Tulasi Plant: ತುಳಸಿ ಗಿಡವನ್ನು ಯಾವುದೇ ಕಾರಣಕ್ಕೂ ಮನೆಯ ಈ 5 ಕಡೆ ಇಡಬೇಡಿ; ಇಟ್ಟರೆ ಏನಾಗುತ್ತೆ?
Tulasi Plant: ವಾಸ್ತು ಪ್ರಕಾರ ತುಳಸಿ ಗಿಡವನ್ನು ಇಡಲು ಕೆಲವು ನಿರ್ದೇಶನಗಳಿವೆ. ಆದರೆ ಮನೆಯಲ್ಲಿ ಈ 5 ಸ್ಥಳಗಳಲ್ಲಿ ಅಪ್ಪಿತಪ್ಪಿಯೂ ಇಡಬಾರದು. ಇದು ಕೆಟ್ಟ ಪರಿಣಾಮಗಳನ್ನು ನೀಡುತ್ತದೆ. ನಕಾರಾತ್ಮಕ ಶಕ್ತಿಗಳು ಮನೆಗೆ ಪ್ರವೇಶಿಸಲು ಅನುವು ಮಾಡಿಕೊಡುತ್ತದೆ. ಮನೆಯ ಎಲ್ಲೆಲ್ಲಿ ತುಳಸಿ ಗಿಡವನ್ನು ಇಡಬಾರದು ಅನ್ನೋದನ್ನು ತಿಳಿದುಕೊಳ್ಳಿ.
ಹಿಂದೂ ಧರ್ಮದಲ್ಲಿ, ತುಳಸಿ ಸಸ್ಯವನ್ನು ಅಧ್ಯಾತ್ಮಿಕ ಬೆಳವಣಿಗೆ, ಶುದ್ಧತೆ ಮತ್ತು ದೈವಿಕ ಪ್ರೀತಿಯ ಪವಿತ್ರ ಸಂಕೇತವೆಂದು ಪರಿಗಣಿಸಲಾಗುತ್ತದೆ. ಲಕ್ಷ್ಮಿ ದೇವಿಯ ರೂಪವೆಂದು ಪರಿಗಣಿಸಲಾಗಿದೆ. ಇದರ ಶುದ್ಧೀಕರಣ ಗುಣಗಳು ಮತ್ತು ಔಷಧೀಯ ಗುಣಗಳು ಸಹ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿವೆ. ತುಳಸಿ ಗಿಡವನ್ನು ಭಕ್ತಿಯಿಂದ ಪೂಜಿಸುವವರಿಗೆ ಐಶ್ವರ್ಯ, ಸಮೃದ್ಧಿ ಮತ್ತು ರಕ್ಷಣೆ ಸಿಗುತ್ತದೆ ಎಂಬ ನಂಬಿಕೆ ಇದೆ. ತುಳಸಿಯಿರುವ ಮನೆಯವರ ಮನಸ್ಸು, ದೇಹ ಮತ್ತು ಆತ್ಮವನ್ನು ಶುದ್ಧಗೊಳಿಸಲಾಗುತ್ತೆ ಎಂದು ನಂಬಲಾಗಿದೆ. ತುಳಸಿಯನ್ನು ನಿತ್ಯ ಪೂಜಿಸುವವರಿಗೆ ಮರಣಾನಂತರ ಮೋಕ್ಷ ಸಿಗುತ್ತದೆ ಎಂದು ಹೇಳಲಾಗುತ್ತದೆ. ಪಾಪಗಳು ನಾಶವಾಗುತ್ತವೆ ಎಂದು ನಂಬಲಾಗಿದೆ.
ತುಳಸಿಯನ್ನು ಅತ್ಯಂತ ಪೂಜ್ಯ ಸಸ್ಯವೆಂದು ಪೂಜಿಸಲಾಗುತ್ತದೆ. ಆದರೆ ಅಂತಹ ಪವಿತ್ರವಾದ ತುಳಸಿ ಗಿಡವನ್ನು ಕೆಲವೊಂದು ನಿರ್ದಿಷ್ಟ ಸ್ಥಳಗಳಲ್ಲಿ ಇಡಬಾರದು. ತುಳಸಿ ಗಿಡವನ್ನು ಇಡುವುದು ಅಶುಭವೆಂದು ಪರಿಗಣಿಸುವ ಐದು ಸ್ಥಳಗಳನ್ನು ನೀವು ತಿಳಿದುಕೊಂಡಿರಬೇಕು. ಈ ಸ್ಥಳಗಳಲ್ಲಿ ಎಲ್ಲಿಯಾದರೂ ಇರಿಸಿದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಆದ್ದರಿಂದ ಅಪ್ಪಿತಪ್ಪಿಯೂ ತುಳಸಿ ಗಿಡವನ್ನು ಈ ಸ್ಥಳಗಳಲ್ಲಿ ಇಡಬಾರದು.
- ಸ್ನಾನಗೃಹ
ತುಳಸಿಯನ್ನು ಸ್ನಾನಗೃಹ ಅಥವಾ ಶೌಚಾಲಯದ ಬಳಿ ಇಡಬಾರದು. ಅದರ ಪವಿತ್ರ ಸ್ವಭಾವವು ಅಶುದ್ಧವಾಗುತ್ತದೆ. ಈ ಸ್ಥಳವು ತ್ಯಾಜ್ಯ ಮತ್ತು ಕಲ್ಮಶಗಳೊಂದಿಗೆ ಸಂಬಂಧಿಸಿದೆ, ಇದು ಅಧ್ಯಾತ್ಮಿಕ ಮಹತ್ವ ಮತ್ತು ಭದ್ರತೆಯನ್ನು ದುರ್ಬಲಗೊಳಿಸುತ್ತದೆ. ಅಷ್ಟೇ ಅಲ್ಲ ಇಂಥ ಸ್ಥಳದಲ್ಲಿ ತುಳಸಿ ಗಿಡವನ್ನು ಇಡುವುದರಿಂದ ಲಕ್ಷ್ಮಿ ದೇವಿಯ ಕೃಪೆಯನ್ನು ಕಳೆದುಕೊಳ್ಳಬಹುದು.
2. ಅಡಿಗೆ ಮನೆ
ಹಿಂದೂ ಶಾಸ್ತ್ರದ ಪ್ರಕಾರ ತುಳಸಿಯನ್ನು ಅಡುಗೆ ಮನೆಯ ಹತ್ತಿರ ಇಡಬಾರದು. ಏಕೆಂದರೆ ಶಾಖ, ಹೊಗೆ ಮತ್ತು ಅಡುಗೆ ವಾಸನೆ ಪವಿತ್ರತೆಯನ್ನು ಕಲುಷಿತಗೊಳಿಸುತ್ತವೆ ಎಂದು ನಂಬಲಾಗಿದೆ. ಇದು ಅದರ ಅಧ್ಯಾತ್ಮಿಕ ಮಹತ್ವವನ್ನು ಕಡಿಮೆ ಮಾಡುತ್ತದೆ ಮತ್ತು ಅದರ ಶುದ್ಧೀಕರಣ ಗುಣಗಳನ್ನು ತೆಗೆದುಹಾಕುತ್ತದೆ. ಆದ್ದರಿಂದ ಪೂಜೆಯ ಅಧ್ಯಾತ್ಮಿಕ ಬೆಳವಣಿಗೆಗೆ ಇದು ಅಶುಭವೆಂದು ಪರಿಗಣಿಸಲಾಗಿದೆ. ಹಾಗಾಗಿ ಅಡುಗೆ ಮನೆಯ ಆಸುಪಾಸಿನಲ್ಲಿ ಇಡಬಾರದು.
3. ಮೆಟ್ಟಿಲುಗಳ ಕೆಳಗೆ
ತುಳಸಿಯನ್ನು ಮೆಟ್ಟಿಲುಗಳ ಕೆಳಗೆ ಅಥವಾ ನೆಲದ ಮೇಲೆ ಇಡಬಾರದು. ಇದು ಶಕ್ತಿಯ ಹರಿವನ್ನು ನಿರ್ಬಂಧಿಸುತ್ತದೆ. ಅಧ್ಯಾತ್ಮಿಕ ಬೆಳವಣಿಗೆ, ಸಮೃದ್ಧಿ, ಅದೃಷ್ಟವನ್ನು ನಿಲ್ಲಿಸುತ್ತದೆ. ಮನೆಯಲ್ಲಿ ಅಹಿತಕರ ಪರಿಣಾಮಗಳನ್ನು ತರುತ್ತದೆ.
4. ಶೂ ರ‍್ಯಾಕ್
ಚಪ್ಪಲಿ ಮತ್ತು ಡಸ್ಟ್ ಬಿನ್ ಇಡುವ ಕೊಳಕು ಸ್ಥಳಗಳ ಬಳಿ ತುಳಸಿಯನ್ನು ಇಡಬಾರದು. ಏಕೆಂದರೆ ಪಾದರಕ್ಷೆಗಳಿಂದ ಬರುವ ಧೂಳು, ಕಲ್ಮಶಗಳು ಮತ್ತು ನಕಾರಾತ್ಮಕ ಶಕ್ತಿಗಳು ತುಳಸಿಯ ಪವಿತ್ರ ಶಕ್ತಿಯನ್ನು ಕಲುಷಿತಗೊಳಿಸುತ್ತವೆ. ಅದರ ಅಧ್ಯಾತ್ಮಿಕತೆಯನ್ನು ಕಡಿಮೆ ಮಾಡುತ್ತದೆ. ಅದಕ್ಕಾಗಿಯೇ ತುಳಸಿಯನ್ನು ಯಾವಾಗಲೂ ಎತ್ತರದ ಸ್ಥಳದಲ್ಲಿ ಮಡಕೆಯಲ್ಲಿ ಇಡಬೇಕು.
5. ಮಲಗುವ ಕೋಣೆ
ತುಳಸಿಯನ್ನು ಎಂದಿಗೂ ಮಲಗುವ ಕೋಣೆಯಲ್ಲಿ ಅಥವಾ ಹತ್ತಿರ ಇಡಬಾರದು. ಏಕೆಂದರೆ ಅದು ಆತ್ಮೀಯತೆಗೆ ಅಡ್ಡಿಪಡಿಸುವ ಪ್ರಬಲ ಅಧ್ಯಾತ್ಮಿಕ ಶಕ್ತಿಯಾಗಿದೆ. ಇದು ಚಡಪಡಿಕೆಗೆ ಕಾರಣವಾಗುತ್ತದೆ. ಇದರ ಉಪಸ್ಥಿತಿಯು ಧ್ಯಾನ ಮತ್ತು ಅಧ್ಯಾತ್ಮಿಕತೆಯನ್ನು ಉತ್ತೇಜಿಸುತ್ತದೆ. ಹಾಗಾಗಿಯೇ ಈ ಗಿಡ ನೆಡಲು ಪೂಜಾ ಕೊಠಡಿಯಲ್ಲಿ ಸ್ವಚ್ಛವಾದ ಸ್ಥಳಗಳು ಸೂಕ್ತ ಎನ್ನುತ್ತಾರೆ.
ವಾಸ್ತು ಪ್ರಕಾರ ತುಳಸಿಯನ್ನು ಸೂಕ್ತವಲ್ಲದ ಸ್ಥಳಗಳಲ್ಲಿ ಇಡುವುದರಿಂದ ವ್ಯತಿರಿಕ್ತ ಪರಿಣಾಮಗಳನ್ನು ಉಂಟುಮಾಡಬಹುದು. ಇದು ಜೀವನದಲ್ಲಿ ಸವಾಲುಗಳು ಮತ್ತು ಅಡೆತಡೆಗಳನ್ನು ತರಬಹುದು. ಅದಕ್ಕಾಗಿಯೇ ತುಳಸಿಯನ್ನು ಸರಿಯಾದ ಸ್ಥಳದಲ್ಲಿ ಇಡಬೇಕು. ಆಗ ಮಾತ್ರ ಅದು ಆರೋಗ್ಯ ಮತ್ತು ಸಂಪತ್ತಿನ ಮೇಲೆ ಪರಿಣಾಮ ಬೀರುತ್ತದೆ.
ತುಳಸಿಯನ್ನು ಸರಿಯಾದ ಸ್ಥಳದಲ್ಲಿ ಇಡದಿದ್ದರೆ, ನಕಾರಾತ್ಮಕ ಶಕ್ತಿಯು ಮನೆಗೆ ಹೆಚ್ಚು ಪ್ರವೇಶಿಸುತ್ತದೆ. ಆದ್ದರಿಂದಲೇ ಹೆಚ್ಚಿನ ಲಾಭ ಪಡೆಯಲು ಮತ್ತು ಜೀವನದಲ್ಲಿ ಸಾಮರಸ್ಯವನ್ನು ಕಾಪಾಡಿಕೊಳ್ಳಲು ಜ್ಯೋತಿಷ್ಯದ ಮಾರ್ಗಗಳನ್ನು ಅನುಸರಿಸುವುದು ಉತ್ತಮ. ಆಗ ಮಾತ್ರ ಜೀವನವು ಅಧ್ಯಾತ್ಮಿಕ ಬೆಳವಣಿಗೆ ಮತ್ತು ಸಮೃದ್ಧಿಯಿಂದ ತುಂಬಿರುತ್ತದೆ.
ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.