Mercury Retrograde: ಬುಧನ ಹಿಮ್ಮುಖ ಚಲನೆಯ ಪರಿಣಾಮ ಈ ರಾಶಿಯವರಿಗೆ ಆಪತ್ತು; ಆತ್ಮವಿಶ್ವಾಸ ಕುಗ್ಗಬಹುದು ಎಚ್ಚರ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Mercury Retrograde: ಬುಧನ ಹಿಮ್ಮುಖ ಚಲನೆಯ ಪರಿಣಾಮ ಈ ರಾಶಿಯವರಿಗೆ ಆಪತ್ತು; ಆತ್ಮವಿಶ್ವಾಸ ಕುಗ್ಗಬಹುದು ಎಚ್ಚರ

Mercury Retrograde: ಬುಧನ ಹಿಮ್ಮುಖ ಚಲನೆಯ ಪರಿಣಾಮ ಈ ರಾಶಿಯವರಿಗೆ ಆಪತ್ತು; ಆತ್ಮವಿಶ್ವಾಸ ಕುಗ್ಗಬಹುದು ಎಚ್ಚರ

Mercury Retrograde: ಗ್ರಹಗಳ ಚಲನೆಯಿಂದ ಒಳಿತಾಗುವುದು ಮಾತ್ರವಲ್ಲ, ಕೇಡು ಸಂಭವಿಸುತ್ತದೆ. ಬುಧ ಹಿಮ್ಮುಖ ಚಲನೆ ಶುರುವಾಗಿದ್ದು, ಇದರ ಪರಿಣಾಮ ಯಾವೆಲ್ಲಾ ರಾಶಿಯವರ ಮೇಲಾಗಲಿದೆ ನೋಡಿ.

ಬುಧನ ಹಿಮ್ಮುಖ ಚಲನೆಯ ಪರಿಣಾಮ ಈ ರಾಶಿಯವರಿಗೆ ಆಪತ್ತು; ಆತ್ಮವಿಶ್ವಾಸ ಕುಗ್ಗಬಹುದು ಎಚ್ಚರ
ಬುಧನ ಹಿಮ್ಮುಖ ಚಲನೆಯ ಪರಿಣಾಮ ಈ ರಾಶಿಯವರಿಗೆ ಆಪತ್ತು; ಆತ್ಮವಿಶ್ವಾಸ ಕುಗ್ಗಬಹುದು ಎಚ್ಚರ

ಬುಧ ಗ್ರಹವು ಮಾರ್ಚ್ 15 ರಿಂದ ಹಿಮ್ಮುಖವಾಗಿ ಚಲಿಸಲು ಆರಂಭಿಸಿದೆ. ಬುಧನ ಹಿಮ್ಮುಖ ಚಲನೆಯು ಎಲ್ಲಾ 12 ರಾಶಿಗಳ ಮೇಲೂ ಪರಿಣಾಮ ಬೀರಲಿದೆ. ಇದರಿಂದ ಕೆಲವು ರಾಶಿಯವರಿಗೆ ಒಳಿತಾದರೆ ಕೆಲವು ರಾಶಿಯವರಿಗೆ ಕೇಡಾಗುವ ಸಂಭವವಿದೆ. ಆ ಕಾರಣಕ್ಕೆ ಈ ಕೆಲವು ರಾಶಿಯವರು ಸಾಕಷ್ಟು ಎಚ್ಚರದಿಂದ ಇರಬೇಕಾಗುತ್ತದೆ.

ಜ್ಯೋತಿಷಿಗಳ ಪ್ರಕಾರ ಬುಧನ ಹಿಮ್ಮುಖ ಚಲನೆಯು ಮುಖ್ಯವಾಗಿ 3 ರಾಶಿಯವರಿಗೆ ಆಪತ್ತನ್ನು ಉಂಟು ಮಾಡುವ ಸಾಧ್ಯತೆ ಇದೆ. ಇವರ ಜೀವನದಲ್ಲಿ ಹಲವು ಅಡೆತಡೆಗಳು ಕೂಡ ಎದುರಾಗಬಹುದು. ಹಾಗಾದರೆ ಆ 3 ರಾಶಿಗಳಲ್ಲಿ ನಿಮ್ಮ ರಾಶಿಯೂ ಇದ್ಯಾ ಗಮನಿಸಿ.

ಮೇಷ ರಾಶಿ

ಬುಧನ ಹಿಮ್ಮೆಟ್ಟುವಿಕೆ ಅಥವಾ ಬುಧನ ಹಿಮ್ಮುಖ ಚಲನೆಯು ಮೇಷ ರಾಶಿಯ ಮೇಲೆ ಕೆಟ್ಟ ಪರಿಣಾಮವನ್ನು ಉಂಟು ಮಾಡಲಿದೆ. ಇದರಿಂದ ನೀವು ಅಂದುಕೊಂಡ ಯಾವುದೇ ಕೆಲಸ ಕಾರ್ಯಗಳು ನಡೆಯುವುದಿಲ್ಲ. ನೀವು ಹೇಳಬೇಕು ಎಂದುಕೊಂಡಿರುವ ವಿಚಾರವನ್ನು ಸರಿಯಾಗಿ ಹೇಳಲು ಕೂಡ ನಿಮಗೆ ಸಾಧ್ಯವಾಗುವುದಿಲ್ಲ. ನಿಮ್ಮ ಮಾತಿನಿಂದ ಜಗಳಗಳಾಗುವ ಸಂಭವ ಹೆಚ್ಚು. ಆದರೆ ನಿರಾಸೆಗೊಳ್ಳದಿರಿ. ನಿಮ್ಮ ಮೇಲೆ ನಿಮಗೆ ಆತ್ಮವಿಶ್ವಾಸ ಇರಲಿ. ಸತ್ಯದ ಹಾದಿಯಲ್ಲಿ ನಡೆಯಿರಿ. ನಿಮ್ಮನ್ನು ನೀವು ನಂಬಿ. ಕೆಟ್ಟದ್ದನ್ನು ನಿಭಾಯಿಸುವುದನ್ನು ಕಲಿಯಿರಿ.

ಕನ್ಯಾ ರಾಶಿ

ಬುಧನ ಹಿಮ್ಮೆಟ್ಟುವಿಕೆಯು ನಿಮಗೆ ಅಪಾಯವನ್ನು ತಂದೊಡ್ಡಲಿದೆ. ಆದರೆ ಭಯ ಪಡಬೇಡಿ. ನೀವು ಹೂಡಿಕೆ ಮಾಡಿದ ಎಲ್ಲವೂ ನಿಮ್ಮ ಬೆರಳುಗಳ ಮೂಲಕ ಜಾರಿಹೋಗುತ್ತಿರುವಂತೆ ಭಾಸವಾಗಬಹುದು. ಈ ಸಮಯದಲ್ಲಿ ಎಲ್ಲವೂ ನಿಮ್ಮಿಂದ ದೂರಾಗುತ್ತಿದೆ ಎಂದು ನಿಮಗೆ ಅನ್ನಿಸಬಹುದು. ಆದರೆ ಯಾವುದೇ ಹಠಾತ್ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಒಂದು ಹೆಜ್ಜೆ ಹಿಂದಕ್ಕೆ ಇರಿಸಿ ಯೋಚಿಸಿ. ಈ ಈ ಅಸ್ಥಿರತೆಯು ತಾತ್ಕಾಲಿಕವಾಗಿರಬಹುದು. ಆತ್ಮವಿಶ್ವಾಸ ಇರಲಿ.

ಮೀನ ರಾಶಿ

ಈ ಸಮಯದಲ್ಲಿ ನೀವು ಸ್ಥಿರವಾದ ಭಾವನೆಗಳನ್ನು ಹೊಂದಿರುವುದಿಲ್ಲ. ನಿಮ್ಮ ಮನಸ್ಸು ಅಲ್ಲೋಲ ಕಲ್ಲೋಲವಾಗುತ್ತದೆ. ಆಕಾಶವೇ ಕುಸಿದ ಬೀಳುವ ಅನುಭವವಾಗಬಹುದು. ಕೆಲವೊಮ್ಮೆ ನಿಮಗೆ ಎಲ್ಲಿಗೆ ಹೋಗಬೇಕು ಎಂದು ತಿಳಿಯುವುದಿಲ್ಲ. ಇದರಿಂದ ಯೋಚಿಸುತ್ತಾ ಕೂರತೆ ಅಥವಾ ಕುಗ್ಗಿದರೆ ಪ್ರಯೋಜನವಿಲ್ಲ. ನಿಮ್ಮನ್ನು ಯಾರು ಬೆಂಬಲಿಸಬಹುದು, ನಿಮ್ಮ ನಿಯಂತ್ರಣದಲ್ಲಿ ಏನಿದೆ ಎಂಬುದು ನಿಮಗೆ ಅರ್ಥವಾಗುತ್ತದೆ. ಸವಾಲಿನ ಕ್ಷಣಗಳಲ್ಲಿ ನಿಮ್ಮನ್ನು ನೀವು ನಂಬುವುದು ಬಹಳ ಮುಖ್ಯ. ಯೋಚನೆಗಳನ್ನು ಕಾರ್ಯರೂಪಕ್ಕೆ ತನ್ನಿ.

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.