Palmistry: ಅಂಗೈಯಲ್ಲಿ ಹಣದ ರೇಖೆ ಎಲ್ಲಿ ಮತ್ತು ಹೇಗಿರುತ್ತೆ, ಅದು ಹೇಗಿದ್ದರೆ ಅದೃಷ್ಟ; ಇಲ್ಲಿದೆ ಉತ್ತರ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Palmistry: ಅಂಗೈಯಲ್ಲಿ ಹಣದ ರೇಖೆ ಎಲ್ಲಿ ಮತ್ತು ಹೇಗಿರುತ್ತೆ, ಅದು ಹೇಗಿದ್ದರೆ ಅದೃಷ್ಟ; ಇಲ್ಲಿದೆ ಉತ್ತರ

Palmistry: ಅಂಗೈಯಲ್ಲಿ ಹಣದ ರೇಖೆ ಎಲ್ಲಿ ಮತ್ತು ಹೇಗಿರುತ್ತೆ, ಅದು ಹೇಗಿದ್ದರೆ ಅದೃಷ್ಟ; ಇಲ್ಲಿದೆ ಉತ್ತರ

Money line in Hand: ಹಸ್ತಸಾಮುದ್ರಿಕಾ ಶಾಸ್ತ್ರವು ಕೈಗಳಲ್ಲಿರುವ ರೇಖೆಗಳು ಹೇಳುವ ಭವಿಷ್ಯವನ್ನು ತಿಳಿಸುತ್ತವೆ. ಅಂಗೈಯಲ್ಲಿರುವ ಕೆಲವು ರೇಖೆಗಳು ನಮಗೆ ಅದೃಷ್ಟ ತರುತ್ತವೆ. ಹಾಗಾದರೆ ಅಂಗೈಯಲ್ಲಿ ಹಣದ ರೇಖೆ ಎಲ್ಲಿರುತ್ತದೆ ಎಂದು ನೋಡೋಣ.

ಅಂಗೈಯಲ್ಲಿ ಹಣದ ರೇಖೆ ಎಲ್ಲಿ ಮತ್ತು ಹೇಗಿರುತ್ತೆ, ಅದು ಹೇಗಿದ್ದರೆ ಅದೃಷ್ಟ; ಇಲ್ಲಿದೆ ಉತ್ತರ
ಅಂಗೈಯಲ್ಲಿ ಹಣದ ರೇಖೆ ಎಲ್ಲಿ ಮತ್ತು ಹೇಗಿರುತ್ತೆ, ಅದು ಹೇಗಿದ್ದರೆ ಅದೃಷ್ಟ; ಇಲ್ಲಿದೆ ಉತ್ತರ

Money Line in Hand: ಅಂಗೈ ಮೇಲೆ ರೂಪುಗೊಂಡಿರುವ ಉದ್ದ, ಅಗಲ ರೇಖೆಗಳಿಂದ ವ್ಯಕ್ತಿಯ ಭೂತ, ವರ್ತಮಾನ ಮತ್ತು ಭವಿಷ್ಯವನ್ನು ಕಂಡುಹಿಡಿಯಬಹುದು. ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ, ಅಂಗೈ ಮೇಲಿನ ರೇಖೆಗಳು ಮತ್ತು ಅವುಗಳ ಮೇಲೆ ರೂಪುಗೊಂಡ ಚಿಹ್ನೆಗಳು ಅಥವಾ ಗುರುತುಗಳು ಹೆಚ್ಚಿನ ಪ್ರಾಮುಖ್ಯವನ್ನು ಹೊಂದಿವೆ. ಅಂಗೈಯಲ್ಲಿ ಕೆಲವು ರೇಖೆಗಳ ರಚನೆಯನ್ನು ಅತ್ಯಂತ ಶುಭವೆಂದು ಪರಿಗಣಿಸಲಾಗುತ್ತದೆ ಎಂದು ಹೇಳಲಾಗುತ್ತದೆ. ಅವುಗಳಲ್ಲಿ ಒಂದು ಹಣದ ರೇಖೆ.

ಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ತಮ್ಮ ಅಂಗೈಗಳಲ್ಲಿ ಸ್ಪಷ್ಟ ಮತ್ತು ಪ್ರಮುಖವಾದ ಹಣದ ರೇಖೆಯನ್ನು ಹೊಂದಿರುವ ಜನರು ಜೀವನದಲ್ಲಿ ಸಂಪತ್ತು ಮತ್ತು ಸಮೃದ್ಧಿಯನ್ನು ಪಡೆಯುತ್ತಾರೆ. ಅಂಗೈಯಲ್ಲಿ ಹಣದ ರೇಖೆ ಎಲ್ಲಿದೆ ಮತ್ತು ಅದಕ್ಕೆ ಸಂಬಂಧಿಸಿದ ವಿಶೇಷ ವಿಷಯಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.

ಅಂಗೈಯಲ್ಲಿ ಹಣದ ರೇಖೆ ಎಲ್ಲಿರುತ್ತದೆ? ಸಾಮಾನ್ಯವಾಗಿ ಕೈಯಲ್ಲಿರುವ ಹಣದ ರೇಖೆಯು ಬುಧ ಗ್ರಹವನ್ನು ಪ್ರತಿನಿಧಿಸುವ ಕಿರು ಬೆರಳಿನ ಕೆಳಗಿನಿಂದ ಪ್ರಾರಂಭವಾಗುತ್ತದೆ. ಹಣದ ರೇಖೆಯು ಕಿರುಬೆರಳಿನ ಕೆಳಗೆ ನೇರವಾದ ಲಂಬ ರೇಖೆಯಾಗಿದೆ. ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ವ್ಯಕ್ತಿಯ ಆರ್ಥಿಕ ಸ್ಥಿತಿಯನ್ನು ಹಣದ ರೇಖೆಯಿಂದ ನಿರ್ಧರಿಸಲಾಗುತ್ತದೆ.

ರೇಖೆ ಹೀಗಿದ್ದರೆ ಅದೃಷ್ಟ

ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಕೈಯಲ್ಲಿ ಆಳವಾದ ಮತ್ತು ಸ್ಪಷ್ಟವಾದ ಹಣದ ರೇಖೆಯನ್ನು ಹೊಂದಿರುವವರು ಹಣವನ್ನು ಬುದ್ಧಿವಂತಿಕೆಯಿಂದ ಬಳಸುತ್ತಾರೆ. ಅವರು ಭವಿಷ್ಯದಲ್ಲಿ ತಾವು ಕೂಡಿಟ್ಟು ಹಣದಿಂದ ಪ್ರಯೋಜನಗಳನ್ನು ಪಡೆಯುತ್ತಾರೆ. ಚಂದ್ರನ ಬೆಟ್ಟಕ್ಕೆ ನೇರವಾಗಿ ಹಣದ ರೇಖೆ ಹೋಗುವ ಜನರು ಆರ್ಥಿಕವಾಗಿ ಅದೃಷ್ಟವಂತರು ಮತ್ತು ಸೌಕರ್ಯಗಳು ಮತ್ತು ಐಷಾರಾಮಿಗಳಿಂದ ತುಂಬಿದ ಜೀವನವನ್ನು ನಡೆಸುತ್ತಾರೆ ಎಂದು ಹೇಳಲಾಗುತ್ತದೆ.

ಹಣದ ರೇಖೆ ಹೀಗಿದ್ದರೆ ನಷ್ಟ ಖಚಿತ 

ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಕೈಯಲ್ಲಿ ಹಣದ ರೇಖೆಯು ನೇರವಾಗಿರದೆ ಅಲೆಯಂತೆ ಅಥವಾ ಕತ್ತರಿಸಲ್ಪಟ್ಟಿದ್ದರೆ, ಅಂತಹ ಜನರು ಹಣ ಗಳಿಸುವಲ್ಲಿ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಈ ಜನರು ಆರ್ಥಿಕವಾಗಿ ಸ್ಥಿರವಾಗಿಲ್ಲ. ಅವರು ಪದೇ ಪದೇ ಹಣಕಾಸಿನ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಈ ಗೆರೆಯು ಬರಿ ಹಣಕಾಸು ಮಾತ್ರವಲ್ಲ ವ್ಯಕ್ತಿ ಜೀವನದ ಒಟ್ಟಾರೆ ಸಮೃದ್ಧಿ, ಸಂಪತ್ತನ್ನು ಪ್ರತಿನಿಧಿಸುತ್ತದೆ. ಹಲವರಿಗೆ ಹಣದ ರೇಖೆ ಅಂಗೈ ಮೇಲೆ ಸ್ವಷ್ಟವಾಗಿ ಗೋಚರಿಸುವುದಿಲ್ಲ. ಇನ್ನೂ ಕೆಲವರಿಗೆ ಓರೆಯಾಗಿ ಇರುತ್ತದೆ. ಆದರೆ ನೇರವಾಗಿ ಇದ್ದರೆ ಮಾತ್ರ ಅದೃಷ್ಟವೂ ನೇರವಾಗಿರುತ್ತದೆ ಎಂಬುದು ನಮಗೆ ತಿಳಿದಿರಬೇಕು. 

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ‘ಹಿಂದೂಸ್ತಾನ್ ಟೈಮ್ಸ್ ಕನ್ನಡ (ಎಚ್‌ಟಿ ಕನ್ನಡ) ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.