2024ರ ಇಂದಿರಾ ಏಕಾದಶಿ ಯಾವಾಗ? ಉಪವಾಸ, ವ್ರತಾಚರಣೆಯಿಂದ ಸಿಗುವ ಶುಭಫಲಗಳು ಮತ್ತು ಮಹತ್ವ ಇಲ್ಲಿದೆ-spiritual news when is indira ekadashi 2024 benefits and importance of vrata details here rmy ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  2024ರ ಇಂದಿರಾ ಏಕಾದಶಿ ಯಾವಾಗ? ಉಪವಾಸ, ವ್ರತಾಚರಣೆಯಿಂದ ಸಿಗುವ ಶುಭಫಲಗಳು ಮತ್ತು ಮಹತ್ವ ಇಲ್ಲಿದೆ

2024ರ ಇಂದಿರಾ ಏಕಾದಶಿ ಯಾವಾಗ? ಉಪವಾಸ, ವ್ರತಾಚರಣೆಯಿಂದ ಸಿಗುವ ಶುಭಫಲಗಳು ಮತ್ತು ಮಹತ್ವ ಇಲ್ಲಿದೆ

ಇಂದಿರಾ ಏಕಾದಶಿ 2024: ಇಂದಿರಾ ಏಕಾದಶಿ ದಿನ ಉಪವಾಸ ಮಾಡಿದರೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಭಕ್ತರದಲ್ಲಿದೆ. ಇಂದಿರಾ ಏಕಾದಶಿಯ ಮಹತ್ವವೇನು? ವ್ರತಾಚರಣೆಯನ್ನು ಯಾವಾಗ, ಹೇಗೆ ಆಚರಿಸುತ್ತಾರೆ ಎಂಬುದನ್ನು ತಿಳಿಯೋಣ.

ಇಂದಿರಾ ಏಕಾದಶಿ ದಿನ ಭಗವಾನ್ ವಿಷ್ಣುವನ್ನು ಪೂಜಿಸಲಾಗುತ್ತದೆ
ಇಂದಿರಾ ಏಕಾದಶಿ ದಿನ ಭಗವಾನ್ ವಿಷ್ಣುವನ್ನು ಪೂಜಿಸಲಾಗುತ್ತದೆ

ಹಿಂದೂ ಧರ್ಮದಲ್ಲಿ ಏಕಾದಶಿ ಉಪವಾಸಕ್ಕೆ ವಿಶೇಷ ಮಹತ್ವವಿದೆ. ಭಾದ್ರಪದ ಮಾಸದ ಏಕಾದಶಿಯನ್ನು ಇಂದಿರಾ ಏಕಾದಶಿ ಎಂದು ಕರೆಯಲಾಗುತ್ತದೆ. ಈ ವರ್ಷ ಇಂದಿರಾ ಏಕಾದಶಿ ಉಪವಾಸವು ಪಿತೃ ಪಕ್ಷದ ಸಮಯದಲ್ಲಿ ಬಂದಿದೆ. ಪೂರ್ವಜರ ಮೋಕ್ಷಕ್ಕಾಗಿ ಇದು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಈ ವ್ರತವನ್ನು ಆಚರಿಸುವುದರಿಂದ ವ್ಯಕ್ತಿಯ ಪಾಪಗಳು ನಾಶವಾಗುವುದಲ್ಲದೆ ಪೂರ್ವಜರ ಆತ್ಮಕ್ಕೆ ಶಾಂತಿ ಸಿಗುತ್ತದೆ. ಈ ದಿನದ ಉಪವಾಸವು ಮೋಕ್ಷವನ್ನು ತರುತ್ತದೆ. ಪುರಾಣಗಳ ಪ್ರಕಾರ, ಇಂದಿರಾ ಏಕಾದಶಿಯಂದು ಉಪವಾಸ ಮಾಡುವ ವ್ಯಕ್ತಿಯು ಏಳು ತಲೆಮಾರುಗಳವರೆಗೆ ತನ್ನ ಪೂರ್ವಜರ ಬಳಿಗೆ ಹೋಗುತ್ತಾರೆ. ಅವರ ಪೂರ್ವಜರಿಗೂ ಪುಣ್ಯ ಸಿಗುತ್ತದೆ. ತಮ್ಮ ಪಿತೃಭೂಮಿಯಿಂದ ಬಿಡುಗಡೆ ಹೊಂದುತ್ತಾರೆ ಹಾಗೂ ಸ್ವರ್ಗ ಸೇರುತ್ತಾರೆ.

ಇಂದಿರಾ ಏಕಾದಶಿಯಂದು ವಿಷ್ಣುವನ್ನು ಪೂಜಿಸಲಾಗುತ್ತದೆ. ಏಕಾದಶಿಯಂದು ಉಪವಾಸ ಮಾಡುತ್ತಾರೆ. ಕೀರ್ತನೆಗಳು ಮತ್ತು ಭಜನೆಯನ್ನು ಮಾಡುತ್ತಾರೆ. ವಿಷ್ಣುವನ್ನು ಆರಾಧಿಸುವುದರಿಂದ ಮತ್ತು ಇಂದಿರಾ ಏಕಾದಶಿಯಂದು ಉಪವಾಸ ಮಾಡುವುದರಿಂದ ಎಲ್ಲಾ ದುಃಖಗಳಿಂದ ಮುಕ್ತರಾಗುತ್ತಾರೆ. ಅವರ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ. ಇಂದಿರಾ ಏಕಾದಶಿಯಂದು ಭಗವಾನ್ ವಿಷ್ಣುವನ್ನು ಹೇಗೆ ಪೂಜಿಸಬೇಕು ಎಂದು ತಿಳಿಯೋಣ.

ಏಕಾದಶಿ ತಿಥಿ ಯಾವಾಗ?

ಇಂದಿರಾ ಏಕಾದಶಿ ತಿಥಿ 2024ರ ಸೆಪ್ಟೆಂಬರ್ 27 ರಂದು ಮಧ್ಯಾಹ್ನ 1.20ಕ್ಕೆ ಆರಂಭವಾಗಿ ಸೆಪ್ಟೆಂಬರ್ 28 ರಂದು ಮಧ್ಯಾಹ್ನ 2.49ಕ್ಕೆ ಮುಕ್ತಾಯವಾಗುತ್ತದೆ. ಏಕಾದಶಿಯ ದಿನ ಬೆಳಿಗ್ಗೆ 4.36 ರಿಂದ 5.24 ರವರೆಗೆ ಬ್ರಹ್ಮ ಮುಹೂರ್ತವನ್ನು ಮಾಡಲು ಉತ್ತಮ ಸಮಯ.

ಪೂಜೆಯ ವಿಧಾನ ಹೇಗಿರುತ್ತೆ?

  • ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿ. ಪೂಜಾ ಕೊಠಡಿಯನ್ನು ಸ್ವಚ್ಛಗೊಳಿಸಬೇಕು
  • ಮನೆಯ ದೇವಸ್ಥಾನದಲ್ಲಿ ದೀಪವನ್ನು ಬೆಳಗಿಸಿ. ವಿಷ್ಣುವನ್ನು ಧ್ಯಾನಿಸುತ್ತಾ ಉಪವಾಸ ಮಾಡಬೇಕು
  • ಗಂಗಾಜಲದಿಂದ ವಿಷ್ಣುವಿಗೆ ಅಭಿಷೇಕ ಮಾಡಬೇಕು. ಹೂವುಗಳು ಮತ್ತು ತುಳಸಿ ಎಲೆಗಳನ್ನು ಅರ್ಪಿಸಲಾಗುತ್ತೆ. ಪೂಜೆಯಲ್ಲಿ ತುಳಸಿ ಎಲೆಗಳಿಗೆ ವಿಶೇಷ ಮಹತ್ವವಿದೆ
  • ವಿಷ್ಣುವಿಗೆ ಹಳದಿ ಹೂವುಗಳು, ಹಳದಿ ಬಟ್ಟೆಗಳು, ಹಣ್ಣುಗಳು ಹಾಗೂ ಸಿಹಿ ತಿಂಡಿಗಳನ್ನು ಅರ್ಪಿಸಲಾಗುತ್ತೆ
  • ದೇವರಿಗೆ ಆರತಿ ಎತ್ತಿದ ನಂತರ ಪ್ರಸಾದವನ್ನ ಅರ್ಪಿಸಲಾಗುತ್ತದೆ. ಭಗವಂತನಿಗೆ ಹಣ್ಣು, ತರಕಾರಿಗಳಿಂದ ಕೂಡಿದ ಆಹಾರವನ್ನು ಮಾತ್ರ ಅರ್ಪಿಸಬೇಕು
  • ಭಗವಾನ್ ವಿಷ್ಣುವಿಗೆ ನೈವೇದ್ಯದಲ್ಲಿ ತುಳಸಿಯನ್ನು ಸೇರಿಸಲು ಮರೆಯದಿರಿ. ಭಗವಾನ್ ವಿಷ್ಣುವು ತುಳಸಿ ಇಲ್ಲದೆ ಆಹಾರವನ್ನು ಸ್ವೀಕರಿಸುವುದಿಲ್ಲ ಎಂದು ನಂಬಲಾಗಿದೆ
  • ಈ ಮಂಗಳಕರ ದಿನದಂದು ವಿಷ್ಣುವಿನ ಜೊತೆಗೆ ಲಕ್ಷ್ಮಿ ದೇವಿಯನ್ನು ಸಹ ಪೂಜಿಸಲಾಗುತ್ತದೆ.

ಹಿಂದೂ ಧರ್ಮಗ್ರಂಥಗಳ ಪ್ರಕಾರ ಇಂದಿರಾ ಏಕಾದಶಿಯಂದು ಉಪವಾಸವು ಪೂರ್ವಜರಿಗೆ ಮೋಕ್ಷವನ್ನು ತರುತ್ತದೆ. ವೈಕುಂಠಪ್ರಪ್ರವೇಶ ದೊರೆಯುತ್ತದೆ. ಪೂರ್ವಜರು ಸ್ವರ್ಗವನ್ನು ತಲುಪುತ್ತಾರೆ ಎಂದು ನಂಬಲಾಗಿದೆ.

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.

mysore-dasara_Entry_Point
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.