Vastu Tips: ವಾಸ್ತು ಪ್ರಕಾರ ಆಮೆ ಪ್ರತಿಮೆಯನ್ನು ಮನೆಯ ಯಾವ ದಿಕ್ಕಿನಲ್ಲಿ ಇರಿಸಿದರೆ ಉತ್ತಮ; ಇಲ್ಲಿದೆ ಮಾಹಿತಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Vastu Tips: ವಾಸ್ತು ಪ್ರಕಾರ ಆಮೆ ಪ್ರತಿಮೆಯನ್ನು ಮನೆಯ ಯಾವ ದಿಕ್ಕಿನಲ್ಲಿ ಇರಿಸಿದರೆ ಉತ್ತಮ; ಇಲ್ಲಿದೆ ಮಾಹಿತಿ

Vastu Tips: ವಾಸ್ತು ಪ್ರಕಾರ ಆಮೆ ಪ್ರತಿಮೆಯನ್ನು ಮನೆಯ ಯಾವ ದಿಕ್ಕಿನಲ್ಲಿ ಇರಿಸಿದರೆ ಉತ್ತಮ; ಇಲ್ಲಿದೆ ಮಾಹಿತಿ

ವಾಸ್ತುವನ್ನು ಅನುಕರಣೆ ಮಾಡುವವರು ತಮ್ಮ ಮನೆ ಹಾಗೂ ವ್ಯವಹಾರದ ಸ್ಥಳದಲ್ಲಿ ವಾಸ್ತುವಿಗೆ ಹೊಂದಿಕೆಯಾಗುವ ವಸ್ತುಗಳನ್ನು ಇರಿಸುತ್ತಾರೆ. ಅವುಗಳಲ್ಲಿ ಆಮೆ ಪ್ರತಿಮೆ ಕೂಡ ಒಂದು. ನೀವು ವಾಸ್ತು ಅನುಸರಿಸುವವರಾದರೆ ನಿಮ್ಮ ಮನೆ ಅಥವಾ ವ್ಯವಹಾರದ ಏಳ್ಗೆಗಾಗಿ ಆಮೆ ಪ್ರತಿಮೆಯನ್ನು ಯಾವ ದಿಕ್ಕಿಗೆ ಇರಿಸಬೇಕು ನೋಡಿ.

ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ (Divya Mantra)

ಇತ್ತೀಚಿನ ದಿನಗಳಲ್ಲಿ ಮನೆಯನ್ನು ವಾಸ್ತುಪ್ರಕಾರ ಕಟ್ಟಿಸುವುದು ಮಾತ್ರವಲ್ಲ, ಮನೆಯೊಳಗಿನ ವಸ್ತುಗಳು ಕೂಡ ವಾಸ್ತುವಿಗೆ ಹೊಂದಿಕೆಯಾಗಬೇಕು ಎಂದು ಬಯಸುವುದು ಸಹಜ. ವಾಸ್ತುವಿಗೆ ತಕ್ಕಂತೆ ಮನೆ ಅಲಂಕಾರದ ವಸ್ತುಗಳನ್ನು ತಂದಿರಿಸುತ್ತಾರೆ. ಬಣ್ಣ, ಡೆಕೊರೇಷನ್‌ ಥೀಮ್‌ ಎಲ್ಲಾದ್ದಕ್ಕೂ ವಾಸ್ತವೇ ಬೇಕು. ಲಾಫಿಂಗ್‌ ಬುದ್ಧ, ಆಮೆ, ಮನಿ ಟ್ರೀ ಇವುಗಳು ಕೂಡ ವಾಸ್ತುವಿನ ಭಾಗವಾಗಿದೆ. ಆಮೆಯ ಪ್ರತಿಮೆಯನ್ನು ಹಲವರು ತಮ್ಮ ಮನೆ ಹಾಗೂ ವ್ಯವಹಾರ ಕ್ಷೇತ್ರದಲ್ಲಿ ಇರಿಸಿಕೊಳ್ಳುತ್ತಾರೆ. ಆಮೆಯನ್ನು ವಿಷ್ಣುವಿನ ಸಂಕೇತ ಎನ್ನಲಾಗುತ್ತದೆ. ಭಗವಾನ್‌ ವಿಷ್ಣು ಎಲ್ಲಿಗೇ ಹೋದರೂ ಸಂಪತ್ತಿನ ಅಧಿದೇವತೆಯಾದ ಲಕ್ಷ್ಮೀದೇವಿ ಅವನನ್ನು ಹಿಂಬಾಲಿಸುತ್ತಾಳೆʼ ಆ ಕಾರಣಕ್ಕೆ ಆಮೆಯನ್ನು ಮನೆಯಲ್ಲಿ ಇರಿಸುವುದು ಒಳ್ಳೆಯದು ಎನ್ನುತ್ತಾರೆ ವಾಸ್ತುಶಾಸ್ತ್ರಜ್ಞರಾದ ದಿವ್ಯಾ ಛಾಬ್ರಾ. ಅವರ ಪ್ರಕಾರ ಆಮೆಯು ಸಾಮಾನ್ಯವಾಗಿ 125 ರಿಂದ 150 ವರ್ಷಗಳವರೆಗೆ ಜೀವಿಸುವುದರಿಂದ ಇದು ಜೀವನದ ದೀರ್ಘಾಯುಷ್ಯವನ್ನು ಸೂಚಿಸುತ್ತದೆ.

ʼಆಮೆಯನ್ನು ಸರಿಯಾದ ದಿಕ್ಕಿನಲ್ಲಿ ಇರಿಸುವುದರಿಂದ ಸ್ಥಿರತೆ, ಉತ್ತಮ ಆರೋಗ್ಯ, ದೀರ್ಘಾಯುಷ್ಯ, ಸಮೃದ್ಧಿ ಮತ್ತು ಸಂತೋಷ ಸಿಗುತ್ತದೆ ಎಂದು ವಾಸ್ತುಶಾಸ್ತ್ರಜ್ಞರು ತಿಳಿಸುತ್ತಾರೆ.

ಅವರ ಪ್ರಕಾರ ಯಾವ ಬಣ್ಣದ ಆಮೆಯನ್ನು ಯಾವ ದಿಕ್ಕಿಗೆ ಇರಿಸಬೇಕು ನೋಡಿ.

ಮೆಟಲ್‌/ಸಿಲ್ವರ್‌: ಉತ್ತರ, ವಾಯುವ್ಯ- ವ್ಯಾಪಾರ ಬೆಳವಣಿಗೆ ಮತ್ತು ಹಣದ ಹರಿವು ಹೆಚ್ಚಲು ಸಹಕಾರಿ.

ಹಿತ್ತಾಳೆ: ನೈಋತ್ಯ ದಿಕ್ಕಿನಲ್ಲಿ ಇರಿಸಬೇಕು. ಇದರಿಂದ ಸಂಬಂಧ ಮತ್ತು ಪ್ರೀತಿಯನ್ನು ಸುಧಾರಿಸುತ್ತದೆ.

ಮರದ ಆಮೆ ಪ್ರತಿಮೆ: ಉತ್ತಮ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕಾಗಿ. ಇದು ಅದೃಷ್ಟವನ್ನು ತರುತ್ತದೆ ಎನ್ನುತ್ತಾರೆ.

ಸ್ಪಟಿಕ ಶಿಲೆ/ ಸ್ವಚ್ಛ ಗಾಜಿನ ಪ್ರತಿಮೆ: ಪೂರ್ವ ಅಥವಾ ಆಗ್ನೇಯ ದಿಕ್ಕಿನಲ್ಲಿ ಇರಿಸಬೇಕು. ಇದು ಮನೆಯೊಳಗೆ ನಕಾರಾತ್ಮಕ ಶಕ್ತಿಯನ್ನು ಕಡಿಮೆ ಮಾಡುತ್ತದೆ.

ಈ ಟಿಪ್ಸ್‌ ಕೂಡ ಫಾಲೋ ಮಾಡಿ

ಮನೆಯು ಉತ್ತರ ದಿಕ್ಕಿನಲ್ಲಿದ್ದರೆ ಆಮೆ ಪ್ರತಿಮೆಯನ್ನು ಪಶ್ಚಿಮ ದಿಕ್ಕಿನಲ್ಲಿ ಇರಿಸಬೇಕು. ಇದು ನಮ್ಮ ಇಚ್ಛೆಗಳನ್ನು ಪೂರೈಸಿಕೊಳ್ಳಲು ಸಹಕಾರಿ. ಕಚೇರಿ ಈ ದಿಕ್ಕಿನಲ್ಲಿ ಇರಿಸಿದರೆ ವ್ಯವಹಾರ, ಆದಾಯ ಹೆಚ್ಚಲು ಸಹಾಯ ಮಾಡುತ್ತದೆ.

* ಹಣಕಾಸಿನ ತೊಂದರೆಯಿಂದ ಬಳಸುತ್ತಿರುವವರು ಹಣ ಸ್ಥಿರತೆ ಕಾಪಾಡಿಕೊಳ್ಳಲು ಹಿತ್ತಾಳೆಯ ಆಮೆಯನ್ನು ನೈಋತ್ಯ ದಿಕ್ಕಿನಲ್ಲಿ ಉತ್ತರಕ್ಕೆ ಮುಖ ಮಾಡಿ ಇರಿಸಬೇಕು. ಹಿತ್ತಾಳೆ ಆಮೆಯನ್ನು ವಿವಿಧ ಸಂಖ್ಯೆಗಳಲ್ಲಿ ಮತ್ತು ವಿವಿಧ ಗಾತ್ರಗಳಲ್ಲಿ, ಮನೆಯ ನೈಋತ್ಯ ವಲಯದಲ್ಲಿ ಇರಿಸಿದಾಗ, ಪ್ರೀತಿ ಮತ್ತು ಸಾಮರಸ್ಯದೊಂದಿಗೆ ಕುಟುಂಬಗಳನ್ನು ಒಟ್ಟುಗೂಡಿಸಲು ಸಹಾಯ ಮಾಡುತ್ತದೆ. ಹಿತ್ತಾಳೆಯ ಆಮೆಯನ್ನು ಮಕ್ಕಳು ಓದುವ ಮೇಜಿಗೆ ಪಶ್ಚಿಮಕ್ಕೆ ಮುಖ ಮಾಡಿ ಇರಿಸುವುದರಿಂದ ಓದಿನ ಮೇಲೆ ಚೆನ್ನಾಗಿ ಗಮನ ಹರಿಸಲು ಸಾಧ್ಯವಾಗುತ್ತದೆ.

*ಮನೆಯ ಮಧ್ಯದಲ್ಲಿ ಇರಿಸಲಾಗಿರುವ ಉತ್ತರಾಭಿಮುಖ ಆಮೆಯ ಪ್ರತಿಮೆಯು ತಾಳ್ಮೆ ಮತ್ತು ಪರಿಶ್ರಮವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

* ಅವಕಾಶಗಳನ್ನು ಹುಡುಕುವವರು ಉತ್ತರ ದಿಕ್ಕಿನಲ್ಲಿ ಬೆಳ್ಳಿಯ ಬಟ್ಟಲಿನಲ್ಲಿ ನೀರಿನಲ್ಲಿ ಅದ್ದಿದ ಬೆಳ್ಳಿಯ ಆಮೆಯ ಪ್ರತಿಮೆಯನ್ನು ಇಡಬೇಕು. ಇದು ಹೆಚ್ಚಿನ ಅವಕಾಶಗಳು ಮತ್ತು ಹಣದ ಹರಿವನ್ನು ಸೃಷ್ಟಿಸಲು ಸಹಾಯ ಮಾಡುತ್ತದೆʼ ಎಂದು ಛಾಬ್ರಾ ಇಂಡಿಯನ್‌ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.