ಮಾಘ ಅಷ್ಟಮಿಯಂದು ಪ್ರಧಾನಿ ನರೇಂದ್ರ ಮೋದಿ ಕುಂಭ ಮೇಳದಲ್ಲಿ ಪವಿತ್ರ ಸ್ನಾನ: ಮಾಘ ಅಷ್ಟಮಿಗೆ ಅಷ್ಟೇಕೆ ಮಹತ್ವ? ಇಲ್ಲಿದೆ ವಿವರ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಮಾಘ ಅಷ್ಟಮಿಯಂದು ಪ್ರಧಾನಿ ನರೇಂದ್ರ ಮೋದಿ ಕುಂಭ ಮೇಳದಲ್ಲಿ ಪವಿತ್ರ ಸ್ನಾನ: ಮಾಘ ಅಷ್ಟಮಿಗೆ ಅಷ್ಟೇಕೆ ಮಹತ್ವ? ಇಲ್ಲಿದೆ ವಿವರ

ಮಾಘ ಅಷ್ಟಮಿಯಂದು ಪ್ರಧಾನಿ ನರೇಂದ್ರ ಮೋದಿ ಕುಂಭ ಮೇಳದಲ್ಲಿ ಪವಿತ್ರ ಸ್ನಾನ: ಮಾಘ ಅಷ್ಟಮಿಗೆ ಅಷ್ಟೇಕೆ ಮಹತ್ವ? ಇಲ್ಲಿದೆ ವಿವರ

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಪ್ರಧಾನಿ ನರೇಂದ್ರ ಮೋದಿ ಶಾಹಿ ಸ್ನಾನ ಮಾಡಲಿದ್ದಾರೆ. ಪ್ರಧಾನಿ ಮೋದಿ ಅವರು ಮಾಘ ಅಷ್ಟಮಿಯಂದು ಪವಿತ್ರ ಸ್ನಾನ ಮಾಡುತ್ತಾರೆ. ಈ ದಿನದ ಮಹತ್ವವೇನು ಎಂಬುದನ್ನು ತಿಳಿಯೋಣ.

ಪ್ರಧಾನಿ ನರೇಂದ್ರ ಮೋದಿ ಅವರು ಮಾಘ ಅಷ್ಟಮಿ ದಿನದಂದು ಪ್ರಯಾಗ್‌ರಾಜ್‌ನ ಮಹಾ ಕುಂಭ ಮೇಳದಲ್ಲಿ ಪವಿತ್ರ ಸ್ನಾನ ಮಾಡಲಿದ್ದಾರೆ
ಪ್ರಧಾನಿ ನರೇಂದ್ರ ಮೋದಿ ಅವರು ಮಾಘ ಅಷ್ಟಮಿ ದಿನದಂದು ಪ್ರಯಾಗ್‌ರಾಜ್‌ನ ಮಹಾ ಕುಂಭ ಮೇಳದಲ್ಲಿ ಪವಿತ್ರ ಸ್ನಾನ ಮಾಡಲಿದ್ದಾರೆ (Narendra Modi Website)

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ 144 ವರ್ಷಗಳ ಬಳಿಕ ನಡೆಯುತ್ತಿರುವ ಮಹಾ ಕುಂಭ ಮೇಳ ಇಡೀ ಜಗತ್ತಿನ ಗಮನ ಸೆಳೆಯುತ್ತಿದೆ. ಜನವರಿ 13 ರಿಂದ ಆರಂಭವಾಗಿರುವ ಮಹಾ ಕುಂಭ ಮೇಳದಲ್ಲಿ ಈಗಾಗಲೇ ಕೋಟ್ಯಂತರ ಮಂದಿ ಪವಿತ್ರ ಸ್ನಾನ ಮಾಡುವ ಮೂಲಕ ಭಕ್ತಿಯ ಪರಾಕಾಷ್ಠೆಯಲ್ಲಿ ಮಿಂದೆಂದೇಳುತ್ತಿದ್ದಾರೆ. ಸಾಧು, ಸಂತರು, ಭಕ್ತರು ಇನ್ನೂ ಕೂಡ ಸಮರೋಪಾದಿಯಲ್ಲಿ ಪ್ರಯಾಗ್‌ರಾಜ್‌ನತ್ತ ಆಗಮಿಸುತ್ತಿದ್ದು ಗಂಗಾ, ಯಮುನ ಹಾಗೂ ಸರಸ್ವತಿ ನದಿಗಳ ವಿತ್ರ ಸಂಗಮದಲ್ಲಿ ಶಾಹಿ ಸ್ನಾನ ಮಾಡುತ್ತಿದ್ದಾರೆ.

ಸಾಧು, ಸಂತರು, ವಿವಿಧ ಕ್ಷೇತ್ರದ ಗಣ್ಯರು ಭಾಗವಹಿಸುವ ಮೂಲಕ ಮಹಾ ಕುಂಭ ಮೇಳದ ಆಕರ್ಷಣೆಯಾಗುತ್ತಿದ್ದಾರೆ. ಇದೀಗ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಹಾ ಕುಂಭ ಮೇಳದಲ್ಲಿ ಭಾಗವಹಿಸಲಿದ್ದಾರೆ. ಪ್ರಧಾನಿ ಮೋದಿ ಅವರು ಫೆಬ್ರವರಿ 5 ರ ಮಾಘ ಅಷ್ಟಮಿಯಂದು ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ಪವಿತ್ರ ಸ್ನಾನಕ್ಕಾಗಿ ಪ್ರಧಾನಿ ನಮೋ ಮಾಘ ಅಷ್ಟಮಿಯನ್ನೇ ಯಾಕೆ ಆಯ್ಕೆ ಮಾಡಿಕೊಂಡರು, ಮಾಘ ಅಷ್ಟಮಿಗೂ ಅಧ್ಯಾತ್ಮಕ್ಕೆ ಏನು ಸಂಬಂಧ, ಮಾಘ ಅಷ್ಟಮಿಯ ಮಹತ್ವವನ್ನು ತಿಳಿಯೋಣ.

ಫೆಬ್ರವರಿ 5ರ ಮಾಘ ಅಷ್ಟಮಿಯಂದೇ ಪವಿತ್ರ ಸ್ನಾನ ಯಾಕೆ

ಮಹಾ ಕುಂಭ ಮೇಳದಲ್ಲಿ ಸಾಕಷ್ಟು ಪವಿತ್ರ ಸ್ನಾನಕ್ಕಾಗಿ ಮೌನಿ ಅವಾಮಾನಸ್ಯೆ ಮತ್ತು ವಸಂತ ಪಂಚಮಿಯನ್ನು ಆಯ್ಕೆ ಮಾಡಿಕೊಂಡಿದ್ದರು. ಈ ದಿನಗಳಲ್ಲಿ ಕೋಟ್ಯಂತರ ಮಂದಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ಆದರೆ ಫೆಬ್ರವರಿ 5ರ ಮಾಘ ಅಷ್ಟಮಿಗೂ ವಿಶೇಷ ಮಹತ್ವವಿದೆ. ಹಿಂದೂ ಕ್ಯಾಲೆಂಡರ್ ಪ್ರಕಾರ, ಈ ದಿನ ತಪ್ಪಸ್ಸು, ಧ್ಯಾನ ಹಾಗೂ ಭಕ್ತಿಗೆ ಹೆಸರುವಾಸಿಯಾಗಿದೆ ಎಂದು ಹೇಳಲಾಗುತ್ತದೆ.

ಮಾಘ ಮಾಸದ ಎಂಟನೇ ದಿನದಂದು ಮಾಘ ಅಷ್ಟಮಿ ಬರುತ್ತದೆ. ಗುಪ್ತ ನವರಾತ್ರಿಯ ಅವಧಿಯೊಂದಿಗೆ ಹೊಂದಿಕೆಯಾಗುತ್ತದೆ. ಈ ದಿನದಂದು ಧ್ಯಾನ, ದಾನ ಹಾಗೂ ಪ್ರಯಾಗ್‌ರಾಜ್‌ನ ಸಂಗಮದಲ್ಲಿ ಪವಿತ್ರ ಸ್ನಾನ ಮಾಡುವುದು ತುಂಬಾ ಮಂಗಳಕರ ಎಂದು ಪರಿಗಣಿಸಲಾಗಿದೆ. ಮಾಘ ಅಷ್ಟಮಿಯಲ್ಲಿ ಮಾಡುವ ಪ್ರಕ್ರಿಯೆಗಳು ದೈವಿಕ ಆಶೀರ್ವಾದವನ್ನು ಕೂಡ ತರುತ್ತವೆ ಎಂಬ ನಂಬಿಕೆ ಭಕ್ತರಲ್ಲಿದೆ. ಮಾಘ ಅಷ್ಟಮಿಯ ದಿನ ಈ ಎಲ್ಲಾ ಕೆಲಸಗಳನ್ನು ಮಾಡಿದರೆ ಅಂದುಕೊಂಡಿದ್ದೆಲ್ಲವೂ ನೆರವೇರುತ್ತದೆ ಎಂದು ಹೇಳಲಾಗುತ್ತದೆ.

ಕುತೂಹಲಕಾರಿ ವಿಷಯವೆಂದರೆ ಫೆಬ್ರವರಿ 5 ರಂದು ಮಹಾಭಾರತದಲ್ಲಿ ಭೀಷ್ಮ ಪಿತಾಮಹರು ತಮ್ಮ ಬಾಣಗಳ ಹಾಸಿಗೆಯ ಮೇಲೆ ಮಲಗಿ, ಸೂರ್ಯನು ಉತ್ತರ ದಿಕ್ಕಿಗೆ ಚಲನೆ, ಶುಕ್ಲ ಪಕ್ಷಕ್ಕೆ ಪರಿವರ್ತನೆಗೊಳ್ಳುವವರಿಗೆ ಕಾಯುತ್ತಿದ್ದರು. ನಂತರ ತಮ್ಮ ಮರ್ತ್ಯ ಜೀವನದಿಂದ ನಿರ್ಗಮಿಸಿದರು. ಶ್ರೀ ಕೃಷ್ಣನು ಪಕ್ಕದಲ್ಲಿದ್ದಾಗ ಭೀಷ್ಮನು ಮಾಘ ಮಾಸದ ಎಂಟನೇ ದಿನದಂದು ಮೋಕ್ಷ ಪಡೆದು ಎಂದು ಹೇಳಲಾಗಿದೆ. ಭೀಷ್ಮನ ಅಧ್ಯಾತ್ಮಿಕ ಪ್ರಯಾಣ ಮತ್ತು ಅಚಲ ಸಮರ್ಪಣೆಯನ್ನು ಗೌರವಿಸಲು ಈ ದಿನವನ್ನು ಹಿಂದೂ ಸಂಪ್ರದಾಯದಲ್ಲಿ ಆಚರಿಸಲಾಗುತ್ತದೆ. 2025ರ ಫೆಬ್ರವರಿ 5 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಮಹಾ ಕುಂಭ ಮೇಳದಲ್ಲಿ ಸ್ನಾನ ಮಾಡಲಿದ್ದಾರೆ. ಹೀಗಾಗಿ ಮಾಘ ಅಷ್ಟಮಿ ದಿನವು ಮತ್ತಷ್ಟು ಮಹತ್ವವನ್ನು ಪಡೆದುಕೊಂಡಿದೆ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.