ಸಂಖ್ಯಾಶಾಸ್ತ್ರ: ಈ ದಿನಾಂಕದಲ್ಲಿ ಜನಿಸಿದವರು ಸಾಕಷ್ಟು ಆಸ್ತಿ ಖರೀದಿ ಮಾಡ್ತಾರೆ, ಐಷಾರಾಮಿ ಜೀವನ ಇವರದ್ದಾಗಿರುತ್ತೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಸಂಖ್ಯಾಶಾಸ್ತ್ರ: ಈ ದಿನಾಂಕದಲ್ಲಿ ಜನಿಸಿದವರು ಸಾಕಷ್ಟು ಆಸ್ತಿ ಖರೀದಿ ಮಾಡ್ತಾರೆ, ಐಷಾರಾಮಿ ಜೀವನ ಇವರದ್ದಾಗಿರುತ್ತೆ

ಸಂಖ್ಯಾಶಾಸ್ತ್ರ: ಈ ದಿನಾಂಕದಲ್ಲಿ ಜನಿಸಿದವರು ಸಾಕಷ್ಟು ಆಸ್ತಿ ಖರೀದಿ ಮಾಡ್ತಾರೆ, ಐಷಾರಾಮಿ ಜೀವನ ಇವರದ್ದಾಗಿರುತ್ತೆ

ಸಂಖ್ಯಾಶಾಸ್ತ್ರದ ಆಧಾರದ ಮೇಲೆ ವ್ಯಕ್ತಿಯ ವ್ಯಕ್ತಿತ್ವವನ್ನು ಮಾತ್ರವಲ್ಲ ಭವಿಷ್ಯವನ್ನೂ ಸಹ ಊಹಿಸಬಹುದು. ಸಂಖ್ಯಾಶಾಸ್ತ್ರದ ಪ್ರಕಾರ ಈ ದಿನಾಂಕಗಳಲ್ಲಿ ಜನಿಸಿದರು ಸಾಕಷ್ಟು ಆಸ್ತಿ ಸಂಪಾದನೆ ಮಾಡುತ್ತಾರೆ. ಜಮೀನುಗಳನ್ನು ಖರೀದಿ ಮಾಡುವ ಜೊತೆಗೆ, ಐಷಾರಾಮಿ ಜೀವನ ನಡೆಸುತ್ತಾರೆ.

ಸಂಖ್ಯಾಶಾಸ್ತ್ರ: ಈ ದಿನಾಂಕದಲ್ಲಿ ಜನಿಸಿದವರು ಭೂಮಿ-ಆಸ್ತಿ ಖರೀದಿ ಮಾಡ್ತಾರೆ
ಸಂಖ್ಯಾಶಾಸ್ತ್ರ: ಈ ದಿನಾಂಕದಲ್ಲಿ ಜನಿಸಿದವರು ಭೂಮಿ-ಆಸ್ತಿ ಖರೀದಿ ಮಾಡ್ತಾರೆ

ಸಂಖ್ಯಾಶಾಸ್ತ್ರದ ಆಧಾರದ ಮೇಲೆ ನಾವು ಅನೇಕ ವಿಷಯಗಳನ್ನು ತಿಳಿದುಕೊಳ್ಳಬಹುದು. ಇದರ ಆಧಾರ ಮೇಲೆ ವ್ಯಕ್ತಿಯ ವ್ಯಕ್ತಿತ್ವ ಮತ್ತು ನಡವಳಿಕೆಯನ್ನೂ ತಿಳಿಯಬಹುದು, ಮಾತ್ರವಲ್ಲ ಭವಿಷ್ಯವನ್ನು ಸಹ ಊಹಿಸಲು ಸಾಧ್ಯವಿದೆ. ಸಂಖ್ಯಾಶಾಸ್ತ್ರದ ಪ್ರಕಾರ ಈ ದಿನಾಂಕಗಳಲ್ಲಿ ಜನಿಸಿದವರು ಹೆಚ್ಚಿನ ಆಸ್ತಿ ಸಂಪಾದಿಸುತ್ತಾರೆ. ಜಮೀನುಗಳನ್ನು ಖರೀದಿಸುತ್ತಾರೆ. ಈ ದಿನಾಂಕಗಳಲ್ಲಿ ಜನಿಸಿದವರ ಬಗ್ಗೆ ಇನ್ನೂ ಹಲವು ಆಸಕ್ತಿದಾಯಕ ಸಂಗತಿಗಳಿವೆ ಗಮನಿಸಿ.

ಪ್ರತಿಯೊಂದು ಸಂಖ್ಯೆಗೂ ಒಬ್ಬ ನಾಯಕ ಇರುತ್ತಾನೆ. ನಾವು ಈ ಹೇಳಲು ಹೊರಟಿರುವ ಸಂಖ್ಯೆಯ ಅಧಿಪತಿ ಮಂಗಳ. ಈ ದಿನಾಕದಲ್ಲಿ ಜನಿಸಿದವರು ಸಾಕಷ್ಟು ಭೂಮಿ ಖರೀದಿಸುತ್ತಾರೆ. ಆಸ್ತಿ, ಹಣ ಗಳಿಸುವ ಜೊತೆಗೆ ಐಷಾರಾಮಿ ಬದುಕು ನಡೆಸುತ್ತಾರೆ.

ರಾಡಿಕ್ಸ್ ಸಂಖ್ಯೆ 9

ಯಾವುದೇ ತಿಂಗಳ 9, 18 ಅಥವಾ 27ನೇ ತಾರೀಖಿನಂದು ಜನಿಸಿದರೆ, ಅವರ ರಾಶಿ ಸಂಖ್ಯೆ 9 ಆಗಿರುತ್ತದೆ. ರಾಶಿ ಸಂಖ್ಯೆ 9ರ ಅಧಿಪತಿ ಮಂಗಳ. ಮಂಗಳ ಗ್ರಹದ ಪ್ರಭಾವ ಈ ರಾಡಿಕ್ಸ್ ಸಂಖ್ಯೆಯವರ ಮೇಲಿರುತ್ತದೆ. ಆದ್ದರಿಂದ, ಈ ದಿನಾಂಕಗಳಲ್ಲಿ ಜನಿಸಿದವರ ಜೀವನದಲ್ಲಿ ಅನೇಕ ಬದಲಾವಣೆಗಳು ಸಂಭವಿಸುತ್ತವೆ. ಅವರು ಶ್ರೀಮಂತರಾಗುತ್ತಾರೆ. ಆಸ್ತಿಗಳನ್ನು ಗಳಿಸುತ್ತಾರೆ, ಜಮೀನು ಖರೀದಿ ಮಾಡುತ್ತಾರೆ.

ಮಂಗಳ ಗ್ರಹದ ಪರಿಣಾಮ

ರಾಡಿಕ್ಸ್ ಸಂಖ್ಯೆ 9 ಇರುವವರು ಮಂಗಳ ಗ್ರಹದಿಂದ ಪ್ರಭಾವಿತರಾಗುತ್ತಾರೆ. ಅವರು ಯಾವುದಕ್ಕೂ ಹೆದರುವುದಿಲ್ಲ. ಅವರು ತುಂಬಾ ಧೈರ್ಯದಿಂದ ವರ್ತಿಸುತ್ತಾರೆ. ಇವರು ಬುದ್ಧಿವಂತರು, ದೈಹಿಕವಾಗಿಯೂ ಬಲಿಷ್ಠರಾಗಿರುತ್ತಾರೆ. ಸ್ವಲ್ಪ ಕಿರಿಕಿರಿ ಮತ್ತು ಕೋಪಗೊಂಡರೂ ಸಹ ಶಿಸ್ತುಬದ್ಧರಾಗಿರುತ್ತಾರೆ. ಕೆಲವೊಮ್ಮೆ ಅವರು ಇತರರಿಗೆ ನೋವುಂಟು ಮಾಡುವ ರೀತಿಯಲ್ಲಿ ಮಾತನಾಡುತ್ತಾರೆ.

ವೃತ್ತಿಜೀವನದಲ್ಲಿ ಯಶಸ್ಸನ್ನು ಹೇಗಿರುತ್ತೆ?

ರಾಡಿಕ್ಸ್ ಸಂಖ್ಯೆ 9 ಹೊಂದಿರುವ ಜನರು ಸೈನ್ಯ ಮತ್ತು ಪೊಲೀಸರಂತಹ ವೃತ್ತಿಗಳಲ್ಲಿ ಉತ್ತಮ ಯಶಸ್ಸನ್ನು ಸಾಧಿಸುತ್ತಾರೆ. ಮಂಗಳ ಗ್ರಹದ ಪ್ರಭಾವದಿಂದಾಗಿ, ನೀವು ಕ್ರೀಡೆಗಳಲ್ಲಿಯೂ ಉತ್ತಮ ಸಾಧನೆ ಮಾಡಬಹುದು.‌

ಭೂಮಾಲೀಕರು

ಈ ದಿನಾಂಕಗಳಲ್ಲಿ ಜನಿಸಿದ ಜನರು ತುಂಬಾ ಬುದ್ಧಿವಂತರು. ಧೈರ್ಯಶಾಲಿ ಜನರು. ಧೈರ್ಯ, ಮದುವೆ ಮತ್ತು ಭೂಮಿಗೆ ಮಂಗಳ ಗ್ರಹ ಕಾರಣ. ರಾಡಿಕ್ಸ್ ಸಂಖ್ಯೆ 9 ಹೊಂದಿರುವವರು ಕುಜನಿಂದ ಆಶೀರ್ವಾದ ಪಡೆಯುತ್ತಾರೆ, ಅವರು ಅಪಾರ ಸಂಪತ್ತಿನ ಮಾಲೀಕರಾಗುತ್ತಾರೆ. ಅವರು ಬಹಳಷ್ಟು ಹಣವನ್ನು ಗಳಿಸುತ್ತಾರೆ.

ಅವರು ತೋಟಗಳು, ತೋಟದ ಮನೆಗಳು ಮತ್ತು ಜಮೀನುಗಳನ್ನು ಖರೀದಿಸುತ್ತಾರೆ. ಅವರು ಮನೆ ಮಾಲೀಕರಂತೆ ಐಷಾರಾಮಿ ಜೀವನ ನಡೆಸುತ್ತಾರೆ. ಈ ಸಂಖ್ಯೆಯಲ್ಲಿ ಜನಿಸಿದವರು ಹೆಚ್ಚು ಖರ್ಚು ಮಾಡುತ್ತಾರೆ. ಆದರೆ ಅವರಿಗೆ ಹೆಚ್ಚಿನ ಸಂಪತ್ತು ಮತ್ತು ಆಸ್ತಿ ಇದೆ. ಹಾಗಾಗಿ ವೆಚ್ಚದ ಬಗ್ಗೆ ಯೋಚಿಸಬೇಡಿ. ಅವರು ಸಂತೋಷದಿಂದ ಐಷಾರಾಮಿ ಜೀವನವನ್ನು ನಡೆಸುವರು.

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.