Bhagavad Gita: ಈ ಸ್ವಭಾವಗಳನ್ನು ಹೊಂದಿರುವ ವ್ಯಕ್ತಿಗಳು ದುರ್ಬಲರು: ಶ್ರೀಕೃಷ್ಣನ ಪ್ರಕಾರ ಮನುಷ್ಯ ಗೆಲುವು ಪಡೆಯಲು ಇವುಗಳಿಂದ ದೂರವಿರಬೇಕು
Bhagavad Gita: ಮನುಷ್ಯನ ಸ್ವಭಾವ ಯಾವ ರೀತಿ ಇರಬೇಕು? ಸಾಧನೆಗೆ ಅಡ್ಡಿಪಡಿಸುವ ಅಭ್ಯಾಸಗಳು ಏನು? ಆ ಅಭ್ಯಾಸಗಳನ್ನು ಹೊಂದಿರುವ ವ್ಯಕ್ತಿಯು ಜೀವನದಲ್ಲಿ ಹೇಗೆ ಸೋಲನ್ನು ಅನುಭವಿಸುತ್ತಾನೆ? ಇದರ ಬಗ್ಗೆ ಶ್ರೀಕೃಷ್ಣನು ಭಗವದ್ಗೀತೆಯಲ್ಲಿ ಹೇಳಿದ್ದಾನೆ.

ಭಗವದ್ಗೀತೆ, ಇದು ದ್ವಾಪರ ಯುಗದಲ್ಲಿ ಅರ್ಜುನನಿಗೆ ಶ್ರೀಕೃಷ್ಣನು ನೀಡಿರುವ ಉಪದೇಶವಾಗಿದೆ. ಇದು ಅವರಿಬ್ಬರ ನಡುವಿನ ಸಂಭಾಷಣೆಯಾಗಿದೆ. ಅಂದು ಶ್ರೀಕೃಷ್ಣನು ಹೇಳಿದ ಅಮೃತವಾಣಿಯು ಇಂದಿನ ಈ ಕಲಿಯುಗದಲ್ಲೂ ಪ್ರಸ್ತುತವಾಗಿದೆ. ಗೀತೆಯ ಸಾರವನ್ನು ಜೀವನದಲ್ಲಿ ಅಳವಡಿಸಿಕೊಂಡ ವ್ಯಕ್ತಿ ಭವಿಷ್ಯದ ದಿನಗಳಲ್ಲಿ ಯಶಸ್ವಿಯಾಗುವುದು ಖಚಿತ. ಗೀತೆಯಲ್ಲಿ ಬರೆದ ವಿಷಯಗಳು ಇಡೀ ಮಾನವ ಸಮಾಜಕ್ಕೆ ಬದುಕುವ ಕಲೆಯನ್ನು ಕಲಿಸುತ್ತವೆ. ಇವು ವ್ಯಕ್ತಿಯೊಬ್ಬನಿಗೆ ಜೀವನದಲ್ಲಿ ಒಂದು ಉದ್ದೇಶವನ್ನು ನೀಡುವ ಮೂಲಕ ಮಾರ್ಗದರ್ಶನ ಮಾಡುತ್ತದೆ. ಜೀವನವನ್ನು ಸಮತೋಲನ ಮತ್ತು ಶಾಂತಿಯಿಂದ ಬದುಕಲು ಪ್ರೇರೇಪಿಸುತ್ತವೆ. ಗೀತೆಯು ಮನುಷ್ಯನ ಯೋಗ್ಯತೆ ಮತ್ತು ದೋಷಗಳೆರಡನ್ನೂ ವಿವರಿಸುತ್ತದೆ. ದೋಷಗಳನ್ನು ಮೈಗೂಡಿಸಿಕೊಂಡಿರುವ ವ್ಯಕ್ತಿಯು ಜೀವನದಲ್ಲಿ ಏನನ್ನೂ ಸಾಧಿಸಲಾರ. ಹಾಗಾದರೆ ಶ್ರೀಕೃಷ್ಣನ ಪ್ರಕಾರ ಯಾವ ಅಭ್ಯಾಸಗಳನ್ನು ಹೊಂದಿರುವ ವ್ಯಕ್ತಿಯಿಂದ ಯಾರಿಗೂ ಪ್ರಯೋಜನವಿಲ್ಲ ಎಂದು ನೋಡೋಣ.
1. ಸೋಮಾರಿಯಾಗಿರುವ ವ್ಯಕ್ತಿ
ನಿರಂತರವಾಗಿ ವಿಶ್ರಮಿಸುವ ಮತ್ತು ಸೋಮಾರಿಯಾದವನು ಯಾವ ಕೆಲಸಕ್ಕೂ ಯೋಗ್ಯನಲ್ಲ ಎಂದು ಶ್ರೀಕೃಷ್ಣನು ಭಗವದ್ಗೀತೆಯು ಉಪದೇಶದಲ್ಲಿ ಹೇಳಿದ್ದಾನೆ. ಏಕೆಂದರೆ ದೈಹಿಕ ಪರಿಶ್ರಮವಿಲ್ಲದೆ ಮಾನವ ದೇಹವು ದುರ್ಬಲವಾಗುತ್ತದೆ. ಅಷ್ಟೇ ಅಲ್ಲದೇ ಸೋಮಾರಿತನವನ್ನು ರೂಢಿಸಿಕೊಂಡಿರುವ ಮನುಷ್ಯನು ಪ್ರತಿಯೊಂದು ಕೆಲಸದಲ್ಲೂ ಹಿಂದುಳಿಯುತ್ತಾನೆ. ಸಮಯಕ್ಕೆ ಸರಿಯಾಗಿ ಅವನು ಯಾವ ಕೆಲಸವನ್ನೂ ಮಾಡಲಾರ. ಅಂತಹ ವ್ಯಕ್ತಿಗಳಿಂದ ಈ ಸಮಾಜಕ್ಕೆ ಏನೂ ಪ್ರಯೋಜನ ಸಿಗುವುದಿಲ್ಲ.
2. ಅತಿಯಾಗಿ ಪ್ರೀತಿ ಪಡೆದ ವ್ಯಕ್ತಿ
ಭಗವದ್ಗೀತೆಯ ಪ್ರಕಾರ, ಅತಿಯಾಗಿ ಪ್ರೀತಿ ಪಡೆಯುವ ವ್ಯಕ್ತಿಯು ದೈಹಿಕವಾಗಿ ಮತ್ತು ಮಾನಸಿಕವಾಗಿ ಅಂಗವಿಕಲನಾಗುತ್ತಾನೆ. ಈ ಪ್ರೀತಿಯು ಮನುಷ್ಯನನ್ನು ಮುಂದೆ ಸಾಗದಂತೆ ತಡೆಯುತ್ತದೆ. ತಮ್ಮ ಮಕ್ಕಳನ್ನು ಅತಿಯಾಗಿ ಪ್ರೀತಿಸುವ ಪೋಷಕರು ತಮ್ಮ ಮಕ್ಕಳ ಭವಿಷ್ಯ ಹದಗೆಡುವುಂತೆ ಮಾಡುತ್ತಾರೆ. ಅವರಿಗೆ ಬದುಕುವ ಕಲೆಯನ್ನು ತಿಳಿಹೇಳುವುದಿಲ್ಲ. ಅತಿಯಾದ ಪ್ರೀತಿಯು ಆ ವ್ಯಕ್ತಿಯನ್ನು ನಿಷ್ಪಯೋಜಕನನ್ನಾಗಿ ಮಾಡುತ್ತದೆ.
3. ಅಹಂಕಾರ ಹೊಂದಿರುವ ವ್ಯಕ್ತಿ
ಅಹಂಕಾರ ಸ್ವಭಾವದ ವ್ಯಕ್ತಿಗಳು ದೊಡ್ಡವರು ಮತ್ತು ಚಿಕ್ಕವರು ಹೀಗೆ ಯಾರನ್ನೂ ಗೌರವಿಸುವುದಿಲ್ಲ ಎಂದು ಗೀತೆಯಲ್ಲಿ ಬರೆಯಲಾಗಿದೆ. ಅಹಂಕಾರ ತುಂಬಿರುವ ವ್ಯಕ್ತಿಯ ದೇಹವು ಯಾವುದೇ ಕೆಲಸವನ್ನು ಮಾಡಲು ಬಯಸುವುದಿಲ್ಲ. ಪ್ರತಿಯೊಂದರಲ್ಲೂ ತಪ್ಪುಗಳೇ ಅವನಿಗೆ ಕಾಣಿಸುತ್ತದೆ. ಈ ಅಹಂಕಾರದ ಸ್ವಭಾವವೇ ಆ ವ್ಯಕ್ತಿಯನ್ನು ಮುಂದೆ ಸಾಗದಂತೆ ತಡೆಯುತ್ತದೆ.
4. ಭಾವನೆಗಳಿಗೆ ಸಿಲುಕಿರುವ ವ್ಯಕ್ತಿ
ಯಾವುದೇ ವಿಷಯದ ಬಗ್ಗೆ ಅತಿಯಾದ ಭಾವನೆ ಹೊಂದಿರುವ ವ್ಯಕ್ತಿಯು ದೈಹಿಕವಾಗಿ ಮತ್ತು ಮಾನಸಿಕವಾಗಿ ದುರ್ಬಲನಾಗುತ್ತಾನೆ ಎಂದು ಶ್ರೀಕೃಷ್ಣ ಹೇಳುತ್ತಾನೆ. ಅವನು ಯಾವುದೇ ಕೆಲಸಕ್ಕೂ ಯೋಗ್ಯನಾಗಿರುವುದಿಲ್ಲ. ಭಾವನೆಗಳ ಸುಳಿಯಲ್ಲಿ ಸಿಲುಕಿಕೊಳ್ಳುತ್ತಾನೆ. ಅಂತಹ ಜನರು ತಮ್ಮ ಗುರಿಗಳಿಂದ ಸುಲಭವಾಗಿ ವಿಚಲಿತರಾಗುತ್ತಾರೆ.
5. ಕೋಪಗೊಳ್ಳುವ ವ್ಯಕ್ತಿ
ತುಂಬಾ ಕೋಪಗೊಳ್ಳುವ ವ್ಯಕ್ತಿ ಕೂಡ ಯಾವುದೇ ಕೆಲಸಕ್ಕೆ ಯೋಗ್ಯನಲ್ಲ ಎಂದು ಗೀತೆ ಹೇಳುತ್ತದೆ. ಕೋಪವು ವ್ಯಕ್ತಿಯನ್ನು ಮುಂದೆ ಹೋಗದಂತೆ ತಡೆಯುತ್ತದೆ. ಕೋಪಗೊಂಡ ವ್ಯಕ್ತಿಯು ತನಗೆ ತಾನೇ ಹಾನಿ ಮಾಡಿಕೊಳ್ಳುತ್ತಾನೆ. ಇದಲ್ಲದೇ ಹೆಚ್ಚಾಗಿ ಕೋಪಿಸಿಕೊಳ್ಳುವ ವ್ಯಕ್ತಿ ಧರ್ಮಮಾರ್ಗದಿಂದ ವಿಮುಖನಾಗುತ್ತಾನೆ.
(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟಿಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.)
