ಭಾರತದ ಈ ರಾಜ್ಯದಲ್ಲಿದೆ ಜಗತ್ತಿನ ಮೊಟ್ಟ ಮೊದಲ ಓಂ ಆಕಾರದ ಶಿವ ದೇಗುಲ; ಈ ದೇವಾಲಯದ ವೈಶಿಷ್ಟ್ಯ ತಿಳಿಯಿರಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಭಾರತದ ಈ ರಾಜ್ಯದಲ್ಲಿದೆ ಜಗತ್ತಿನ ಮೊಟ್ಟ ಮೊದಲ ಓಂ ಆಕಾರದ ಶಿವ ದೇಗುಲ; ಈ ದೇವಾಲಯದ ವೈಶಿಷ್ಟ್ಯ ತಿಳಿಯಿರಿ

ಭಾರತದ ಈ ರಾಜ್ಯದಲ್ಲಿದೆ ಜಗತ್ತಿನ ಮೊಟ್ಟ ಮೊದಲ ಓಂ ಆಕಾರದ ಶಿವ ದೇಗುಲ; ಈ ದೇವಾಲಯದ ವೈಶಿಷ್ಟ್ಯ ತಿಳಿಯಿರಿ

OM Shape Shiv Mandir: ಹಿಂದೂ ಧರ್ಮದಲ್ಲಿ ಓಂ ಅಕ್ಷರಕ್ಕೆ ಬಹಳ ಮಹತ್ವವಿದೆ. ಓಂ ಶಬ್ದವನ್ನು ಧ್ಯಾನ, ಆಧ್ಯಾತ್ಮ ಮತ್ತು ಶಿವನ ಪ್ರತೀಕ ಎಂದು ನಂಬಲಾಗಿದೆ. ಅನೇಕ ಮಂತ್ರಗಳು ಓಂ ಅಕ್ಷರದಿಂದ ಪ್ರಾರಂಭವಾಗುತ್ತದೆ. ಇದೀಗ ಜಗತ್ತಿನ ಮೊಟ್ಟ ಮೊದಲ ಓಂ ಆಕಾರದ ದೇಗುಲವೊಂದು ಭಾರತದಲ್ಲಿ ಲೋಕಾರ್ಪಣೆಗೊಂಡಿದೆ. ಎಲ್ಲಿದೆ ಈ ದೇವಾಲಯ, ಇದರ ವೈಶಿಷ್ಟ್ಯವೇನು ತಿಳಿಯಿರಿ.

 ಓಂ ಆಕಾರದಲ್ಲಿರುವ ಶಿವನ ದೇವಸ್ಥಾನ
ಓಂ ಆಕಾರದಲ್ಲಿರುವ ಶಿವನ ದೇವಸ್ಥಾನ (https://www.omashram.com/)

ಇತ್ತೀಚೆಗಷ್ಟೇ ಶ್ರೀರಾಮನ ಜನ್ಮಸ್ಥಳ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಲೋಕಾರ್ಪಣೆಗೊಂಡಿದೆ. ಈ ದೇಗುಲವು ಭಾರತದಲ್ಲಿರುವ ಪ್ರಸಿದ್ಧ ದೇವಾಲಯಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ. ಹಲವು ವೈಶಿಷ್ಟ್ಯಗಳನ್ನು ಹೊಂದಿರುವ ರಾಮಮಂದಿರವು ಜಗತ್ತಿನ ಗಮನ ಸೆಳೆಯುತ್ತಿದೆ. ಇದೀಗ ರಾಜಸ್ಥಾನದಲ್ಲಿ ಇಂಥಹದ್ದೇ ಭಿನ್ನವಾದ ದೇವಾಲಯವೊಂದು ನಿರ್ಮಾಣವಾಗಿದೆ. ಈ ದೇಗುಲದ ವಿನ್ಯಾಸವು ಓಂ ಆಕಾರದಲ್ಲಿದೆ. ನಾಗರಶೈಲಿ ಈ ದೇವಾಲಯವು ಜಗತ್ತಿನ ಮೊಟ್ಟ ಮೊದಲ ಓಂ ಆಕಾರದ ಇದನ್ನು ನಿರ್ಮಿಸಲಾಗಿದೆ.

ಪ್ರಪಂಚದಲ್ಲೇ ಮೊಟ್ಟ ಮೊದಲ ಓಂ (ऊँ) ಆಕಾರದಲ್ಲಿರುವ ಶಿವನ ದೇವಾಲಯವೆಂಬ ಹೆಗ್ಗಳಿಕೆಯನ್ನು ಈ ದೇವಸ್ಥಾನ ಪಡೆದಿದೆ. ಈ ದೇವಾಲಯ ಇರುವುದು ರಾಜಸ್ಥಾನದ ಪಾಲೀ ಜಿಲ್ಲಿಯ ಜಾಡನ್‌ ಗ್ರಾಮದಲ್ಲಿ. ಸುಂದರ ಹಸಿರು ಪ್ರಕೃತಿಯ ನಡುವೆ ದೇವಸ್ಥಾನವನ್ನು ನಿರ್ಮಾಣ ಮಾಡಲಾಗಿದೆ.

ಶಿವ ದೇವಸ್ಥಾನದ ವೈಶಿಷ್ಟ್ಯ

ಹಿಂದೂ ಧರ್ಮದಲ್ಲಿ ಶಿವ ಹಾಗೂ ಓಂ (ऊँ) ಅಕ್ಷರಕ್ಕೆ ಬಹಳಷ್ಟು ಮಹತ್ವವಿದೆ. ಓಂ ಶಬ್ದವನ್ನು ಧ್ಯಾನ, ಆಧ್ಯಾತ್ಮ ಮತ್ತು ಶಿವನ ಪ್ರತೀಕ ಎಂದು ನಂಬಲಾಗಿದೆ. ಅನೇಕ ಮಂತ್ರಗಳು ʼಓಂʼಯಿಂದ ಪ್ರಾರಂಭವಾಗುತ್ತದೆ. ಓಂನ ಈ ಮಹತ್ವವನ್ನೇ ಗಮನದಲ್ಲಿಟ್ಟುಕೊಂಡು ರಾಜಸ್ಥಾನದ ಪಾಲೀ ಜಿಲ್ಲೆಯ ಜಾಡನ್‌ ಗ್ರಾಮದಲ್ಲಿ ಓಂ ಆಕಾರದ ಶಿವ ದೇವಾಲಯವನ್ನು ನಿರ್ಮಿಸಲಾಗಿದೆ. ಇದು 270 ಎಕರೆ ವಿಸ್ತೀರ್ಣದಲ್ಲಿ ನೆಲೆಗೊಂಡಿದೆ. ದೇವಸ್ಥಾನವನ್ನು ನಿರ್ಮಿಸಲು 1995 ರಲ್ಲಿ ಭೂಮಿ ಪೂಜೆಯನ್ನು ಮಾಡಲಾಗಿತ್ತು. ಈಗ ಅದು ಕೊನೆಯ ಹಂತ ತಲುಪಿದೆ. ಒಟ್ಟೂ 28 ವರ್ಷಗಳ ಅವಧಿಯಲ್ಲಿ ಈ ಭ್ಯವ ಶಿವ ಮಂದಿರವನ್ನು ನಿರ್ಮಿಸಲಾಗಿದೆ.

ಇದನ್ನೂ ಓದಿ: Konark Sun Temple: ಒಡಿಶಾದ ಕೋನಾರ್ಕ್ ದೇಗುಲದ ಬಗ್ಗೆ ನೀವು ತಿಳಿಯಬೇಕಾದ ಕುತೂಹಲಕಾರಿ ಸಂಗತಿಗಳಿವು

ಈ ದೇವಸ್ಥಾನದಲ್ಲಿ 1008 ಶಿವನ ಮೂರ್ತಿಗಳಿವೆ. ಅದರಲ್ಲಿ 12 ಜ್ಯೋತಿರ್ಲಿಂಗಗಳೂ ಇವೆ. 135 ಅಡಿ ಉದ್ದದ ಈ ದೇವಸ್ಥಾನವು 1200 ಕಂಬಗಳನ್ನು ಹೊಂದಿದೆ. ಇದು ಒಟ್ಟು 108 ಕೊಠಡಿಗಳನ್ನು ಹೊಂದಿದೆ. ಇದರ ಆವರಣದ ಮಧ್ಯದಲ್ಲಿ ಗುರು ಮಾಧವಾನಂದ ಜೀಯವರ ಸಮಾಧಿಯನ್ನು ನಿರ್ಮಿಸಲಾಗಿದೆ. ಓಂ ಆಕಾರದಲ್ಲಿರುವ ಈ ಶಿವನ ದೇವಾಲಯವು ಹಿಂದೂಗಳಿಗೆ ಬಹಳ ಪವಿತ್ರವಾಗಿದೆ. ಇದು ಶಿವನ ಭಕ್ತಿ ಭಾವದ ಸಂಕೇತವಾಗಿದೆ. ರಾಜಸ್ಥಾನದಲ್ಲಿರುವ ಓಂ ಆಕಾರದ ಈ ಶಿವ ದೇವಸ್ಥಾನವನ್ನು ನಾಗರ ಶೈಲಿಯ ವಾಸ್ತುಶಿಲ್ಪದ ಪ್ರಕಾರ ನಿರ್ಮಿಸಲಾಗಿದೆ. ದೇವಾಲಯದ ಈ ವಿನ್ಯಾಸವು ಹಿಂದೂ ಧರ್ಮದ ಸಂಸ್ಕೃತಿ ಮತ್ತು ವಾಸ್ತುಶಿಲ್ಪದ ಪರಂಪರೆಯನ್ನು ಪ್ರದರ್ಶಿಸುತ್ತದೆ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.