Shani Venus Conjunction: 30 ವರ್ಷಗಳ ನಂತರ ಮೀನ ರಾಶಿಯಲ್ಲಿ ಶುಕ್ರ–ಶನಿಯ ಸಂಯೋಗ; ಈ 3 ರಾಶಿಯವರಿಗೆ ಕೋಟ್ಯಾಧಿಪತಿಯಾಗುವ ಯೋಗ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Shani Venus Conjunction: 30 ವರ್ಷಗಳ ನಂತರ ಮೀನ ರಾಶಿಯಲ್ಲಿ ಶುಕ್ರ–ಶನಿಯ ಸಂಯೋಗ; ಈ 3 ರಾಶಿಯವರಿಗೆ ಕೋಟ್ಯಾಧಿಪತಿಯಾಗುವ ಯೋಗ

Shani Venus Conjunction: 30 ವರ್ಷಗಳ ನಂತರ ಮೀನ ರಾಶಿಯಲ್ಲಿ ಶುಕ್ರ–ಶನಿಯ ಸಂಯೋಗ; ಈ 3 ರಾಶಿಯವರಿಗೆ ಕೋಟ್ಯಾಧಿಪತಿಯಾಗುವ ಯೋಗ

Shani Venus Conjunction: ಮೀನ ರಾಶಿಯಲ್ಲಿ ಶುಕ್ರ ಹಾಗೂ ಶನಿ ಗ್ರಹಗಳ ಸಂಯೋಗವಾಗಲಿದೆ. ಈ ಅಪರೂಪದ ಬೆಳವಣಿಗೆಯು ಎಲ್ಲಾ ರಾಶಿಗಳ ಮೇಲೂ ಪರಿಣಾಮ ಬೀರಲಿದೆ. ಆದರೆ 3 ರಾಶಿಯವರಿಗೆ ಮಾತ್ರ ಇದು ಸುವರ್ಣಯುಗ.

30 ವರ್ಷಗಳ ನಂತರ ಮೀನ ರಾಶಿಯಲ್ಲಿ ಶುಕ್ರ–ಶನಿಯ ಸಂಯೋಗ; ಈ 3 ರಾಶಿಯವರಿಗೆ ಕೋಟ್ಯಾಧಿಪತಿಯಾಗುವ ಯೋಗ
30 ವರ್ಷಗಳ ನಂತರ ಮೀನ ರಾಶಿಯಲ್ಲಿ ಶುಕ್ರ–ಶನಿಯ ಸಂಯೋಗ; ಈ 3 ರಾಶಿಯವರಿಗೆ ಕೋಟ್ಯಾಧಿಪತಿಯಾಗುವ ಯೋಗ

Shani Venus Conjunction: ಜ್ಯೋತಿಷ್ಯದ ಪ್ರಕಾರ ಒಂಬತ್ತು ಗ್ರಹಗಳು ಯಾವಾಗಲೂ ತಮ್ಮ ಸ್ಥಾನವನ್ನು ಬದಲಿಸುತ್ತಲೇ ಇರುತ್ತವೆ. ಗ್ರಹಗಳ ಸ್ನಾನಪಲ್ಲಟವು 12 ರಾಶಿಗಳ ಮೇಲೂ ಪರಿಣಾಮ ಬೀರುತ್ತದೆ. ಕೆಲವೊಮ್ಮೆ ಒಂದು ರಾಶಿಯಲ್ಲಿ ಎರಡು ಗ್ರಹಗಳು ಸಂಧಿಸುವ ಸಂದರ್ಭವೂ ಬರುತ್ತದೆ. ಅಂತಹ ಸಂದರ್ಭವು ಕೆಲವು ರಾಶಿಯವರಿಗೆ ಅಶುಭವಾದರೆ ಇನ್ನೂ ಕೆಲವು ಕೆಲವು ರಾಶಿಯವರಿಗೆ ಶುಭಫಲವನ್ನು ಉಂಟು ಮಾಡುತ್ತದೆ.

ಮಾರ್ಚ್ 28 ರಂದು, ಒಂಬತ್ತು ಗ್ರಹಗಳಲ್ಲಿ ಧರ್ಮನಿಷ್ಠನಾದ ಶನಿಯು ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ಆ ಸಮಯದಲ್ಲಿ ಶನಿಯು ಈಗಾಗಲೇ ಮೀನ ರಾಶಿಯಲ್ಲಿರುವ ಶುಕ್ರನನ್ನು ಭೇಟಿಯಾಗುತ್ತಾನೆ.

ಮೀನ ರಾಶಿಯಲ್ಲಿ ಶನಿ ಮತ್ತು ಶುಕ್ರರ ಸಂಯೋಗವು 30 ವರ್ಷಗಳ ನಂತರ ಸಂಭವಿಸುತ್ತದೆ. ಮೀನ ರಾಶಿಯಲ್ಲಿ ಶುಕ್ರ ಮತ್ತು ಶನಿಯ ಸಂಯೋಗವು ಕೆಲವು ರಾಶಿಯವರಿಗೆ ಕೋಟ್ಯಾಧಿಪತಿಯಾಗುವ ಯೋಗವನ್ನು ಉಂಟು ಮಾಡುತ್ತದೆ. ಹಾಗಾದರೆ ಆ ರಾಶಿಯವರು ಯಾರು ಎಂಬುದನ್ನು ನೋಡೋಣ.

1. ಮೀನ ರಾಶಿ

ಮೀನ ರಾಶಿಯ ಮೊದಲ ಮನೆಯಲ್ಲಿ ಶನಿ ಮತ್ತು ಶುಕ್ರರ ಸಂಯೋಗ ಉಂಟಾಗುತ್ತಿದ್ದು, ಇತರರಲ್ಲಿ ನಿಮ್ಮ ಗೌರವವನ್ನು ಹೆಚ್ಚಿಸುತ್ತದೆ. ವ್ಯವಹಾರದಲ್ಲಿನ ಎಲ್ಲಾ ಸಮಸ್ಯೆಗಳು ಕಡಿಮೆಯಾಗುತ್ತವೆ. ನಿಮಗೆ ಬಡ್ತಿಯ ಅವಕಾಶಗಳು ಸಿಗುತ್ತವೆ. ಜಂಟಿ ವ್ಯವಹಾರಗಳು ಉತ್ತಮ ಲಾಭವನ್ನು ತರುತ್ತವೆ. ಹಠಾತ್ ಹಣದ ಒಳಹರಿವು ಇರುತ್ತದೆ. ಬಾಕಿ ಇರುವ ಸಾಲ ನಿಮ್ಮ ಕೈಗೆ ಸೇರುತ್ತದೆ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಸಂಗಾತಿಯೊಂದಿಗೆ ಸಂತೋಷದ ಜೀವನವನ್ನು ಕಳೆಯುತ್ತೀರಿ. ವ್ಯವಹಾರದಲ್ಲಿ ಉತ್ತಮ ಪ್ರಗತಿ ಸಾಧಿಸುವಿರಿ.

2. ಮಕರ ರಾಶಿ

ಮಕರ ರಾಶಿಯ ಮೂರನೇ ಮನೆಯಲ್ಲಿ ಶನಿ ಮತ್ತು ಶುಕ್ರರ ಸಂಯೋಗವು ನಿಮ್ಮ ಆರೋಗ್ಯದಲ್ಲಿ ಗಮನಾರ್ಹ ಸುಧಾರಣೆಯನ್ನು ತರುತ್ತದೆ. ಬಂಧುಗಳಿಂದ ಸಂತೋಷ ಹೆಚ್ಚಾಗುತ್ತದೆ. ನೀವು ತೆಗೆದುಕೊಳ್ಳುವ ನಿರ್ಧಾರಗಳು ಉತ್ತಮ ಫಲಿತಾಂಶಗಳನ್ನು ನೀಡುತ್ತವೆ. ಸಿಲುಕಿಕೊಂಡಿರುವ ಹಣವು ನಿಮ್ಮನ್ನು ತಲುಪುತ್ತದೆ. ಹಣಕಾಸಿನ ಪರಿಸ್ಥಿತಿಗಳು ಸುಧಾರಿಸುತ್ತವೆ. ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ಆತ್ಮವಿಶ್ವಾಸ ಮತ್ತು ಧೈರ್ಯ ಹೆಚ್ಚಾಗುತ್ತದೆ. ಒಡಹುಟ್ಟಿದವರು ನಿಮ್ಮಿಂದ ಸಂತೋಷ ಪಡುತ್ತಾರೆ.

3. ವೃಷಭ ರಾಶಿ

ವೃಷಭ ರಾಶಿಯ 11ನೇ ಮನೆಯಲ್ಲಿ ಶನಿ ಮತ್ತು ಶುಕ್ರರ ಸಂಯೋಗ ನಡೆಯಲಿದೆ. ಇದರಿಂದ ವೃತ್ತಿ ಮತ್ತು ವ್ಯವಹಾರದಲ್ಲಿ ಉತ್ತಮ ಪ್ರಗತಿ ಕಂಡುಬರಲಿದೆ. ಹೊಸ ವ್ಯವಹಾರವನ್ನು ಪ್ರಾರಂಭಿಸಲು ಅವಕಾಶಗಳಿವೆ. ಹೊಸ ಆದಾಯದ ಮೂಲಗಳು ಹೆಚ್ಚಾಗುತ್ತವೆ. ಒಟ್ಟಾರೆ ನಿಮ್ಮ ಹಣಕಾಸಿನ ಸಮಸ್ಯೆಗಳೆಲ್ಲವೂ ದೂರಾಗಲಿದೆ. ನಿಮ್ಮ ಆದಾಯದಲ್ಲಿ ಉತ್ತಮ ಏರಿಕೆ ಕಂಡುಬರಲಿದೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದರಿಂದ ಉತ್ತಮ ಲಾಭ ಸಿಗುತ್ತದೆ. ವಿದೇಶ ಪ್ರವಾಸಗಳಿಂದ ಪ್ರಗತಿಯಾಗಲಿದೆ. ಆರ್ಥಿಕ ಲಾಭದ ಸಾಧ್ಯತೆ ಇದೆ. ಮದುವೆ ಮತ್ತು ಪ್ರೇಮ ಜೀವನ ಚೆನ್ನಾಗಿರುತ್ತದೆ. ಕುಟುಂಬ ಜೀವನದಲ್ಲಿನ ಎಲ್ಲಾ ಸಮಸ್ಯೆಗಳು ಕಡಿಮೆಯಾಗುತ್ತವೆ.

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ‘ಹಿಂದೂಸ್ತಾನ್ ಟೈಮ್ಸ್ ಕನ್ನಡ (ಎಚ್‌ಟಿ ಕನ್ನಡ) ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.