ಮನುಷ್ಯ ದೇಹದಲ್ಲಿರುವುದು ಏಳಲ್ಲ, ಎಂಟು ಚಕ್ರಗಳು; ಆತ್ಮ ನಕ್ಷತ್ರ ಚಕ್ರ ಎಂಬ 8ನೇ ಚಕ್ರದ ಮಹತ್ವವಿದು
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಮನುಷ್ಯ ದೇಹದಲ್ಲಿರುವುದು ಏಳಲ್ಲ, ಎಂಟು ಚಕ್ರಗಳು; ಆತ್ಮ ನಕ್ಷತ್ರ ಚಕ್ರ ಎಂಬ 8ನೇ ಚಕ್ರದ ಮಹತ್ವವಿದು

ಮನುಷ್ಯ ದೇಹದಲ್ಲಿರುವುದು ಏಳಲ್ಲ, ಎಂಟು ಚಕ್ರಗಳು; ಆತ್ಮ ನಕ್ಷತ್ರ ಚಕ್ರ ಎಂಬ 8ನೇ ಚಕ್ರದ ಮಹತ್ವವಿದು

ಆಧ್ಯಾತ್ಮದ ಪ್ರಕಾರ ಮನುಷ್ಯ ದೇಹದಲ್ಲಿ 7 ಚಕ್ರಗಳಿರುತ್ತವೆ ಹಾಗೂ ಇವು ಬಹಳ ಶಕ್ತಿಶಾಲಿ. ಆದರೆ ಇವೆಲ್ಲಕ್ಕಿಂತ ಶಕ್ತಿಶಾಲಿಯಾಗಿರುವ 8ನೇ ಚಕ್ರವೊಂದಿದೆ. ಅದನ್ನು ಆತ್ಮ ನಕ್ಷತ್ರ ಚಕ್ರ ಎಂದು ಕರೆಯಲಾಗುತ್ತದೆ. ಇದರ ಮಹತ್ವವೇನು ನೋಡಿ.

ಮನುಷ್ಯ ದೇಹದಲ್ಲಿರುವುದು ಏಳಲ್ಲ, ಎಂಟು ಚಕ್ರಗಳು; ಆತ್ಮ ನಕ್ಷತ್ರ ಚಕ್ರ ಎಂಬ 8ನೇ ಚಕ್ರದ ಮಹತ್ವವಿದು
ಮನುಷ್ಯ ದೇಹದಲ್ಲಿರುವುದು ಏಳಲ್ಲ, ಎಂಟು ಚಕ್ರಗಳು; ಆತ್ಮ ನಕ್ಷತ್ರ ಚಕ್ರ ಎಂಬ 8ನೇ ಚಕ್ರದ ಮಹತ್ವವಿದು

ನಮ್ಮ ದೇಹದಲ್ಲಿ 7 ಚಕ್ರಗಳು ಇರುತ್ತವೆ ಹಾಗೂ ದೇಹದ ಸಂಪೂರ್ಣ ಶಕ್ತಿ ಅದರಲ್ಲಿ ಅಡಗಿರುತ್ತದೆ ಎಂಬುದನ್ನು ಹಲವರು ಕೇಳಿರಬಹುದು. ಆದರೆ ಖಂಡಿತ ದೇಹದಲ್ಲಿರುವುದು 7 ಚಕ್ರ ಮಾತ್ರವಲ್ಲ, 8ನೇ ಚಕ್ರ ಕೂಡ ಇದೆ. ಇದನ್ನು ಸೋಲ್ ಸ್ಟಾರ್ ಚಕ್ರ ಅಥವಾ ಔರಾ ಚಕ್ರ ಎಂದು ಕರೆಯಲಾಗುತ್ತದೆ. ಇದು ಮಾನವರು ಹೊಂದಿರುವ ಅತ್ಯಂತ ಶಕ್ತಿಶಾಲಿ ಶಕ್ತಿ ಕೇಂದ್ರಗಳಲ್ಲಿ ಒಂದಾಗಿದೆ ಎಂದು ನಂಬಲಾಗಿದೆ.

8ನೇ ಚಕ್ರ ಎಂದರೇನು?

ಸೋಲ್ ಸ್ಟಾರ್ ಚಕ್ರವು ನಮ್ಮನ್ನು ನಮ್ಮ ಉನ್ನತ ಸ್ವಭಾವ, ದೈವಿಕ ಉದ್ದೇಶ ಮತ್ತು ಒಟ್ಟಾರೆಯಾಗಿ ವಿಶ್ವಕ್ಕೆ ಸಂಪರ್ಕಿಸುತ್ತದೆ. ಏಳು ಮುಖ್ಯ ಚಕ್ರಗಳು ಭೌತಿಕವಾಗಿ ದೇಹದೊಳಗೆ ಇದ್ದರೂ, 8ನೇ ಚಕ್ರವು ನಮ್ಮ ದೇಹದ ಹೊರ ಭಾಗದಲ್ಲಿರುತ್ತದೆ ಮತ್ತು ಅದು ಶಕ್ತಿಶಾಲಿಯಾಗಿರುತ್ತದೆ.

ಮಾಸ್ಟರ್ ಎನರ್ಜಿ ಹೀಲರ್ ಪೆಟ್ರೀಷಿಯಾ ಬೊನಾರ್ಡ್ ಅವರ ಪ್ರಕಾರ, ಈ ಚಕ್ರವು ನಮ್ಮ ಐಹಿಕ ಜೀವನ ಮತ್ತು ಆಧ್ಯಾತ್ಮಿಕ ಕ್ಷೇತ್ರದ ನಡುವಿನ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ. ಇದು ನಮ್ಮ ಆತ್ಮದ ಬುದ್ಧಿವಂತಿಕೆ ಮತ್ತು ನಮ್ಮ ಜೀವನ ಸಾರಕ್ಕೆ ಒಂದು ದ್ವಾರದಂತಿದೆ. ಈ ಸೋಲ್‌ ಸ್ಟಾರ್ ಬಗ್ಗೆ ವಿವರವಾಗಿ ತಿಳಿದುಕೊಳ್ಳಲು ಮುಂದೆ ಓದಿ.

ಆತ್ಮ ನಕ್ಷತ್ರ ಅಥವಾ ಸೋಲ್‌ ಸ್ಟಾರ್ ಎಲ್ಲಿದೆ?

ಇತರ ಚಕ್ರಗಳಿಗಿಂತ ಭಿನ್ನವಾಗಿ, ಆತ್ಮ ನಕ್ಷತ್ರ ಚಕ್ರವು ನಮ್ಮ ದೇಹದ ಹೊರಗೆ ಇರುತ್ತದೆ. ಇದು ತಲೆಯ ಮೇಲ್ಭಾಗದಿಂದ ಸುಮಾರು 6 ರಿಂದ 12 ಇಂಚುಗಳಷ್ಟು ಎತ್ತರದಲ್ಲಿ ಕಿರೀಟ ಚಕ್ರದ ಮೇಲಿರುತ್ತದೆ. ಕೆಲವರು ಇದು ಹತ್ತಿರದಲ್ಲಿದೆ ಎಂದು ಹೇಳುತ್ತಾರೆ, ಇತರರು ಇದು ಮೂರು ಅಡಿ ದೂರದಲ್ಲಿರಬಹುದು ಎಂದು ನಂಬುತ್ತಾರೆ. ಇದು ನಮ್ಮ ಭೌತಿಕ ರೂಪದಲ್ಲಿ ಅಲ್ಲ, ಶಕ್ತಿ ಕ್ಷೇತ್ರದಲ್ಲಿರುತ್ತದೆ. ಕಿರೀಟ ಚಕ್ರದ ಮೇಲಿರುವ ಅದರ ಸ್ಥಾನದಿಂದಾಗಿ, ಇದನ್ನು ಎಂಟನೇ ಚಕ್ರ ಎಂದು ಕರೆಯಲಾಗುತ್ತದೆ.

ಈ ಚಕ್ರವು ಆಧ್ಯಾತ್ಮಿಕ ಅರಿವು, ಅಂತಃಪ್ರಜ್ಞೆ ಮತ್ತು ಉನ್ನತ ಪ್ರಜ್ಞೆಯ ಸ್ಥಿತಿಗಳನ್ನು ತಲುಪುವುದು ಈ ವಿಚಾರಕ್ಕೆ ಸಂಬಂಧಿಸಿದ್ದಾಗಿದೆ. ಇದು ಹಿಂದಿನ ಜೀವನದ ಚಿಕಿತ್ಸೆ, ಶಾಮನಿಕ್ ಪ್ರಯಾಣಗಳು ಅಥವಾ ಮಾನಸಿಕ ಅನುಭವಗಳಲ್ಲಿ ಅನ್ವೇಷಿಸಲಾದ ಇತರ ಕ್ಷೇತ್ರಗಳಿಗೆ ಪ್ರವೇಶವನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ.

ಸರ್ವವ್ಯಾಪಿ ಆತ್ಮ ನಕ್ಷತ್ರ ಚಕ್ರ

ಸಂಸ್ಕೃತದಲ್ಲಿ ಇದನ್ನು ವ್ಯಾಪಿನಿ ಎಂದು ಕರೆಯಲಾಗುತ್ತದೆ, ಇದರರ್ಥ ‘ಸರ್ವವ್ಯಾಪಿ‘. ಅಂದರೆ ಈ ಚಕ್ರವು ಸರ್ವವ್ಯಾಪಿಯಾಗಿದೆ. ನಾವೆಲ್ಲರೂ ಅಪರಿಮಿತ ಮತ್ತು ಸಾರ್ವತ್ರಿಕವಾದುದರ ಭಾಗವಾಗಿದ್ದೇವೆ ಎಂಬ ಕಲ್ಪನೆಯನ್ನು ಇದು ಪ್ರತಿನಿಧಿಸುತ್ತದೆ ಮತ್ತು ನಾವು ಪ್ರತ್ಯೇಕ ವ್ಯಕ್ತಿಗಳು ಎಂಬ ಭ್ರಮೆಯನ್ನು ಕರಗಿಸಲು ಸಹಾಯ ಮಾಡುತ್ತದೆ. ಬದಲಾಗಿ, ಆತ್ಮ ನಕ್ಷತ್ರ ಚಕ್ರವು ನಾವೆಲ್ಲರೂ ಅಂದರೆ ಜಗತ್ತಿನಲ್ಲಿರುವ ಸಕಲ ಜೀವಿಗಳು ಒಂದು ಸಾರ್ವತ್ರಿಕ ಶಕ್ತಿಯ ಮೂಲಕ ಸಂಪರ್ಕ ಹೊಂದಿದ್ದೇವೆ ಎಂದು ನೆನಪಿಸುತ್ತದೆ.

ಭಯ, ಅಹಂಕಾರ ಅಥವಾ ಹಿಂದಿನ ಅನುಭವಗಳ ಯಾವುದೇ ಅಂಶಗಳು ತಲೆಯಲ್ಲಿ ಇಲ್ಲದೇ ವಿಷಯವನ್ನು ಸ್ಪಷ್ಟವಾಗಿ ನೋಡುವ ನಮ್ಮ ಆವೃತ್ತಿಯಾಗಿ ನಮ್ಮ ಉನ್ನತ ವ್ಯಕ್ತಿತ್ವವನ್ನು ಕಲ್ಪಿಸಿಕೊಳ್ಳಿ. 8ನೇ ಚಕ್ರವು ನಾವು ನಮ್ಮ ಆ ಆವೃತ್ತಿಗೆ ಹೇಗೆ ಸಂಪರ್ಕ ಸಾಧಿಸುತ್ತೇವೆ ಎಂಬುದರ ಸಂಕೇತವಾಗಿದೆ. ಇದು ನಮ್ಮ ದೈನಂದಿನ ಚಿಂತೆಗಳು, ಭಾವನೆಗಳು ಮತ್ತು ನಂಬಿಕೆಗಳನ್ನು ಮೀರಿ ಸ್ಪಷ್ಟತೆಯನ್ನು ಹೊಂದಿದೆ. ಇದು ನಿಮ್ಮ ಆತ್ಮದ ಬುದ್ಧಿವಂತಿಕೆಗೆ ನೇರ ರೇಖೆಯನ್ನು ಹೊಂದಿರುತ್ತದೆ.

ಕುಂಡಲಿನಿ ಯೋಗದಲ್ಲಿ, ಎಂಟನೇ ಚಕ್ರವು ಇತರರನ್ನು ಮೇಲಕ್ಕೆತ್ತುವ, ಪ್ರೇರೇಪಿಸುವ ಮತ್ತು ರಕ್ಷಿಸುವ ಸಾಮರ್ಥ್ಯವನ್ನು ನೀಡುತ್ತದೆ ಎಂದು ದೈಹಿಕ ಮತ್ತು ಕುಂಡಲಿನಿ ಶಿಕ್ಷಕ ಬ್ರೆಟ್ ಲಾರ್ಕಿನ್ ವಿವರಿಸುತ್ತಾರೆ. ಒಂದು ಕೋಣೆಗೆ ಕಾಲಿಟ್ಟಾಗ, ಅದರಲ್ಲಿರುವ ಜನರು ನೀವು ಯಾವುದೇ ಮಾತನ್ನು ಹೇಳದೇ ಇದ್ದರೂ ನಿಮ್ಮಲ್ಲಿರುವ ಶಕ್ತಿಯನ್ನು ಜನರು ಅನುಭವಿಸುವ ರೀತಿಯನ್ನು ಈ ಆತ್ಮ ನಕ್ಷತ್ರ ಚಕ್ರ ತಿಳಿಸುತ್ತದೆ.

ಆದ್ದರಿಂದ, ಸಾಂಪ್ರದಾಯಿಕ ಏಳು ಚಕ್ರಗಳು ನಮ್ಮ ದೈಹಿಕ ಮತ್ತು ಭಾವನಾತ್ಮಕ ಯೋಗಕ್ಷೇಮದ ಮೇಲೆ ಕೇಂದ್ರೀಕರಿಸಿದರೆ, 8ನೇ ಚಕ್ರವು ಕೇವಲ ನಮ್ಮ ದೇಹಕ್ಕಿಂತ ಹೆಚ್ಚಿನದು ಏನೋ ಇದೆ ಎಂಬುದನ್ನು ನೆನಪಿಸುತ್ತದೆ. ನಮ್ಮ ಆತ್ಮವು ಇಡೀ ವಿಶ್ವದಲ್ಲಿ ಆಳವಾಗಿ ಬೇರೂರಿದೆ ಎಂಬುದನ್ನು ಇದು ಸಾಬೀತುಪಡಿಸುತ್ತದೆ.

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.