ಕತ್ತಿನ ಆಕಾರದಿಂದ ತಿಳಿಯಬಹುದು ಗುಣ, ವ್ಯಕ್ತಿತ್ವ; ಕತ್ತು ದುಂಡಗಿದ್ದರೆ ಸ್ವಭಾವ ಹೇಗಿರುತ್ತೆ ತಿಳಿಯಿರಿ
ಮನುಷ್ಯನ ದೇಹದ ವಿವಿಧ ಭಾಗಗಳಿಂದ ವ್ಯಕ್ತಿತ್ವ ತಿಳಿಯಬಹುದು. ಅಂತೆಯೇ ಕತ್ತಿನ ಆಕಾರವು ನಮ್ಮ ವ್ಯಕ್ತಿತ್ವವನ್ನು ತಿಳಿಸುತ್ತದೆ. ಕತ್ತು ದುಂಡಗಿದ್ದರೆ ವ್ಯಕ್ತಿತ್ವ ಹೇಗಿರುತ್ತದೆ ಎನ್ನುವುದರ ವಿವರ ಇಲ್ಲಿದೆ.

ಕೆಲವರ ಕತ್ತು ದುಂಡಾಗಿರುತ್ತದೆ. ಇವರ ಗುಣ ಮತ್ತು ನಡವಳಿಕೆಗಳಲ್ಲಿ ಅನೇಕ ವೈಶಿಷ್ಟಗಳಿರುತ್ತವೆ. ಇವರು ಸಮಯ ಸಂದರ್ಭಕ್ಕೆ ಹೊಂದಿಕೊಂಡು ಬುದ್ದಿವಂತಿಕೆಯಿಂದ ಕೆಲಸ ಸಾಧಿಸುತ್ತಾರೆ. ಜಗಳ ಕದನದಿಂದ ಸದಾ ದೂರ ಉಳಿಯುತ್ತಾರೆ. ವಾದ ವಿವಾದಗಳು ಎಂದಿಗೂ ಇಷ್ಟವಾಗದು. ಆದ್ದರಿಂದ ಶಾಂತಿ ಸಂಯಮದಿಂದ ಎಲ್ಲರ ಮನಸ್ಸನ್ನು ಗೆಲ್ಲುತ್ತಾರೆ. ಎದುರಾಗಳಿಗಳ ಮನಸ್ಸನ್ನು ಪರಿವರ್ತಿಸಿ ಯಾವುದೇ ಸನ್ನಿವೇಶವನ್ನು ತಮಗೆ ಇಷ್ಟವಾದಂತೆ ಬದಲಾಯಿಸುತ್ತಾರೆ. ಆಸೆ ಆಕಾಂಕ್ಷೆಗಳನ್ನು ತಮ್ಮದಾಗಿಸಿಕೊಳ್ಳುತ್ತಾರೆ. ಇವರಲ್ಲಿ ಕಲ್ಮಶ ಗುಣ ಇರುವುದಿಲ್ಲ. ಇವರ ಪರಿಶುದ್ದವಾದ ನಡೆ, ನುಡಿ ಸಮಾಜದಲ್ಲಿ ಉನ್ನತ ಗೌರವ ಗಳಿಸಿ ಕೊಡುತ್ತದೆ. ಇವರಲ್ಲಿ ವಿಶೇಷವಾದ ಹೊಂದಾಣಿಕೆಯ ಗುಣವಿರುತ್ತದೆ. ಐಶ್ವರ್ಯ, ಪ್ರತಿಷ್ಠೆಗಳಿಗೆ ಪ್ರಾಧಾನ್ಯತೆ ನೀಡುವುದಿಲ್ಲ. ಇವರು ಇವರಿಗಿಂತ ಚಿಕ್ಕ ವಯಸ್ಸಿನ ಜನರನ್ನು ಸಹ ಅವಮಾನಿಸುವುದಿಲ್ಲ. ಇವರು ಅತಿಥಿಗಳ ಸತ್ಕಾರ ಮಾಡುವುದರಲ್ಲಿ ಮೊದಲಿಗರು. ಅನಾವಶ್ಯಕವಾಗಿ ಪ್ರವಾಸ ಮಾಡುವುದನ್ನು ಇಷ್ಟಪಡುವುದಿಲ್ಲ.
ಸಾಮಾನ್ಯವಾಗಿ ಚಿಕ್ಕ ಪುಟ್ಟ ವಿಚಾರಗಳಿಗೂ ಬೇರೆಯವರನ್ನು ಆಶ್ರಯಿಸುತ್ತಾರೆ. ಒಪ್ಪದೇ ಹೋದಲ್ಲಿ ಒಪ್ಪುವಂತೆ ಮಾಡುತ್ತಾರೆ. ನೋಡಲು ಸುಂದರವಾಗಿರುತ್ತಾರೆ. ಆತ್ಮೀಯರ ಒಳಿತಿಗಾಗಿ ಯಾವುದೇ ತ್ಯಾಗಕ್ಕೂ ಸಿದ್ಧರಾಗುತ್ತಾರೆ. ಆತಂಕದ ಪರಿಸ್ಥಿತಿ ಎದುರಾದರೂ ತನ್ನ ಸ್ಥಾನಮಾನ ಮತ್ತು ಗೌರವಕ್ಕೆ ಚ್ಯುತಿ ಬರುವಂತಹ ಕೆಲಸವನ್ನು ಮಾಡುವುದಿಲ್ಲ. ಸುಖ ಜೀವನವನ್ನು ನಡೆಸಲು ಇಷ್ಟಪಡುತ್ತಾರೆ. ಧಾರ್ಮಿಕ ಕಾರ್ಯಗಳಿಗಾಗಿ ದುಡಿದ ಹಣವನ್ನು ಖರ್ಚು ಮಾಡುತ್ತಾರೆ. ಇವರಿಗೆ ಕುಟುಂಬ ಮತ್ತು ಸಮಾಜದಲ್ಲಿ ಗೌರವಯುತ ಸ್ಥಾನಮಾನ ದೊರೆಯುತ್ತದೆ. ಭಾಗ್ಯಶಾಲಿಗಳು. ಬೇರೆಯವರಿಗೆ ಕಷ್ಟವೆನಿಸುವಂತಹ ಅನೇಕ ವಿಚಾರಗಳು ಇವರಿಗೆ ಸುಲಭವಾಗಿ ಅರ್ಥವಾಗುತ್ತದೆ.
ಬೇರೆಯವರನ್ನು ಅನುಮಾನದ ದೃಷ್ಟಿಯಿಂದ ನೋಡುವುದಿಲ್ಲ. ಎಲ್ಲರ ಜೊತೆ ಸ್ನೇಹ ಬೆಳೆಸುತ್ತಾರೆ. ಎಷ್ಟೇ ಕಷ್ಟವಾದರೂ ಹಣವನ್ನು ಗಳಿಸಿ ಉಳಿತಾಯ ಮಾಡುತ್ತಾರೆ. ಸ್ವಂತ ಆಸ್ತಿಯು ಲಭಿಸುತ್ತದೆ. ಸಾಕು ಪ್ರಾಣಿಗಳ ಮೇಲೆ ಪ್ರೀತಿ ಹೆಚ್ಚು. ಇವರಿಗೆ ಇಷ್ಟವಾದ ಮಕ್ಕಳನ್ನು ಮಾತ್ರ ಮುದ್ದಿನಿಂದ ಸಲಹುತ್ತಾರೆ. ಬಂದು -ಮಿತ್ರರು ಮತ್ತು ಸ್ನೇಹಿತರು ಅತಿ ಆತ್ಮೀಯತೆಯಿಂದ ಇವರೊಂದಿಗೆ ವರ್ತಿಸುತ್ತಾರೆ. ಹಣಕಾಸಿನ ವಿಚಾರದಲ್ಲಿ ಹೆಚ್ಚಿನ ಪರಿಣತಿ ಗಳಿಸುತ್ತಾರೆ. ಇವರ ಕಣ್ಣುಗಳಲ್ಲಿ ವಿಜಯದ ಕಾಂತಿ ಇರುತ್ತದೆ. ಸದಾ ಸತ್ಯವನ್ನು ನುಡಿಯುವಲ್ಲಿ ಸಂತಸ ಕಾಣುತ್ತಾರೆ. ಜನರ ಗುಂಪಿನಿಂದ ದೂರ ಉಳಿಯುತ್ತಾರೆ. ಬೇರೆಯವರಿಗೆ ತೊಂದರೆಯನ್ನು ನೀಡುವುದಿಲ್ಲ. ಬೇರೆಯವರ ಪ್ರಭಾವ ಅಥವಾ ದಬ್ಬಾಳಿಕೆಯನ್ನು ಸಹಿಸುವುದಿಲ್ಲ. ನೀರಿರುವ ಪ್ರದೇಶಗಳಲ್ಲಿ ನೆಲೆಸಲು ಹೆಚ್ಚು ಇಷ್ಟಪಡುತ್ತಾರೆ. ಬೇಸಾಯದಲ್ಲಿ ಆಸಕ್ತಿ ಮೂಡುತ್ತದೆ. ರಾಜಕೀಯದಲ್ಲಿ ಆಸಕ್ತಿ ಇರುವುದಿಲ್ಲ. ಕಷ್ಟಪಟ್ಟು ದುಡಿದ ಹಣದ ಕೆಲ ಭಾಗವನ್ನು ಜನೋಪಕಾರಿ ವಿಚಾರಗಳಿಗೆ ಮೀಸಲಿಡುತ್ತಾರೆ.
ಶಾಂತಿ, ಸಂಯಮದಿಂದ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ನೀರಿಗೆ ಸಂಬಂಧಿಸಿದ ಕೆಲಸದಲ್ಲಿ ಆಸಕ್ತಿ ಇರುತ್ತದೆ. ಲೋಹದ ವಸ್ತುಗಳಿಂದ ದೂರ ಉಳಿಯುತ್ತಾರೆ. ದಾಂಪತ್ಯ ಜೀವನದಲ್ಲಿ ಯಾವುದೇ ರೀತಿಯ ವಿರೋಧಗಳು ಎದುರಾದರು ಸ್ವತಃ ಪರಿಹಾರವನ್ನು ಕಂಡುಹಿಡಿಯುತ್ತಾರೆ. ಹೆಣ್ಣು ಮಕ್ಕಳ ಜೀವನದಲ್ಲಿ ಅದೃಷ್ಟದಿಂದ ನಿರೀಕ್ಷಿಸಿದ ಬದಲಾವಣೆ ಉಂಟಾಗುತ್ತದೆ. ಹೆತ್ತವರು ಅಥವಾ ಜೊತೆಯಲ್ಲಿ ಹುಟ್ಟಿದವರ ಜೊತೆ ಸಂತೋಷದಿಂದ ಬಾಳುತ್ತಾರೆ. ಆತುರದಲ್ಲಿ ಯಾವುದೇ ತಪ್ಪು ನಿರ್ಧಾರವನ್ನು ತೆಗೆದುಕೊಳ್ಳಲಾರರು. ಚಿಕ್ಕ ವಯಸ್ಸಿನಲ್ಲಿಯೇ ವಿವಾಹವಾಗಿ ಜನ ಮೆಚ್ಚುವಂತೆ ಕೌಟುಂಬಿಕ ಜೀವನವನ್ನು ನಡೆಸುತ್ತಾರೆ.
ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಪರಿಣತಿ ಇರುತ್ತದೆ. ಪಾಲುಗಾರಿಕೆಯ ವ್ಯಾಪಾರದಲ್ಲಿ ಇವರಿಗೆ ಹೆಚ್ಚಿನ ಅಧಿಕಾರ ದೊರೆಯುತ್ತದೆ. ವಿದ್ಯಾರ್ಥಿಗಳು ಆರಂಭದಿಂದಲೇ ಯಶಸ್ಸನ್ನು ಗಳಿಸುತ್ತಾರೆ. ಆತ್ಮೀಯರ ಕೌಟುಂಬಿಕ ಕಲಹಗಳನ್ನು ಬಗೆಹರಿಸುವಿರಿ. ಸುಂದರವಾದ ಮನೆ ಇವರ ಪಾಲಾಗುತ್ತದೆ. ಮಕ್ಕಳ ಜೊತೆಯಲ್ಲಿ ಸುಖ ಸಂತೋಷದಿಂದ ಬಾಳುವಿರಿ.
ಬರಹ: ಎಚ್. ಸತೀಶ್, ಜ್ಯೋತಿಷಿ, ಬೆಂಗಳೂರು
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ವಾರ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).