Venus Direct Transit: ಶುಕ್ರನ ನೇರ ಸಂಚಾರ, ಏಪ್ರಿಲ್‌ನಿಂದ ಬದಲಾಗಲಿದೆ ಈ ರಾಶಿಯವರಿಗೆ ಅದೃಷ್ಟ; ವೃದ್ಧಿಯಾಗಲಿದೆ ಸಂಪತ್ತು
Venus Direct Transit: ಏಪ್ರಿಲ್‌ನಲ್ಲಿ ಶುಕ್ರ ಗ್ರಹವು ಮೀನ ರಾಶಿಯಲ್ಲಿ ವಕ್ರ ಮಾರ್ಗದಿಂದ ನೇರ ಮಾರ್ಗಕ್ಕೆ ಚಲಿಸುತ್ತದೆ. ಈ ಬೆಳವಣಿಗೆಯು ಕೆಲವು ರಾಶಿಯವರಿಗೆ ಶುಭವನ್ನುಂಟು ಮಾಡಲಿದೆ. ಏಪ್ರಿಲ್‌ನಿಂದ ಇವರ ಅದೃಷ್ಟ ಬದಲಾಗುತ್ತದೆ.

ಜ್ಯೋತಿಷ್ಯ ಶಾಸ್ತ್ರದಲ್ಲಿ ಶುಕ್ರನನ್ನು ಸಂತೋಷ, ಸಮೃದ್ಧಿ ಮತ್ತು ಸಂಪತ್ತಿನ ಅಧಿಪತಿ ಎಂದು ಪರಿಗಣಿಸಲಾಗುತ್ತದೆ. ಶುಕ್ರನ ಸಂಚಾರ ಅಥವಾ ಸ್ಥಾನದಲ್ಲಿನ ಬದಲಾವಣೆ ಮೇಷದಿಂದ ಮೀನ ರಾಶಿವರೆಗೆ ಎಲ್ಲಾ ರಾಶಿಯವರ ಮೇಲೂ ಸಾಕಷ್ಟು ಪರಿಣಾಮಗಳನ್ನು ಉಂಟುಮಾಡುತ್ತದೆ. ಇದರಿಂದ ಕೆಲವು ರಾಶಿಯವರಿಗೆ ಭಾರಿ ಅನುಕೂಲವೂ ಉಂಟಾಗುತ್ತದೆ, ಕೆಲವರಿಗೆ ಇದು ಅದೃಷ್ಟ ಬದಲಾಗುವ ಕಾಲವೂ ಆಗಿರುತ್ತದೆ.
ಪ್ರಸ್ತುತ ಶುಕ್ರನು ಹಿಮ್ಮುಖ ಚಲನೆಯಲ್ಲಿದ್ದಾನೆ. ಇದನ್ನು ಶುಕ್ರ ವಕ್ರೀ ಎಂದು ಕರೆಯಲಾಗುತ್ತದೆ. ಆದರೆ ಶೀಘ್ರದಲ್ಲಿ ಶುಕ್ರನು ನೇರವಾಗಿ ಚಲಿಸಲು ಆರಂಭಿಸುತ್ತಾನೆ. ಮಾರ್ಚ್ 2 ರಂದು ಶುಕ್ರನು ಮೀನ ರಾಶಿಯಲ್ಲಿ ಹಿಮ್ಮುಖ ಚಲನೆ ಆರಂಭಿಸಿದನು. ಏಪ್ರಿಲ್ 13ಕ್ಕೆ ಶುಕ್ರ ನೇರ ಚಲನೆಯನ್ನು ಆರಂಭಿಸುತ್ತಾನೆ. ಈ ಬೆಳವಣಿಗೆಯು ದ್ವಾದಶ ರಾಶಿಗಳಲ್ಲಿ ಕೆಲವು ರಾಶಿಯವರಿಗೆ ಶುಭ ಹಾಗೂ ಕೆಲವು ರಾಶಿಯವರಿಗೆ ಅಶುಭ ಪರಿಣಾಮಗಳನ್ನು ಉಂಟು ಮಾಡುತ್ತದೆ. ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ ಶುಕ್ರನ ನೇರ ಸಂಚಾರವು 3 ರಾಶಿಚಕ್ರ ಚಿಹ್ನೆಗಳಿಗೆ ತುಂಬಾ ಅನುಕೂಲವನ್ನು ಉಂಟು ಮಾಡುತ್ತದೆ. ಆ 3 ರಾಶಿಯವರು ಯಾರು ನೋಡಿ.
1. ಮಿಥುನ ರಾಶಿ
ಮಿಥುನ ರಾಶಿಯವರಿಗೆ ಶುಕ್ರನ ನೇರ ಸಂಚಾರವು ಪ್ರಯೋಜನಕಾರಿಯಾಗಲಿದೆ. ವೃತ್ತಿ ಮತ್ತು ವ್ಯವಹಾರದ ವಿಷಯದಲ್ಲಿ ಶುಕ್ರನು ನಿಮಗೆ ಸಾಕಷ್ಟು ಒಳಿತನ್ನು ಮಾಡಲಿದ್ದಾನೆ. ನಿಮ್ಮ ಆದಾಯದಲ್ಲಿ ಹೆಚ್ಚಳವಾಗಬಹುದು. ಪ್ರೀತಿಯ ಜೀವನದಲ್ಲಿ ಉತ್ತಮ ಬದಲಾವಣೆಗಳು ಕಂಡುಬರುತ್ತವೆ. ಸಂಗಾತಿಯೊಂದಿಗಿನ ಅನ್ಯೋನ್ಯತೆ ಹೆಚ್ಚಾಗುತ್ತದೆ. ಉದ್ಯೋಗ ಬದಲಾವಣೆಗೆ ಉತ್ತಮ ಅವಕಾಶಗಳಿವೆ. ವ್ಯವಹಾರದ ಪರಿಸ್ಥಿತಿ ಉತ್ತಮವಾಗುತ್ತದೆ.
2. ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ಶುಕ್ರನ ನೇರ ಸಂಚಾರದಿಂದ ಶುಭವಾಗಲಿದೆ. ಶುಕ್ರ ಗ್ರಹವು ನಿಮ್ಮ ರಾಶಿಯ 7ನೇ ಮನೆಯಲ್ಲಿ ನೇರವಾಗಿ ಸಾಗಲಿದೆ. ಇದು ನಿಮ್ಮ ದಾಂಪತ್ಯ ಜೀವನದಲ್ಲಿ ಸಂತೋಷ ಹೆಚ್ಚಾಗುವಂತೆ ಮಾಡುತ್ತದೆ. ನಿಮಗೆ ಹೊಸ ಆದಾಯದ ಮಾರ್ಗಗಳು ಸೃಷ್ಟಿಯಾಗುತ್ತವೆ. ನೀವು ಮೇಲಧಿಕಾರಿಗಳ ಆಶೀರ್ವಾದವನ್ನು ಪಡೆಯುತ್ತೀರಿ. ವ್ಯವಹಾರದಲ್ಲಿ ಯಶಸ್ಸನ್ನು ಸಾಧಿಸಲಿದ್ದೀರಿ. ಶುಭ ಸುದ್ದಿಗಳನ್ನು ಕೇಳಲಿದ್ದೀರಿ.
3. ಕುಂಭ ರಾಶಿ
ಕುಂಭ ರಾಶಿಯವರಿಗೆ ಶುಕ್ರನ ನೇರ ಸಂಚಾರ ಅನುಕೂಲಕರವಾಗಿದೆ. ಶುಕ್ರವು ನಿಮ್ಮ ಹಣ ಮತ್ತು ಮಾತಿನ ಮೇಲೆ ಪರಿಣಾಮ ಬೀರಲಿದ್ದಾನೆ. ಇದು ನಿಮಗೆ ಅನಿರೀಕ್ಷಿತ ಆರ್ಥಿಕ ಲಾಭವನ್ನು ತರುತ್ತದೆ. ಆರ್ಥಿಕ ಪರಿಸ್ಥಿತಿ ಬಲಗೊಳ್ಳುತ್ತದೆ. ಬರಬೇಕಿದ್ದ ಬಾಕಿ ಹಣ ಮರಳಿ ನಿಮ್ಮ ಕೈ ಸೇರಲಿದೆ. ಕೆಲಸದ ಸ್ಥಳದಲ್ಲಿ ಕೌಶಲಗಳನ್ನು ಪ್ರದರ್ಶಿಸಲು ನಿಮಗೆ ಅವಕಾಶ ಸಿಗುತ್ತದೆ. ಕೆಲಸದಲ್ಲಿ ಬದಲಾವಣೆಯ ಲಕ್ಷಣಗಳು ಕಂಡುಬರುತ್ತವೆ. ಒಟ್ಟಾರೆ ಎಲ್ಲವೂ ಶುಭವಾಗಲಿದೆ.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ‘ಹಿಂದೂಸ್ತಾನ್ ಟೈಮ್ಸ್ ಕನ್ನಡ (ಎಚ್‌ಟಿ ಕನ್ನಡ) ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ
