ಸೀನು, ಬಿಕ್ಕಳಿಕೆ ಬಂದ್ರೆ ನಮ್ಮಿಷ್ಟದವರು ನಮ್ಮನ್ನು ನೆನಪಿಸಿಕೊಳ್ಳುತ್ತಿದ್ದಾರೆ ಎಂದರ್ಥವೇ, ಈ ಬಗ್ಗೆ ಜ್ಯೋತಿಷ್ಯ ಹೇಳೋದೇನು ನೋಡಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಸೀನು, ಬಿಕ್ಕಳಿಕೆ ಬಂದ್ರೆ ನಮ್ಮಿಷ್ಟದವರು ನಮ್ಮನ್ನು ನೆನಪಿಸಿಕೊಳ್ಳುತ್ತಿದ್ದಾರೆ ಎಂದರ್ಥವೇ, ಈ ಬಗ್ಗೆ ಜ್ಯೋತಿಷ್ಯ ಹೇಳೋದೇನು ನೋಡಿ

ಸೀನು, ಬಿಕ್ಕಳಿಕೆ ಬಂದ್ರೆ ನಮ್ಮಿಷ್ಟದವರು ನಮ್ಮನ್ನು ನೆನಪಿಸಿಕೊಳ್ಳುತ್ತಿದ್ದಾರೆ ಎಂದರ್ಥವೇ, ಈ ಬಗ್ಗೆ ಜ್ಯೋತಿಷ್ಯ ಹೇಳೋದೇನು ನೋಡಿ

Spiritual Signs: ಪ್ರತಿ ಮನುಷ್ಯನ ಜೀವಿತಾವಧಿಯಲ್ಲಿ ಅನೇಕ ವ್ಯಕ್ತಿಗಳು ಬಂದು ಹೋಗುತ್ತಾರೆ. ಅವರಲ್ಲಿ ಕೆಲವರು ಬಹಳ ಹತ್ತಿರವಾಗುತ್ತಾರೆ ಮತ್ತು ಅವರ ಜೊತೆ ಉತ್ತಮ ಸಂಬಂಧಗಳು ಬೆಳೆಯುತ್ತವೆ. ಆಗ ಅವರು ನಮ್ಮ ಬಗ್ಗೆ ಯೋಚಿಸುತ್ತಿದ್ದಾರೆಯೇ ಅಥವಾ ಇಲ್ಲವೇ ಎಂಬ ಯೋಚನೆ ಕಾಡುತ್ತದೆ. ಅದನ್ನು ಈ ಆಧ್ಯಾತ್ಮಿಕ ಸಂಕೇತಗಳ ಮೂಲಕ ತಿಳಿದುಕೊಳ್ಳಬಹುದಾಗಿದೆ.

ಆಧ್ಯಾತ್ಮದ ಸಂಕೇತ
ಆಧ್ಯಾತ್ಮದ ಸಂಕೇತ (PC: Canva)

ದೈನಂದಿನ ಜೀವನದಲ್ಲಿ ಮನುಷ್ಯ ಅನೇಕ ರೀತಿಯ ಜನರನ್ನು ಸಂಪರ್ಕಿಸುತ್ತಾನೆ. ಅವರಲ್ಲಿ ಕೆಲವರ ಜೊತೆ ಉತ್ತಮ ಬಾಂಧವ್ಯ, ಸಂಬಂಧಗಳು ಬೆಳೆಯುತ್ತವೆ. ಕೆಲವು ಸಂದರ್ಭಗಳಲ್ಲಿ ಅವರು ನಮ್ಮ ಜೀವನದ ಭಾಗವೇ ಆಗಿ ಬಿಡುತ್ತಾರೆ. ಹೀಗೆ ಹತ್ತಿರವಾದ ವ್ಯಕ್ತಿಗಳು ನಮ್ಮ ಬಗ್ಗೆಯೇ ಯೋಚಿಸುತ್ತಿದ್ದಾರೆಯೇ ಅಥವಾ ಇಲ್ಲವೇ ಎಂಬ ಯೋಚನೆಗೆ ಬಿದ್ದು ಸಮಯವನ್ನು ಕಳೆಯುತ್ತಾರೆ. ಆಧ್ಯಾತ್ಮಿಕ ವಿಜ್ಞಾನದ ಪ್ರಕಾರ, ಇತರರು ನಮ್ಮ ಬಗ್ಗೆ ಯೋಚಿಸುತ್ತಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ನಾವು ನೇರವಾಗಿ ತಿಳಿದಿಲ್ಲದಿದ್ದರೂ ಸಹ, ಬ್ರಹ್ಮಾಂಡವು ನಮಗೆ ಕೆಲವು ರೀತಿಯ ಚಿಹ್ನೆ ಅಥವಾ ಸಂಕೇತಗಳನ್ನು ನೀಡುತ್ತದೆ. ಆಧ್ಯಾತ್ಮದ ಕಡೆಗೆ ಒಲವುಳ್ಳವರು ಈ ಚಿಹ್ನೆಗಳನ್ನು ನಿಜವೆಂದ ನಂಬಬಹುದು. ಆದರೆ ಆಧ್ಯಾತ್ಮದ ಬಗ್ಗೆ ನಂಬಿಕೆ ಇಲ್ಲದವರು ಅವುಗಳನ್ನು ನಂಬುವುದಿಲ್ಲ. ಆದಾಗ್ಯೂ, ಈ ಚಿಹ್ನೆಗಳನ್ನು ನಾವು ಯಾವ ರೀತಿಯಲ್ಲಿ ಅರ್ಥಮಾಡಿಕೊಳ್ಳುತ್ತೇವೆ ಎಂಬುದು ನಮ್ಮ ನಂಬಿಕೆಗಳ ಮೇಲೆ ಅವಲಂಬಿತವಾಗಿರುತ್ತದೆ.

ಇತರರು ನಮ್ಮ ಬಗ್ಗೆ ಯೋಚಿಸುತ್ತಿದ್ದಾರೆ ಎಂದು ತಿಳಿಯುವುದು ಹೇಗೆ?

ಇತರರು ನಮ್ಮ ಬಗ್ಗೆ ಯೋಚಿಸಿದರೆ, ನಮ್ಮ ಜೀವನದಲ್ಲಿ ವಿಶೇಷ ಸಂಕೇತಗಳ ರೂಪದಲ್ಲಿ ನಮಗೆ ತಲುಪುತ್ತದೆ ಎಂದು ಆಧ್ಯಾತ್ಮಿಕ ಸಂಕೇತಗಳು ಹೇಳುತ್ತವೆ. ಈ ಸಂವೇದನೆಗಳು ಅಥವಾ ಸೂಚನೆಗಳು ಸಾಮಾನ್ಯವಾಗಿ ನಮ್ಮ ಅರ್ಥಪೂರ್ಣ ಜೀವನ ವಿಧಾನದಲ್ಲಿ ದಿಕ್ಕನ್ನು ಸೂಚಿಸುತ್ತವೆ. ಆಧ್ಯಾತ್ಮಿಕ ದೃಷ್ಟಿಕೋನವು ಈ ಸಂಕೇತಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ನಮಗೆ ಸಹಾಯ ಮಾಡುತ್ತದೆ.

ಈ ಆಧ್ಯಾತ್ಮಿಕ ಸಂಕೇತಗಳು ಸಾಮಾನ್ಯವಾಗಿ ನಮಗೆ ಚಿಕ್ಕದು ಅನಿಸಬಹುದು. ಆದರೆ ನಾವು ಅವುಗಳನ್ನು ಗುರುತಿಸಿದಾಗ ಅದು ನಮಗೆ ಸರಿಯಾದ ಅರ್ಥವನ್ನು ನೀಡುತ್ತದೆ. ಅನೇಕರು ಈ ಸಂಕೇತಗಳ ಪ್ರಾಮುಖ್ಯತೆಯನ್ನು ಅರಿತು ಅದು ಭವಿಷ್ಯದಲ್ಲಿ ಸಂಭವಿಸುವ ಘಟನೆಗಳ ಸುಳಿವುಗಳಾಗಿ ತೆಗೆದುಕೊಳ್ಳುತ್ತಾರೆ. ಕೆಲವು ಸಾಮಾನ್ಯ ಆಧ್ಯಾತ್ಮಿಕ ಸಂಕೇತಗಳು ಈ ರೀತಿಯಾಗಿವೆ.

ಬಿಕ್ಕಳಿಕೆ: ಯಾವುದೇ ಸ್ಪಷ್ಟ ಕಾರಣವಿಲ್ಲದೆ ನಿಮಗೆ ಇದ್ದಕ್ಕಿದ್ದಂತೆ ಬಿಕ್ಕಳಿಕೆ ಬಂದರೆ, ಅದನ್ನು ಆಧ್ಯಾತ್ಮಿಕ ಸಂಕೇತ ಎಂದು ತೆಗೆದುಕೊಳ್ಳಬಹುದು. ಇದು ಯಾರೋ ನಿಮ್ಮ ಬಗ್ಗೆ ಯೋಚಿಸುತ್ತಿದ್ದಾರೆ ಎಂಬುದರ ಸಂಕೇತವಾಗಿರಬಹುದು.

ಅನಿರೀಕ್ಷಿತವಾದ ಭಾವನೆಗಳು: ಅನೇಕ ಬಾರಿ, ನಾವು ಏಕೆ ಸಂತೋಷ ಅಥವಾ ಖಿನ್ನತೆಯನ್ನು ಅನುಭವಿಸುತ್ತೇವೆ ಎಂದು ನಮಗೆ ತಿಳಿದಿರುವುದಿಲ್ಲ. ಈ ಸಂವೇದನೆಗಳು ನಮ್ಮ ಹತ್ತಿರದವರು ನಮಗೆ ಯಾವುದೋ ವಿಷಯವನ್ನು ರವಾನಿಸುತ್ತಿದ್ದಾರೆ ಎಂಬುದರ ಸಂಕೇತವಾಗಿರಬಹುದು .

ಸೀನು: ಕೆಲವು ಸಂಸ್ಕೃತಿಗಳಲ್ಲಿ, ಯಾರಾದರೂ ನಮ್ಮ ಬಗ್ಗೆ ಯೋಚಿಸುವಾಗ ಅಥವಾ ನಮ್ಮ ಬಗ್ಗೆ ಮಾತನಾಡುವಾಗ, ಅನಿರೀಕ್ಷಿತವಾಗಿ ಸೀನು ಬರುತ್ತದೆ ಎಂದು ನಂಬಲಾಗಿದೆ. ಈ ಚಿಹ್ನೆಯು ನಮಗೆ ತಿಳಿಯದೆ ಇತರರು ನಮ್ಮ ಬಗ್ಗೆ ಯೋಚಿಸುತ್ತಿದ್ದಾರೆ ಎಂಬುದರ ಸೂಚನೆಯಾಗಿ ಕಂಡುಬರುತ್ತದೆ.

ಕನಸಿನಲ್ಲಿ ಯಾರನ್ನಾದರೂ ನೋಡುವುದು: ನಮ್ಮ ಕನಸಿನಲ್ಲಿ ಒಬ್ಬ ವ್ಯಕ್ತಿಯನ್ನು ನಾವು ಅನಿರೀಕ್ಷಿತವಾಗಿ ನೋಡಿದರೆ, ಆ ವ್ಯಕ್ತಿಯು ನಮ್ಮನ್ನು ಆಧ್ಯಾತ್ಮಿಕವಾಗಿ ಸಂಪರ್ಕಿಸಲು ಪ್ರಯತ್ನಿಸುತ್ತಿದ್ದಾನೆ ಎಂದರ್ಥ. ಇದರ ಅರ್ಥ ಅವರು ತಮ್ಮ ಆಲೋಚನೆಗಳನ್ನು ಅಥವಾ ಶಕ್ತಿಯನ್ನು ನಮಗೆ ರವಾನಿಸುತ್ತಿದ್ದಾರೆ ಎಂದಾಗಿದೆ.

ಗೂಸ್‌ಬಂಪ್ಸ್‌: ಯಾವುದೇ ಸ್ಪಷ್ಟವಾದ ಕಾರಣವಿಲ್ಲದೆ ಗೂಸ್‌ಬಂಪ್ಸ್‌ನ ಅನುಭವವಾದರೆ ಯಾರೋ ತಮ್ಮ ಶಕ್ತಿಯನ್ನು ನಮ್ಮ ಮೇಲೆ ಕೇಂದ್ರೀಕರಿಸುತ್ತಿದ್ದಾರೆ ಎಂಬುದರ ಸಂಕೇತವಾಗಿದೆ.

ಎಡಗಣ್ಣಿನ ಸೆಳೆತ: ಎಡಗಣ್ಣಿನಲ್ಲಿ ಸೆಳೆತ ಕಂಡುಬಂದರೆ ನಿಮಗೆ ಮುಂದೆ ಒಳ್ಳೆಯದ್ದಾಗುತ್ತದೆ ಅಥವಾ ಉತ್ತಮ ಭಾವನೆಗಳ ಸಂಕೇತವೆಂದು ಭಾವಿಸಲಾಗಿದೆ. ಇದನ್ನು ಆಧ್ಯಾತ್ಮಿಕ ಸಂಕೇತವೆಂದು ಪರಿಗಣಿಸಬಹುದು. ಯಾರಾದರೂ ನಮ್ಮ ಬಗ್ಗೆ ಧನಾತ್ಮಕವಾಗಿ ಯೋಚಿಸುತ್ತಿದ್ದಾರೆ ಎಂಬುದಕ್ಕೆ ಇದು ಸೂಚನೆಯಾಗಿದೆ.

ಆತಂಕದ ಆಲೋಚನೆಗಳು:ನಾವು ಯಾರೊಂದಿಗಾದರೂ ಮಾತನಾಡಲು ಬಯಸಿದರೆ, ವ್ಯಕ್ತಿಯು ನಮ್ಮ ಬಗ್ಗೆ ಅತಿಯಾಗಿ ಯೋಚಿಸುತ್ತಿದ್ದರೆ ಅಥವಾ ನಮ್ಮೊಂದಿಗೆ ಭಾವನಾತ್ಮಕವಾಗಿ ಮಾತನಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಇದು ಸೂಚಿಸುತ್ತದೆ. ನಮ್ಮ ಆಲೋಚನೆಗಳ ಮೂಲಕ ಇತರರಿಗೆ ಸಂಕೇತಗಳನ್ನು ಕಳುಹಿಸುವುದು ಎಂದರೆ ಇದೇ ಆಗಿದೆ.

(ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.)

Whats_app_banner

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.