ತಿರುಪತಿ ತಿಮ್ಮಪ್ಪನ ಭಕ್ತರೇ ಗಮನಿಸಿ: ಆಗಸ್ಟ್ ತಿಂಗಳ ಆನ್ ಲೈನ್ ಕೋಟಾ ಟಿಕೆಟ್ ಗಳು ಇಂದು ಬಿಡುಗಡೆ
ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಆಗಸ್ಟ್ ತಿಂಗಳ ಶ್ರೀವಾರಿ ಅರ್ಜಿತಾ ಸೇವಾ ಕೋಟಾವನ್ನು ಇಂದು ಬಿಡುಗಡೆ ಮಾಡಿದೆ. ಆಯ್ಕೆಯಾದ ಭಕ್ತರು ಮೇ 21 ರಿಂದ ಮೇ 23 ರೊಳಗೆ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ತಿರುಮಲ ಶ್ರೀ ವಾರಿ ಅರ್ಜಿತಾ ಸೇವಾ ಟಿಕೆಟ್ ಗಳಿಗಾಗಿ ಟಿಟಿಡಿ ಮೇ 19 ರಂದು ಬೆಳಿಗ್ಗೆ 10 ಗಂಟೆಗೆ ಆಗಸ್ಟ್ ತಿಂಗಳ ಕೋಟಾ ಟಿಕೆಟ್ ಗಳನ್ನು ಬಿಡುಗಡೆ ಮಾಡಿದೆ. ಈ ಸೇವಾ ಟಿಕೆಟ್ ಗಳ ಎಲೆಕ್ಟ್ರಾನಿಕ್ ಡಿಪ್ ಅನ್ನು ಮೇ 21 ರಂದು ಬೆಳಿಗ್ಗೆ 10 ಗಂಟೆಯವರೆಗೆ ಆನ್ ಲೈನ್ ನಲ್ಲಿ ನೋಂದಾಯಿಸಬಹುದು ಎಂದು ಟಿಟಿಡಿ ಘೋಷಿಸಿದೆ. ಅರ್ಜಿತಾ ಸೇವಾ ಟಿಕೆಟ್ ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ. ಮೇ 21 ರಿಂದ ಮೇ 23 ರ ನಡುವೆ ಮಧ್ಯಾಹ್ನ 12 ಗಂಟೆಯೊಳಗೆ ಹಣವನ್ನು ಪಾವತಿಸಿದವರಿಗೆ ಲಕ್ಕಿಡಿಪ್ ನಲ್ಲಿ ಟಿಕೆಟ್ ನೀಡಲಾಗುವುದು.
ಮೇ 22ರಂದು ಅರ್ಜಿತಾ ಸೇವಾ ಟಿಕೆಟ್ ಗಳ ಬಿಡುಗಡೆ
ಕಲ್ಯಾಣೋತ್ಸವ, ಊಂಜಲ್ ಸೇವೆ, ಅರ್ಜಿತ ಬ್ರಹ್ಮೋತ್ಸವ, ಸಹಸ್ರದೀಪಲಂಕರ ಸೇವೆ, ಶ್ರೀ ವಾರಿ ಸಲಕಟ್ಲ ಪವಿತ್ರೋತ್ಸವದ ಟಿಕೆಟ್ ಗಳನ್ನು ಮೇ 22 ರ ಬೆಳಗ್ಗೆ 10 ಗಂಟೆಗೆ ಬಿಡುಗಡೆ ಮಾಡಲಾಗುವುದು.
ಮೇ 22ಕ್ಕೆ ವರ್ಚುಲ್ ಸೇವಾ ಟಿಕೆಟ್ ಗಳ ಬಿಡುಗಡೆ
ವರ್ಚುವಲ್ ಸೇವೆಗಳು, ಇವುಗಳ ದರ್ಶನದ ಸ್ಲಾಟ್ ಗಳಿಗೆ ಸಂಬಂಧಿಸಿದ ಆಗಸ್ಟ್ ಕೋಟಾವನ್ನು ಮೇ 22 ರಂದು ಮಧ್ಯಾಹ್ನ 3 ಗಂಟೆಗೆ ಆನ್ ಲೈನ್ ನಲ್ಲಿ ಬಿಡುಗಡೆ ಮಾಡಲಾಗುತ್ತದೆ.
ಮೇ 23ಕ್ಕೆ ಅಂಗಪ್ರದಕ್ಷಿಣಂ ಟಿಕೆಟ್
ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಆಗಸ್ಟ್ ತಿಂಗಳ ಅಂಗಪ್ರದಕ್ಷಿಣಂ ಟೋಕನ್ ಗಳ ಕೋಟಾವನ್ನು ಮೇ 23 ರಂದು ಬೆಳಿಗ್ಗೆ 10 ಗಂಟೆಗೆ ಬಿಡುಗಡೆ ಮಾಡಲಿದೆ. ಆಗಸ್ಟ್ ತಿಂಗಳ ಶ್ರೀವಾಣಿ ಟ್ರಸ್ಟ್ ಟಿಕೆಟ್ ಗಳನ್ನು ಆನ್ ಲೈನ್ ಮೇ 23 ರಂದು ಬೆಳಿಗ್ಗೆ 11 ಗಂಟೆಗೆ ಬಿಡುಗಡೆ ಮಾಡಲಿದೆ.
ವೃದ್ಧರು ಮತ್ತು ದಿವ್ಯಾಂಗರಿಗೆ ದರ್ಶನ ಕೋಟಾದ ವಿವರ
ಆಗಸ್ಟ್ ತಿಂಗಳ ಉಚಿತ ವಿಶೇಷ ದರ್ಶನ ಟೋಕನ್ ಗಳ ಕೋಟಾವನ್ನು ಮೇ 23 ರಂದು ಮಧ್ಯಾಹ್ನ 3 ಗಂಟೆಗೆ ಬಿಡುಗಡೆ ಮಾಡಲಿದ್ದು, ಇದರಿಂದ ವೃದ್ಧರು, ವಿಕಲಚೇತನರು ಮತ್ತು ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವವರು ತಿರುಮಲ ಶ್ರೀ ವಾರಿ ದರ್ಶನ ಮಾಡಬಹುದು ಎಂದು ಟಿಟಿಡಿ ಹೇಳಿದೆ.
ಆಗಸ್ಟ್ ತಿಂಗಳ ವಿಶೇಷ ದರ್ಶನ ಟಿಕೆಟ್ ಕೋಟಾ ಯಾವಾಗ
ಆಗಸ್ಟ್ ತಿಂಗಳ ವಿಶೇಷ ಪ್ರವೇಶ ದರ್ಶನ ಟಿಕೆಟ್ ಗಳ ಕೋಟಾವನ್ನು ಮೇ 24 ರಂದು ಬೆಳಿಗ್ಗೆ 10 ಗಂಟೆಗೆ ಬಿಡುಗಡೆ ಮಾಡಲಿದೆ.
ತಿರುಮಲ ಮತ್ತು ತಿರುಪತಿಲದಲ್ಲಿ ಕೊಠಡಿಗಳ ಕೋಟಾ ಬಿಡುಗಡೆ
ತಿರುಮಲ ಮತ್ತು ತಿರುಪತಿಯಲ್ಲಿ ಆಗಸ್ಟ್ ತಿಂಗಳ ಕೋಟಾ ಕೊಠಡಿಗಳನ್ನು ಮೇ 24 ರಂದು ಮಧ್ಯಾಹ್ನ 3 ಗಂಟೆಗೆ ಆನ್ ಲೈನ್ ನಲ್ಲಿ ಬಿಡುಗಡೆ ಮಾಡಲಾಗುವುದು.
ಮೇ 29ರಂದು ಶ್ರೀವಾರಿ ಸೇವಾ ಕೋಟಾ ಬಿಡುಗಡೆ
ತಿರುಮಲ ಮತ್ತು ತಿರುಪತಿಯಲ್ಲಿ ಶ್ರೀವಾರಿ ಸೇವೆ, ಪರಕಮಣಿ ಸೇವೆ, ನವನೀತ ಸೇವಾ ಮತ್ತು ಸಮೂಹ ನಾಯಕರ (ಹಿರಿಯ ಸೇವಕರು) ಸೇವೆಗಳನ್ನು ಮೇ 29 ರಂದು ಬೆಳಿಗ್ಗೆ 11 ಗಂಟೆಗೆ ಬಿಡುಗಡೆ ಮಾಡಲಾಗುವುದು. ಶ್ರೀ ವಾರಿ ಅರ್ಜಿತಾ ಸೇವೆಗಳು ಮತ್ತು ದರ್ಶನ ಟಿಕೆಟ್ ಗಳನ್ನು ಟಿಟಿಡಿಯ ಅಧಿಕೃತ ವೆಬ್ ಸೈಟ್ ಮೂಲಕ ಮಾತ್ರ ಕಾಯ್ದಿರಿಸಬಹುದು. ನೇರ ಲಿಂಕ್ ಗಾಗಿ ಇಲ್ಲಿ ಕ್ಲಿಕ್ ಮಾಡಿ.