Rama Navami 2025: ರಾಮ ನವಮಿ ದಿನ ಈ ಸ್ತೋತ್ರಗಳನ್ನು ಪಠಿಸಿದರೆ ಇಷ್ಟೊಂದು ಲಾಭಗಳಿವೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Rama Navami 2025: ರಾಮ ನವಮಿ ದಿನ ಈ ಸ್ತೋತ್ರಗಳನ್ನು ಪಠಿಸಿದರೆ ಇಷ್ಟೊಂದು ಲಾಭಗಳಿವೆ

Rama Navami 2025: ರಾಮ ನವಮಿ ದಿನ ಈ ಸ್ತೋತ್ರಗಳನ್ನು ಪಠಿಸಿದರೆ ಇಷ್ಟೊಂದು ಲಾಭಗಳಿವೆ

Sri Rama Stuti: ರಾಮನವಮಿಯಂದು ಶ್ರೀರಾಮನ ಸ್ತುತಿ ಸ್ತೋತ್ರಗಳನ್ನು ಪಠಿಸುವುದರಿಂದ ಅನೇಕ ಪ್ರಯೋಜನಗಳಿವೆ. ದುಃಖದಿಂದ ಪರಿಹಾರದ ಜೊತೆಗೆ, ಸಂತೋಷ ಮತ್ತು ಸಮೃದ್ಧಿ ಇರುತ್ತದೆ. ರಾಮನ ಸ್ತೋತ್ರಗಳು ಇಲ್ಲಿವೆ.

ಶ್ರೀರಾಮ ನವಮಿಯಿಂದು ಶುಭ ಫಲಗಳಿಗಾಗಿ ಪಠಿಸಬೇಕಾದ ರಾಮನ ಮಂತ್ರಗಳನ್ನು ಇಲ್ಲಿ ನೀಡಲಾಗಿದೆ
ಶ್ರೀರಾಮ ನವಮಿಯಿಂದು ಶುಭ ಫಲಗಳಿಗಾಗಿ ಪಠಿಸಬೇಕಾದ ರಾಮನ ಮಂತ್ರಗಳನ್ನು ಇಲ್ಲಿ ನೀಡಲಾಗಿದೆ

ಮರ್ಯಾದ ಪುರುಷ ಶ್ರೀರಾಮನ ಜನ್ಮ ದಿನವನ್ನು ರಾಮ ನವಮಿಯನ್ನಾಗಿ ಆಚರಿಸಲಾಗುತ್ತದೆ. ಭಗವಾನ್ ಶ್ರೀರಾಮನ ಶ್ರೇಷ್ಠತೆಯ ಬಗ್ಗೆ ಹೇಳಲು ಬಹಳಷ್ಟು ಇದೆ. ವಿಶೇಷವಾಗಿ ರಾಮನನ್ನು ಪೂಜಿಸುವುದರಿಂದ ಸಂತೋಷ ಮತ್ತು ಸಮೃದ್ಧಿಯ ಜೊತೆಗೆ ಅನೇಕ ಪ್ರಯೋಜನಗಳನ್ನು ಪಡೆಯಬಹುದು ಎಂಬುದು ಭಕ್ತರ ನಂಬಿಕೆಯಾಗಿದೆ. ಶ್ರೀ ರಾಮ ನವಮಿಯ ದಿನದಂದು, ಶ್ರೀ ರಾಮನ ಮಂತ್ರಗಳನ್ನು ಪಠಿಸಿದರೆ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ರಾಮನ ಜೊತೆಗೆ ಹನುಮಂತನ ಆಶೀರ್ವಾದವೂ ನಿಮಗೆ ಸಿಗುತ್ತದೆ. ರಾಮನ ಸ್ತೋತ್ರಗಳನ್ನು ಪಠಿಸಿದರೆ ಶಾಂತಿ, ಸಂತೋಷ ಹಾಗೂ ಸಮೃದ್ಧಿ ಸಿಗುತ್ತದೆ ಎಂಬುದು ಭಕ್ತರ ನಂಬಿಕೆಯಾಗಿದೆ. ಶ್ರೀರಾಮ ನವಮಿ ಯಾವಾಗ ಹಾಗೂ ಶುಭ ಫಲಗಳಿಗಾಗಿ ಅಂದು ಪಠಿಸಬೇಕಾದ ಸ್ತೋತ್ರಗಳನ್ನು ಇಲ್ಲಿ ನೀಡಲಾಗಿದೆ.

2025ರ ಶ್ರೀರಾಮ ನವಮಿ ಆಚರಣೆ ಯಾವಾಗ?

ಈ ವರ್ಷ ಅಂದರೆ 2025 ರಲ್ಲಿ ರಾಮ ನವಮಿ ಯಾವಾಗ, ಚೈತ್ರ ಮಾಸದ ಶುಕ್ಲ ಪಕ್ಷದ ನವಮಿಯ ದಿನಾಂಕವು ಏಪ್ರಿಲ್ 05 ರಂದು ಸಂಜೆ 07:26 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಏಪ್ರಿಲ್ 06 ರಂದು ಸಂಜೆ 07:22 ಕ್ಕೆ ಕೊನೆಗೊಳ್ಳುತ್ತದೆ. ಹೀಗಾಗಿ, ರಾಮ ನವಮಿ ಹಬ್ಬವನ್ನು 2025 ರ ಏಪ್ರಿಲ್ 06 ರ ಭಾನುವಾರದಂದು ಉದಯ ತಿಥಿಯಂದು ಆಚರಿಸಲಾಗುತ್ತದೆ.

ಶ್ರೀ ರಾಮ ಸ್ತುತಿ (ತುಳಸಿದಾಸ ಕೃತಿ)

ಶ್ರೀ ರಾಮಚಂದ್ರ ಕೃಪಾಳು ಭಜು ಮನ ಹರಣ ಭವ ಭವ ದಾರುಣಂ

ನವಕಂಜ ಲೋಚನ ಕಂಜ ಮುಖ ಕರ ಕಂಜ ಪದ ಕಂಜಾರುಣಂ (1)

ಕಂದರ್ಪ ಅಗಣಿತ ಅಮಿತ ಛವಿ ನವ ನೀಲ ನೀರಜ ಸುಂದರಂ

ವಟಪೀತ ಮಾನಹು ತಡಿತ ರುಚಿ ಶುಚಿ ನೌಮಿ ಜನಕ ಸುತಾವರಮ್ (2)

ಭಜ ದೀನ ಬಂಧು ದಿನೇಶ ದಾನವ ದೈತ್ಯವಂಶನಿಕಂದನಂ

ರಘುನಂದ ಆನಂದಕಂದ ಕೌಶಲ ಚಂದ ದಶರಥ ನಂದನಂ (3)

ಶಿರ ಮುಕುಟ ಕುಂಡಲ ತಿಲಕ ಚಾರು ಉದಾರ ಅಂಗ ವಿಭೂಷಣಂ

ಆಜಾನುಭುಜ ಶರಚಾಪಧರ ಸಂಗ್ರಾಮ ಜಿತ ಕರದೂಷಣಂ (4)

ಇತಿ ವದತಿ ತುಲಸೀದಾಸ ಶಂಕರ ಶೇಷ ಮುನಿ ಮನರಂಜನಂ

ಮಮ ಹೃದಯಕಂಜ ನಿವಾಸ ಕುರು ಕಾಮಾದಿಖಲದಲಮಂಜನಂ (5)

ಶ್ರೀ ರಾಮ ಸ್ತುತಿ ಮಂತ್ರ ಯಾ ಕುಂದೇಂದುತುಷಾರಹಾರಧವಳಾ ಯಾ ಶುಭ್ರಮವಸ್ತ್ರಾವೃತಾ. ಈ ಮಂತ್ರವನ್ನು ಪಠಿಸುವುದರಿಂದ ದೇವರ ಮೇಲಿನ ಭಕ್ತಿ ಮತ್ತು ಪ್ರೀತಿ ಹೆಚ್ಚಾಗುತ್ತದೆ.

Raghavendra M Y

TwittereMail
ರಾಘವೇಂದ್ರ ಎಂ.ವೈ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್ ಪ್ರೊಡ್ಯೂಸರ್. ರಾಶಿ ಭವಿಷ್ಯ (ಧರ್ಮ) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ, ಉದಯ ನ್ಯೂಸ್, ದಿಗ್ವಿಜಯ ನ್ಯೂಸ್, ಫಸ್ಟ್ ನ್ಯೂಸ್, ಡಿಡಿ ಚಂದನ ನ್ಯೂಸ್, ಈ-ಟಿವಿ ಭಾರತದಲ್ಲಿ ಬುಲೆಟಿನ್ ಪ್ರೊಡ್ಯೂಸರ್ ಸೇರಿ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಅನುಭವ. ಪುಸ್ತಕ, ಪತ್ರಿಕೆ ಓದುವುದು ಇಷ್ಟ. ವಾಣಿಜ್ಯ, ಕ್ರಿಕೆಟ್, ಗ್ರಾಮೀಣ ವಿದ್ಯಮಾನಗಳ ಬಗ್ಗೆ ಇಷ್ಟಪಟ್ಟು ಬರೆಯುತ್ತಾರೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಿರುಪನಹಳ್ಳಿ ಇವರ ಸ್ವಂತ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.