ಸೋಲಿನ ನಂತರವೂ ಧೈರ್ಯದಿಂದ ಮುನ್ನುಗ್ಗುವ ರಾಶಿಯವರು ಇವರು; ಇದ್ರಲ್ಲಿ ನಿಮ್ಮ ರಾಶಿಯೂ ಇದ್ಯಾ ಗಮನಿಸಿ
ಜನ್ಮರಾಶಿಯ ಆಧಾರದ ಮೇಲೆ ವ್ಯಕ್ತಿಯ ನಡವಳಿಕೆ ಮತ್ತು ಜೀವನಶೈಲಿಯನ್ನು ಹೇಳಬಹುದಾಗಿದೆ. ಕೆಲವರು ಸೋಲನ್ನು ಬಹಳ ಬೇಗ ಒಪ್ಪಿಕೊಳ್ಳುತ್ತಾರೆ. ಆದರೆ ಇನ್ನು ಕೆಲವು ರಾಶಿಗೆ ಸೇರಿದವರು ಸೋಲನ್ನು ಸುಲಭಕ್ಕೆ ಒಪ್ಪಿಕೊಳ್ಳಲಾರರು. ಕೆಲವು ರಾಶಿಗೆ ಸೇರಿದವರು ಸೋಲು ಬಂದರೂ ಸದೃಢವಾಗಿ ಎದುರಿಸಿ ಗೆಲುವು ಸಾಧಿಸುತ್ತಾರೆ. ಆ ರಾಶಿಯವರು ಯಾರು ಎಂಬುದನ್ನು ಇಲ್ಲಿ ತಿಳಿಯೋಣ.
ಪ್ರತಿಯೊಬ್ಬರ ಜೀವನದಲ್ಲೂ ಗೆಲುವು ಮತ್ತು ಸೋಲು ಎರಡೂ ಇರುತ್ತದೆ. ಗೆಲುವು ಬಂದಾಗ ಸಂತೋಷದಿಂದ ಸ್ವೀಕರಿಸುವಂತೆ, ಸೋಲು ಬಂದಾಗಲೂ ಅದನ್ನು ಎದುರಿಸಬೇಕಾಗುತ್ತದೆ. ಜೀವನದಲ್ಲಿ ಸೋಲು-ಗೆಲುವು ಎರಡನ್ನೂ ಸಮಾನವಾಗಿ ತೆಗೆದುಕೊಳ್ಳಬೇಕು. ವಾಸ್ತವವಾಗಿ, ಸೋಲಿನಿಂದ ಅನೇಕ ವಿಷಯಗಳನ್ನು ಕಲಿಯಬಹುದು. ಜ್ಯೋತಿಷ್ಯಶಾಸ್ತ್ರದ ಪ್ರಕಾರ ವ್ಯಕ್ತಿಯ ರಾಶಿಯ ಆಧಾರದಿಂದ ಅವನ ಭವಿಷ್ಯವನ್ನು ಊಹಿಸಬಹುದು ಎಂದು ಹೇಳಲಾಗುತ್ತದೆ. ಅದರ ಪ್ರಕಾರ ವ್ಯಕ್ತಿಯ ನಡವಳಿಕೆ ಮತ್ತು ಅವನ ಜೀವನಶೈಲಿಯನ್ನು ಸಹ ಹೇಳಬಹುದು.
ಕೆಲವೇ ಜನರು ಸೋಲನ್ನು ಬಹಳ ಬೇಗ ಒಪ್ಪಿಕೊಳ್ಳುತ್ತಾರೆ. ಆದರೆ ಕೆಲವು ರಾಶಿಗೆ ಸೇರಿದವರು ಸೋಲನ್ನು ಸುಲಭವಾಗಿ ಒಪ್ಪಿಕೊಳ್ಳಲಾರರು. ಇನ್ನು ಕೆಲವರು ಒಮ್ಮೆ ಸೋಲನ್ನು ಒಪ್ಪಿಕೊಂಡರೂ ನಂತರ ಆ ಸೋಲನ್ನು ಸದೃಢವಾಗಿ ಎದುರಿಸಿ ಗೆಲುವು ಸಾಧಿಸುತ್ತಾರೆ. ಅಂತಹ ರಾಶಿಗೆ ಸೇರಿದ ಜನರು ತುಂಬಾ ವಿಶೇಷರಾಗಿರುತ್ತಾರೆ. ಅವರು ಸೋಲನ್ನು ಎದುರಿಸಿದರೂ ಸಹ, ಮತ್ತೆ ಧೈರ್ಯದಿಂದ ಹಿಂತಿರುಗುತ್ತಾರೆ. ಸೋಲು ಕಂಡರೂ ಮರಳಿ ಗೆಲುವು ಸಾಧಿಸುವ ಮನೋಭಾವ ಅವರಲ್ಲಿರುತ್ತದೆ.
ಧೈರ್ಯದಿಂದ ಸೋಲನ್ನು ಮೆಟ್ಟಿ ನಿಲ್ಲುವ ರಾಶಿಗಳು
ಮೇಷ ರಾಶಿ
ಮೇಷ ರಾಶಿಯವರು ಸೋಲಿನಲ್ಲೂ ದಿಟ್ಟ ಹೆಜ್ಜೆ ಇಡುತ್ತಾರೆ. ಮತ್ತೊಮ್ಮೆ ಗೆಲ್ಲಲೇಬೇಕೆಂಬ ದೃಢ ಸಂಕಲ್ಪದಿಂದ ಮುನ್ನುಗ್ಗುತ್ತಾರೆ. ಸೋಲಿನ ಕಹಿಯನ್ನು ಹಿಮ್ಮೆಟ್ಟಿ ತಮ್ಮ ಗುರಿಯತ್ತ ಸಾಗುತ್ತಾರೆ. ಮೇಷ ರಾಶಿಯು ಉನ್ನತ ನಾಯಕತ್ವದ ಗುಣಗಳನ್ನು ಹೊಂದಿದೆ.
ವೃಶ್ಚಿಕ ರಾಶಿ
ಈ ರಾಶಿಯವರು ಕೂಡ ಸೋಲಿನಿಂದ ಬೇಗನೆ ಪುಟಿದೇಳುತ್ತಾರೆ. ಇವರು ಭವಿಷ್ಯದ ಬಗ್ಗೆ ಹೆಚ್ಚು ಯೋಚಿಸುತ್ತಾರೆ. ಈ ರಾಶಿಯವರು ಬದಲಾವಣೆಯನ್ನು ತರುವ ನಾಯಕರು ಎಂದು ಹೇಳಬಹುದು. ಸೋಲು ಎದುರಾದಾಗಲೆಲ್ಲ ಪುಟಿದೆದ್ದು ಮುಂದೆ ಬರುತ್ತಾರೆ. ಅವರು ಯಾವಾಗಲೂ ಶ್ರಮಜೀವಿಗಳು ಮತ್ತು ಮುಂದೆ ಸಾಗುವವರು. ಅವರು ತಮ್ಮ ಗುರಿ ಸಾಧನೆಗಾಗಿ ಶ್ರಮ ಪಡುವವರಾಗಿರುತ್ತಾರೆ. ಎಂತಹುದೇ ಕಠಿಣ ಸಂದರ್ಭವನ್ನು ಅನುಕೂಲಕರವನ್ನಾಗಿ ಮಾಡಿಕೊಳ್ಳಬಲ್ಲರು.
ಸಿಂಹ ರಾಶಿ
ಸಿಂಹ ರಾಶಿಯವರು ಕೂಡ ಸೋಲಿನಿಂದ ಬೇಗ ಚೇತರಿಸಿಕೊಂಡು ಗೆಲುವಿನತ್ತ ಧಾವಿಸುವವರಾಗಿದ್ದಾರೆ. ಸಿಂಹ ರಾಶಿಯವರು ಹುಟ್ಟಿನಿಂದಲೇ ನಾಯಕರು. ಅವರಲ್ಲಿ ನಾಯಕತ್ವದ ಗುಣ ಹೆಚ್ಚು. ಅವರು ಎಂದಾದರೂ ಸೋಲು ಕಂಡರೆ, ಅದರಿಂದ ಹೊರಬಂದು ಮುಂದೆ ಸಾಗುತ್ತಾರೆ. ಸೋಲಾಯಿತು ಎಂದು ಸುಮ್ಮನೆ ಕೂರುವವರಲ್ಲ. ಅವರಲ್ಲಿ ಆತ್ಮವಿಶ್ವಾಸವೂ ಜಾಸ್ತಿ ಇರುತ್ತದೆ. ಅವರು ಯಾವಾಗಲೂ ಸೋಲಿನಿಂದ ಬೇಗನೆ ಹೊರಬಂದು ಗೆಲುವಿನತ್ತ ಸಾಗುತ್ತಾರೆ. ಸಿಂಹ ರಾಶಿಯವರು ಗೆಲುವು ಸಿಗುವವರೆಗೂ ಶ್ರಮಿಸುತ್ತಾರೆ.
ಮಕರ ರಾಶಿ
ಮಕರ ರಾಶಿಯವರು ಕೂಡ ಸೋಲಿನಿಂದ ಬೇಗ ಚೇತರಿಸಿಕೊಳ್ಳುತ್ತಾರೆ. ಇವರು ಸೋಲನ್ನು ಬೇಗ ಮರೆಯುತ್ತಾರೆ. ಒಮ್ಮೆ ಮಾಡಿದ ತಪ್ಪುಗಳನ್ನು ತಮ್ಮಲ್ಲೇ ವಿಶ್ಲೇಷಿಸಿಕೊಂಡು, ಅಗತ್ಯ ಬದಲಾವಣೆಗಳನ್ನು ಮಾಡಿಕೊಂಡು ಗೆಲುವಿನತ್ತ ಸಾಗುತ್ತಾರೆ. ಈ ರಾಶಿಯವರು ಖಿನ್ನತೆಗೆ ಒಳಗಾಗುವುದಿಲ್ಲ.
ವೃಷಭ ರಾಶಿ
ಯಶಸ್ಸನ್ನು ಸಾಧಿಸಲು ಹೊಸ ತಂತ್ರಗಳನ್ನು ಹುಡುಕುತ್ತಾರೆ. ಅವರು ಸೋಲನ್ನು ಕಂಡಾಗ ನಿಜವಾಗಿಯೂ ದುಃಖಿಸುವುದಿಲ್ಲ. ಬದಲಿಗೆ ಅದರಿಂದ ಹೊರಬರಲು ಹೊಸ ತಂತ್ರಗಾರಿಕೆಯನ್ನು ರೂಪಿಸುತ್ತಾರೆ. ಈ ರಾಶಿಯವರೂ ಕೂಡಾ ಯಶಸ್ಸನ್ನು ಪಡೆಯುವವರಾಗಿದ್ದಾರೆ.
ತುಲಾ ರಾಶಿ
ಈ ರಾಶಿಯವರು ಕೂಡ ಸೋಲಿನಿಂದ ಬೇಗ ಚೇತರಿಸಿಕೊಳ್ಳುವವರಾಗಿದ್ದಾರೆ. ಸೋಲಿನಿಂದ ಹೊರಬಂದು ವೇಗವಾಗಿ ಗೆಲುವಿನತ್ತ ಸಾಗುತ್ತಾರೆ. ಸೋಲಿನ ಕಡೆಗೆ ಗಮನ ಕೊಡದೇ ಗೆಲುವಿನತ್ತ ಗಮನಹರಿಸುವವರಾಗಿದ್ದಾರೆ. ಅದರಿಂದ ತಮಗೆ ಬೇಕಾದುದನ್ನು ಸಾಧಿಸಿ ತೋರಿಸುವವರಾಗಿದ್ದಾರೆ. ಸೋಲಿನ ಹಂತದಲ್ಲಿ ಎಂದಿಗೂ ನಿಲ್ಲುವುದಿಲ್ಲ. ತುಲಾ ರಾಶಿಯವರು ಬಹಳ ಆತ್ಮವಿಶ್ವಾಸದಿಂದ ಮುನ್ನಡೆಯುತ್ತಾರೆ.
(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟಿಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.)