ಮಲಗುವ ಕೋಣೆಯಲ್ಲಿ ತಪ್ಪಿಯೂ ಈ ವಸ್ತುಗಳನ್ನು ಇರಿಸಬೇಡಿ, ನಕಾರಾತ್ಮಕ ಶಕ್ತಿ ಹರಡುತ್ತೆ; ಫೆಂಗ್ ಶೂಯಿ ವಾಸ್ತು ಸಲಹೆ
ದಿನದಲ್ಲಿ ನಾವು ಹೆಚ್ಚಿನ ಸಮಯವನ್ನು ಕಳೆಯುವುದು ಮಲಗುವ ಕೋಣೆಯಲ್ಲಿ ಎಂದರೆ ತಪ್ಪಾಗಲಿಕ್ಕಿಲ್ಲ. ಆದರೆ ಈ ಕೋಣೆಯಲ್ಲಿ ನಕಾರಾತ್ಮಕ ಅಂಶಗಳಿದ್ದರೆ ಅದು ನಮ್ಮ ದೈಹಿಕ ಹಾಗೂ ಮಾನಸಿಕ ಅಂಶಗಳ ಮೇಲೆ ಪರಿಣಾಮ ಬೀರುತ್ತದೆ. ಹಾಗಾದರೆ ಮಲಗುವ ಕೋಣೆಯಲ್ಲಿ ಸಕಾರಾತ್ಮಕ ಅಂಶವನ್ನು ಕಡಿಮೆ ಮಾಡುವುದು ಹೇಗೆ, ಇಲ್ಲಿದೆ ಪೆಂಗ್ ಶೂಯಿ ಸಲಹೆ.

ಫೆಂಗ್ ಶೂಯಿ ಎಂಬುದು ಚೈನೀಸ್ ವಾಸ್ತು ಶಾಸ್ತ್ರ. ಇತ್ತೀಚಿನ ದಿನಗಳಲ್ಲಿ ಇದನ್ನು ಬಹುತೇಕ ದೇಶಗಳಲ್ಲಿ ಅನುಸರಿಸುತ್ತಿದ್ದಾರೆ. ಫೆಂಗ್ ಶೂಯಿ ಪ್ರಕಾರ ಮನೆಯ ಯಾವುದೇ ಭಾಗದಲ್ಲಿ ನಕಾರಾತ್ಮಕ ಶಕ್ತಿ ಅಥವಾ ಅಂಶ ಇದ್ದರೆ ಅದರ ಪರಿಣಾಮ ಆ ಮನೆಯಲ್ಲಿ ವಾಸಿಸುವ ಜನರ ಮೇಲಾಗುತ್ತದೆ. ಅದರಲ್ಲೂ ಒಂದು ಮನೆಯಲ್ಲಿ ಮಲಗುವ ಕೋಣೆ ಬಹಳ ಮುಖ್ಯ, ಯಾಕೆಂದರೆ ಆ ಕೋಣೆಯಲ್ಲೇ ನಾವು ಹೆಚ್ಚಿನ ಸಮಯ ಕಳೆಯುತ್ತೇವೆ. ಮಲಗುವ ಕೋಣೆಯ ನಕಾರಾತ್ಮಕ ಶಕ್ತಿಯು ನಿಮ್ಮ ದೈಹಿಕ ಮತ್ತು ಮಾನಸಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ. ಮಗಲುವ ಕೋಣೆಯ ನಕಾರಾತ್ಮಕ ಶಕ್ತಿಯನ್ನು ತೊಡೆದು ಹಾಕಲು ಫೆಂಗ್‌ಶೂಯಿಯಲ್ಲಿ ಹಲವು ಪರಿಹಾರಗಳನ್ನು ನೀಡಲಾಗಿದೆ. ಇವುಗಳ ಸಹಾಯದಿಂದ ನೀವು ನಿಮ್ಮ ಮಲಗುವ ಕೋಣೆಯ ನೋಟವನ್ನು ಬದಲಿಸಬಹುದು ಮಾತ್ರವಲ್ಲ, ನಕಾರಾತ್ಮಕ ಶಕ್ತಿಯ ಪರಿಣಾಮವನ್ನು ಕಡಿಮೆ ಮಾಡಬಹುದು. ಫೆಂಗ್ ಶೂಯಿ ಪ್ರಕಾರ, ಮಲಗುವ ಕೋಣೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಕಡಿಮೆ ಮಾಡುವುದು ಹೇಗೆ ನೋಡಿ.
ನಿಂತ ಹೋದ ಗಡಿಯಾರ
ನಿಂತು ಹೋದ ಗಡಿಯಾರವನ್ನು ಎಂದಿಗೂ ಗೋಡೆಯ ಮೇಲೆ ನೇತು ಹಾಕಬಾರದು. ವಿಶೇಷವಾಗಿ ಬೆಳಿಗ್ಗೆ ಎದ್ದ ನಂತರ ನಿಂತ ಈ ಗಡಿಯಾರವನ್ನು ನೋಡುವುದು ನಿಮ್ಮ ಸೋಲಿಗೆ ಕಾರಣವಾಗಬಹುದು, ದುರಾದೃಷ್ಟ ನಿಮ್ಮನ್ನು ಹಿಂಬಾಲಿಸಬಹುದು. ಮನೆಯ ಯಾವುದೇ ಮೂಲೆಯಲ್ಲಿ ನಿಂತ ಗಡಿಯಾರವನ್ನು ಇಡುವುದು ಶುಭವೆಂದು ಪರಿಗಣಿಸಲಾಗುವುದಿಲ್ಲ.
ಕೋಣೆಯ ದಿಕ್ಕು
ಮಲಗುವ ಕೋಣೆಯನ್ನು ಯಾವಾಗಲೂ ಉತ್ತರ ಅಥವಾ ವಾಯುವ್ಯ ದಿಕ್ಕಿನಲ್ಲಿ ನಿರ್ಮಿಸಬೇಕು. ಹೀಗೆ ಮಾಡುವುದರಿಂದ ಗಂಡ ಹೆಂಡತಿಯ ನಡುವಿನ ಬಾಂಧವ್ಯ ಗಟ್ಟಿಯಾಗುತ್ತದೆ.
ಬಾಡಿದ ಸಸ್ಯಗಳು
ಒಣಗಿದ ಅಥವಾ ಬಾಡಿದ ಸಸ್ಯಗಳನ್ನು ಮನೆಯಲ್ಲಿ ಇಡುವುದು ಶುಭವಲ್ಲ ಎಂದು ಪರಿಗಣಿಸಲಾಗಿದೆ. ಅದರಲ್ಲೂ ಮಲಗುವ ಕೋಣೆಯಲ್ಲಿ ತಪ್ಪಿಯೂ ಬಾಡಿದ ಹಾಗೂ ಮುಳ್ಳಿನ ಗಿಡವನ್ನು ಇಡಬಾರದು. ಇದರಿಂದ ನಕಾರಾತ್ಮಕ ಶಕ್ತಿ ಮನೆಗೆ ಪ್ರವೇಶಿಸುತ್ತದೆ ಎಂದು ಹೇಳಲಾಗುತ್ತದೆ.
ಈ ಕೆಲವು ಫೋಟೊಗಳು
ಹೆಚ್ಚಿನ ಜನರು ತಮ್ಮ ಮಲಗುವ ಕೋಣೆಗೆ ಸೌಂದರ್ಯವನ್ನು ಹೆಚ್ಚಿಸಲು ವಿವಿಧ ಬಗೆಯ ಫೋಟೊ ಹಾಗೂ ಚಿತ್ರಗಳನ್ನು ಹಾಕುತ್ತಾರೆ. ಮಲಗುವ ಕೋಣೆಯಲ್ಲಿ ಯುದ್ಧದ ಚಿತ್ರವನ್ನು ಇಡುವುದರಿಂದ ಗಂಡ ಮತ್ತು ಹೆಂಡತಿಯ ನಡುವೆ ಜಗಳ ಹೆಚ್ಚಾಗುತ್ತದೆ. ಅದೇ ಸಮಯದಲ್ಲಿ, ದುಃಖದ ಮುಖವನ್ನು ಹೊಂದಿರುವ ಚಿತ್ರವನ್ನು ಮಲಗುವ ಕೋಣೆಯಲ್ಲಿ ಇಡಬಾರದು. ಇದು ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಫೆಂಗ್ ಶೂಯಿ ಶಾಸ್ತ್ರ ಹೇಳುತ್ತದೆ.
ಹಾಸಿಗೆಯ ದಿಕ್ಕು
ಮಲಗುವ ಕೋಣೆಯಲ್ಲಿ ಹಾಸಿಗೆ ಸರಿಯಾದ ದಿಕ್ಕಿನಲ್ಲಿರುವುದು ಮುಖ್ಯ. ಮಲಗುವಾಗ ತಲೆ ದಕ್ಷಿಣ ಅಥವಾ ಪೂರ್ವ ದಿಕ್ಕಿನಲ್ಲಿ ಇರುವುದು ಒಳ್ಳೆಯದು ಎಂದು ಪರಿಗಣಿಸಲಾಗಿದೆ.
ಬಣ್ಣಗಳ ಆಯ್ಕೆ
ಫೆಂಗ್ ಶೂಯಿ ಪ್ರಕಾರ, ಮಲಗುವ ಕೋಣೆಯಲ್ಲಿ ತಿಳಿ ಬಣ್ಣಗಳನ್ನು ಬಳಸುವುದು ಶುಭವೆಂದು ಪರಿಗಣಿಸಲಾಗುತ್ತದೆ. ಅದೇ ಸಮಯದಲ್ಲಿ, ಮಲಗುವ ಕೋಣೆಯಲ್ಲಿ ಕೆಂಪು ಅಥವಾ ಕಪ್ಪು ಬಣ್ಣವನ್ನು ಬಳಸುವುದರಿಂದ ಗಂಡ ಮತ್ತು ಹೆಂಡತಿಯ ನಡುವಿನ ವಿವಾದಗಳ ಸಾಧ್ಯತೆ ಹೆಚ್ಚಾಗುತ್ತದೆ.
ನೀರಿನ ಕಾರಂಜಿ
ಫೆಂಗ್ ಶೂಯಿ ಪ್ರಕಾರ, ಮಲಗುವ ಕೋಣೆಯಲ್ಲಿ ನೀರಿನ ಕಾರಂಜಿ ಇಡುವುದು ಶುಭವಲ್ಲ ಎಂದು ಪರಿಗಣಿಸಲಾಗಿದೆ.
ಕನ್ನಡಿ ಹೀಗಿರಬಾರದು
ಮಲಗುವ ಕೋಣೆಯಲ್ಲಿ ಹಾಸಿಗೆಯ ಮುಂದೆ ಕನ್ನಡಿ ಇಡುವುದು ಶುಭವಲ್ಲ ಎಂದು ಪರಿಗಣಿಸಲಾಗಿದೆ. ನಿದ್ದೆ ಮಾಡುವಾಗ ಕನ್ನಡಿಯಲ್ಲಿ ನೆರಳು ನೋಡಬಾರದು ಎಂದು ಹೇಳಲಾಗುತ್ತದೆ.
(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)
