೂಡ ಈ ಅಪಚಾರದ ವಿರುದ್ಧ ಪ್ರಾಯಶ್ಚಿತ್ತ ಮಾಡಬೇಕಾದ ಪರಿಸ್ಥಿತಿ ಬಂದೊದಗಿದೆ. ಇದನ್ನು ಈಗಾಗಲೇ ಅನೇಕರು ಮಾಡತೊಡಗಿದ್ದಾರೆ. ಇದರಂತೆ, ತಿರುಪತಿಯ ಕಲಬೆರಕೆ ಪ್ರಸಾದ ತಿಂದವರು ಮಾಡಬಹುದಾದ ಸರಳ ಪ್ರಾಯಶ್ಚಿತ್ತ ವಿಧಾನವನ್ನು ಕೂಡಲಿ ಶೃಂಗೇರಿ ಮಹಾಸಂಸ್ಥಾನದ ಅಭಿನವ ಶಂಕರ ಭಾರತೀ ಸ್ವಾಮೀಜಿ ವಿವರಿಸಿದ್ದಾರೆ. ಅವರೂ ಸ್ವತಃ ಇಂದಿನಿಂದ (ಸೆಪ್ಟೆಂಬರ್ 23) ಮೂರು ದಿನ ಪ್ರಾಯಶ್ಚಿತ್ತ ಮಾಡಿಕೊಳ್ಳುತ್ತಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇಂದಿನಿಂದ ಮೂರು ದಿನ ಅಭಿನವ ಶಂಕರ ಭಾರತೀ ಸ್ವಾಮೀಜಿ ಪ್ರಾಯಶ್ಚಿತ್ತ ಅನುಷ್ಠಾನ

ಪ್ರಾಯಶ್ಚಿತ್ತ ವಿಧಾನವನ್ನು ವಿವರಿಸಿರುವ ಅಭಿನವ ಶಂಕರ ಭಾರತೀ ಸ್ವಾಮೀಜಿ ಸ್ವತಃ ತಾವು ಕೂಡ ಶಾಸ್ತ್ರೀಯವಾದ ಪ್ರಾಯಶ್ಚಿತ್ತ ವಿಧಾನವನ್ನು ಅನುಸರಿಸುತ್ತಿದ್ದಾರೆ. ಇದಕ್ಕಾಗಿ ಇಂದಿನಿಂದ ಮೂರು ದಿನಗಳ ಕಾಲ ಉಪವಾಸ ಹಾಗೂ ಮೌನ ವ್ರತ ಕೈಗೊಳ್ಳಲಿದ್ದಾರೆ ಮಠದ ವಕ್ತಾರರು ತಿಳಿಸಿದ್ದಾರೆ.

“ತಿರುಪತಿಯ ಪ್ರಸಾದದ ವಿಷಯದಲ್ಲಿ ಸರ್ಕಾರಿ ವ್ಯವಸ್ಥೆಯು ಮಾಡಿದ ಅಪಚಾರವು ಜಘನ್ಯವಾಗಿದ್ದು, ಇದಕ್ಕೆ ಕಾರಣವಾಗಿರುವ ದೇವಸ್ಥಾನಗಳ ಮೇಲೆ ಇರುವ ಸರ್ಕಾರದ ಹಿಡಿತವನ್ನು ಹಿಂತೆಗೆದುಕೊಳ್ಳುವಂತೆ ಸಮಾಜವು ಒತ್ತಾಯಿಸಬೇಕಾಗಿದೆ. ಆದರೆ ಅದರ ಜೊತೆಗೆ, ಈ ಸಂದರ್ಭದಲ್ಲಿ ತಮ್ಮ ಆಧ್ಯಾತ್ಮಿಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಸಾರ್ವಜನಿಕರು, ಈಗಾಗಲೇ ನಡೆದಿರುವ ಅಪಚಾರಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕಾಗಿದೆ. ಈ ಪ್ರಾಯಶ್ಚಿತ್ತವನ್ನು ಎಲ್ಲರೂ ತಮ್ಮ ಮನೆಯಲ್ಲಿಯೇ ಸರಳವಾಗಿ ಮಾಡಿಕೊಳ್ಳಬಹುದು” ಎಂದು ಅಭಿನವ ಶಂಕರ ಭಾರತೀ ಸ್ವಾಮೀಜಿ ಹೇಳಿದ್ದಾರೆ.

ಹಿಂದೂ ಸಮಾಜವು ಸಾಮಾಜಿಕ ಜಾಗೃತಿಯ ಜೊತೆಗೆ ತಮ್ಮ ಆಧ್ಯಾತ್ಮಿಕ ಸಾಮರ್ಥ್ಯವನ್ನೂ ಹೆಚ್ಚಿಸಿಕೊಳ್ಳಲು ಇದೊಂದು ಮಾರ್ಗವಾಗಿದೆ. ಒಗ್ಗಟ್ಟಿನಲ್ಲಿ ಬಲವಿದೆ. ಆದರೆ ಆ ಬಲವು ಕೇವಲ ಸಾಮಾಜಿಕ ಹಾಗೂ ರಾಜಕೀಯ ಸಂಖ್ಯಾಬಲವು ಮಾತ್ರವಲ್ಲದೇ, ಆಧ್ಯಾತ್ಮಿಕ ತಳಹದಿಯ ಮೇಲೆ ನಿರ್ಮಾಣವಾದ ಬಲವಾಗಬೇಕು. ಆಗ ಮಾತ್ರವೇ ದುಷ್ಟಶಕ್ತಿಗಳ ದಮನವು ಸಾಧ್ಯ ಎಂದು ಸ್ವಾಮೀಜಿ ಅಭಿಪ್ರಾಯ ಪಟ್ಟಿದ್ದಾರೆ.

ತಿರುಪತಿ ಕಲಬೆರಕೆ ಪ್ರಸಾದ ಸೇವನೆ; ಸರಳ ಪ್ರಾಯಶ್ಚಿತ್ತ ವಿಧಾನ

ತಿರುಪತಿಯ ಪ್ರಸಾದದ ವಿಷಯದಲ್ಲಿ ನಡೆದ ಅಪಚಾರದ ಶುದ್ಧಿಗಾಗಿ ಹಾಗೂ ದುಷ್ಟದಮನಕ್ಕೆ ಬೇಕಾದ ಆಧ್ಯಾತ್ಮಿಕ ಶಕ್ತಿವರ್ಧನೆಗಾಗಿ ಸರಳ ಪ್ರಾಯಶ್ಚಿತ್ತ ವಿಧಾನವನ್ನು ಸ್ವಾಮೀಜಿಯವರು ಶೇರ್ ಮಾಡಿದ್ದು, ಅದರಲ್ಲಿ ಪ್ರತಿ ಹಂತವನ್ನೂ ವಿವರಿಸಲಾಗಿದೆ.

ಶುದ್ಧಿ ಹಾಗೂ ಪ್ರಾಯಶ್ಚಿತ್ತ ವಿಧಾನವು ಅತ್ಯಂತ ಸರಳವಾಗಿದ್ದು, ನಾಲ್ಕೂ ವರ್ಣಗಳ ಎಲ್ಲ ಸ್ತ್ರೀ-ಪುರುಷರು, ವಯಸ್ಸು, ಜಾತಿ, ಲಿಂಗ ಇತ್ಯಾದಿ ಯಾವುದೇ ಭೇದವಿಲ್ಲದೇ, ಹಿಂದೂ ಧರ್ಮದ ಎಲ್ಲರೂ ಆಚರಿಸಬಹುದಾಗಿದೆ. ಇದಕ್ಕೆ ಯಾವುದೇ ಪುರೋಹಿತರ ಅಗತ್ಯ ಇಲ್ಲ. ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ಮಾಡಿಕೊಳ್ಳಬಹುದು ಎಂದು ಅಭಿನವ ಶಂಕರ ಭಾರತೀ ಸ್ವಾಮೀಜಿ ವಿವರಿಸಿದ್ದಾರೆ.

ಪ್ರಾಯಶ್ಚಿತ್ತ ಎಂಬುದು ಕೇವಲ ಶರೀರದ ಶುದ್ಧಿ ಪ್ರಕ್ರಿಯೆಯಲ್ಲ. ಅದು ಚಿತ್ರದ ಮೇಲೆ ಸಂಸ್ಕಾರ ಉಂಟು ಮಾಡುವ, ಮನಸ್ಸನ್ನು ಮಹತ್ಕಾರ್ಯಕ್ಕೆ ಸಿದ್ಧಗೊಳಿಸುವ, ಹಿಂದೂ ಸಮಾಜದ ಉನ್ನತಿಗೆ ಭವಿಷ್ಯದಲ್ಲಿ ಮಾಡಬೇಕಾದ ಕಾರ್ಯಗಳ ಸಂಕಲ್ಪ ಮಾಡಲು ಬೇಕಾದ ಗುಂಡಿಗೆಯನ್ನು ಗಟ್ಟಿಗೊಳಿಸುವ ಪ್ರಕ್ರಿಯೆಯಾಗಿದೆ. ಹಾಗಾಗಿ, ಹಿಂದೂ ಬಂಧು- ಭಗಿನಿಯರು ಕೂಡ ಇದನ್ನು ಮಾಡಿಕೊಳ್ಳಬಹುದಾಗಿದೆ ಎಂದು ಕೂಡಲಿ ಶೃಂಗೇರಿ ಮಹಾಸಂಸ್ಥಾನದ ಅಭಿನವ ಶಂಕರ ಭಾರತೀ ಸ್ವಾಮೀಜಿ ಹೇಳಿದ್ಧಾರೆ.

ಪ್ರಾಯಶ್ಚಿತ್ತ ಸರಳ ವಿಧಾನವನ್ನು ಗಮನಿಸಲು ಕೂಡಲಿ ಶೃಂಗೇರಿ ಮಹಾಸಂಸ್ಥಾನದ ಈ ಪೋಸ್ಟ್ ಗಮನಿಸಿ

ಗಮನಿಸಿ: ಮೇಲಿರುವ ಅಭಿಪ್ರಾಯ ಕೂಡಲಿ ಶೃಂಗೇರಿ ಮಹಾಸಂಸ್ಥಾನದ ಅಭಿನವ ಶಂಕರ ಭಾರತೀ ಸ್ವಾಮೀಜಿಯದ್ದು. ಇದನ್ನು ಇಲ್ಲಿ ಮಾಹಿತಿಗಾಗಿ ನೀಡಲಾಗಿದೆಯೇ ಹೊರತು, ಪ್ರಾಯಶ್ಚಿತ್ತ ಮಾಡಬೇಕು ಎಂಬ ಶಿಫಾರಸು ಅಲ್ಲ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

mysore-dasara_Entry_Point
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.