Holy Basil: ಮನೆ ಮುಂದಿನ ತುಳಸಿ ಗಿಡ ಇದ್ದಕ್ಕಿದ್ದಂತೆ ಒಣಗಲು ಕಾರಣವೇನು? ಮನೆಯವರ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ?-spiritual news what is the meaning of tulsi plant dries up at home effects of holy basil dryness rsm ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Holy Basil: ಮನೆ ಮುಂದಿನ ತುಳಸಿ ಗಿಡ ಇದ್ದಕ್ಕಿದ್ದಂತೆ ಒಣಗಲು ಕಾರಣವೇನು? ಮನೆಯವರ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ?

Holy Basil: ಮನೆ ಮುಂದಿನ ತುಳಸಿ ಗಿಡ ಇದ್ದಕ್ಕಿದ್ದಂತೆ ಒಣಗಲು ಕಾರಣವೇನು? ಮನೆಯವರ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ?

Tulsi Plant: ಭಾರತೀಯ ಸಂಪ್ರದಾಯದಲ್ಲಿ ತುಳಸಿ ಗಿಡಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಕೆಲವರ ಮನೆಯಲ್ಲಿ ತುಳಸಿ ಬಹಳ ಸಮೃದ್ಧವಾಗಿ ಬೆಳೆದರೆ, ಕೆಲವರು ಎಷ್ಟೇ ಪೋಷಿಸಿದರೂ ತುಳಸಿ ಒಣಗುತ್ತದೆ. ಈ ರೀತಿ ತುಳಸಿ ಗಿಡ ಒಣಗಿದರೆ ಮನೆಯಲ್ಲಿ ಕೆಲವು ಸಮಸ್ಯೆಗಳು ಉದ್ಭವಿಸುತ್ತದೆ.

ತುಳಸಿ ಗಿಡ ಒಣಗುವುದರ ಅರ್ಥವೇನು, ಮನೆಯವರ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ?
ತುಳಸಿ ಗಿಡ ಒಣಗುವುದರ ಅರ್ಥವೇನು, ಮನೆಯವರ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ?

ತುಳಸಿ ಗಿಡ: ಹಿಂದೂ ಸಂಪ್ರದಾಯದಲ್ಲಿ ತುಳಸಿ ಗಿಡವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಲಕ್ಷ್ಮಿಯ ಮೂರ್ತರೂಪವೆಂದು ಪೂಜಿಸಲಾಗುತ್ತದೆ. ತುಳಸಿ, ಆಧ್ಯಾತ್ಮಿಕತೆಗೆ ಮಾತ್ರವಲ್ಲ ಅದರ ಔಷಧೀಯ ಗುಣಗಳಿಗೂ ಹೆಸರಾಗಿದೆ. ಕೆಲವರು ಇದನ್ನು ಭೂಮಿಯಲ್ಲಿ ಬೆಳೆಸಿದರೆ ಕೆಲವರು ವಿವಿಧ ರೀತಿಯ ತುಳಸಿ ಕಟ್ಟೆಗಳಲ್ಲಿ ಬೆಳೆಸಿ ಪೂಜೆ ಮಾಡುತ್ತಾರೆ.

ತುಳಸಿ ಗಿಡ ಹಸಿರಾಗಿದ್ದರೆ ಹಾಗೂ ಮನೆ ಹೊರಗಿನ ಆವರಣದಲ್ಲಿ ಹೆಚ್ಚು ಬೆಳೆದಿದ್ದರೆ ಆ ಕುಟುಂಬಕ್ಕೆ ದೇವರ ಅನುಗ್ರಹ ಸಿಗುತ್ತದೆ ಎಂಬ ನಂಬಿಕೆ ಇದೆ. ಅಲ್ಲದೆ ತುಳಸಿ ಹಸಿರಾಗಿದ್ದು, ಸಮೃದ್ಧಿಯಾಗಿ ಬೆಳೆದರೆ ಆ ಮನೆಯಲ್ಲಿ ಹಣದ ಕೊರತೆ ಇರುವುದಿಲ್ಲ, ನಕಾರಾತ್ಮಕ ಶಕ್ತಿಗೆ ಅವಕಾಶವೇ ಇಲ್ಲ ಎಂಬ ನಂಬಿಕೆ ಇದೆ. ಒಂದು ವೇಳೆ ತುಳಸಿ ಗಿಡ ಒಣಗಿದರೆ, ನೀವು ಎಷ್ಟೇ ಪೋಷಿಸಿದರೂ ಅದು ಒಣಗುತ್ತಿದ್ದರೆ ಅಲ್ಲಿ ಏನೋ ಸಮಸ್ಯೆ ಇದೆ ಎಂದು ಅರ್ಥ. ಅಲ್ಲದೆ ಇದು ಅಶುಭದ ಸಂಕೇತವಾಗಿರಬಹುದು, ನಿಮ್ಮ ಮನೆಯಲ್ಲಿ ಇದ್ದಕ್ಕಿದ್ದಂತೆ ಆರ್ಥಿಕ ಸಮಸ್ಯೆ ಉದ್ಭವಿಸಬಹುದು. ಆದ್ದರಿಂದ ಆ ರೀತಿ ನಿಮ್ಮ ಮನೆಯಲ್ಲಿ ತುಳಸಿ ಒಣಗುತ್ತಿದ್ದಲ್ಲಿ ಆ ಸ್ಥಳದಲ್ಲಿ ನೀವು ಹೊಸ ತುಳಸಿಯನ್ನು ತಂದು ನೆಟ್ಟು ಪೋಷಿಸಬೇಕು.

ನಕಾರಾತ್ಮಕ ಶಕ್ತಿಗಳು

ಹಸಿರು ತುಳಸಿ ಗಿಡವು ಹಠಾತ್ತನೆ ಒಣಗಿದರೆ, ಅದು ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ಮತ್ತು ದುಷ್ಟಶಕ್ತಿಗಳ ಸಂಕೇತವೆಂದು ಪರಿಗಣಿಸಬೇಕು. ಇದರ ಪರಿಣಾಮ ಕುಟುಂಬ ಸದಸ್ಯರ ಮೇಲೆ ಉಂಟಾಗಬಹುದು. ನಕಾರಾತ್ಮಕ ಭಾವನೆಗಳು, ಪರಿಹರಿಸಲಾಗದ ಸಮಸ್ಯೆಗಳು, ಕೆಲಸದಲ್ಲಿ ಅಡಚಣೆಗಳು. ಕುಟುಂಬದಲ್ಲಿ ಕಲಹ ಉಂಟಾಗುವ ಸಾಧ್ಯತೆ ಇದೆ.

ನಿರ್ಲಕ್ಷ್ಯದ ಕಾರಣ

ತುಳಸಿ ಗಿಡ ಒಣಗಲು ಇನ್ನೊಂದು ಕಾರಣ ಅದಕ್ಕೆ ನೀರು ಹಾಕದೆ ನಿರ್ಲಕ್ಷ್ಯ ಮಾಡುವುದು. ತುಳಸಿಯನ್ನು ಸರಿಯಾದ ರೀತಿಯಲ್ಲಿ ಸಂರಕ್ಷಿಸದಿದ್ದರೆ ಅದರ ಪರಿಣಾಮ ಸಸ್ಯದ ಮೇಲೆ ಕಂಡುಬರುತ್ತದೆ. ನೀವು ಕುಟುಂಬದ ಜನರ ಬಗ್ಗೆ ಕಾಳಜಿ ವಹಿಸುವುದಿಲ್ಲ ಎಂದು ಇದು ತೋರಿಸುತ್ತದೆ. ಹೀಗೆ ಮಾಡಿದರೆ ಕುಟುಂಬದಲ್ಲಿ ಜಗಳ ಮನಸ್ತಾಪ ಉಂಟಾಗುತ್ತವೆ. ಸಂಘರ್ಷದ ವಾತಾವರಣವಿರುವ ಮನೆಗೆ ಪ್ರವೇಶಿಸಲು ಲಕ್ಷ್ಮಿ ದೇವಿ ಎಂದಿಗೂ ಬಯಸುವುದಿಲ್ಲ.

ಮನೆಯಲ್ಲಿ ಸಕಾರಾತ್ಮಕತೆಯ ಕೊರತೆ

ತುಳಸಿ ಗಿಡವು ಮನೆಯ ಸುತ್ತ ಧನಾತ್ಮಕ ಶಕ್ತಿ ಮತ್ತು ಶುದ್ಧತೆಯನ್ನು ಹರಡುತ್ತದೆ. ಈ ಸಸ್ಯವು ಒಣಗಲು ಪ್ರಾರಂಭಿಸಿದರೆ ಅದು ಮನೆಯಲ್ಲಿ ಯಾವುದೇ ಸಕಾರಾತ್ಮಕತೆ ಇಲ್ಲ ಎಂಬ ಸಂಕೇತವೆಂದು ತೋರಿಸುತ್ತದೆ. ತುಳಸಿ ಗಿಡ ಒಣಗಿದರೆ ಕುಟುಂಬದ ಸದಸ್ಯರ ನಡುವೆ ಭಿನ್ನಾಭಿಪ್ರಾಯ ಇದ್ದಾಗ ಅಥವಾ ಹೆಚ್ಚಿನ ಒತ್ತಡ, ನಕಾರಾತ್ಮಕತೆ ಇದೆ ಎಂದು ಅರ್ಥ.

ಸ್ವಚ್ಛತೆ ಇಲ್ಲದಿರುವುದು

ಕೆಲವರು ಮುಟ್ಟಿನ ಸಮಯದಲ್ಲಿ ಕೂಡಾ ತುಳಸಿಯನ್ನು ಸ್ಪರ್ಶಿಸುತ್ತಾರೆ. ಆದರೆ ಯಾವುದೇ ಕಾರಣಕ್ಕೂ ಹೀಗೆ ಮಾಡಬಾರದು. ಹಾಗೇ ಸ್ವಚ್ಛವಾದ ನೀರು ಹಾಕದೆ ಇರುವುದು, ಉಳಿದ ಕಾಫಿ, ಟೀ ವೇಸ್ಟನ್ನು ತುಳಸಿ ಗಿಡಕ್ಕೆ ಹಾಕುವುದು ಮಾಡುತ್ತಾರೆ. ಆದರೆ ಈ ರೀತಿ ಮಾಡುವುದು ತಪ್ಪು.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.