Ketu Transit: ಸಿಂಹ ರಾಶಿಗೆ ಕೇತುವಿನ ಪ್ರವೇಶದಿಂದ 3 ರಾಶಿಯವರಿಗೆ ಭಾರಿ ಅದೃಷ್ಟ, ಸದ್ಯದಲ್ಲೇ ಬದುಕಿನಲ್ಲಿ ಉಂಟಾಗಲಿದೆ ಹಲವು ಬದಲಾವಣೆ
ಜ್ಯೋತಿಷ್ಯಶಾಸ್ತ್ರದ ಪ್ರಕಾರ ಕೇತುವಿನ ಸಿಂಹ ರಾಶಿಯಲ್ಲಿನ ಸಂಚಾರವು 12 ರಾಶಿಚಕ್ರಗಳ ಮೇಲೆ ಪರಿಣಾಮ ಬೀರುತ್ತದೆ. ಆದಾಗ್ಯೂ, ಕೆಲವು ರಾಶಿಚಕ್ರದವರಿಗೆ ಇದರಿಂದ ಯೋಗ ಬರುತ್ತದೆ ಎಂದು ಊಹಿಸಲಾಗಿದೆ. ಇದು ಯಾವ ರಾಶಿಚಕ್ರ ಚಿಹ್ನೆಗಳಿಗೆ ಸೇರಿದೆ ಎಂದು ನೋಡೋಣ.

ನವಗ್ರಹಗಳಲ್ಲಿ ಕೇತು ಒಂದು ಅಶುಭ ಗ್ರಹ. ಈ ಗ್ರಹವು ಪ್ರತಿ 18 ತಿಂಗಳಿಗೊಮ್ಮೆ ತನ್ನ ಸ್ಥಾನವನ್ನು ಬದಲಿಸುತ್ತದೆ. ಶನಿಯ ನಂತರ ಕೇತು ಅತ್ಯಂತ ನಿಧಾನವಾಗಿ ಚಲಿಸುವ ಗ್ರಹವಾಗಿದೆ. ಜ್ಯೋತಿಷ್ಯದ ಪ್ರಕಾರ, ಕೇತು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸ್ಥಾನಪಲ್ಲಟ ಮಾಡುವಾಗ ಅದು ಎಲ್ಲಾ 12 ರಾಶಿಚಕ್ರಗಳ ಮೇಲೆ ಪರಿಣಾಮ ಬೀರುತ್ತದೆ.
ರಾಹು ಹಾಗೂ ಕೇತು ಗ್ರಹಗಳು ಹಿಮ್ಮುಖವಾಗಿ ಚಲಿಸುತ್ತವೆ. ಈ ಎರಡೂ ಗ್ರಹಗಳು ಬೇರೆ ಬೇರೆಯಾಗಿ ಸಂಚರಿಸಿದರೂ ಅವುಗಳ ಕೆಲಸ ಒಂದೇ. ಇದೀಗ ಕೇತುವಿನ ರಾಶಿ ಬದಲಾವಣೆ ನಡೆಯಲಿದೆ.
ಕೇತುವು ಅಕ್ಟೋಬರ್ 2023ರ ಕೊನೆಯಲ್ಲಿ ಕನ್ಯಾರಾಶಿಯಲ್ಲಿ ತನ್ನ ಪ್ರಯಾಣವನ್ನು ಪ್ರಾರಂಭಿಸಿತು. ಮೇ 2025ಕ್ಕೆ ಕೇತು ಸಿಂಹ ರಾಶಿಗೆ ಸ್ಥಾನ ಬದಲಿಸುತ್ತಾನೆ. ಜ್ಯೋತಿಷ್ಯದ ಪ್ರಕಾರ, ಸಿಂಹ ರಾಶಿಯಲ್ಲಿ ಕೇತುವಿನ ಸಂಚಾರವು ಎಲ್ಲಾ 12 ರಾಶಿಗಳ ಮೇಲೂ ಪರಿಣಾಮ ಬೀರುತ್ತದೆ. ಆದಾಗ್ಯೂ, ಕೆಲವು ರಾಶಿಚಕ್ರದ ಜನರಿಗೆ ಇದರಿಂದ ವಿಶೇಷ ಯೋಗಗಳು ಒಲಿಯುತ್ತವೆ ಎಂದು ಊಹಿಸಲಾಗಿದೆ. ಹಾಗಾದರೆ ಕೇತು ಸಂಚಾರದಿಂದ ಯಾವೆಲ್ಲಾ ರಾಶಿಯವರಿಗೆ ಶುಭವಾಗಲಿದೆ.
1. ಮಿಥುನ
ಕೇತು ನಿಮ್ಮ ರಾಶಿಚಕ್ರದ ಮೂರನೇ ಮನೆಗೆ ಸ್ಥಳಾಂತರಗೊಳ್ಳಲಿದ್ದಾರೆ. ಇದು ನಿಮ್ಮ ಜೀವನದಲ್ಲಿ ಅನೇಕ ಸಕಾರಾತ್ಮಕ ಬದಲಾವಣೆಗಳನ್ನು ತರುವ ನಿರೀಕ್ಷೆಯಿದೆ. ಆತ್ಮವಿಶ್ವಾಸ ಮತ್ತು ಧೈರ್ಯ ಹೆಚ್ಚಾಗುತ್ತದೆ. ಕೈಗೊಂಡ ಎಲ್ಲಾ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ. ಆಧ್ಯಾತ್ಮದ ಬಗ್ಗೆ ಆಸಕ್ತಿ ಹೆಚ್ಚಾಗುತ್ತದೆ. ಎಲ್ಲಾ ದೀರ್ಘಕಾಲದ ಆಸೆಗಳು ಈಡೇರುತ್ತವೆ. ಕುಟುಂಬ ಜೀವನದಲ್ಲಿ ಸಂತೋಷ ಇರುತ್ತದೆ. ಹೊಸ ಆಸ್ತಿಯನ್ನು ಖರೀದಿಸುವ ಸಾಧ್ಯತೆ ಇದೆ. ನಿಮ್ಮ ಆರೋಗ್ಯದ ಬಗ್ಗೆ ನೀವು ಜಾಗರೂಕರಾಗಿರಬೇಕು.
2. ತುಲಾ
ಕೇತು ನಿಮ್ಮ ರಾಶಿಚಕ್ರದ 11ನೇ ಮನೆಯಲ್ಲಿ ಸಂಚಾರ ಮಾಡಲಿದ್ದಾನೆ. ಇದು ನಿಮಗೆ ಬಹಳಷ್ಟು ಅದೃಷ್ಟವನ್ನು ತರುತ್ತದೆ. ಆದಾಯದಲ್ಲಿ ಹೆಚ್ಚಳವಿರುತ್ತದೆ. ಬ್ಯಾಂಕಿನಲ್ಲಿನ ಶಿಲ್ಕು ಹೆಚ್ಚಾಗುತ್ತದೆ. ನಿಮ್ಮ ಬಹುಕಾಲದ ಆಸೆಗಳೆಲ್ಲವೂ ಈಡೇರುತ್ತವೆ. ಅನಿರೀಕ್ಷಿತ ಸಮಯದಲ್ಲಿ ಉದ್ಯೋಗ ಮತ್ತು ವ್ಯವಹಾರದಲ್ಲಿ ಉತ್ತಮ ಲಾಭ ಗಳಿಸುವಿರಿ. ನಿಮ್ಮ ಆರೋಗ್ಯದ ಬಗ್ಗೆ ನೀವು ಜಾಗರೂಕರಾಗಿರಬೇಕು. ನಿಮ್ಮ ಕೆಲಸದ ಸ್ಥಳದಲ್ಲಿ ನೀವು ಪ್ರಗತಿಯನ್ನು ಸಾಧಿಸುವಿರಿ.
3. ಮೀನ
ಕೇತು ನಿಮ್ಮ ರಾಶಿಚಕ್ರದ ಆರನೇ ಮನೆಯಲ್ಲಿ ಸಂಚಾರ ಮಾಡಲಿದ್ದಾರೆ. ಮೇ 2025 ರಿಂದ ನಿಮಗೆ ಉತ್ತಮ ಯೋಗ ಬರುತ್ತದೆ. ಕಷ್ಟಪಟ್ಟು ಕೆಲಸ ಮಾಡುವುದರಿಂದ ಉತ್ತಮ ಫಲಿತಾಂಶಗಳು ದೊರೆಯುತ್ತವೆ. ವ್ಯವಹಾರದಲ್ಲಿನ ಸಮಸ್ಯೆಗಳು ಕಡಿಮೆಯಾಗುತ್ತವೆ ಮತ್ತು ಪ್ರಗತಿ ಇರುತ್ತದೆ. ಕೆಲಸದಲ್ಲಿ ಬಡ್ತಿ ಮತ್ತು ಸಂಬಳ ಹೆಚ್ಚಳಕ್ಕೆ ಅವಕಾಶಗಳಿವೆ. ಆಧ್ಯಾತ್ಮದ ಬಗ್ಗೆ ಆಸಕ್ತಿ ಹೆಚ್ಚಾಗುತ್ತದೆ. ಜೀವನವು ನಿಮಗೆ ತುಂಬಾ ಸಂತೋಷಕರವಾಗಿರುತ್ತದೆ. ಹೊಸ ಆಸ್ತಿ ಸಂಬಂಧಿತ ವಿಷಯಗಳಲ್ಲಿ ನೀವು ಪ್ರಗತಿ ಸಾಧಿಸುವಿರಿ. ಆರೋಗ್ಯದ ಬಗ್ಗೆ ನೀವು ಜಾಗರೂಕರಾಗಿರಬೇಕು. ಅನಗತ್ಯ ಖರ್ಚುಗಳನ್ನು ಕಡಿಮೆ ಮಾಡುವುದರಿಂದ ಉಳಿತಾಯ ಹೆಚ್ಚಾಗುತ್ತದೆ.
(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)
