ಜಗತ್ತಿನ ಬಹುತೇಕ ಅಗರ್ಭ ಶ್ರೀಮಂತರು ಈ ರಾಶಿಯವರೇ ನೋಡಿ; ಪ್ರಪಂಚದ ಕುಬೇರರ ರಾಶಿ ವಿವರ ಇಲ್ಲಿದೆ, ನಿಮ್ಮ ರಾಶಿಯೂ ಇದ್ಯಾ ಗಮನಿಸಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಜಗತ್ತಿನ ಬಹುತೇಕ ಅಗರ್ಭ ಶ್ರೀಮಂತರು ಈ ರಾಶಿಯವರೇ ನೋಡಿ; ಪ್ರಪಂಚದ ಕುಬೇರರ ರಾಶಿ ವಿವರ ಇಲ್ಲಿದೆ, ನಿಮ್ಮ ರಾಶಿಯೂ ಇದ್ಯಾ ಗಮನಿಸಿ

ಜಗತ್ತಿನ ಬಹುತೇಕ ಅಗರ್ಭ ಶ್ರೀಮಂತರು ಈ ರಾಶಿಯವರೇ ನೋಡಿ; ಪ್ರಪಂಚದ ಕುಬೇರರ ರಾಶಿ ವಿವರ ಇಲ್ಲಿದೆ, ನಿಮ್ಮ ರಾಶಿಯೂ ಇದ್ಯಾ ಗಮನಿಸಿ

ಯುಕೆಯಲ್ಲಿ ಲೆಂಡರ್ ಕ್ಯಾಶ್‌ಫ್ಲಾಟ್ ಸಂಸ್ಥೆ ನಡೆಸಿದ ಅಧ್ಯಯನದಲ್ಲಿ ಪ್ರಪಂಚದಾದ್ಯಂತದ ಇರುವ ಅಗರ್ಭ ಶ್ರೀಮಂತರು ಈ ರಾಶಿಗೆ ಸೇರಿದವರು ಎಂಬ ಅಂಶ ಬಹಿರಂಗವಾಗಿದೆ. 300 ಬಿಲಿಯನೇರ್‌ಗಳ ಮೇಲೆ ನಡೆಸಿದ ಅಧ್ಯಯನದ ಫಲಿತಾಂಶದ ವಿವರ ಇಲ್ಲಿದೆ ಗಮನಿಸಿ. ಅದರ ಪ್ರಕಾರ ಪ್ರಪಂಚದ ಕುಬೇರರು ಯಾವ ರಾಶಿಗೆ ಸೇರಿದವರಾಗಿದ್ದಾರೆ ನೋಡಿ.

ಜಗತ್ತಿನ ಬಹುತೇಕ ಅಗರ್ಭ ಶ್ರೀಮಂತರು ಈ ರಾಶಿಯವರು
ಜಗತ್ತಿನ ಬಹುತೇಕ ಅಗರ್ಭ ಶ್ರೀಮಂತರು ಈ ರಾಶಿಯವರು (PC: Canva)

ನಮ್ಮಲಿ ಹಲವರು ಜ್ಯೋತಿಷ್ಯ, ಜಾತಕವನ್ನು ನಂಬುವುದಿಲ್ಲ. ಹಾಗಂತ ಅದನ್ನು ಸಂಪೂರ್ಣವಾಗಿ ಸುಳ್ಳು ಎಂದು ತಳ್ಳಿಹಾಕಲು ಸಾಧ್ಯವಿಲ್ಲ. ಜ್ಯೋತಿಷ್ಯ, ರಾಶಿ ಫಲಿತಾಂಶ, ಹಸ್ತಸಾಮುದ್ರಿಕೆ ಮುಂತಾದ ವಿಷಯಗಳು ಬಹಳ ವರ್ಷಗಳಿಂದ ವಿಜ್ಞಾನಕ್ಕೂ ಸವಾಲಾಗಿದೆ. ಆದರೆ ಇದರಲ್ಲಿ ಸತ್ಯವಿದೆ ಎಂದು ಸಾಮಾನ್ಯ ಜನರು ನಂಬುತ್ತಾರೆ.

ಅನಾದಿ ಕಾಲದಿಂದಲೂ ಜ್ಯೋತಿಷ್ಯವನ್ನು ನಂಬಿಕೊಂಡು ಬರಲಾಗಿದೆ. ಹಾಗಾಗಿ ಇಂದಿಗೂ ಜನರು ಜೀವನ, ವೈವಾಹಿಕ ಸಂಬಂಧ, ಹಣಕಾಸು, ಆಸ್ತಿ ವ್ಯಾಜ್ಯ ಮುಂತಾಗಿ ತಾವು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರವಾಗಿ ಜ್ಯೋತಿಷ್ಯವನ್ನು ನಂಬುತ್ತಾರೆ. ಪ್ರತಿದಿನ ಲಕ್ಷಾಂತರ ಜನರು ಜ್ಯೋತಿಷ್ಯಶಾಸ್ತ್ರದ ಪ್ರಕಾರ ತಮ್ಮ ವೃತ್ತಿಜೀವನದಲ್ಲಿ ಮುಂದುವರಿಯುತ್ತಾರೆ. ಇದೀಗ ಯುಕೆಯಲ್ಲಿ ಈ ವಿಚಾರಕ್ಕೆ ಸಂಬಂಧಿಸಿ ನಡೆದ ಅಧ್ಯಯನವೊಂದರಲ್ಲಿ ಪ್ರಪಂಚದ ಕೋಟ್ಯಾಧಿಪತಿಗಳು ಯಾವ ರಾಶಿಯವರು ಎಂಬುದು ತಿಳಿದುಬಂದಿದೆ.

ಯುಕೆ ಕ್ಯಾಶ್‌ಫ್ಲೋಟ್ ಪ್ರಕಾರ ಪ್ರಪಂಚದಾದ್ಯಂತ ಹಲವು ಬಿಲಿಯನೇರ್‌ಗಳು ಒಂದೇ ರಾಶಿಯನ್ನು ಹೊಂದಿದ್ದಾರೆ ಎಂಬುದು ಆಶ್ಚರ್ಯಕರ ಸಂಗತಿಯಾಗಿದೆ. ಫೋರ್ಬ್ಸ್ ಬಿಲಿಯನೇರ್ 2022 ಶ್ರೀಮಂತ ಪಟ್ಟಿಯು ಅವರ ಜನ್ಮ ಚಿಹ್ನೆಗಳ ಬಗ್ಗೆ ತಿಳಿಯಲು ಟಾಪ್ 300 ಬಿಲಿಯನೇರ್‌ಗಳ ಜನ್ಮ ದಿನಾಂಕದ ಮಾಹಿತಿಯನ್ನು ಬಳಸುತ್ತದೆ. ಈ ಸಂಶೋಧನೆಯಲ್ಲಿ ತುಲಾ ರಾಶಿಯವರು ಹೆಚ್ಚು ಶ್ರೀಮಂತರು ಎಂದು ಕಂಡುಬಂದಿದೆ. ರಾಶಿ ಪಟ್ಟಿಯ ಪ್ರಕಾರ, ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 23 ರ ನಡುವೆ ಜನಿಸಿದವರಿಗೆ ತುಲಾ ಏಳನೇ ರಾಶಿಯಾಗಿದೆ. ಸಮೀಕ್ಷೆಯ ಫಲಿತಾಂಶಗಳು ಪ್ರಪಂಚದಲ್ಲಿ 32 ಜನರು ಈ ರಾಶಿಚಕ್ರ ಚಿಹ್ನೆಯನ್ನು ಹೊಂದಿದ್ದಾರೆ ಎಂದು ಬಹಿರಂಗಪಡಿಸಿದೆ.

ಹೆಚ್ಚು ಶ್ರೀಮಂತರನ್ನು ಹೊಂದಿರುವ ರಾಶಿ ಯಾವುದು

ರಾಶಿಚಕ್ರ ಚಿಹ್ನೆಯ ಪ್ರಕಾರ ಫೋರ್ಬ್ಸ್ ಪಟ್ಟಿಯಲ್ಲಿರುವ ಶ್ರೀಮಂತರ ಶೇಕಡಾವಾರು ಪ್ರಮಾಣ ಹೀಗಿದೆ.

ಜಗತ್ತಿನ ಶ್ರೀಮಂತರ ರಾಶಿ ವಿವರ

ಈ ಪಟ್ಟಿಯ ಪ್ರಕಾರ ತುಲಾ ರಾಶಿಯವರು ಅಗ್ರಸ್ಥಾನ ಪಡೆದಿದ್ದರೆ ನಂತರದ ಸ್ಥಾನ ಮೀನ ರಾಶಿಯವರಿಗಿದೆ. ಪ್ರಪಂಚದ ಟಾಪ್ 10 ಶ್ರೀಮಂತರು ಮೀನ ರಾಶಿಯವರಾ‌ಗಿದ್ದಾರೆ.

  • ಬರ್ನಾರ್ಡ್ ಅರ್ನಾಲ್ಟ್ ಮತ್ತು ಕುಟುಂಬ (ನಿವ್ವಳ ಮೌಲ್ಯ: 214.9 ಬಿಲಿಯನ್ ಡಾಲರ್‌)– ರಾಶಿ: ಮೀನ
  • ಎಲೋನ್ ಮಸ್ಕ್ (ನಿವ್ವಳ ಮೌಲ್ಯ: 198.2 ಬಿಲಿಯನ್ ಡಾಲರ್) - ರಾಶಿ: ಕಟಕ
  • ಜೆಫ್ ಬಿಜೋಸ್ (ನಿವ್ವಳ ಮೌಲ್ಯ: 120.4 ಬಿಲಿಯನ್ ಡಾಲರ್‌) - ರಾಶಿ: ಮಕರ
  • ಲ್ಯಾರಿ ಎಲಿಸನ್ (ನಿವ್ವಳ ಮೌಲ್ಯ: 112.3 ಬಿಲಿಯನ್ ಡಾಲರ್‌) - ರಾಶಿ: ಸಿಂಹ
  • ವಾರೆನ್ ಬಫೆಟ್ (ನಿವ್ವಳ ಮೌಲ್ಯ: 107.3 ಬಿಲಿಯನ್ ಡಾಲರ್‌) - ರಾಶಿ: ಕನ್ಯಾ
  • ಬಿಲ್ ಗೇಟ್ಸ್ (ನಿವ್ವಳ ಮೌಲ್ಯ: 107.0 ಬಿಲಿಯನ್ ಡಾಲರ್‌) - ರಾಶಿ: ವೃಶ್ಚಿಕ
  • ಕಾರ್ಲೋಸ್ ಸ್ಲಿಮ್ ಹೆಲು ಮತ್ತು ಕುಟುಂಬ (ನಿವ್ವಳ ಮೌಲ್ಯ: 90.7 ಬಿಲಿಯನ್ ಡಾಲರ್‌) - ರಾಶಿ: ಕುಂಭ
  • ಮುಖೇಶ್ ಅಂಬಾನಿ (ನಿವ್ವಳ ಮೌಲ್ಯ: 86.0 ಬಿಲಿಯನ್ ಡಾಲರ್‌) - ರಾಶಿ: ಮೇಷ
  • ಸ್ಟೀವ್ ಬಾಲ್ಮರ್ (ನಿವ್ವಳ ಮೌಲ್ಯ: 83.1 ಬಿಲಿಯನ್ ಡಾಲರ್‌) - ರಾಶಿ: ಮೇಷ
  • ಲ್ಯಾರಿ ಪೇಜ್ (ನಿವ್ವಳ ಮೌಲ್ಯ: 82.0 ಬಿಲಿಯನ್ ಡಾಲರ್‌) - ರಾಶಿ: ಮೇಷ

(ಗಮನಿಸಿ: ಈ ಲೇಖನದಲ್ಲಿ ನೀಡಲಾದ ಮಾಹಿತಿ ಮತ್ತು ಸಲಹೆಗಳು ಸಂಪೂರ್ಣವಾಗಿ ನಿಜ ಮತ್ತು ನಿಖರವಾಗಿದೆ ಎಂದು ನಾವು ಹೇಳಲು ಸಾಧ್ಯವಿಲ್ಲ. ತಜ್ಞರ ಸಲಹೆಯಂತೆ ಈ ಮಾಹಿತಿ ನೀಡುತ್ತಿದ್ದೇವೆ. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ಸಂಬಂಧಿತ ಕ್ಷೇತ್ರದ ತಜ್ಞರನ್ನು ಸಂಪರ್ಕಿಸುವುದು ಉತ್ತಮ)

Whats_app_banner

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.